Breaking News

Breaking News

ಕೆಎಎಸ್‌ ನೇಮಕಾತಿಯಲ್ಲಿ ಅಕ್ರಮ ಆರೋಪ- ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ, ಅಭ್ಯರ್ಥಿ ವಿರುದ್ಧ ಎಫ್‌ಐಆರ್

ಬೆಂಗಳೂರು: ಕೆಎಎಸ್‌ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಯೊಬ್ಬರು ಗೆಜೆಟೆಡ್ ಪ್ರೊಬೇಷನರಿ ಹುದ್ದೆ ಪಡೆಯಲು ಅಕ್ರಮ ಮಾರ್ಗ ಅನುಸರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಹಾಗೂ ಕಲಬುರಗಿ ಮೂಲದ ಅಭ್ಯರ್ಥಿ ಮಮಿತಾ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಮಿತಾ ಅವರು ಹುದ್ದೆ ಪಡೆಯುವ ಉದ್ದೇಶದಿಂದ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರನ್ನು ಸಂಪರ್ಕಿಸಿ ಅಕ್ರಮವಾಗಿ ಹಣ ನೀಡಲು ಮುಂದಾಗಿದ್ದರು ಎಂದು ಅಖಿಲ …

Read More »

ನಕಲಿ ದಾಖಲೆ ತಯಾರಿಸಿ ವಾಹನ ಮಾರಾಟ; 19 ವರ್ಷಗಳ ಬಳಿಕ ಆರೋಪಿಯ ಬಂಧನ

ಕಾಸರಗೋಡು ನಗರ: ವ್ಯಕ್ತಿ ಪಲ್ಲಟ ನಡೆಸಿ ನಕಲಿ ದಾಖಲೆ ತಯಾರಿಸಿ ವಾಹನ ಮಾರಾಟಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿ ಕರ್ನಾಟಕದ ಮೂಲ್ಕಿ ಹಳೆಯಂಗಡಿ ಚಂದ್ರಮೌಳೀಶ್ವರ ದೇವಸ್ಥಾನದ ಸಮೀಪದ ಗಣೇಶ್‌ ಶೆಟ್ಟಿ(50)ಯನ್ನು ಕಣ್ಣೂರು, ಕಾಸರಗೋಡು ರೇಂಜ್‌ ಕ್ರೈಂ ಬ್ರಾಂಚ್‌ ಎಸ್‌.ಪಿ ಕೆ.ವಿ.ವೇಣುಗೋಪಾಲ್‌ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಸರಗೋಡು ಕ್ರೈಂ ಬ್ರಾಂಚ್‌ ಡಿವೈಎಸ್‌ಪಿ ಟಿ.ಮಧುಸೂದನನ್ 19 ವರ್ಷಗಳ ಬಳಿಕ ಬಂಧಿಸಿದರು. 2002 ರಲ್ಲಿ ಮಂಜೇಶ್ವರ ಪೊಲೀಸರು ಗಣೇಶ್‌ ಶೆಟ್ಟಿಯನ್ನು ಬಂಧಿಸಿದ್ದರು. ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು. …

Read More »

ಕಳ್ಳತನ ನಡೆಸಿ ಜೀವಬೆದರಿಕೆಯೊಡ್ಡಿದ್ದ ಆರೋಪಿ 24 ಗಂಟೆಯೊಳಗೆ ಬಂಧನ

ಹೊನ್ನಾವರದಲ್ಲಿ ಅರ್ಬನ್ ಬ್ಯಾಂಕ್‌ನಿಂದ ಹಣ ಪಡೆದು ಹೊರಬರುತ್ತಿದ್ದ ವ್ಯಕ್ತಿಯನ್ನು ಬೈಕ್‌ನಲ್ಲಿ ಕರೆದೊಯ್ದು ಬೆದರಿಸಿ ಹಣ ಕಸಿದುಕೊಂಡಿದ್ದ ಆರೋಪಿಯನ್ನು ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ವಂದೂರು ಗ್ರಾಮದ ಶಂಕರ ವಿಠೋಬ ನಾಯ್ಕ ಅವರು ಬಂಗಾರದ ಚೈನ್ ಅಡವಿಟ್ಟು ₹1.50 ಲಕ್ಷ ಪಡೆದಿದ್ದರು. ಬ್ಯಾಂಕ್‌ನಿಂದ ಹೊರಬರುತ್ತಿದ್ದ ಶಂಕರ ಅವರನ್ನು ಬೈಕ್‌ನಲ್ಲಿ ಕರೆದೊಯ್ದ ಆರೋಪಿ, ಮಾರ್ಗಮಧ್ಯೆ ಹಣ ನೀಡದಿದ್ದರೆ ಕೆಳಗೆ ಬೀಳಿಸಿ ಕೊಲ್ಲುವುದಾಗಿ ಬೆದರಿಸಿ ಜೇಬಿನಲ್ಲಿದ್ದ ₹3,500 ಕಸಿದುಕೊಂಡಿದ್ದಾನೆ. ಈ ಕುರಿತು …

Read More »

ವಿದೇಶಿಗನ ಜೊತೆ ಸಂಪರ್ಕ, ಭಾರತದಲ್ಲಿ ಗಲಭೆಗೆ ಸಂಚು ಆರೋಪ: ರಾಯಚೂರಿನಲ್ಲಿ ಟೀ ಸ್ಟಾಲ್ ಮಾಲೀಕ ಅರೆಸ್ಟ್

ರಾಯಚೂರಿನಲ್ಲಿ ಭಾರತದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 24 ವರ್ಷದ ಮೊಹಮ್ಮದ್ ಶಾಹಿಲ್‌ನನ್ನು ಸದರ್‌ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ‘ರಾಣಾ ಭಾಯ್’ ಎಂಬ ಹೆಸರಿನ ಖಾತೆ ನಡೆಸುತ್ತಿದ್ದ ಅರಬ್ ಮೂಲದ ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಶಾಹಿಲ್, ಆತನ ಪ್ರಚೋದನೆಗೆ ಒಳಗಾಗಿದ್ದ ಎನ್ನಲಾಗಿದೆ. ತನಿಖೆ ವೇಳೆ ಶಾಹಿಲ್ ವಿದೇಶಿ ವ್ಯಕ್ತಿಯ ಪೋಸ್ಟ್‌ಗಳಿಗೆ ಲೈಕ್, ಕಾಮೆಂಟ್ ಹಾಗೂ ಶೇರ್ ಮಾಡುತ್ತಿದ್ದ ಮಾಹಿತಿ ಸಿಕ್ಕಿದೆ. ಬಳಿಕ ನೇರವಾಗಿ ಸಂದೇಶ …

Read More »

ಭಟ್ಕಳದಲ್ಲಿ ರೌಡಿಗಳ ಅಟ್ಟಹಾಸ! ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಚಾಕು ಇರಿತ!

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ರೌಡಿಶೀಟರ್‌ಗಳ ನಡುವಿನ ಜಗಳ ಬಿಡಿಸಲು ಬಂದ ಪೊಲೀಸ್ ಸಿಬ್ಬಂದಿ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿದ ಘಟನೆ ನಡೆದಿದೆ. ತಡರಾತ್ರಿ ರೌಡಿಶೀಟರ್ ರಾಜು ಹಾಗೂ ಮನೋಜ್ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಮಾಹಿತಿ ತಿಳಿದು ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ್ ಶಟ್ಟಿ ಸ್ಥಳಕ್ಕೆ ತೆರಳಿದ್ದರು. ಜಗಳ ಬಿಡಿಸಲು ಪೊಲೀಸರು ಮುಂದಾದಾಗ ರೌಡಿಗಳು ಏಕಾಏಕಿ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು …

Read More »

ಬೆಂಗಳೂರಿನ ಮನೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ – ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ಶಂಕೆ!

ಬೆಂಗಳೂರು: ಟಿ. ದಾಸರಹಳ್ಳಿ ಬಾಗಲಗುಂಟೆ ವ್ಯಾಪ್ತಿಯ ಹಾವನೂರು ಬಡಾವಣೆಯಲ್ಲಿ ಒಂದೂವರೆ ವರ್ಷದಿಂದ ಮುಚ್ಚಿದ್ದ ಮನೆಯ ಬಾತ್‌ರೂಂನಲ್ಲಿ 50 ವರ್ಷದ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ದಾಕ್ಷಾಯಿಣಿ (50) ಎಂದು ಗುರುತಿಸಲಾಗಿದೆ. ಸುಮಾರು 10 ವರ್ಷಗಳ ಹಿಂದೆ ಪತಿ ಉಮೇಶ್ ಮೃತಪಟ್ಟಿದ್ದು, ಬಳಿಕ ಅನಾರೋಗ್ಯದಿಂದ ಏಕೈಕ ಮಗನೂ ಮೃತಪಟ್ಟಿದ್ದ. ಕುಟುಂಬಸ್ಥರನ್ನು ಕಳೆದುಕೊಂಡಿದ್ದ ದಾಕ್ಷಾಯಿಣಿ ಹಲವು ವರ್ಷಗಳಿಂದ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸುಮಾರು ಒಂದೂವರೆ ವರ್ಷದಿಂದ ಮನೆ ಮುಚ್ಚಿದ್ದ …

Read More »

ಬೆಂಗಳೂರಲ್ಲಿ ಪಾಪಿ ಪತಿಯಿಂದ ಪೈಶಾಚಿಕ ಕೃತ್ಯ.. ಪತ್ನಿಯ ಜೀವ ತೆಗೆದು ಮೋರಿಗೆ ಎಸೆದ! ಕಾರಣ?

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ಕಸದ ಮೋರಿಗೆ ಎಸೆದಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೀತಾ (48) ಕೊಲೆಯಾದ ಮಹಿಳೆಯಾಗಿದ್ದು, ಆಕೆಯ ಪತಿ ಆಂಟೋನಿ (63) ಆರೋಪಿಯಾಗಿದ್ದಾನೆ. ಆಂಟೋನಿಗೆ ಕುಡಿತದ ಚಟವಿದ್ದು, ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಘಟನೆ ನಡೆದ ದಿನವೂ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ಆಂಟೋನಿ, ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ …

Read More »

ವಸತಿ ನಿಲಯದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು – ಹಾಸ್ಟೆಲ್ ಸಿಬ್ಬಂದಿ ನಿರ್ಲಕ್ಷ್ಯದ ಆರೋಪ!

ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದ ಕಸ್ತೂರಿಬಾ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಕಾರಗಾನಹಟ್ಟಿ ಗ್ರಾಮದ ನರಸಿಂಹಮೂರ್ತಿ ಹಾಗೂ ಶಾರದಮ್ಮ ದಂಪತಿಯ ಪುತ್ರಿ ಪ್ರಿಯಾಂಕ (13) ಮೃತ ಬಾಲಕಿ. 6 ಮತ್ತು 7ನೇ ತರಗತಿಯನ್ನು ಇದೇ ಹಾಸ್ಟೆಲ್‌ನಲ್ಲಿ ಓದಿದ್ದ ಪ್ರಿಯಾಂಕ, 8ನೇ ತರಗತಿಗೆ ಇಲ್ಲಿಗೆ ಸೇರಲು ಇಷ್ಟವಿರಲಿಲ್ಲ ಎನ್ನಲಾಗಿದೆ. ಮೊರಾರ್ಜಿ ವಸತಿ ಶಾಲೆಗೆ ಸೀಟು ಸಿಗದ ಹಿನ್ನೆಲೆಯಲ್ಲಿ ಆ.7ರಂದು ಬೆಳಗ್ಗೆ ಪೋಷಕರು ಮತ್ತೆ …

Read More »

ಬೆಚ್ಚಿಬಿದ್ದ ಯಾದಗಿರಿ; ಹಾಡಹಗಲೇ ಸಿನಿಮೀಯ ರೀತಿ ಪತ್ರಕರ್ತನ ಕಿಡ್ನಾಪ್!

ವಿಜಯಪುರ: ಹಾಡಹಗಲೇ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ಬಲವಂತವಾಗಿ ಅಪಹರಿಸಿಕೊಂಡು ಹೋದ ಘಟನೆ ನಗರದ ಲುಂಬಿನಿ ಪಾರ್ಕ್‌ ಎದುರು ಶನಿವಾರ ನಡೆದಿದೆ. ಕ್ರಾಂತಿ ಪತ್ರಿಕೆಯ ಜಿಲ್ಲಾ ವರದಿಗಾರ ಸಾಗರ್‌ಕುಮಾರ ದೇಸಾಯಿ (35) ಅಪಹರಣಕ್ಕೊಳಗಾದವರು. ಬೆಳಗ್ಗೆ 11.45ರ ಸುಮಾರಿಗೆ ನಂಬರ್ ಪ್ಲೇಟ್‌ ಇಲ್ಲದ ಕಾರಿನಲ್ಲಿ ಬಂದ ನಾಲ್ವರು ಸಾಗರ್‌ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಸುತ್ತಮುತ್ತಲಿನವರು ಗಮನಿಸುವ ಮುನ್ನವೇ ಅವರನ್ನು ಕಾರಿನಲ್ಲಿ ಹಾಕಿಕೊಂಡು ವೇಗವಾಗಿ ಪರಾರಿಯಾಗಿದ್ದಾರೆ. ತಡೆಯಲು ಬಂದ …

Read More »

ಕೆಲಸ ಬಿಟ್ಟರೂ ಲೇಡಿ ಬಾಸ್‌ ಕಿರುಕುಳ: ಡೆತ್‌ನೋಟ್‌ ಬರೆದಿಟ್ಟು ಮೈಸೂರು ಮಹಿಳೆ ದುರಂತ ಅಂತ್ಯ!

ಮೈಸೂರು: ರಜೆ ನೀಡದೆ ಕಿರುಕುಳ ನೀಡುತ್ತಿದ್ದ ಮಹಿಳಾ ಸೂಪರ್‌ವೈಸರ್ ವಿರುದ್ಧ ಡೆತ್‌ನೋಟ್ ಬರೆದಿಟ್ಟು 45 ವರ್ಷದ ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿನಕಲ್‌ನಲ್ಲಿ ನಡೆದಿದೆ. ಮೃತರನ್ನು ನಾಗೇಶ್ವರಿ ಎಂದು ಗುರುತಿಸಲಾಗಿದೆ. ಹಿನಕಲ್‌ನ ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು, ನಾಲ್ಕು ತಿಂಗಳ ಹಿಂದೆ ಸೂಪರ್‌ವೈಸರ್ ಆಗಿದ್ದ ಡಾಲಿ ಎಂಬುವವರು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಮಾರ್ಟ್ ಕೆಲಸ ಬಿಟ್ಟು ಬೇರೆ ಶಾಪಿಂಗ್ ಮಾಲ್‌ಗೆ ಸೇರಿದ್ದರೂ ಅಲ್ಲಿಗೂ …

Read More »