Breaking News

Crime

ಪತ್ನಿಯನ್ನು ಕರೆಯಲು ಆಕೆಯ ತವರು ಮನೆಗೆ ಹೋದ ಗಂಡನನ್ನು ಕೊಲೆ ಮಾಡಿದ ಬಾಮೈದ!!

ಗಾಜಿಪುರದ ನಿವಾಸಿ ಆನಂದಕುಮಾರ ಶಾಮರಾವ ಕೊಲೆಯಾದ ಯುವಕ. ಕೊಲೆ ಆರೋಪದಲ್ಲಿ ಕುವೆಂಪು ನಗರದ ನಿವಾಸಿ ಟೋನಿ ನಾಟೀಕರ್‌ನನ್ನು ಬಂಧಿಸಲಾಗಿದೆ. ಆನಂದ ಪತ್ನಿ ಸ್ನೇಹಾ ಅವರ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಿ ಮೃತರ ತಾಯಿ ದೇವಮ್ಮ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ನೇಹಾ ಅವರನ್ನು ಗಂಡನೊಂದಿಗೆ ಕಳುಹಿಸಲು ಟೋನಿ ಹಾಗೂ ಆತನ ಜತೆಗೆ ಇದ್ದವರು ನಿರಾಕರಿಸಿದ್ದರು. ಈ ವೇಳೆಯ ಜಗಳ ವಿಕೋಪಕ್ಕೆ ತಿರುಗಿ ಟೋನಿ ಚಾಕುವಿನಿಂದ ಆನಂದ ಅವರ …

Read More »

ಮದ್ಯ ಸೇವಿಸಲು ಹಣ ನೀಡದಿದ್ದಕ್ಕೆ ಹೆತ್ತ ತಾಯಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಪುತ್ರ!!

ಮಹೇಂದ್ರ ಸಿಂಗ್‌ ಬಾಗಲಗುಂಟೆಯ ಮುನೇಶ್ವರ ನಗರದ ಮನೆಯೊಂದರಲ್ಲಿ ತಾಯಿ ಜೊತೆ ಕಳೆದ 5 ವರ್ಷಗಳಿಂದ ವಾಸಿಸುತ್ತಿದ್ದ. ಇವರ ತಾಯಿ ಹೊಂದಿದ್ದ ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಇನ್ನು ಶಾಂತಾಬಾಯಿ ಪತಿ ಸರ್ಕಾರಿ ನೌಕರನಾಗಿ ಮೃತಪಟ್ಟಿದ್ದರಿಂದ ಇವರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಬರುತಿತ್ತು. ಬಾಡಿಗೆ ಹಾಗೂ ಪಿಂಚಣಿ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇನ್ನು ಮಹೇಂದ್ರ ಸಿಂಗ್‌ನ ಕುಡಿತದ ಚಟದಿಂದ ಬೇಸತ್ತು ಪತ್ನಿ ಹಾಗೂ ಮಕ್ಕಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. …

Read More »

ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ!!

ಪತ್ನಿ ಲಕ್ಷ್ಮೀ, ಅತ್ತೆ ಶ್ರುತಿ ಇಬ್ಬರನ್ನು ಮತಾತಂತರವಾಗುವಂತೆ ಪತಿ ಶ್ರೀಕಾಂತ್ ಸೇರಿ ಹಲವರು ಬಲವಂತ ಮಾಡುತ್ತಿದ್ದರು. ಒಪ್ಪದಿದ್ದಾಗ ಹಲ್ಲೆ ನಡೆಸಲಾಗಿದೆ. ಪತಿ ಶ್ರೀಕಾಂತ್ ಪತ್ನಿ ಹಾಗೂ ಅತ್ತೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದಕ್ಕೆ ಪತ್ನಿ ಹಾಗೂ ಅತ್ತೆ ನಿರಾಕರಿಸಿದಾಗ ಶ್ರೀಕಾಂತ್ ಹಾಗೂ ಆತನ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಲಕ್ಷ್ಮೀ ಸಹೋದರ ನೀಡಿದ ದೂರುನ ಹಿನ್ನೆಲೆಯಲ್ಲಿ ಪತಿ ಶ್ರೀಕಾಂತ್ ಹಾಗೂ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಪ್ರಕರಣ …

Read More »

ಚಿಕ್ಕಬಳ್ಳಾಪುರ :ಪೆಟ್ರೋಲ್ ಬಂಕ್ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!!

ಯಶವಂತ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರ ನಿವಾಸಿ. ಪೆಟ್ರೋಲ್ ಬಂಕ್ ಕಚೇರಿಯಲ್ಲಿಯೇ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪೆಟ್ರೋಲ್ ಬಂಕ್ ಮಾಲೀಕ ವರುಣ್ ಕರೆ ಮಾಡಿದರೂ ಯಶವಂತ್ ಫೋನ್ ರಿಸಿವ್ ಮಾಡಿರಲಿಲ್ಲ. ಇದರಿಂದ ಮಾಲೀಕ ಪೆಟ್ರೋಲ್ ಬಂಕ್ ಗೆ ಬಂದು ನೋಡಿದಾಗ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

Read More »

ಮಹದೇಶ್ವರ ದೇಗುಲದ ಗೋಪುರ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!!

ಮಲೆ ಮಹದೇಶ್ವರ ದೇಗುಲದ ಗೋಪುರವನ್ನು ಹತ್ತಿ ವ್ಯಕ್ತಿಯೊಬ್ದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.ಅರೆಬರೆ ಬಟ್ಟೆಯಲ್ಲಿರುವ ವ್ಯಕ್ತಿಯೊಬ್ಬ ಗೋಪುರವನ್ನು ಹತ್ತಿ ಕೆಳಗಿದ್ದವರನ್ನು ಆತಂಕದಲ್ಲಿ ತಳ್ಳಿದ್ದಾನೆ. ಕೊನೆಗೂ ಆತನ ಮನವೊಲಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲಿದ್ದ ಭಕ್ತಾದಿಗಳು ಆತನನ್ನು ಕೆಳಗೆ ಬೀಳದಂತೆ ಬೇಡಿಕೊಂಡರೂ ಸಹ ಆತ ಗೋಪುರದ ಕಲಶದವರೆಗೂ ಹತ್ತಿದ್ದಾನೆ.ವಿನಯ್‌ ಆಚಾರ್ಯ ಎಂಬುವವರು ಈ ಪ್ರಕರಣದ ದೃಶ್ಯವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು ಪ್ರಕರಣದ ಸತ್ಯಾಸತ್ಯತೆ ಹಾಗೂ …

Read More »

ಆಟೋ ರಿಕ್ಷಾ ನಾಪತ್ತೆಯಾದ ವ್ಯಕ್ತಿ, ಶವವಾಗಿ ಪತ್ತೆ!!!

ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಾವಿಯ ಬಳಿ ರಕ್ತ ಮಿಶ್ರಿತ ಬಟ್ಟೆಗಳು, ಪಾದರಕ್ಷೆ, ಪರ್ಸ್‌ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪರ್ಸ್‌ ತೆರೆದು ನೋಡಿದಾಗ ಮೃತಪಟ್ಟ ವ್ಯಕ್ತಿಯ ಭಾವಚಿತ್ರ ಹಾಗೂ ದಾಖಲೆ ಪತ್ರಗಳು ಕಂಡು ಬಂದಿವೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಮೊಹಮ್ಮದ್‌ ಶರೀಫ್‌ ನಾಪತ್ತೆಯಾದ ಬಗ್ಗೆ ಕೇಸು ದಾಖಲಾಗಿರುವ ವಿಷಯ ತಿಳಿದು ಬಂದಿದೆ. ವಿಷಯ ತಿಳಿದು …

Read More »

ಸರ್ಪ ದೋಷ ನಿವಾರಣೆಗೆ ಮಗಳನ್ನೇ ನರಬಲಿ ನೀಡಿದ ತಾಯಿ!!!

ತನ್ನ ಅತಿಯಾದ ಮೂಢನಂಬಿಕೆಯಿಂದ ಸ್ವಂತ ಮಗಳನ್ನೇ ತಾಯಿಯೊಬ್ಬಳು ಬಲಿ ನೀಡಿದ್ದಾಳೆ. ಈ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ನಡೆದಿದೆ.ಭಾರತಿಗೆ ಮೊದಲಿನಿಂದಲ್ಲೂ ದೇವರ ಬಗ್ಗೆ ಅಥವಾ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ, ಆ ಕಾರಣಕ್ಕೆ ಆಕೆಗೆ ಒಬ್ಬ ಜ್ಯೋತಿಷ್ಯರು ಸರ್ಪ ದೋಷ ಇದೆ ಎಂದು ಹೇಳಿದರು.ಸ್ವಲ್ಪ ದಿನಗಳ ನಂತರ ಭಾರತಿ ಈ ಸರ್ಪ ದೋಷದಿಂದ ಮುಕ್ತಿ ಪಡೆಯಲು ನರಬಲಿ ಪೂಜೆ ಮಾಡಬೇಕು ಎಂದು ನಿರ್ಧಾರಿಸಿದಳು. ಯಾರೂ …

Read More »

ಮಹಿಳೆ ಮತ್ತು ಮೂರು ವರ್ಷದ ಮಗ ಶವವಾಗಿ ಪತ್ತೆ!! ಆರೋಪಿ ಪರಾರಿ.

ಗುವಾಹಟಿಯ ಸುಮಾರು 40 ಕುಟುಂಬಗಳು ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದು, ತ್ಯಾಜ್ಯ ಸಂಗ್ರಹಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ, ಬಚ್ರಾ ಸುಲ್ತಾನ್‌ಪುರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಶಹಜನ್ ಖಂಡಕರ್ ಎಂದು ಗುರುತಿಸಲಾದ ಆರೋಪಿಯು ರಾತ್ರಿಯ ವೇಳೆ ತನ್ನ ಪತ್ನಿ ಮತ್ತು ಅವರ ಮಗನನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೂ ಮುನ್ನ, ತನ್ನ 13 ವರ್ಷದ ಮಗನನ್ನು ಹೊರಗೆ ಮಲಗಲು ಹೇಳಿದ್ದಾನೆ ಎಂದು ವರದಿಯಾಗಿದೆ. ನಂತರ, ತನ್ನ ಹೆಂಡತಿಯ …

Read More »

ಕಾರ್ಕಳ : ಹೊಟೇಲ್‌ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ!!

ನಾಗ ಪ್ರಶಾಂತ ಅವರು ಶಿಕಾರಿಪುರ ಹೈವೇಯಲ್ಲಿರುವ ದೇವಿಪ್ರಸಾದ್‌ ರೈ ಎಂಬುವವರ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಲು ಹೋಗಿದ್ದರು.ನಾಗ ಪ್ರಶಾಂತ ಮದ್ಯಪಾನ ಮಾಡಿದ್ದ ಕಾರಣ ದೇವಿಪ್ರಸಾದ್‌ ರೈ ಅವರು ಕೆಲಸಕ್ಕೆ ಸೇರಿಸಿಕೊಳ್ಳದೆ ವಾಪಸ್‌ ಕಳುಹಿಸಿದ್ದರು. ಅದೇ ದಿನ ನಾಗ ಪ್ರಶಾಂತ ಶಿವಮೊಗ್ಗ ತಲುಪಿದ್ದಾಗಿ ತಿಳಿಸಿದ್ದರು. ಅನಂತರ ಮನೆಯವರು ನಾಗ ಪ್ರಶಾಂತರಿಗೆ ಫೋನ್‌ ಮಾಡಿದಾಗ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಮನೆಯಿಂದ ಹೋದ ನಾಗ ಪ್ರಶಾಂತ ಅವರು ಈವರೆಗೆ ವಾಪಸ್‌ ಬಾರದೆ ನಾಪತ್ತೆಯಾಗಿದ್ದಾರೆ …

Read More »

ಅಯೋಧ್ಯ : ಅತಿಥಿಗೃಹದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಚಿತ್ರೀಕರಿಸಿದ ಆರೋಪಿ ಅರೆಸ್ಟ್!..

ಹೊಟೆಲ್ ಸಿಬ್ಬಂದಿಯೇ ಮಹಿಳೆ ಸ್ನಾನ ಮಾಡುತ್ತಿದ್ದಾಗ ತನ್ನ ಮೊಬೈಲ್ ನಲ್ಲಿ ಆಕೆಯ ವಿಡಿಯೋ ಸೆರೆ ಹಿಡಿದಿದ್ದಾನೆ ಎಂದು ಹೇಳಲಾಗಿದೆ.ಈ ಸಂಬಂಧ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅಯೋಧ್ಯೆ ಪೊಲೀಸರು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಿವಾಸಿ ಸೌರಭ್ ತಿವಾರಿ ಎಂಬಾತನನ್ನು ಬಂಧಿಸಿದ್ದಾರೆ.ಪ್ರಸ್ತುತ ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಈತನ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಇತರೆ ಮಹಿಳೆಯರ ಹಲವು ವಿಡಿಯೋಗಳು ಪತ್ತೆಯಾಗಿವೆ ಎಂದು …

Read More »