Breaking News

Breaking News

ಯುವಕನಿಗೆ ಡಿಕ್ಕಿ ಹೊಡೆದ ಕ್ಯಾಂಟರ್ ವಾಹನ

ಕುಂದಗೋಳ : ಯುವಕನೋರ್ವನಿಗೆ ಕ್ಯಾಂಟರ್ ವಾಹನ ಡಿಕ್ಕಿಪಡಿಸಿ ಅಪಘಾತ ಮಾಡಿದ ಘಟನೆ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದ ಕೆಂಪಗೇರಿ ಕ್ರಾಸ್ ಬಳಿ ನಡೆದಿದೆ. ಬೆಟದೂರು ಕುಬಿಹಾಳ ರಸ್ತೆ ಮಾರ್ಗವಾಗಿ ಮೇಲೆ ವೇಗವಾಗಿ ಕ್ಯಾಂಟ‌ರ್ ವಾಹನ ಚಲಾಯಿಸಿಕೊಂಡು ಬಂದು ವಾಹನ ಚಾಲಕ ನಾಗರಾಜ್ ಕುಂಡೆಪ್ಪ ಕುಂದರಗಿ ಎಂಬಾತ ರಸ್ತೆ ಬದಿ ಸಾರಿಗೆ ಬಸ್ ದಾರಿ ಕಾಯುತ್ತಲಿದ್ದ ಮೊಹಮ್ಮದಗೌಸ್ ಎಂಬ ಯುವಕನೋರ್ವನಿಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದಾನೆ.ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್‌ …

Read More »

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿಮ್ಮತನವನ್ನ ಉಳಿಸಿಕೊಳ್ಳಿ :ಕೇಂದ್ರ ಸಚಿವ ವಿ.ಸೋಮಣ್ಣ

ಹುಬ್ಬಳ್ಳಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿಮ್ಮತನವನ್ನ ಉಳಿಸಿಕೊಳ್ಳಿ. ನಡೆದು ಬಂದ ದಾರಿಯನ್ನ ನೆನಪು ಮಾಡಿಕೊಳ್ಳಿ. ನಿಮ್ಮ ಇತಿಹಾಸವನ್ನ ಮುಂದಿನ ಪೀಳಿಗೆಗೆ ಕೊಡಬೇಕು ಎನ್ನುವುದಾದರೇ ರಾಜೀನಾಮೆ ಕೊಡಿ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದು ಸರಿಯಲ್ಲ. ಪದೇ ಪದೇ ಮಾತನಾಡಿ ಕೈ, ಕಾಲು ಮತ್ತು ಬಾಯಿ ಗಾಯ ಮಾಡಿಕೊಂಡಿದ್ದಾರೆ. ಈಗ ಏನೂ ಉಳಿದಿಲ್ಲ. ಸದನದಲ್ಲಿ ಚರ್ಚೆ ಮಾಡಿದಾಗ ಅದನ್ನೇ ಅಲ್ಲೇ ಕ್ಲಿಯರ್ ಮಾಡಿದಾಗ ಈ ಖಾಯಿಲೆ …

Read More »

ಬಿಜೆಪಿಯಲ್ಲಿ ಯಾವ ಬಣಾನೂ ಇಲ್ಲ, ಪಣಾನೂ ಇಲ್ಲ : ಕೇಂದ್ರ ಸಚಿವ ವಿ. ಸೋಮಣ್ಣ

ಹುಬ್ಬಳ್ಳಿ: ಬಿಜೆಪಿಯಲ್ಲಿ ಯಾವ ಬಣಾನೂ ಇಲ್ಲ, ಪಣಾನೂ ಇಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿರುವುದು ನನಗೆ ಸರಿಯಾದ ಮಾಹಿತಿ ಇಲ್ಲ. ಒಂದಂತೂ ಸತ್ಯ ಬಿಜೆಪಿಯಲ್ಲಿ ಬಣ ಇಲ್ಲ, ಒಂದೇ ಬಣ ಭಾರತೀಯ ಜನತಾ ಪಕ್ಷ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಸಾಹೇಬರು ಯಾಕೆ ಹಾಗೇ ಮಾತನಾಡುತ್ತಾರೋ ನನಗೆ ಗೊತ್ತಿಲ್ಲ. ಸಿಟ್ಟಿನಲ್ಲಿ ಮಾತನಾಡಿದ ಮಾತು ವಾಪಾಸ್‌ ಬರೋಲ್ಲ, ಅದರ ಅವಶ್ಯಕತೆ ಇಲ್ಲ ಎಂದು ನಾನು ಅವರಿಗೆ …

Read More »

52 ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳು

ಧಾರವಾಡ: ಪಿಎಸ್‌ಐ ನೇಮಕಾತಿ ಪರೀಕ್ಷೆಗಳು ಆರಂಭಗೊಂಡಿದ್ದು, ಧಾರವಾಡದ ಒಟ್ಟು 52 ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 52 ಪರೀಕ್ಷಾ ಕೇಂದ್ರದ ಸುತ್ತ ಭಾರೀ ಭದ್ರತೆ ಒದಗಿಸಲಾಗಿದೆ.ಅಭ್ಯರ್ಥಿಗಳನ್ನು ಭದ್ರತಾ ಸಿಬ್ಬಂದಿ ಇಂಚಿಂಚು ಪರಿಶೀಲನೆ ನಡೆಸಿ ಪರೀಕ್ಷಾ ಕೇಂದ್ರದ ಒಳಗಡೆ ಬಿಟ್ಟಿದ್ದಾರೆ. 10-30ಕ್ಕೆ ಆರಂಭವಾದ ಪರೀಕ್ಷೆ ಮಧ್ಯಾಹ್ನ 2-30ಕ್ಕೆ ಪೂರ್ಣಗೊಳ್ಳಲಿದೆ. ಪರೀಕ್ಷಾ ಕೇಂದ್ರಕ್ಕೆ ಫ್ಯಾನ್ಸಿ ಸ್ಯಾಂಡಲ್ ಹಾಕಿಕೊಂಡು ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಒಳಗಡೆ ಬಿಟ್ಟಿಲ್ಲ. ಫ್ಯಾನ್ಸಿ ಸ್ಯಾಂಡಲ್‌ಗಳನ್ನು ಹೊರಗಡೆಯೇ ಬಿಟ್ಟು …

Read More »

ಸ್ವಚ್ಛ ಭಾರತ್ ಮಿಷನ್‌ 21ನೇ ಶತಮಾನದ ಅತೀ ದೊಡ್ಡ ಯಶಸ್ವಿ ಜನರ ಆಂದೋಲನ: ಪ್ರಧಾನಿ ಮೋದಿ

ನವದೆಹಲಿ: ಸ್ವಚ್ಛ ಭಾರತ್ ಮಿಷನ್ ಅನ್ನು 21 ನೇ ಶತಮಾನದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನರ ಆಂದೋಲನ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಆರೋಗ್ಯ, ಸಮೃದ್ಧಿಯ ಹೊಸ ಮಾರ್ಗ ಎಂದು ಬಣ್ಣಿಸಿದ್ದಾರೆ. 10 ವರ್ಷಗಳ ನೆನಪಿನ ಸಮಾರಂಭದಲ್ಲಿ ಮಾತನಾಡಿದ ಮೋದಿ, ಸಾಮೂಹಿಕ ಭಾಗವಹಿಸುವಿಕೆ ಅಭಿಯಾನವು ಸಮೃದ್ಧಿಯ ಹೊಸ ಮಾರ್ಗವಾಗಿ ಗೋಚರಿಸಿದೆ. ನೀವೆಲ್ಲರೂ ಸ್ವಚ್ಛ ಭಾರತ್ ಮಿಷನ್‌ನನ್ನು ಯಶಸ್ವಿಗೊಳಿಸಿದ್ದೀರಿ ಎಂದು ಹರ್ಷಿಸಿದರು. ಆಂದೋಲನಕ್ಕೆ 10 ವರ್ಷ ಸಂದಿರುವ ಕಾರಣ …

Read More »

ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ನಿರ್ವಹಿಸುವ ಕಾಮಗಾರಿಗಳ ಪ್ರಗತಿಯ ಸಂಪೂರ್ಣ ಮಾಹಿತಿಗಳು, ಕಾಮಗಾರಿಗಳನ್ನು ವಹಿಸುವ ಇಲಾಖೆಗಳಿಂದ ಬಿಡುಗಡೆಯಾಗುವ ಅನುದಾನದ ಸ್ವೀಕೃತಿ ಹಾಗೂ ಬಳಕೆ, ಸೂಕ್ತ ರೀತಿಯಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಮುಂತಾದ ವಿವಿಧ ಅಂಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗಾಂಧಿ ಸಾಕ್ಷಿ ಕಾಯಕ 2.0 (ವರ್ಕ್ ಮಾನಿಟರಿಂಗ್ ಸಿಸ್ಟಂ) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಗಾಂಧಿ ಜಯಂತಿ ದಿನದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ …

Read More »

ಪ್ರಧಾನಿ ಮೋದಿಯವರಿಂದ ಮಿಷನ್ ಅಮೃತ ಯೋಜನೆ ಘೋಷಣೆ

ನವದೆಹಲಿ: ಸ್ವಚ್ಛ ಭಾರತ ಅಭಿಯಾನಕ್ಕೆ 10 ವರ್ಷ ತುಂಬಿದ ಸಂದರ್ಭದಲ್ಲಿ ಈ ಅಭಿಯಾನದ ಮುಂದಿನ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್‌ ಅಮೃತ ಯೋಜನೆಯನ್ನು ಘೋಷಿಸಿದರು. ಮಿಷನ್‌ ಅಮೃತ ಯೋಜನೆಯ ಮೂಲಕ ದೇಶದಾದ್ಯಂತ ಇರುವ ನಗರಗಳಲ್ಲಿನ ಕೊಳಚೆ ನೀರಿನ ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಎರಡು ಭಾಗಗಳಿರಲಿವೆ. ಒಂದು ಅಮೃತ ಮತ್ತೊಂದು ಅಮೃತ 2.0, ಇದಕ್ಕಾಗಿ ₹6,800 ಕೋಟಿ ಮೀಸಲಿಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. …

Read More »

ಡಿಮ್ಹಾನ್ಸ್ ನ ನೂತನ ಮುಖ್ಯ ಆಡಳಿತಾಧಿಕಾರಿಯಾಗಿ ಸಿದ್ಧಲಿಂಗಯ್ಯ ಹಿರೇಮಠ ನೇಮಕ

ಧಾರವಾಡ : ನಗರದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ನೂತನ ಮುಖ್ಯ ಆಡಳಿತಾಧಿಕಾರಿಯಾಗಿ ಸೂಪರ್ ಟೈಂ ಸ್ಕೇಲ್‌ನ ಹಿರಿಯ ಕೆ.ಎ.ಎಸ್. ಅಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಎಸ್. ಹಿರೇಮಠ ಗುರುವಾರ ಅಧಿಕಾರ ವಹಿಸಿಕೊಂಡರು. ಮೂಲತಃ ವಿಜಯಪೂರ ಜಿಲ್ಲೆಯವರಾದ ಇವರು, 2008ರಲ್ಲಿ ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್.) ಪರೀಕ್ಷೆಯಲ್ಲಿ ರಾಜ್ಯಕ್ಕೇ 5ನೆಯ ರಾಂಕ್ ಪಡೆದು ಅಸಿಸ್ಟೆಂಟ್ ಕಮೀಷನರ್ ಆಗಿ ಆಯ್ಕೆಗೊಂಡ ಇವರು, ಬೈಲಹೊಂಗಲ ಉಪವಿಭಾಗಾಧಿಕಾರಿಯಾಗಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, …

Read More »

ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ಮೈಸೂರು ದಸರಾ ನಾಡಹಬ್ಬಕ್ಕೆ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ದಸರಾ ಹಬ್ಬಕ್ಕೆ ಇಂದು ಅರಮನೆ ನಗರಿಯಲ್ಲಿ ವೈಭವದ ಚಾಲನೆ ದೊರೆಯಿತು ಮೈಸೂರು ದಸರಾದ ಉದ್ಘಾಟಕರಾದ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು ಮಹಿಷಮರ್ಧಿನಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬಕ್ಕೆ ಚಾಲನೆ ನೀಡಿದರು. ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ವೈಭವದ ಚಾಲನೆ ನೀಡಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಹಿತ ರಾಜ್ಯ ಸರ್ಕಾರದ …

Read More »

ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ರಾಯಚೂರು ಬಂದ್ ಗೆ ಕರೆ

ರಾಯಚೂರು: ಪರಿಶಿಷ್ಟ ಜಾತಿಯ ಮಾದಿಗ ಸಂಬಂಧಿತ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ‌ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ದಲಿತ ಪರಸಂಘಟನೆಗಳು ಇಂದು ರಾಯಚೂರು ಬಂದ್‌ಗೆ ಕರೆ ನೀಡಿದೆ. ಅಂಗಡಿ ಮುಂಗಟ್ಟು‌ಗಳು ಸಹ ವ್ಯಾಪಾರ ಸ್ಥಗಿತಗೊಳಿಸುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ನಗರದ ಉಸ್ಮಾನಿಯ ತರಕಾರಿ ಮಾರುಕಟ್ಟೆಯನ್ನು ಬಂದ್​ ಮಾಡಲಾಗಿದೆ. ಬಂದ್​ ಪರಿಣಾಮ ಬಸ್ ಸಂಚಾರ ಸಹ ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣ …

Read More »