BigTv News
March 11, 2025
Breaking News, Crime, ಹೈದರಾಬಾದ್
ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ ಕಂಡ ಘಟನೆ ಸೋಮವಾರ ರಾತ್ರಿ ಉಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆಯಾದರೆ, ಇಬ್ಬರು ಮಕ್ಕಳು ವಿಷ ಉಣಿಸಿ ಮೃತ ಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಘಟನೆಯ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದಂಪತಿಗಳು ಆರ್ಥಿಕ ಮುಗ್ಗಟ್ಟಿನಿಂದ ತೀವ್ರ ಪರದಾಡುತ್ತಿದ್ದರು …
Read More »
BigTv News
March 11, 2025
Breaking News, Crime, ಬೆಳಗಾವಿ
ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಇಬ್ಬರು ಮಕ್ಕಳ ತಂದೆಯಾದವನು ಅಪ್ರಾಪ್ತ ಬಾಲಕಿಯೊಬ್ಬಳನ್ನು ಪುಸಲಾಯಿಸಿ ನಿರಂತರವಾಗಿ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬಸಪ್ಪ ಅಡಿವೆಪ್ಪ ಎಂಬಾತ ಬಾಲಕಿಯನ್ನು ನಂಬಿಸಿ ಕರೆದೊಯ್ದು ನೀಚ ಕೃತ್ಯವೆಸಗಿದ್ದಾನೆ. ಸಂತ್ರಸ್ತೆ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗೆ ಇಬ್ಬರು ಮಕ್ಕಳಿದ್ದು, ಅಪ್ರಾಪ್ತೆಯನ್ನು ಪುಸಲಾಯಿಸಿ ನಿರಂತರವಾಗಿ ಅತ್ಯಾಚಾರವೆಸಗಿ ಆಕೆಯನ್ನು 8 ತಿಂಗಳ ಗರ್ಭಿಣಿಯನ್ನಾಗಿ ಮಾಡಿದ್ದಾನೆ. ಆರೋಪಿ ಬಂಧಿಸಿರುವ ಪೊಲೀಸರು …
Read More »
BigTv News
March 10, 2025
Crime, ಹುಬ್ಬಳ್ಳಿ
ಕಾಲಿನಿಂದ ಬೈಕ್ ಚಾಲನೆ ಮಾಡುವ ಮೂಲಕ ಪುಷ್ಪಾ ಸಿನಿಮಾ ಡೈಲಾಗ್ ಹೊಡೆದು ರಿಯಲ್ ಮಾಡಿದ್ದ ಯುವಕನನ್ನು ಪೂರ್ವ ಸಂಚಾರ ಪಾನಿ ಪೊಲೀಸರು ಯುವಕನನ್ನು ಬಂಧಿಸಿ ಬೈಕ್ ಜಪ್ತಿ ಮಾಡಿದ್ದಾರೆ. ಗಾಂಧಿವಾಡದ ನಿವಾಸಿ ಈಶ್ವರ್ ತಾಳ್ಬಂದ್ ಬಂದಿತ ಆರೋಪಿ. ಪಿಚ್ಚರ್ ಡೈಲಾಗದು ಕಾಲಿನಿಂದ ಬೈಕ್ ಸವಾರ ಮಾಡಿರುವ ರಿಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಪೊಲೀಸಾಗಿ ಬರುತ್ತಿದ್ದಂತೆ ಅವನನ್ನು ಬಂಧಿಸಿದ್ದಾರೆ.
Read More »
BigTv News
March 10, 2025
Crime, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ನಗರದ ಗುಪ್ತಂಗ ಬೆಟ್ಟದ ಪ್ರವೇಶ ಪ್ರವೇಶ ಶುಲ್ಕವನ್ನು ಬ್ಯಾಂಕ್ ಗೆ ಜಮಾ ಮಾಡದೆ ವಂಚಿಸಿರುವ ಆರೋಪವು ಹುಬ್ಬಳ್ಳಿಯಲ್ಲಿ ನಡೆದಿದೆ. ವಿಶ್ವನಾಥ್ ಎಂಬ ಆರೋಪಿಯು ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ ಕಛೇರಿಯಲ್ಲಿ ಕರ್ತವ್ಯದಲ್ಲಿದ್ದು. ನೃಪತುಂಗ ಬೆಟ್ಟದಲ್ಲಿ ಒಟ್ಟು 15.57 ಲಕ್ಷ ಪ್ರವೇಶ ಶುಲ್ಕವನ್ನು ಬ್ಯಾಂಕಿಗೆ ಕಟ್ಟುವಂತೆ ತಿಳಿಸಿದ್ದು ಅದರಲ್ಲಿ 8.95 ಲಕ್ಷ ಮಾತ್ರ ಬ್ಯಾಂಕಿಗೆ ಕಟ್ಟೆ ಉಳಿದ ಹಣವನ್ನು ವಂಚನೆ ಮಾಡಿದ್ದಾನೆ. ಅರಣ್ಯಧಿಕಾರಿ ರಾಮಲಿಂಗಪ್ಪ ಉಪ್ಪಾರ್ ಅವರು ಆರೋಪ ಮಾಡಿದ್ದು …
Read More »
BigTv News
March 10, 2025
Breaking News, Crime, ಮಂಗಳೂರು
ಇದು ಮಂಗಳೂರು ಜೈಲಿನ ಕರ್ಮಕಾಂಡದ ಕೇಸ್ . ಕೈದಿಗಳಿಗೆ ಕಳ್ಳ ಮಾರ್ಗದಲ್ಲಿ ಗಾಂಜಾ ಸಪ್ಲಯ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನ ಹೊರಗಿನಿಂದ ಗಾಂಜಾ ಪ್ಯಾಕೆಟ್ ಎಸೆದು ಎಸ್ಕೇಪ್ ಆದರೂ ಅಪರಾಧಿಗಳು. ಈ ಬಗ್ಗೆ ಮಾತನಾಡಿದ ಕಮಿಷನರ್ ಅನುಪಮ ಅಗರ್ವಾಲ್ ಹೇಳಿಕೆ ಬೈಕ್ ನಂಬರ್ ಪ್ಲೇಟ್ ಇರಲಿಲ್ಲ ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ . 15 ದಿನಗಳಾದರು ಗಾಂಜಾ ಗಿರಾಕಿಗಳ ಸುಳಿವಿಲ್ಲ. ಈ ನಡೆ …
Read More »
BigTv News
March 10, 2025
Crime, ಕರ್ನಾಟಕ
ನವಲಗುಂದ ಹೊರ ವಲಯದ ಹುಬ್ಬಳ್ಳಿ ಸೋಲಾಪುರ್ ರಸ್ತೆಯ ಹೊಂದಿರುವ ರೈತ ಪ್ರಕಾಶ್ ಸಿಗ್ಲಿ ಎಂಬಾತರ ಹೊಲದಲ್ಲಿ ಕಿಡಿಗೇಡಿಗಳು ಹೊಟ್ಟಿನ ಬನವಿಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ತೊಗರಿ ಹೊಟ್ಟಿನ ಬನವಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಂದು ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರು ನೀರಿನ ಟ್ಯಾಂಕರ್ ತರಿಸಿ ಭನವಿಗೆ ಹತ್ತಿದ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಿಂದ ಅಪಾರ ನಷ್ಟ ಉಂಟಾಗಿದೆ.
Read More »
BigTv News
March 10, 2025
Crime
ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆ ಶ್ರೀಶೈಲಂ ಎಡದಂತೆ ಕಾಲವೆ ಸುರಂಗದಲ್ಲಿ ಕುಸಿದಿರುವ ಪ್ರದೇಶದಲ್ಲಿ ಇನ್ನು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ನಾಪತ್ತೆಯಾಗಿರುವ ಕಾರ್ಮಿಕರಿಗೆ ಶೋಧ ಕಾರ್ಯ ಮುಂದುವರೆದಿದೆ. ಈ ವೇಳೆ ಕುಸಿತದಲ್ಲಿ 56 ಮಂದಿ ಸಿಲುಕಿದ್ದು ಅವರ ಪೈಕಿ 48 ಮಂದಿಯನ್ನು ರಕ್ಷಿಸಲಾಗಿದೆ ಇನ್ನುಳಿದ ಎಂಟು ಮಂದಿ ನಾಪತ್ತೆಯಾಗಿದ್ದಾರೆ ಅವರಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ .
Read More »
BigTv News
March 10, 2025
Crime, ಕರ್ನಾಟಕ
ಡ್ಯೂಟಿ ಬದ್ಲಿಸಿದ್ದಕ್ಕೆ ಬಸ್ ನಲ್ಲಿ ಕೆ ಎಸ್ ಆರ್ ಟಿ ಸಿ ನೌಕರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಬೆಳಗಾವಿ ಡಿಪೋ ಅಳ್ಳಾವರ ಬಸ್ ನಲ್ಲಿ ನಡೆದಿದೆ. ಬಸ್ ವಳಗೆ ನ್ನೆನು ಬಿಗಿದುಕೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57 ವರ್ಷದ ಕೇಶವ ಕಮಡೊಳ್ಳಿ ಮೃತ ವ್ಯಕ್ತಿ. ಕೇಶವ ಬೆಳಗಾವಿಯ ಹಳೆಯ ಗಾಂಧಿನಗರ ನಿವಾಸಿಯಾಗಿದ್ದರು ಎಂದು ತಿಳಿದು ಬಂದಿದೆ. ಬಸ್ ವಾಷಿಂಗ್ ಬದಲು ಪಕ್ಟರ್ ಕೆಲಸಕ್ಕೆ ಡ್ಯೂಟಿ ಬದಲಿಸಿದ್ದಕ್ಕೆ ಈ …
Read More »
BigTv News
March 10, 2025
Crime, ಕರ್ನಾಟಕ
ಪಾಳು ಬಿದ್ದಿದ್ದ ಕಟ್ಟಡವಂದು ಕುಸಿದು ಬಿದ್ದಿದ್ದು ನಾಲ್ಕು ಮಂದಿ ಬಿಧಿ ಬದಿ ವ್ಯಾಪಾರಿ ಮಹಿಳೆಯರು ಸಾವನ್ನಪ್ಪಿರುವ ದುರ್ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದುಬಂದಿದೆ. ಇಂದು ಕೆಲವು ಮಹಿಳೆಯರು ಹಾಳು ಬಿದ್ದ ಕಟ್ಟಡದ ಕೆಳಗೆ ವ್ಯಾಪಾರ ಮಾಡುತ್ತಿದ್ದರು. ಕಟ್ಟಡ ದಿಡೀರ್ ಕುಸಿದು ಬಿದ್ದು. ಅವಶೇಷಗಳಡಿ ಸಿಲುಕಿ ಸಾವನಪ್ಪಿದ್ದಾರೆ. ಇನ್ನೂ ಕೆಲವರು ಕಟ್ಟಡದ ಅವಶೇಷಗಳಾಡಿ ಸಿಲುಕಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಹಾಗೂ ವಿಚಾರಣೆ ನಡೆಸುತ್ತಿದ್ದಾರೆ.
Read More »
BigTv News
March 10, 2025
Breaking News, Crime
ಮುಂಬೈನಲ್ಲಿ ಅಪಘಾತಕಾರಿ ಘಟನೆ ಎಂದು ನಡೆದಿದೆ. ಹೌದು ಮುಂಬೈನ ನಾಗಪಾಡದಲ್ಲಿ ನಿರ್ಮಾಣ ಹಂತದ ಕಟ್ಟಡದ ನೀರಿನ ಟ್ಯಾಂಕ್ ನಲ್ಲಿ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕಂಡು ಬಂದಿದೆ. ಮಾಹಿತಿ ಪ್ರಕಾರ ಐದು ಗುತ್ತಿಗೆ ಕಾರ್ಮಿಕರು ನಿರ್ಮಾಣ ಕಟ್ಟಡದ ಸ್ವಚ್ಛಗೊಳಿಸುತ್ತಿದ್ದರು. ಉಸಿರು ಗಟ್ಟುವಿಕೆಯಿಂದ ಒಳಗೆ ಮೂರ್ಚೆ ಹೋಗಿದ್ದಾರೆ ನಂತರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲೆಯಿಸಲಾಯಿತು. ಅದರಲ್ಲಿ ಒಬ್ಬ ವ್ಯಕ್ತಿ ಚಿಕಿತ್ಸೆ ಒಳಗಾಗಿದ್ದಾನೆ ಇನ್ನು ನಾಲ್ವರು ಸಾವನ್ನಪ್ಪಿರುವ ಘಟನೆ ಕಂಡು ಬಂದಿದೆ.
Read More »