Breaking News

Breaking News

ಸಿಡಿಲು ಬಡಿತಕ್ಕೆ 13 ಆಕಳು, 4 ಎತ್ತು ಬಲಿ

ಕಲಬುರಗಿ: ಸಿಡಿಲು ಹೊಡೆದ ಪರಿಣಾಮ 13 ಆಕಳು, 4 ಎತ್ತು ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಲಕ್ಷ್ಮಣ್ ನಾಯಕ್ ತಾಂಡಾದಲ್ಲಿ ನಡೆದಿದೆ. ತಾಂಡಾದ ಹೊರವಲಯದಲ್ಲಿನ ಗುಡ್ಡದ ಮೇಲೆ ಮೇಯುತ್ತಿದ್ದಾಗ ಸಿಡಿಲು ಬಡಿದಿದೆ. ಲಕ್ಷಾಂತರ ಮೌಲ್ಯದ ಆಕಳು, ಎತ್ತು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Read More »

ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಗೆ ಶುಭ ಕೋರಿದ ಪ್ರಧಾನಿದೆ

ನವದೆಹಲಿ: ಕಾಂಗ್ರೆಸ್ ನೂತನ ಅಧ್ಯಕ್ಷ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 17ರಂದು ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಸ್ಪರ್ಧಿಸಿದ್ದರು . ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬರೋಬ್ಬರಿ 24 ವರ್ಷಗಳ ಬಳಿಕ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಹೊಸ ಜವಾಬ್ದಾರಿ …

Read More »

ಮುರುಘಾಶ್ರೀ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಚಿತ್ರದುರ್ಗ: ಪೋಕ್ಸೋ ಕೇಸಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಚಿತ್ರದುರ್ಗದ ಮುರುಘಾಶ್ರೀ ಸೇರಿ ನಾಲ್ವರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಾಗಿದೆ. A1 ಮುರುಘಾಶ್ರೀ, A2 ಮಠದ ಕಾರ್ಯದರ್ಶಿ ಪರಮಶಿವಯ್ಯ, 3ನೇ ಆರೋಪಿ ಮುರುಘಾ ಮಠದ ಹಾಸ್ಟೆಲ್​​ನ ಲೇಡಿ ವಾರ್ಡನ್, A4 ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈಗಾಗಲೇ ಪೋಕ್ಸೋ ಕೇಸ್​ನಲ್ಲಿ ಎ1 ಮುರುಘಾಶ್ರೀ ಹಾಗೂ ಎ3 …

Read More »

ನ. 01 ರಂದು ಅದ್ಧೂರಿಯಾಗಿ ರಾಜ್ಯೋತ್ಸವ ನಡೆಯಲಾಗುವುದು : ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ

ಚಿತ್ರದುರ್ಗ: ಈ ಬಾರಿ ಜಿಲ್ಲಾ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವವನ್ನು ನ. 01 ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಅದರನ್ವಯ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 01 ರಂದು ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿ ಹಾಗೂ …

Read More »

ಬೈಕಿನಲ್ಲಿ ಹೊರಟಿದ್ದ ಮಾರ್ಕೋಪೋಲೊ ಯುವಕ ಸಾವು

ಧಾರವಾಡ: ನಗರದ ಕೆಲಗೇರಿ ಸೇತುವೆಯ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಮಾರ್ಕೋಪೋಲೊ ಕಂಪನಿಯ ಯುವಕ ಸಾವಿಗೀಡಾದ ದುರ್ಘಟನೆ ಇದೀಗ ನಡೆದಿದೆ. ಮುಗದ ಗ್ರಾಮದಿಂದ ಬರುತ್ತಿದ್ದ ದೇವಾನಂದ ಸಿದ್ದಪ್ಪ ಕುಕನೂರ ಎಂಬಾತನೇ ಸಾವಿಗೀಡಾಗಿದ್ದಾನೆ. ಕೆಲವರು ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೀಗಾಗಿದೆ ಎದಿದಾರ್ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.

Read More »

ಧಾರವಾಡದಿಂದ ಪವರ್ ‌ಸ್ಟಾರ್ ಸಮಾಧಿಯವರೆಗೂ ಧ್ರಾಕ್ಷಾಯಣಿ ಪಾಟೀಲ್ ಪಾದಯಾತ್ರೆ

ಧಾರವಾಡ : ಅ.29ರಂದು ನಿಧನರಾದ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೆನಪು ಅಭಿಮಾನಿಗಳಲ್ಲಿ ಸದಾ ಹಸಿರು. ಪುನೀತ್ ಸಾವಿನ ನೋವಿನಿಂದ ಇಡೀ ಕರ್ನಾಟಕದ ಜನತೆ ಇನ್ನೂ ಹೊರಬಂದಿಲ್ಲ. ಅವರ ಹೆಸರಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳು ಮುಂದುವರೆದಿವೆ. ಇದರ ನಡುವೆ ಅಪ್ಪು ಅಭಿಮಾನಿ ಕುಟುಂಬದ ಧಾರವಾಡದ ಮನಗುಂಡಿಯ ದ್ರಾಕ್ಷಾಯಣಿ ಪಾಟೀಲ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಲು ಮತ್ತೆ ಪಾದಯಾತ್ರೆ ಆರಂಭಿಸಲಿದ್ದಾರೆ. …

Read More »

ಬಾಗಲಕೋಟೆಯಿಂದ ಬೆಂಗಳೂರು ವರಗೆ “ಸ್ವಚ್ಛ ವಿಧಾನಸಭೆ” ಅಭಿಯಾನ ಪಾದಯಾತ್ರೆ

ಹುಬ್ಬಳ್ಳಿ: 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಾಗಲಕೋಟೆಯಿಂದ ಬೆಂಗಳೂರು ವರಗೆ ಎಂ.ಎಸ್ಸಿ,ಎಂ.ಟೆಕ್ ಪದವೀಧರ ಹಾಗೂ ಸಾಮಾಜಿಕ ಕಾರ್ಯಕರ್ತ ನಾಗರಾಜ ಕಲಕುಟಕರ್ ಆರಂಭಿಸಿರುವ “ಸ್ವಚ್ಛ ವಿಧಾನಸಭೆ” ಅಭಿಯಾನ ಪಾದಯಾತ್ರೆ ಸದ್ಯ ನಮ್ಮ ಹುಬ್ಬಳ್ಳಿಯಲ್ಲಿ‌ ಕಾಲಿಟ್ಟಿದೆ ಬಾಗಲಕೋಟೆಯಿಂದ ಜೂನ್ 9ರಂದು ಆರಂಭಿಸಿರುವ ಈ ಅಭಿಯಾನ ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿ ಇದೀಗ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ರಾಜ್ಯದ 31 ಜಿಲ್ಲೆಗಳ ಎಲ್ಲ 224 ಕ್ಷೇತ್ರಗಳಲ್ಲಿ ಸಂಚರಿಸಿ, ಮುಂದಿನ ಜನವರಿ …

Read More »

ದೀಪಾವಳಿ ಹಬ್ಬಕ್ಕೆ ಬೀದಿ ಬದಿ ವ್ಯಾಪಾರಸ್ಥರಿಗೆ ಬೆಳಕಾಗಿ – ರಜತ ಉಳ್ಳಾಗಡ್ಡಿಮಠ

ಬೆಳಕಿನ ಹಬ್ಬ – ಆನ್ಲೈನ್ ಅಥವಾ ಸೂಪರ್ಮಾರ್ಕೆಟ್ ಬದಲಿಗೆ ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿರುವ ಸ್ಥಳೀಯ ಮಾರಾಟಗಾರರಿಂದ ಹಬ್ಬದ ವಸ್ತುಗಳ ಖರೀದಿಸಿ – ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ಅಭಿಯಾನ ಆರಂಭಿಸಿದರು.ಬೆಲೆ ಏರಿಕೆ, ನೋಟ್ ಬ್ಯಾನ್, ಜಿಎಸ್ ಟಿ , ಕೊರೊನಾ, ಲಾಕ್ ಡೌನ್ ದಿಂದ ಮಧ್ಯಮ ಮತ್ತು ಸಣ್ಣ ಉದ್ಯಮಗಳು ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿವೆ.ಪನತಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಸ್ಥಳೀಯವಾಗಿಯೇ ಖರೀದಿಸಿ ಎಂದಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಗೆ ಹುಬ್ಬಳ್ಳಿ ಸಜ್ಜಾಗುತ್ತಿದೆ. ಕೊರೊನಾ …

Read More »

ಪತ್ರಕರ್ತರ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ : ಈರೇಶ ಅಂಚಟಗೇರಿ

ಧಾರವಾಡ :ಶೇ. 99ರಷ್ಟುಮಾಧ್ಯಮಗಳನ್ನು ಕಾರ್ಪೋರೇಟ್‌ ಸಂಸ್ಥೆಗಳು ನಡೆಸುತ್ತಿದ್ದರಿಂದ ಪತ್ರಕರ್ತರ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ. ಇದರ ಫಲವಾಗಿ ನೈಜತೆ, ವಾಸ್ತವಿಕ ವರದಿಗಳ ಕೊರತೆ ಮಾಧ್ಯಮಗಳಲ್ಲಿ ಕಾಣುತ್ತಿದೆ ಎಂದು ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ ವಿಚಾಧಿಸಿದರು. ವಿದ್ಯಾಗಿರಿ ಜೆಎಸ್‌ಎಸ್‌ ಕಾಲೇಜಿನ ರತ್ನವರ್ಮ ಸಭಾಭವನದಲ್ಲಿ ಕೇಂದ್ರ ಸರ್ಕಾರದ ವಾರ್ತಾ ಇಲಾಖೆಯ ಬೆಂಗಳೂರು ಪಿಐಬಿ ಶಾಖೆಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿ​ಧಿಗಳಿಗೆ ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇತ್ತೀಚೆಗೆ …

Read More »

ಪರಿಹಾರ ವಿತರಣೆಯಲ್ಲಿ ತಾರತಮ್ಯ ವಿರೋಧಿಸಿ ಪ್ರತಿಭಟನೆ

ಅಣ್ಣಿಗೇರಿ: ಇತ್ತೀಚೆಗೆ ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಬೆಳೆ ಹಾಗೂ ಮನೆಗಳಿಗೆ ಅಪಾರ ಹಾನಿಯಾಗಿದ್ದು, ಸರ್ಕಾರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪಕ್ಷಾತೀತ ರೈತ ಸಂಘದ ಅಧ್ಯಕ್ಷ ನಿಂಗಪ್ಪ ಬಡ್ಡೇಪ್ಪನವರ ಆರೋಪಿಸಿದರು. ತಹಶೀಲ್ದಾರ್ ಅನೀಲ ಬಡಿಗೇರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ಜಮೀನಿನ ಬದುವು, ಹೋಳಗಟ್ಟಿಗಳು ಕೂಡಾ ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು. ‘ಈಗಾಗಲೇ …

Read More »