Breaking News

Dharwad

ಹುಬ್ಬಳ್ಳಿ ನಿಲ್ಲದ ಕಳ್ಳರ ಹಾವಳಿ, ಪೊಲೀಸ್ ಕ್ವಾಟಾರ್ಸ್ ಗಳೇ ಟಾರ್ಗೆಟ್…!!

ಕಳ್ಳರ ಹಿಡುವ ಪೊಲೀಸರ ಮನೆ ಕಳ್ಳತನ… ಮನೆ-ಮನೆಗೆ ಪೊಲೀಸರು.. ಆದ್ರೆ ಪೊಲೀಸರ ಮನೆಗೆ ರಕ್ಷಣೆ ಕೊಡುವವರು ಯಾರು…??? ಖಡಕ್ ಆಫಿಸರ್ ಮುಂದಿದೆ ತಮ್ಮ ಇಲಾಖೆಯ ಪೊಲೀಸರ ಸಂರಕ್ಷಣೆ ಪ್ರಶ್ನೆ!! ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ತಲೆ ನೋವಾದ ಕಳ್ಳರು. ಹೌದು, ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿಯಿಂದ ಪೊಲೀಸರು ಬೇಸತ್ತು ಹೋಗಿದ್ದಾರೆ. ಹುಬ್ಬಳ್ಳಿಯ ಖತರ್ನಾಕ್ ಕಳ್ಳರಿಗೆ ಪೊಲೀಸ್ ಕ್ವಾಟ್ರಸ್ ಗಳೇ ಟಾರ್ಗೆಟ್ ಗಳಾಗಿವೆ. ಪೊಲೀಸ್ ಕ್ವಾರ್ಟರ್ಸ್ ನಲ್ಲಿರುವ ಸುಮಾರು 3, 4 ಮನೆಗಳಲ್ಲಿ ಕಳ್ಳತನ ಆಗಿದ್ದು, …

Read More »

Hubballi : ಸೇವೆ ಮತ್ತು ಸುಸ್ಥಿರತೆಯ ದೃಷ್ಟಿಕೋನದೊಂದಿಗೆ 2025–26 ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ

ಐಟಿಸಿ ಫಾರ್ಚೂನ್ ಹೋಟೆಲ್‌ನಲ್ಲಿ ನಡೆದ ಭವ್ಯ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ತನ್ನ ಹೊಸ ನಾಯಕತ್ವಕ್ಕೆ ನಾಂದಿ ಹಾಡಿತು. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಪಂಚ ಮಹಾಭೂತಗಳ ವಿಷಯಾಧಾರಿತ ಈ ಕಾರ್ಯಕ್ರಮವು ರೋಟರಿಯ ಮಾರ್ಗದರ್ಶಿ ಮೌಲ್ಯಗಳಾದ ಉದ್ದೇಶ, ಕರುಣೆ, ಉತ್ಸಾಹ, ದೃಷ್ಟಿ ಮತ್ತು ಏಕತೆಯನ್ನು ಸಂಕೇತಿಸಿತು. ಅಧ್ಯಕ್ಷರಾಗಿ ರೋ ,ಅಂಜನಾ ಬಸನಗೌಡರ್ ಅವರನ್ನು, ಕಾರ್ಯದರ್ಶಿಯಾಗಿ ರೋ ,ಸ್ಮಿತಾ ಮಹೇಶ್ ಅವರನ್ನು ಮತ್ತು …

Read More »

ಮೋದಿ ವಿರುದ್ಧ ಮಾತನಾಡಿದ್ರೆ ದೇಶ ದ್ರೋಹಿಗಳ ಪಟ್ಟ:ಸಂತೋಷ ಲಾಡ್ ಆಕ್ರೋಶ….

ಹುಬ್ಬಳ್ಳಿ: ಬಿಜೆಪಿ ಕೇಂದ್ರ ಸಚಿವರು ಪ್ರಪಂಚದ ಎಲ್ಲರ ಬಗ್ಗೆಯೂ ಮಾತನಾಡಬಹುದು. ನಾವು ಕೇಂದ್ರ ಸಚಿವರ ಬಗ್ಗೆ ಮೋದಿಯವರ ಬಗ್ಗೆ ಮಾತನಾಡಬಾರದು. ಏನಾದರೂ ಮಾತನಾಡಿದರೇ ಸಂತೋಷ ಲಾಡ್ ಹಂಗೇ ಹಿಂಗೇ ಅಂತ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವರ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಟ್ರಂಪ್ 25 ಬಾರಿ ಹೇಳಿದ್ದಾರೆ ಯುದ್ಧ ನಿಲ್ಲಿಸಿದ್ದು, ನಾನೇ ಅಂತ. ಆದರೆ ಯಾವುದೇ ಕೇಂದ್ರ ಸಚಿವರು ಈ ಬಗ್ಗೆ …

Read More »

ಪಾರಿಜಾತ ಲಾಡ್ಜನಲ್ಲಿ ವೇಶಾವಾಟಿಕೆ ದಂಧೆ: ಮೈಸೂರಿನ ಸಂಸ್ಥೆಯ ಮಾಹಿತಿ ಮೇಲೆ ದಾಳಿ ನಡೆಸಿದ ಸಿಸಿಬಿ…

ಮಾಂಸ ದಂಧೆಯಲ್ಲಿ ಹುಬ್ಬಳ್ಳಿಯ ಪಾರಿಜಾತ ಲಾಡ್ಜ್… ಪಾರಿಜಾತದ ಪರಿಮಳ ಮೈಸೂರಿಗೆ ತಲುಪಿದೆ.. ಹುಬ್ಬಳ್ಳಿ: ವೇಶಾವಾಟಿಕೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಹುಬ್ಬಳ್ಳಿಯ ಹೊಸೂರಿನ ಪಾರಿಜಾತ ಲಾಡ್ಜ್ ಮೇಲೆ ದಾಳಿ ನಡೆಸಿ ಅಂತರರಾಜ್ಯದ ಐವರು ಮಹಿಳೆಯರು ಹಾಗೂ ಏಳು ಜನ ಪುರುಷರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ… ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳೀಯ ಸಿಸಿಬಿ ಪೊಲೀಸರ ದಾಳಿ ನಡೆಸಿದ್ದು, ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರನ್ನು ರೆಡ್ ಹ್ಯಾಂಡ್ ಆಗಿ …

Read More »

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನ ಮೇಲೆ ಚಾಕು ಇರಿತ!!

ಹುಬ್ಬಳ್ಳಿಯಲ್ಲಿ ಇಂದು ಜಿ ಅಡ್ಡಾದಲ್ಲಿ ಅಪ್ರಪ್ತ ಬಾಲಕನಿಂದ ಚಾಕು ಇರಿತ ಘಟನೆ ನಡೆದಿದ್ದು, ಸೋಮಶೇಖರ್ ಎಂಬ ಅಪ್ರಾಪ್ತ ಬಾಲಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳವೂ ಕೋಪಕ್ಕೆ ತಿರುಗಿ ಚಾಕು ಇರಿತ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಕಮರಿ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹುಬ್ಬಳ್ಳಿ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ!!

ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಕ್ರಾಸ್ ಬಳಿ ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರು ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ರಸ್ತೆ ಅಪಘಾತ ಪ್ರಕರಣ, ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆಯ ಸಾಗರದವರು. ಶ್ವೇತ (29), ಅಂಜಲಿ(26), ಸಂದೀಪ್ (26) ವಿಠಲ್ (55) ಶಶಿಕಲಾ (40) ಮೃತರು.ಹೋಟೆಲ್ ವ್ಯಾಪಾರಕ್ಕೆಂದು ಬಾಗಲಕೋಟೆಗೆ ತೆರಳುತ್ತಿದ್ದರು …

Read More »
Featured Video Play Icon

ಬಾಲಕನಿಗೆ ಹಲ್ಲೆ ಮಾಡಿ ಕ್ರೌರ್ಯ ಮೆರೆದ ಖಾಕಿ ??:ಪೊಲೀಸರು ರಕ್ಷಕರೋ..? ಭಕ್ಷಕರೋ..?

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸಿಬ್ಬಂದಿಗಳ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ರೌಡಿಗಳನ್ನು ಮಟ್ಟ ಹಾಕುವುದನ್ನು ಬಿಟ್ಟು ಪುಟ್ಟ ಮಕ್ಕಳ ಮೇಲೆಯೇ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಜನಸ್ನೇಹಿ ಹೆಸರಲ್ಲಿ ಜನರಿಗೆ ಸಂಕಷ್ಟ ತಂದೊಡ್ಡುವ ಖಾಕಿ ಕಾರ್ಯಕ್ಕೆ ಈಗ ಎಲ್ಲೆಡೆಯೂ ಬೇಸರ ಮೂಡಿದೆ.ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೇರದ ಪೊಲೀಸ್ ಕಾನ್ಸ್ ಟೇಬಲ್ ನ ಅಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.‌ …

Read More »

ಧಾರವಾಡ. ರಾಜಗುಪ್ತ ವಾರ್ತೆ ನಿರ್ದೇಶಕರಿಗೆ ಸ್ವರ್ಣ ಪದಕ.

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಶುನ್ಯಗೊಳಿಸುವ ವಿಶೇಷ ಮುತ್ತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ ಮಾರ್ಗದರ್ಶನ ನೀಡುವ ಮೂಲಕ ಎಲ್ಲಾ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್ತ ವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವರ್ಣ ಪದಕ ಪ್ರಧಾನ ಮಾಡಿದರು. ಬೆಂಗಳೂರಿನ ಕೋರಮಂಗಲದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಪೆರೆಡ ಮೈದಾನದಲ್ಲಿ ಈ ಪ್ರಧಾನ ಪದಕ ಸಮಾರಂಭ ಮಾಡಲಾಯಿತು.

Read More »

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ ಮಾಡಿದ್ದಾರೆ. 470ಕ್ಕೆ ಹೆಚ್ಚು ಗ್ಯಾಸ ಸಿಲಿಂಡರ್ ಅನ್ನೋ ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ಡಿಎಚ್ ಹೋಗಾರ್ ನೇತೃತ್ವದ ತಂಡ ಧಾರವಾಡ ಸಮೀಪದ ಜೋಗುಲಾಪುರ್ ಬನಶಂಕರಿ ಎಂಟರ್ಪ್ರೈಸಸ್ ಎಚ್ ಪಿ ಗ್ಯಾಸ್ ಸಿಲೆಂಡರ್ ಗೌಡನಳ್ಳಿ ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ.

Read More »

ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ

ದಗದಗ ಬಿಸಿಲಿನ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ ಅಗಲಿದ್ದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ. ಉತ್ತರ ಕನ್ನಡ. ದಕ್ಷಿಣ ಕನ್ನಡ. ಉಡುಪಿ ಹಾಗೂ ದಕ್ಷಿಣ ಒಳನಾಡು , ಮಲೆನಾಡು ಭಾಗದ ಚಿಕ್ಕಮಂಗಳೂರು. ಕೊಡಗು. ಶಿವಮೊಗ್ಗ. ಹಾಸನ. ಮೈಸೂರು. ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದಲೇ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

Read More »