Breaking News

News

ಹುಬ್ಬಳ್ಳಿ: ಚಿರತೆ ಹಾವಳಿಗೆ ಕಲಘಟಗಿಯ ಕಾಡಂಚಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಿರತೆಗಳ ಗುಂಪೊಂದು ನಡೆಸಿದ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬುವರಿಗೆ ಸೇರಿದ ಎತ್ತು ಚಿರತೆಗಳ ದಾಳಿಗೆ ಬಲಿಯಾಗಿದೆ. ತಾಯಿ ಚಿರತೆ ಮತ್ತು ಎರಡು ಮರಿಗಳು ಸೇರಿ ದಾಳಿ ನಡೆಸಿ ಎತ್ತಿನ್ನ ಬಲಿ ಪಡೆದಿವೆ. ರಾತ್ರಿ ಹೊಲದ ಮನೆಯಲ್ಲಿ ಕಟ್ಟಿ ಹಾಕಿದ್ದ ಎರಡು ಎತ್ತುಗಳಲ್ಲಿ …

Read More »

ಜಯ ಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯೋತ್ಸವ

ಧಾರವಾಡ ನಾಡ ಹಬ್ಬದಯಾದ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷ ಕೂಡ ಧಾರವಾಡದ ಶ್ರೀನಗರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷ, ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು,ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಮಾಹದೇವ ಸತ್ತಿಗೇರಿ ,ಟೈಕ್ವಾಂಡೊ ಕರಾಟೆ ಬೆಳ್ಳಿಯ ಪದಕಪಡೆದ, ದಾಮಿನಿ ಬನ್ನಿಕೊಪ್ಪ,ಟೈಕ್ವಾಂಡೊ ಕರಾಟೆ ಕಂಚಿನ ಪದಕಗಳಸಿದ …

Read More »

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅರವಿಂದ್ ಬೆಲ್ಲದ್….

ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಮೊದಲ ತಿಂಗಳಿಂದಲ್ಲೆ ಗದ್ದಲ ಆರಂಭವಾಗಿದೆ. ಇದು ಹನಿಮೂನ ಸಮಯ ಆದ್ರೆ ಒಂದೇ ತಿಂಗಳಲ್ಲಿ ಅಸಮಾಧಾನ ಶುರುವಾಗಿದೆ.. ನಮ್ಮ ಪ್ರಕಾರ ಸಿದ್ದರಾಮಯ್ಯ ಎರಡುವರೆ ವರ್ಷ,ಡಿಕೆ ಶಿವಕುಮಾರ್ ಎರಡುವರೆ ವರ್ಷ ಅನ್ನೋ ಮಾಹಿತಿ ಇತ್ತು. ಆದರೆ ಸಿದ್ದರಾಮಯ್ಯ ಇವಾಗಲೇ ನಾಲ್ಕು ಜನರನ್ನು ರೆಡಿ ಮಾಡಿದ್ದಾರೆ.ಎರಡು ವರ್ಷ ಆದ ಬಳಿಕ ನಾಲ್ಕು ಜನರ ನಡುವೆ ಜಗಳ ಹಚ್ಚಿ ಅವರೇ ಮುಂದುವರಿಬೇಕು ಅಂದುಕೊಂಡಿದ್ದಾರೆ ಆದರೆ ಅದು ಆಗಲ್ಲ ಎಂದ ಹುಬ್ಬಳ್ಳಿಯಲ್ಲಿ ಅರವಿಂದ …

Read More »

ಹಾಸನದ ಸೌದರ್ಯ ನೋಡಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ

ಹಾಸನ: ಅದಿ ದೇವತೆ ಹಾಸನಾಂಬೆ ದೇವಲಾಯವನ್ನು ಪ್ರತಿವರ್ಷದಂತೆ ಈವರ್ಷವು ಕೂಡ ನವೆಂಬರ್ ೨ರ ಗುರುವಾರದಂದು ಗರ್ಭಗುಡಿ ಬಾಗಿಲು ತೆಗೆಯುತ್ತಿದ್ದು, ಈಗಾಗಲೇ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಂತಿಮ ಸ್ಪರ್ಶ ನೀಡಿದ್ದಾರೆ. ಇನ್ನು ಹಾಸನ ನಗರದ ಉದ್ದಲಕ್ಕೂ ಬಣ್ಣ ಬಣ್ಣದ ಲೈಟಿಂಗ್ಸ್ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಎಂದು ಕರೆಯುತ್ತೇವೆ. ಇದೆ ವೇಳೆ ಹಾಸನಾಂಬೆ ಬಾಗಿಲನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ತೆಗೆದು ಭಕ್ತರಿಗೆ ದರ್ಶನ ನೀಡಲಿದೆ. …

Read More »

ರಾಮಾಪುರ ಆನೆ ಶಿಬಿರದಲ್ಲಿದ್ದ 36 ವರ್ಷದ ಗಂಡಾನೆ ಸಾವು..!

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ರಾಮಾಪುರ ಆನೆ ಶಿಬಿರದಲ್ಲಿದ್ದ 36 ವರ್ಷದ ಗಂಡಾನೆ ಮೃತ ಪಟ್ಟಿದೆ. ಆರೋಗ್ಯವಾಗಿಯೇ ಇದ್ದ ಆನೆ, ತರಬೇತಿ ನೀಡುತ್ತಿದ್ದ ಸಂದರ್ಭ ದಿಢೀರ್‌ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದೆ. ಈ ಆನೆಗೆ ಅಕ್ಕಿರಾಜ ಎಂಬ ಹೆಸರು ಇದೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ 2021ರಲ್ಲಿ ಸೆರೆ ಹಿಡಿದು ಬಂಡೀಪುರ ಸಮೀಪದ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿತ್ತು. ಭಾರೀ ಗಾತ್ರದ ಆನೆಯು ಬಂಡೀಪುರ ಹುಲಿ ಸಂರಕ್ಷಿತ …

Read More »

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆ..!

ಚಿಕ್ಕಬಳ್ಳಾಪುರ: ಕೆಲ ದಿನಗಳ ಹಿಂದೆಯಷ್ಟೇ ಕೇರಳದ ಕೋಝಿಕೋಡ್‌ನಲ್ಲಿ ಪತ್ತೆಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಝಿಕಾ ವೈರಸ್‌ ಇದೀಗ ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಹೈಅಲರ್ಟ್‌ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರೋದು ಧೃಡವಾಗಿದೆ. ಹೀಗಾಗಿ ತಲಕಾಯಲಬೆಟ್ಟ ಗ್ರಾಮ ಸೇರಿದಂತೆ ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ (Health Department) ಸರ್ವೆ ಕಾರ್ಯ ರ‍್ಯಾಂಡಮ್‌ ಚೆಕಪ್‌ ಮಾಡಲಾಗುತ್ತಿದೆ. …

Read More »

ವಿಷಾಹಾರ ಸೇವಿಸಿದ್ದ ಐದು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ವಿಷಾಹಾರ ಸೇವಿಸಿ ಐದು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ವಿದ್ಯಾರ್ಥಿಗಳನ್ನು ಅಲ್ಪಸಂಖ್ಯಾತ ‌ಮೋರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು ಪಲಾವ್ ಸೇವಿಸಿದ್ದರಿಂದ 50 ಜನರ ಪೈಕಿ 5 ಜ‌ನ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದು, ರಾಮದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನೂ ಗೊತ್ತಾಗಬೇಕಿದೆ

Read More »

ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಾದ ಸಂತೋಷ್ ಲಾಡ್ಜ ಜಪಾನ್‌ಗೆ ತೆರಳಲು ಧನಸಹಾಯವನ್ನು ಮಾಡಿದ್ದರು

ಧಾರವಾಡ:ಧಾರವಾಡ ಜಿಲ್ಲೆಯ ಕುಂದಗೋಳ‌ ತಾಲೂಕಿನ ಕಳಸ ಗ್ರಾಮದ ವಿದ್ಯಾರ್ಥಿನಿ ಪುಟ್ಟವ್ವ ರಮೇಶ ಬಾಲ್ಕೆ ಅವರಿಗೆ ಕಾರ್ಮಿಕ ಇಲಾಖೆಯ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ‌ ಸಚಿವ ಸಂತೋಷ್ ಲಾಡ್ ಅವರು ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ರೂ, 25,000 ಸಹಾಯಧನ ಮಾಡಿದರು. ವಿದ್ಯಾರ್ಥಿನಿಯು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಳಸದ ಸರಕಾರಿ ಪ್ರೌಢಶಾಲೆಯಲ್ಲಿ10 ನೇ ತರಗತಿ ಓದುತ್ತಿದ್ದು, ಜಪಾನ್‌ನಲ್ಲಿ ನಡೆಯುತ್ತಿರುವ ʼಇನ್‌ಸ್ಪೈರ್ ಅವಾರ್ಡ್ 2023 ಸ್ಪರ್ಧೆʼ ಯಲ್ಲಿ ಭಾಗವಹಿಸುತ್ತಿದ್ದಾಳೆ. ಇದು ಇಡೀ …

Read More »

ಡಾ. ಪುನೀತ್ ರಾಜಕುಮಾರ್ ಯುವ ಜನತೆಗೆ ಸ್ಪೂರ್ತಿದಾಯಕ ವ್ಯಕ್ತಿ

ಹುಬ್ಬಳ್ಳಿ : ಕರ್ನಾಟಕ ರತ್ನ ಪವರ್ ಸ್ಟಾರ್ ಡಾ// ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆಯ ಅಂಗವಾಗಿ ಇಲ್ಲಿಯ ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರಕ್ತದಾನ ಶಿಬಿರವನ್ನು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಡಾ. ಬಿ ಆರ್ ಪಾಟೀಲ್ ಅವರು ಪುನೀತ್ ರಾಜಕುಮಾರ್ ಕೇವಲ ಒಬ್ಬ …

Read More »

ರಜನಿ ಬಗ್ಗೆ ಹೇಳಿದ ಕವಿತಾ….

ಕವಿತಾ 11 ನೇ ವಯಸ್ಸಿನಲ್ಲಿ ಬಾಲನಟಿಯಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ನಂತರ ನಾಯಕಿಯಾಗಿ ನಟಿಸಿದರು. ರಜನಿ, ಶಿವಾಜಿ ಸೇರಿದಂತೆ ಪ್ರಮುಖ ನಟರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ತಮಿಳಿನಲ್ಲಿ ಸೆಂತಮಿಲ್ ಪಾಟ್ಟು, ವೈದೇಹಿ ಕಲ್ಯಾಣಂ, ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕವಿತಾ ತಮಿಳು ಮಾತ್ರವಲ್ಲದೆ ತೆಲುಗಿನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಟಾಲಿವುಡ್ ನಲ್ಲಿ ಖ್ಯಾತ ನಟಿಯಾಗಿದ್ದಾರೆ. ಕವಿತಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. …

Read More »