Breaking News

Shaikh BigTv

ಹಿರಿಯ ವೈದ್ಯ ಡಾ.ಎಸ್.ಎಂ.ಕಗ್ಗಲಗೌಡರ ಸೇವಾ ಪದೋನ್ನತಿ ಮತ್ತು ವರ್ಗಾವಣೆ

ಕುಂದಗೋಳ : ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಮತ್ತು ಹಿರಿಯ ವೈದ್ಯ ಡಾ.ಎಸ್.ಎಂ.ಕಗ್ಗಲಗೌಡರ ಸೇವಾ ಪದೋನ್ನತಿ ಮತ್ತು ವರ್ಗಾವಣೆ ಏಕೆ ಕಾಲಕ್ಕೆ ಲಭಿಸಿದೆ. ಹುಬ್ಬಳ್ಳಿ ಪಟ್ಟಣದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಕಿಮ್ಸ್ ಆವರಣದ, ಪ್ರಾಂಶುಪಾಲರ ಹುದ್ದೆಗೆ ಡಾ.ಎಸ್.ಎಂ. ಕಗ್ಗಲಗೌಡರ ಪದೋನ್ನತಿ ಮತ್ತು ವರ್ಗಾವಣೆ ಆಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೆಪ್ಟೆಂಬ‌ರ್ 03.2024 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ವಿಷಯ ತಿಳಿಸಲಾಗಿದೆ.

Read More »

ಪೆರೋಲ್ ಮೇಲೆ ಹೊರಬಂದು ಬಾಲ ಬಿಚ್ಚಿದ್ದ ಭೂಗತ ಪಾತಕಿ ಖಾಕಿ ವಶಕ್ಕೆ..

ಭೂಗತ ಪಾತಕಿ ಬಚ್ಚಾಖಾನ್‌ ಪೋಲಿಸರ ಬಲೆಗೆ.. ಹುಬ್ಬಳ್ಳಿ: ಅವಳಿ ನಗರದಲ್ಲಿನ ವ್ಯಕ್ತಿಯೊಬ್ಬರಿಗೆ ತನ್ನ ಸಹಚರರ ಮೂಲಕ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭೂಗತ ಪಾತಕಿ ಬಚ್ಚಾಖಾನ್‌ನನ್ನು ಅವಳಿ ನಗರದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ. ಅವಳಿ ನಗರದ ಪೊಲೀಸರು ಕಮಿಷನ‌ರ್ ಎನ್. ಶಶಿಕುಮಾರ್ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಭೂಗತ ಪಾತಕಿ ಬಚ್ಚಾಖಾನ್‌ನನ್ನು ಬಂಧಿಸಿದ್ದಾರೆ.ಸದ್ಯ ಬಚ್ಚಾಖಾನ್ ಹಾಗೂ ಆತನ ಸಹಚರರನ್ನು ಇದೀಗ ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಕಳೆದ …

Read More »

ಮೈಸೂರು ದಸರಾದಲ್ಲಿ ಧಾರವಾಡ ಸ್ತಬ್ಧ ಚಿತ್ರ ಪ್ರದರ್ಶನ : ಸ್ವರೂಪ ಟಿ. ಕೆ.

ಧಾರವಾಡ: ಅಕ್ಟೋಬರ್ 12 ರಂದು ನಡೆಯುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಧಾರವಾಡ ಜಿಲ್ಲೆಯ ಪರಂಪರೆ, ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ಸ್ಥಬ್ದಚಿತ್ರವನ್ನು ರೂಪಿಸಲಾಗುವುದು ಎಂದು ಜಿಪಂ ಸಿಇಓ ಸ್ವರೂಪ ಟಿ. ಕೆ. ತಿಳಿಸಿದರು. ನಗರದ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದ ಅವರು, ಮೈಸೂರು ದಸರೆಯಲ್ಲಿ ದೇಶ, ವಿದೇಶಗಳ ಜನರು ಭಾಗಬಹಿಸುವುದರಿಂದ ಜಿಲ್ಲೆಯ ಸಂಸ್ಕೃತಿಯನ್ನು ಹೆಚ್ಚು ಜನರಿಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದರು. ಇತರರು ಉಪಸ್ಥಿತರಿದ್ದರು.

Read More »

ಗಣೇಶೋತ್ಸವ, ಈದ್ ಮಿಲಾದ್ ಹಬ್ಬ ಹಿನ್ನಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು : ಎನ್‌ ಶಶಿಕುಮಾರ

ಹುಬ್ಬಳ್ಳಿ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ ತಿಳಿಸಿದರು. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಸರ್ವ ಧರ್ಮದ ಮುಖಂಡರ ಸಭೆ ನಡೆಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾವುದೇ ರೀತಿಯಲ್ಲೂ ಕಾನೂನು ಉಲಂಘಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Read More »

ಸೆ. 5ಕ್ಕೆ ಒನ್ ಡೇ ಕಿರು ಚಿತ್ರ ಬಿಡುಗಡೆ

ಹುಬ್ಬಳ್ಳಿ : ಸೆವೆನ್ ಕ್ರೋರ್ ಸಿನಿ ವರ್ಕ್ಸ್ ವತಿಯಿಂದ ಒನ್ ಡೇ ಕಿರು ಚಿತ್ರ ನಿರ್ಮಾಣ ಮಾಡಲಾಗಿದ್ದು ಸೆ. 5 ರಂದು ಶುಶಾಂತ ಕುಲಕರ್ಣಿ ಹೆಸರಿನ ಯೂಟ್ಯೂಬ್ ಚಾನಲ್’ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕಿರುಚಿತ್ರದ ನಿರ್ದೇಶಕ ಸುಶಾಂಕ ಕುಲಕರ್ಣಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಈಗಾಗಲೇ ಪುಟ್ಟ ಮನಸ್ಸು ದೊಡ್ಡ ಕನಸು, ಕಾಣದ ಕೈ ಚಿತ್ರಗಳು ಪ್ರೇಕ್ಷಕರ ಮನಸ್ಸು ಸೆಳೆದು ಅನೇಕ ಪ್ರಶಸ್ತಿಗಳನ್ನು ಪಡೆದವು. ಅದರಂತೆ ಒನ್ ಡೇ ಕಿರುಚಿತ್ರವು ನೈಜ …

Read More »

ಷರತ್ತು ಮೇರೆಗೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ- ಧಾರವಾಡ ಪಾಲಿಕೆ ಇಂದು ಅಧಿಕೃತವಾಗಿ ಅನುಮತಿ ನೀಡಿದ್ದು, ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾ ಮಂಡಳಿಗೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅನುಮತಿ ಪತ್ರ ನೀಡಿದ್ದಾರೆ.ಮೂರು ದಿನಗಳ ಕಾಲ ಪಾಲಿಕೆ ಒಡೆತನದ (ಸಿಟಿಎಸ್ ನಂ.174) ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಕೆಲ ಷರತ್ತು ಹಾಕಲಾಗಿದೆ. ಅಲ್ಲದೇ …

Read More »

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆ

ಅಣ್ಣಿಗೇರಿ: ನೂತನವಾಗಿ ಪ್ರಾರಂಭವಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯಾಲಯವನ್ನು ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರು ಹಾಗು ಅಣ್ಣಿಗೇರಿ ತಾಲೂಕ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು ಮಂಜುನಾಥ್ ಮಾಯಣ್ಣವರ ಅವರೊಂದಿಗೆ ಶಾಸಕ ಕೋನರಡ್ಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಣಿಗೇರಿ ತಹಶೀಲ್ದಾರ ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ಪಿ.ಸಿ. ಗದ್ದಿಗೌಡರ,ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ ಶಿಂಧೆ, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ವಿನೋದ ಅಸೂಟಿ, ಧಾರವಾಡ ಜಿಲ್ಲಾ ಕೆಡಿಪಿ ನಾಮನಿರ್ದೇಶನ ಅದಸ್ಯರಾದ ಆ‌ರ್.ಹೆಚ್.ಕೋನರಡ್ಡಿ, ಅಣ್ಣಿಗೇರಿ …

Read More »

ಗ್ಯಾರಂಟಿ ವಿರುದ್ಧ ಜೈನಮುನಿ ಅಸಮಾಧಾನ: ರಾಜ್ಯ ಸರ್ಕಾರ ಪ್ರತಿ ಮನೆಯಲ್ಲೂ ಸಾರಾಯಿ ಸಿಗುವಂತೆ ಮಾಡಿದೆ..

Featured Video Play Icon

ಹುಬ್ಬಳ್ಳಿ: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಯ ವಿರುದ್ಧ ವರೂರಿನ ಗುಣಧರನಂದಿ ಮಹಾರಾಜರು ಅಸಮಾಧಾನ ಹೊರಹಾಕಿದ್ದಾರೆ.ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲವನ್ನೂ ಫ್ರೀ ಕೊಟ್ಟು ಪ್ರತಿ ಮನೆಯಲ್ಲೂ ಸರಾಯಿ ಸಿಗುವಂತೆ ಮಾಡಿದೆ ಎಂದು ಗ್ಯಾರಂಟಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು ಈ ದೇಶದ ದೌರ್ಭಾಗ್ಯ ಮಾರುಕಟ್ಟೆಯಲ್ಲಿ ಎರಡೂ ಸಾವಿರ ಲೀಟರ್ ಹಾಲು ಸಿಗುವುದಿಲ್ಲ.‌ ಆದ್ರೆ ಎಂಟು ಸಾವಿರ ಸರಾಯಿ ಎಲ್ಲಿ ಬೇಕಾದ್ರು ಸಿಗುತ್ತದೆ.‌ ಸರ್ಕಾರಗಳು ಎಲ್ಲವನ್ನೂ ಫ್ರೀ ಕೊಟ್ಟು, ಪ್ರತಿ …

Read More »

ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳುನ್ನು ಉದ್ಘಾಟಿಸಿದ ಶಾಸಕ

ಅಣ್ಣಿಗೇರಿ: ಕುಸುಗಲ್ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕ/ಶಿಕ್ಷಕಿಯರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಕೋನರಡ್ಡಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ವಿ ಎಪ್ ಚುಳಕಿ, ಗ್ರಾಮ ಪಂಚಾಯತ್‌ ಅಧ್ಯಕ್ಷರು ನೇತ್ರಾವತಿ …

Read More »

ವಲಯಮಟ್ಟದ ಕ್ರೀಡಾಕೂಟದಲ್ಲಿ ಕೋನರಡ್ಡಿ ಭಾಗಿ

ಅಣ್ಣಿಗೇರಿ: ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಶ್ರೀ ಗೊವಿಂದಗೌಡ ಬ ಭರಮಗೌಡ್ರ ಸರಕಾರಿ ಪ್ರೌಡ ಶಾಲೆಯಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದ ಉದ್ಘಾಟನೆಯನ್ನು ಸಸ್ಕ ಎನ್ ಹೆಚ್ ಕೊನರಡ್ಡಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ವೆಂಕಮ್ಮ ಮಾಡೂಳ್ಳಿ, ಎಸ್‌.ಡಿ.ಎಂ.ಸಿ. ಅಧ್ಯಕ್ಷ ರಮೇಶ ಸಂಗಳದ, ಮಲ್ಲಿಕಾರ್ಜುನ ಶೇಷನಗೌಡ್ರ, ಧರ್ಮಗೌಡ ಭರಮಗೌಡ್ರ, ಪ್ರಮುಖರಾದ ವಿ.ಡಿ.ಅಂದಾನಿಗೌಡರ ದೇವಕ್ಕ ಕುರಿ, ಸದಸ್ಯರಾದ ಗಿರೀಶ ಕಿರೇಸೂರ, ಮಾಬುಸಾಬ ನಾಗಾವಿ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು …

Read More »