Breaking News

ಹುಬ್ಬಳ್ಳಿ

ಕುಸ್ತಿ ಪಂದ್ಯ : ಪೈಲ್ವಾನರ ಜಿದ್ದಾಜಿದ್ದಿಗೆ ಮನಸೋತ ಪ್ರೇಕ್ಷಕರು

ಹುಬ್ಬಳ್ಳಿ: ನಗರದ ಹೊರವಲಯದಲ್ಲಿರುವ ಗೋಕುಲ ಗ್ರಾಮದ ದಾರವತಿ ಆಂಜನೇಯ ಜಾತ್ರೆ ಅಂಗವಾಗಿ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಜಿದ್ದಾಜಿದ್ದಿಗೆ ಪ್ರೇಕ್ಷಕರು ಮನಸೋತರು. ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಇಂತಹ ಸ್ಪರ್ಧೆಗಳು ನಡೆದಿರಲಿಲ್ಲ. ಈ ಬಾರಿ ನಡೆದ ಕುಸ್ತಿ ಪಂದ್ಯವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯ ಹಾಗೂ ನೆರೆ ರಾಜ್ಯಗಳ ಕುಸ್ತಿಪಟುಗಳು ಕಾದಾಡಿದರು. ಗೋಕುಲ ಗ್ರಾಮದ ಹಿರಿಯ ಪೈಲ್ವಾನರು ಹಾಗೂ ಕುಸ್ತಿ ಪ್ರೇಮಿಗಳು …

Read More »

ಪತ್ನಿಗೆ ಕಿರುಕುಳ ನೀಡಿದ ಗಂಡ ; ಮಹಿಳಾ ಠಾಣೆ ಮೆಟ್ಟಿಲೇರಿದ ನೊಂದ ಮಹಿಳೆ

ಹುಬ್ಬಳ್ಳಿ : ಪತ್ನಿಗೆ ಕೆಲ ವರ್ಷಗಳಿಂದ ಪತಿ ಕಿರುಕುಳ ನೀಡುತ್ತಿರುವದರಿಂದ ನೊಂದ ಮಹಿಳೆ ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದ ರೈಲ್ವೆ ನಗರದಲ್ಲಿ ನಡೆದಿದೆ . ಹೌದು . ರೈಲ್ವೆ ಉದ್ಯಮಿಯೊಬ್ಬ ತಮ್ಮ ಕುಟುಂಬಸ್ಥರ ಜೊತೆ ಸೇರಿಕೊಂಡು ಈ ಮಹಿಳೆಗೆ ನಿರಂತರ ಕಿರುಕುಳ ಕೊಡುತ್ತಿದ್ದಾರೆಂದು ನೊಂದ ಮಹಿಳೆ ತಮ್ಮ ಮಗುವನ್ನು ಕರೆದುಕೊಂಡು ಬಂದು ಮಹಿಳಾ ಪೊಲೀಸದ ಠಾಣೆಯ ಮುಂದೆ ಪೊಲೀಸರಿಗೆ ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ …

Read More »

ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ರಜತ್ ಉಳ್ಳಾಗಡ್ಡಿಮಠ ಅವರಿಂದ ಸನ್ಮಾನ

ಹುಬ್ಬಳ್ಳಿ : ಪಾಲಿಕೆ ಸದಸ್ಯೆ ಮಂಗಳಾ ಅವರ ಮನೆಯಲ್ಲಿ ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು ಭೇಟಿಯಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಿ , ಕುಶಲೋಪರಿ ವಿಚಾರಿಸಿದರು . ಈ ಸಂದರ್ಭದಲ್ಲಿ ಹು – ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಪ್ ಅಳ್ಳೂರ್ ಮಾಜಿ ಪಾಲಿಕೆ ಸದಸ್ಯರಾದ ಮೋಹನ್ ಹಿರೇಮನಿ , ರಾಜಶೇಖರ್ ಮೆಣಸಿನಕಾಯಿ , ನಂದಕುಮಾರ್ ಪಾಟೀಲ್ , …

Read More »

ಮೇ .28 ರಂದು ಮೇಯರ್ , ಉಪಮೇಯರ್ ಚುನಾವಣೆ

ಹುಬ್ಬಳ್ಳಿ : ಮಹಾನಗರ ಪಾಲಿಕೆಯ 21 ನೇ ಅವಧಿಯ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳಿಗೆ ಮೇ .28 ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿಗಳೂ ಆಗಿರುವ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ . ಈ ಕುರಿತು ಪ್ರಕಟಣೆ ನೀಡಿರುವ ಅವರು , ಮಹಾಪೌರ ಸ್ಥಾನವು ಸಾಮಾನ್ಯ ವರ್ಗ , ಉಪಮಹಾಪೌರ ಸ್ಥಾನವು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿಡಲಾಗಿದೆ . ಹುಬ್ಬಳ್ಳಿ – ಧಾರವಾಡ ಮಹಾನಗರ …

Read More »

ಅಧಿಕಾರಗಳ ಕಿರುಕುಳಕ್ಕೆ ಆತ್ಮಹತ್ಯೆಗೆ ಮುಂದಾಗುತ್ತಿರುವ ನೌಕರರ ಕುಟುಂಬ

ಹುಬ್ಬಳ್ಳಿ: ಆ ಮಹಿಳೆಯ ಗಂಡ ಆಸ್ಪತ್ರೆಯೊಂದರಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿರುವ ಸೇವಕ. ಆತನ ಸೇವೆಯನ್ನು ನಂಬಿಕೊಂಡ ಕುಟುಂಬಕ್ಕೆ ಈಗ ಸಂಕಷ್ಟ ಎದುರಾಗಿದೆ. ವೇತನವೂ ಇಲ್ಲದೇ ಅಧಿಕಾರಗಳ ಕಿರುಕುಳಕ್ಕೆ ಬೇಸತ್ತಿರುವ ಕುಟುಂಬ ಈಗ ಆತ್ಮಹತ್ಯೆಗೆ ಮುಂದಾಗುತ್ತಿದೆ. ಈ ಮಹಿಳೆ ಶಾಂತಾ ಪ್ರಶಾಂತಕುಮಾರ್ ಹೊಸಳ್ಳಿ.‌ ಈ ಮಹಿಳೆಯ ಗಂಡ ಪ್ರಶಾಂತಕುಮಾರ್ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಐದಾರೂ ತಿಂಗಳಿಂದ ವೇತನ ಇಲ್ಲದೇ ಕರ್ತವ್ಯ ನಿರ್ವಹಣೆ ಮಾಡುವಂತಾಗಿದೆ‌. ಇಷ್ಟೆ …

Read More »

ಮನೆಗಳಿಗೆ ನುಗ್ಗುತ್ತಿದೆ ಚರಂಡಿ ನೀರು : ಪಾಲಿಕೆ ನಿಷ್ಕಾಳಜಿಗೆ ಜನಜೀವನ ತತ್ತರ

ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆಯಿಂದ ನಮ್ಮ ವಠಾರಗಳೆಲ್ಲ ಸ್ಮಾರ್ಟ್ ಆಗುತ್ತೆ ಅಂದುಕೊಂಡವರು ಈಗ ಮನೆ ಬಿಟ್ಟು ಮಠ ಸೇರುವಂತಾಗಿದೆ . ಪಾಲಿಕೆಯ ನಿಷ್ಕಾಳಜಿಯಿಂದ ಜನರು ಆಸ್ಪತ್ರೆಗೆ ಅಲೆದಾಡುವಂತಾಗಿದೆ . ವಾರ್ಡ್ ನಂಬರ್ 47 ರಲ್ಲಿ ಬರುವ ವಿದ್ಯಾನಗರದಲ್ಲಿ ಸುಮಾರು ದಿನಗಳಿಂದ ಒಳಚರಂಡಿ ನೀರು ಮನೆಗೆ ಹೊಕ್ಕು ಮನೆ ಮಂದಿಯೆಲ್ಲ ಮನೆ ಬಿಟ್ಟು ಮಠ ಸೇರುವಂತಾಗಿದೆ . ಇಷ್ಟು ದಿನ ನಾವೆಲ್ಲರೂ ಮನೆಗೆ ಮಳೆ ನೀರು ನುಗ್ಗಿರುವುದನ್ನು ನೋಡಿದ್ದೇವೆ . …

Read More »

ಆನ್ ನಲ್ಲಿ ಕಾರು ಬಾಡಿಗೆ ಹುಡುಕಾಡುವ ಮುನ್ನ ಎಚ್ಚರ ಎಚ್ಚರ

ಹುಬ್ಬಳ್ಳಿ : ಪುಣೆಯಲ್ಲಿ ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆ ನೀಡುವುದಾಗಿ ನಂಬಿಸಿ ನಗರದ ಮಹಿಳೆಯೊಬ್ಬರಿಂದ 32,000 ರೂ . ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಉಣಕಲ್‌ನ ಲಲಿತಾ ಎಂಬುವರು ಪುಣೆಗೆ ಹೋಗಿ ಸ್ಥಳೀಯವಾಗಿ ಸುತ್ತಾಡುವ ಸಲುವಾಗಿ ಸೆಲ್ಫ್ ಡ್ರೈವಿಂಗ್ ಕಾರು ಬೇಕೆಂದು ಗೂಗಲ್‌ನಲ್ಲಿ ಹುಡುಕಾಡಿದ್ದರು . ಅದರಲ್ಲಿ ಸಿಕ್ಕ ಕೃಷ್ಣ ಕಾರ್ ರೆಂಟಲ್ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ಹೆಸರು ವಿಳಾಸ ದಾಖಲಿಸಿ ಸಬ್‌ಮಿಟ್ …

Read More »

ಹುಬ್ಬಳ್ಳಿ ಗಲಭೆ : 7 ಜನರಿಗೆ ಜಾಮೀನು

ಹುಬ್ಬಳ್ಳಿ : ನಗರದ ಶಾಂತಿಯನ್ನು ಹಾಳು ಮಾಡಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದವರಲ್ಲಿ ಏಳು ಜನರಿಗೆ ಜಾಮೀನು ದೊರೆತಿದೆ , ತಿಂಗಳ ಹಿಂದೆಯಷ್ಟೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾದ 156 ಆರೋಪಿಗಳಲ್ಲಿ ಏಳು ಮಂದಿಗೆ ಜಾಮೀನು ದೊರೆತಿದ್ದು , ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿದ್ಯಾರ್ಥಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಜಾಮೀನಿಗೆ 148 ಮಂದಿಯಿಂದ ಅರ್ಜಿ ಸಲ್ಲಿಸಲ್ಲಿಸಲಾಗಿತ್ತುಅರ್ಜಿ …

Read More »

ಕರಕುಶಲ ವಸ್ತುಗಳ ಮಳಿಗೆಗೆ ಚಾಲನೆ

ಹುಬ್ಬಳ್ಳಿ: ಸ್ಥಳೀಯ ಕುಶಲಕರ್ಮಿ ಗಳು , ಉತ್ಪನ್ನಗಳು ಹಾಗೂ ಕೈಗಾರಿಕೆ ಗಳಿಗೆ ಉತ್ತೇಜನ ನೀಡುವ ಕೇಂದ್ರ ಸರ್ಕಾರದ ಒಂದು ನಿಲ್ದಾಣ , ಒಂದು ಉತ್ಪನ್ನ ‘ ಯೋಜನೆಯಡಿ ನಗರದ ಸಿದ್ಧಾರೂಢ ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಕರಕುಶಲ ವಸ್ತುಗಳ ಮಳಿಗೆಗೆ ಚಾಲನೆ ನೀಡಲಾಯಿತು. ವಾರ ಗ್ರಾಮೋದ್ಯೋಗ ಆಯೋಗದ ಬೆಳಗಾವಿಯ ಖಾನಾಪುರದ ಕೇಂದ್ರ ಖಾದಿ ಮತ್ತು ಗ್ರಾಮೀಣ ಕುಂಬಾರಿಕೆ ಕುಂಬಾರಿಕೆ ಸಂಸ್ಥೆಮಳಿಗೆ ತೆರೆದಿದ್ದು , 15 ದಿನಗಳ ಕಾಲ ಉತ್ಪನ್ನಗಳ ಪ್ರದರ್ಶನ ಹಾಗೂ …

Read More »

ಅನೈತಿಕ ಸಂಬಂಧ : ಪ್ರಿಯಕರನ ಜತೆಗೆ ಸೇರಿ ಕರುಳ ಕುಡಿಯನ್ನೇ ಕೊಲೆ ಮಾಡಿದ ಸಹೋದರಿ

ಹುಬ್ಬಳ್ಳಿ : ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆಯ ರಹಸ್ಯವನ್ನು ಭೇದಿಸಿವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಕಳೆದ ಎರಡೂ ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬ ಯುವಕನನ್ನುಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲಿಯೆ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅನೈತಿಕ …

Read More »