BigTv News
August 26, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಭಾನುವಾರ ನೇರಳೆ ಮೆಟ್ರೋ ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚೆಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ವಿಸ್ತರಣೆ ಮಾರ್ಗಗಳನ್ನು ಸುರಕ್ಷತಾ ಪರೀಕ್ಷೆಗಳನ್ನು ಭಾನುವಾರ ನಡೆಸಲಾಗುವುದು. ವಿವರವಾದ ಸುರಕ್ಷತಾ ಪರೀಕ್ಷೆಗಳನ್ನು ಕೈಗೊಳ್ಳಲು ಹೆಚ್ಚಿನ ಸಮಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಸಂಸ್ಥೆ ಹೇಳಿದೆ. ಹೀಗಾಗಿ ಭಾನುವಾರ ಮೈಸೂರು ರಸ್ತೆ ಮತ್ತು ಕೆಂಗೇರಿ ಮೆಟ್ರೋ …
Read More »
BigTv News
August 25, 2023
ಕರ್ನಾಟಕ, ಸುದ್ದಿ, ಸುಳ್ಯ
ಸುಳ್ಯ: ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಿದ ಕೀರ್ತಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಪಾತ್ರವಾಗಿದೆ. ಈ ಚಂದ್ರಯಾನದ ಯಶಸ್ಸಿಗೆ ನೂರಾರು ವಿಜ್ಞಾನಿಗಳು, ತಂತ್ರಜ್ಞರು, ಇಂಜಿನಿಯರ್‌ಗಳು ಸೇರಿದಂತೆ ಅನೇಕ ಸಿಬ್ಬಂದಿ ಅವಿರತವಾಗಿ ದುಡಿದಿದ್ದಾರೆ. ಈ ತಂಡದಲ್ಲಿ ಸುಳ್ಯದ ಮೂವರು ಸೇರಿ ಕರಾವಳಿ ಭಾಗದ 11 ವಿಜ್ಞಾನಿಗಳು ಮಹತ್ವದ ಯೋಜನೆಯಲ್ಲಿ ಭಾಗಿಯಾಗಿರುವುದು ವಿಶೇಷ. ಕಳೆದ ಹಲವು ವರ್ಷಗಳಿಂದ ಇಸ್ರೋದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯ …
Read More »
BigTv News
August 25, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ 2023-24ನೇ ಬಜೆಟ್ನಲ್ಲಿ ಘೋಷಿಸಿರುವ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ನರೇಗಾ ಯೋಜನೆಯಡಿ 5000 ಗೋಮಾಳ ಪ್ರದೇಶಗಳು, 50 ಸಾವಿರ ಎಕರೆ ಹುಲ್ಲುಗಾವಲು ಪ್ರದೇಶಗಳು, 2 ಲಕ್ಷ ಬರ ಪರಿಹಾರ ಕಾಮಗಾರಿಗಳು, 81 ಸಾವಿರ …
Read More »
BigTv News
August 25, 2023
ಕರ್ನಾಟಕ, ಕೊಪ್ಪಳ, ಸುದ್ದಿ
ಗಂಗಾವತಿ : ತಾಲೂಕಿನ ಮಲ್ಲಾಪುರ ಗ್ರಾಮದ ಸಮೀಪ ಇರುವ ಪುರಾತನ ಕಾಲದ ವಾಣಿ ವೀರಭದ್ರೇಶ್ವರ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಖದೀಮರು ಕದ್ದೊಯ್ದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ನಿರ್ಜನ ಹಾಗೂ ಬೆಟ್ಟದ ಕಡಿದಾದ ಪ್ರದೇಶದಲ್ಲಿರುವ ಪೌರಾಣಿಕ ಹಿನ್ನೆಲೆಯ ದೇವಸ್ಥಾನದಲ್ಲಿ ಕಳೆದ ಹಲವು ದಶಕದಿಂದ ನಿತ್ಯಪೂಜೆ ಸಲ್ಲಿಸಲಾಗುತ್ತಿದೆ. ಇದೇ ಸಮಯಕ್ಕಾಗಿ ಕಾದಿದ್ದ ಖದೀಮರು ದೇಗುಲದ ಗರ್ಭಗುಡಿಯಲ್ಲಿದ್ದ ಪಾಣಿ ಬಟ್ಟಲು ಮೇಲಿನ ಶಿವಲಿಂಗವನ್ನು ಕಿತ್ತೊಯ್ದು ವಿಕೃತಿ ಮೆರೆದಿದ್ದಾರೆ. ಬೆಳಗ್ಗೆ ಅರ್ಚಕರು ಪೂಜೆ ಸಲ್ಲಿಸಿ, ಮಧ್ಯಾಹ್ನದ …
Read More »
BigTv News
August 25, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಸಫಲವಾದ ಹಿನ್ನೆಲೆ ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಯಾವುದೇ ರೋಡ್ ಶೋ ನಡೆಸದೇ, ಪಕ್ಷದ ಬಾವುಟ ಪ್ರದರ್ಶಿಸದೇ ಕೇವಲ ಇಸ್ರೋ ವಿಜ್ಞಾನಿಗಳ ಭೇಟಿಗೆ ಸೀಮಿತಗೊಳಿಸಿ ಪ್ರಧಾನಿ ಪ್ರವಾಸ ಆಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾಳೆ ಬೆಳಗ್ಗೆ 6 ಗಂಟೆಗೆ ನಗರದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ ಅವರಿಗೆ ಏರ್ಪೋರ್ಟ್ನಲ್ಲಿ ಸ್ವಾಗತ …
Read More »
Shaikh BigTv
August 24, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಒಬ್ಬ ಪಾಪಿ ಗಂಡ ಹೆಂಡತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಅವಳು ಸಾವು ಬದುಕಿನ ಮದ್ಯೆ ಕಿಮ್ಸ್ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಆ ಪಾಪಿ ಗಂಡ ಪೊಲೀಸರ ಮುಂದೆಯೇ ಚಾಕುವಿನಿಂದ ಇರಿದಿದ್ದಾನೆ.ಹಳೆ ಹುಬ್ಬಳ್ಳಿಯ ಶ್ರರಾಮ ನಗರದ ನಿವಾಸಿಯಾದ ಮಂಜುನಾಥ ಬೆಂಡೆಗೆರೆ ಎಂಬಾತಾನೆ ತನ್ನ ಹೆಂಡತಿ ಸವಿತಾಳ ಕುತ್ತಿಗೆಗೆ ಇರಿದಿದ್ದಾನೆ. ಇವರಿಬ್ಬರೂ 17 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರೂ ಮಕ್ಕಳು ಕೂಡಾ ಇದ್ದಾರೆ. ಪತಿ ಮಂಜುನಾಥ ಅವನ ಹೆಂಡತಿಗೆ ಮನೆಯಿಂದ ವರದಕ್ಷಿಣೆ ತೆಗೆದು …
Read More »
BigTv News
August 24, 2023
ಕರ್ನಾಟಕ, ಬೆಳಗಾವಿ, ಸುದ್ದಿ
ಬೆಳಗಾವಿ: ಚಂದ್ರಯಾನ 3 ಯಶಸ್ಸಿನಲ್ಲಿ ಬೆಳಗಾವಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆಂಡ್ ಟೆಕ್ನಾಲಜಿ ಕಂಪನಿಯು ವಿಕ್ರಮ್ ಲ್ಯಾಂಡರ್ಗೆ ಬಿಡಿಭಾಗಗಳನ್ನು ಪೂರೈಕೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಚಂದ್ರಲೋಕಕ್ಕೂ ಹರಡುವಂತೆ ಮಾಡಿದೆ. ಇಡೀ ವಿಶ್ವವೇ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ಮೈಲಿಗಲ್ಲು ನಿರ್ಮಿಸಿದೆ. ಇನ್ನು ಚಂದ್ರಯಾನ …
Read More »
BigTv News
August 24, 2023
ಕರ್ನಾಟಕ, ಕೊಡಗು, ಸುದ್ದಿ
ಕೊಡಗು: ಕನ್ನಡ ಚಿತ್ರರಂಗದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆ ಸಂಭ್ರಮ ಮನೆ ಮಾಡಿದೆ. ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಸಾಲಿಗೆ ಹೊಸದಾಗಿ ಹರ್ಷಿಕಾ ಭುವನ್ ಸೇರಿದ್ದಾರೆ. ಹೌದು, ಇಂದು ಕೊಡವ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಗುರುಹಿರಿಯರ, ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ವಿವಾಹ ಶಾಸ್ತ್ರಗಳು ನೆರವೇರಿತು. ಕೊಡಗಿನ ವಿರಾಜ್ ಪೇಟೆಯಲ್ಲಿ ಅಮ್ಮತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ …
Read More »
BigTv News
August 24, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಏಕಾಏಕಿಯಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಅವಳಿ ನಗರದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದು …. ಡೈಲಿ ಕೆಲಸದ ನಡುವೆ, ಸ್ವಲ್ಪ ಟೈಂ ಮಾಡಕೊಂಡ ನಮ್ಮ ಹುಬ್ಬಳ್ಳಿ- ಧಾರವಾಡ ಪೊಲೀಸರು, ಕಮಿಷನರೇಟ್ ಘಟಕದ ವ್ಯಾಪ್ತಿಯಲ್ಲಿ ಬರುವ, ಶಾಲೆ ಕಾಲೇಜುಗಳಿಗೆ ಆಯಾ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದ ತಂಡಗಳು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ‘ಸೈಬರ್ ಅಪರಾಧ, ಸಾಮಾಜಿಕ ಜಾಲತಾಣ ಸುರಕ್ಷತೆ, ಡ್ರಗ್ಸ್ ವ್ಯಸನ …
Read More »
BigTv News
August 24, 2023
ಕರ್ನಾಟಕ, ಧಾರವಾಡ, ಸುದ್ದಿ
ಕುಂದಗೋಳ: ಗಂಗಾಧರ ಸಿದ್ಧಪ್ಪ ಪಾಣಿಗಟ್ಟಿ ಇವರನ್ನು ಧಾರವಾಡ ಜಿಲ್ಲೆಯ ಗ್ರಾಮೀಣ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್ ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಗಂಗಾಧರ ಪಾಣಿಗಟ್ಟಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
Read More »