Breaking News

News

ಕೋವಿಡ್ ಏರಿಕೆ ಕುರಿತು ತಜ್ಞರೊಂದಿಗೆ ಸಮಾಲೋಚನೆ: ಸಿಎಂ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಏರಿಕೆಯಾಗುತ್ತಿರುವ COVID19 ಮತ್ತು Omicron ಸೋಂಕಿನ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಒಮಿಕ್ರಾನ್ ಅತಿ ವೇಗವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ನಾಳೆ ಸಂಜೆ ತಜ್ಞರೊಂದಿಗೆಸಭೆ ನಡೆಸಿ ಕೋವಿಡ್ ಮತ್ತು ಒಮಿಕ್ರಾನ್ ತಡೆಯುವ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.

Read More »

ಜಲ ಸಂಪನ್ಮೂಲ ಸಚಿವಗೆ ಸವಾಲು ಹಾಕಿದ ಮಾಜಿ ಸಿಎಂ

ಚಾಮರಾಜನಗರ: ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು’ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪಕ್ಷದ ನಿಲುವಿನ ಬಗ್ಗೆ ದಾಖಲೆಗಳಿದ್ದರೆ  ಬಿಡುಗಡೆ ಮಾಡಲಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಸವಾಲು ಹಾಕಿದರು. ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೇಕೆದಾಟು ಪಾದಯಾತ್ರೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಹಿಂದೆ ಕಾಂಗ್ರೆಸ್‌ ಸರ್ಕಾರ ಇತ್ತು, ನಂತರ ಮೈತ್ರಿ ಸರ್ಕಾರ ಬಂತು. ಆಗ ಏನೂ ಮಾಡಲಿಲ್ಲ. ಈಗ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡುವುದಕ್ಕೆ ಹೊರಟಿದ್ದಾರೆ. ಇದು …

Read More »

ಲಾಕಡೌನ್ ಕುರಿತು ಮಾಹಿತಿ ನೀಡಿದ ಗೃಹ ಸಚಿವ

ಚಿಕ್ಕಮಗಳೂರು: ರಾಜ್ಯದಲ್ಲಿ  ಹೊಸ ವೈರೆಸ್ ಕಾಲಿಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಿದೆ.ಕೊರೊನಾ ಸೋಂಕು ಹೆಚ್ಚಾದರೆ ಲಾಕ್ ಡೌನ್ ಅನಿವಾರ್ಯವಾಗಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಜನರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಬದ್ಧತೆಯಾಗಿದೆ. ಜನ ಸಹಕಾರ ನೀಡದಿದ್ದರೆ, ಕೋವಿಡ್ ಪ್ರಕರಣಗಳು ಹೆಚ್ಚಿದರೆ ಲಾಕ್ ಡೌನ್ ಕ್ರಮ ಅನಿವಾರ್ಯವಾಗುತ್ತದೆ ಎಂದರು.

Read More »

ಭೀಕರ ರಸ್ತೆ ಅಪಘಾತ- ಸುಶಾಂತ್ ಸಿಂಗ್ ರಾಜಪೂತ್ ಕುಟುಂಬದ 6 ಜನರ ದುರ್ಮರಣ

ಬಿಹಾರ್ : ಬಿಹಾರದ ಲಖಿಸರಾಯ್ ಎಂಬಲ್ಲಿ ಟ್ರಕ್ ಮತ್ತು ಖಾಸಗಿ ವಾಹನವೊಂದರ ಮಧ್ಯ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಇವರೆಲ್ಲರವೂ ದಿವಂಗತ, ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಾಜಪೂತ್ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ. ಇವರೆಲ್ಲವೂ ಪಟ್ನಾದಲ್ಲಿ ನಡೆದಿದ್ದ ಅಂತೀಮ ಸಂಸ್ಕಾರದ ಕಾರ್ಯಕ್ರಮವನ್ನ ಪೂರೈಸಿಕೊಂಡು ಹುಟ್ಟೂರಿಗೆ ವಾಪಸಾಗುತ್ತಿದ್ದರು. ಬಿಹಾರದ ಲಖಿಸರಾಯ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ಈ ಬೀಕರ ಅಪಘಾತ …

Read More »

ಬಿಟ್ ಕಾಯಿನ್ ಪ್ರಕರಣದಲ್ಲಿ ಬಿ ಕೇರ್ ಫುಲ್ ಅಂದ ಬಿಎಸ್​ವೈ ; ಶಿಷ್ಯನ ನೆರವಿಗೆ ನಿಂತ ರಾಜಾಹುಲಿ!

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದ (Karnataka Bitcoin Scam) ಬೆನ್ನಲ್ಲೇ ರಾಜ್ಯ ನಾಯಕತ್ವದಲ್ಲಿ ಬದಲಾವಣೆಯ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆ ಅಲರ್ಟ್ ಆದ ಸಿಎಂ ಬೊಮ್ಮಾಯಿ (Cm Basavaraj Bommai) ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊರೆ ಹೋಗಿದ್ದಾರೆ. ಸಿಎಂ ಬೆನ್ನಿಗೆ ನಿಲ್ಲಲು ಬಿಎಸ್​​ವೈ ಸಮ್ಮತಿ ನೀಡಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸುತ್ತೇನೆ ಎನ್ನುವ ಅಭಯ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. …

Read More »

ಬಿಟ್ ಕಾಯಿನ್ ಪ್ರಕರಣ ಬಯಲಿಗೆಳದಿದ್ದೇ ನಾವು- ಶಾಮೀಲಾದವ್ರು ಯಾರೇ ಆದರೂ ಬಿಡಲ್ಲಾ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಟ್ ಕಾಯಿನ್ (Bitcoin) ಪ್ರಕರಣ ಬಯಲಿಗೆ ತಂದು ಇದರ ತನಿಖೆ ಮಾಡಿದ್ದೇ ನಾವು. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ರೂ ಬಿಡಲ್ಲ, ಬಲಿ ಹಾಕ್ತೀವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ) ಖಡಕ್​ ಆಗಿ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧದ ಮುಂದೆ ನೆಹರು ಪುತ್ಥಳಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣ ಬಯಲಿಗೆ ತಂದಿದ್ದೇ ನಾವು. ತನಿಖೆಯನ್ನು ಇಡಿ, ಸಿಬಿಐಗೆ ವಹಿಸಿದ್ದೇವೆ. …

Read More »

ಸಿಎಂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡ್ತಿದ್ದಾರೆ- ಸಿಎಂ ಬದಲಾಗುವುದಿಲ್ಲ..

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಅವರು ಬದಲಾವಣೆ ಆಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಒಳ್ಳೆಯ ಕೆಲಸ ಮಾಡುತ್ತಾರೋ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟಾಗಲೇ ಮುಖ್ಯಮಂತ್ರಿ ಆಗಿರುತ್ತಾರೆ. ಬೊಮ್ಮಾಯಿ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರು ಬದಲಾವಣೆ ಆಗುವುದಿಲ್ಲ. ಒಳ್ಳೆಯ …

Read More »

ಹಳೆ ವೈಷಮ್ಯದಿಂದ ಹರಿಯಿತು ನೆತ್ತರು-ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ

ಬೆಂಗಳೂರು: ಹಾಡಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ‌‌ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ (Hennur Police station) ಠಾಣಾ ವ್ಯಾಪ್ತಿಯ ನಾಗವಾರದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ (Bangalore Rural District) ಮೂಲದ ಶ್ರೀಧರ್ ಮೃತಪಟ್ಟ ವ್ಯಕ್ತಿ ಎಂದು‌ ಗುರುತಿಸಲಾಗಿದೆ. ಇಂದು ಬೆಳಗ್ಗೆ ನಾಗವಾರದಲ್ಲಿ ಹೋಗುವಾಗ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕೈದು ಮಂದಿ‌ ದುಷ್ಕರ್ಮಿಗಳ ಗುಂಪು ಏಕಾಏಕಿ ಶ್ರೀಧರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ ಹಾಗೂ ತಲೆಭಾಗಕ್ಕೆ …

Read More »

ಭಾವಿಪತಿಯ ಕಿರುಕುಳಕ್ಕೆ ಯುವತಿ ಬಲಿ-2 ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು..!

ಹುಬ್ಬಳ್ಳಿ : ಸುಂದರ ಜೀವನದ ಹೊಂಗನಸು ಹೊತ್ತು ಮದುವೆಯ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿಯೋರ್ವಳು ನೇಣಿಗೆ ಶರಣಾದ ಧಾರುಣ ಘಟನೆ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಅಶೋಕನಗರ ಪೊಲೀಸ್‍ಠಾಣೆ ವ್ಯಾಪ್ತಿಯ ಸಂತೋಷ ನಗರ ನಿವಾಸಿ ಪವಿತ್ರ (25) ನಿನ್ನೆರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆಯಾಗಿದ್ದಾಳೆ.ನೆರೆಯ ಹಾವೇರಿ ಮೂಲದ ಅಭಿನಂದನ್ ಎಂಬುವವನ ಜೊತೆ ಸೆ.1ರಂದು ಪವಿತ್ರಾಗೆ ಮದುವೆಯ ನಿಶ್ಚಿತಾರ್ಥ ನೆರವೇರಿತ್ತು. ಆದರೆ ಸಂಶಯದ ಪಿಶಾಚಿಯಂತಿದ್ದ …

Read More »

ಬಿಟ್ ಕಾಯಿನ್ ಪ್ರಕರಣ ಅಂತ್ಯ ಕಾಣುವವರೆಗೂ ಬಿಡುವುದಿಲ್ಲ : ಡಿಕೆಶಿ

ಬೆಂಗಳೂರು :ಪ್ರಧಾನಿ ಹೇಳಿದ್ದಾರೆ ಎಂಬ ಕಾರಣಕ್ಕೆ ಬಿಟ್ ಕಾಯಿನ್ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಬಹುದು. ಆದರೆ ಕಾಂಗ್ರೆಸ್ ಈ ವಿಷಯ ತಾರ್ಕಿಕ ಅಂತ್ಯಕಾಣುವವರೆಗೂ ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಿನ್ನೆ ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ ಬಿಟ್ ಕಾಯಿನ್ ವಿಚಾರವನ್ನು ಬಿಟ್ಟು ಹಾಕುವಂತೆ ಪ್ರಧಾನಿ ಸಲಹೆ ಮಾಡಿದ್ದಾರೆ. ಹಾಗಾಗಿ ಅವರು ಅದನ್ನು ಕೈಬಿಡಬಹುದು. ಇದು …

Read More »