admin
December 27, 2021
Breaking News, ಕರ್ನಾಟಕ, ದೆಹಲಿ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ತಮ್ಮ ಮಗಳ ನಿಶ್ಚತಾರ್ಥದ ಫೋಟೋವನ್ನು ಡಿಸೆಂಬರ್ 25ರಂದು ಇನ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಪುತ್ರಿ ಶಾನೆಲ್ಲೆ ಇರಾನಿ ನಿಶ್ಚಿತಾರ್ಥಕ್ಕೆ ಶುಭಕೋರಿದ್ದಾರೆ. ಸ್ಮೃತಿ ಇರಾನಿ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ಶಾನೆಲ್ಲೆಗೆ ಅರ್ಜುನ್ ಮೊಣ ಕಾಲಿನ ಮೇಲೆ ಕುಳಿತು ಪ್ರೀತಿಯ ನಿವೇದನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಎರಡನೇ ಚಿತ್ರದಲ್ಲಿ ಅರ್ಜುನ್ ಭಲ್ಲಾ ಮತ್ತು ಶಾನೆಲ್ಲೆ ನಿಶ್ಚಿತಾರ್ಥದ ಬಳಿಕ ತೆಗೆದುಕೊಂಡಿರುವ ಸೆಲ್ಫಿ ಫೋಟೋ ಕಾಣಬಹುದಾಗಿದೆ. ಫೋಟೋ ಶೇರ್ ಮಾಡುವುದರೊಂದಿಗೆ …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ವಿಶೇಷ ಸುದ್ದಿ, ಸುದ್ದಿ, ಹಾವೇರಿ
ಹಾವೇರಿ : ಕೋಡಿಮಠದ ಶ್ರೀಗಳು ಆಗಾಗ ಕೆಲವೊಂದಿಷ್ಟು ಬಾರಿ ಜಗತ್ತನ್ನು ಉದ್ದೇಶಿಸಿ ಹಾಗೂ ಜನರ ಒಳಿತನ್ನು ಉದ್ದೇಶಿಸಿ ಮುಂಬರುವ ರಾಜಕೀಯದ ವಿಚಾರಗಳನ್ನು ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಕೆಲವೊಂದಿಷ್ಟು ಭವಿಷ್ಯ ನುಡಿದು ಜನರಿಗೆ ಮುನ್ಸೂಚನೆ ನೀಡುತ್ತಾರೆ. ಆದರೆ, ಈ ಕೋಡಿ ಮಠದ ಶ್ರೀಗಳ ಮಾತನ್ನು ಕೆಲವರು ನಂಬುವುದಿಲ್ಲ. ಇನ್ನೂ ಕೆಲವರು ಅವರ ಮಾತಿನ ಮೇಲೆ ನಿಲ್ಲುತ್ತಾರೆ. ಹೌದು ಇತ್ತೀಚಿಗಷ್ಟೇ ರಾಣೆಬೆನ್ನೂರಿನಲ್ಲಿ ಕೋಡಿಮಠದ ಶ್ರೀಗಳಾದ ಶಿವಾನಂದ ಸ್ವಾಮೀಜಿ ಅವರು ನಡೆಸಿದ …
Read More »
admin
December 27, 2021
Breaking News, ಕರ್ನಾಟಕ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ರಾಯ್‌ಪುರ: ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮತ್ತು ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ ‘ದ್ವೇಷಪೂರಿತ ಹಾಗೂ ಪ್ರಚೋದನಕಾರಿ’ ಹೇಳಿಕೆ ನೀಡಿದ ಆರೋಪದ ಮೇಲೆ ಛತ್ತೀಸ್‌ಗಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಸಂಜೆ ರಾಯ್‌ಪುರದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸದ್ ಸಮ್ಮೇಳನದಲ್ಲಿ ಕಾಳಿಚರಣ್, ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದವನ್ನು ಬಳಸಿದ್ದರು ಮತ್ತು …
Read More »
admin
December 27, 2021
Breaking News, ಕರ್ನಾಟಕ, ದೆಹಲಿ, ಬೆಂಗಳೂರು, ಸುದ್ದಿ
ಪಾಟ್ನಾ: ಬಿಹಾರದ ಹಿರಿಯ ಸಮಾಜವಾದಿ ನಾಯಕ ಶಿವಾನಂದ ತಿವಾರಿ ಅವರೆ ಫೋನ್ ಕರೆ ಮಾಡಿದ ದುಷ್ಕರ್ಮಿಯೋರ್ವ ನಿಂದಿಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಶಿವಾನಂದ ತಿವಾರಿ ಅವರು ಇತ್ತೀಚಿಗಷ್ಟೆ ಪತ್ರಿಕಾ ಸಂದರ್ಶನವೊಂದರಲ್ಲಿ ವಿ.ಡಿ ಸಾವರ್ಕರ್ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಸಾವರ್ಕರ್ ಅವರಿಗೆ ಗೋವನ್ನು ಪೂಜಿಸುವ ಪರಿಕಲ್ಪನೆ ಸುತಾರಾಂ ಇಷ್ಟವಿರಲಿಲ್ಲ ಎಂದಿದ್ದರು. ಶಿವಾನಂದ ತಿವಾರಿ ಅವರು ಜಯಪ್ರಕಾಶ್ ನಾರಾಯಣ್ ಹಾಗೂ ರಾಮಮನೋಹರ್ ಲೋಹಿಯ ಥರದ ಮಹಾನ್ ನಾಯಕರೊಡನೆ ಅವರೊಂದಿಗೆ ಕೆಲಸ …
Read More »
admin
December 27, 2021
Breaking News, ಅಪರಾಧ, ಕರ್ನಾಟಕ, ಧಾರವಾಡ, ಸುದ್ದಿ
ಧಾರವಾಡ: ಧಾರವಾಡದ ಕೆಲಗೇರಿ ಕೆರೆಗೆ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಧಾರವಾಡ ಸಂತೋಷನಗರದ ನಿವಾಸಿ ಅನಿತಾ ಹೆಗಡೆ ಎಂಬುವವರೇ ಸಾವನ್ನಪ್ಪಿದವರು. ಅನಿತಾ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅಲ್ಲದೇ ಹಲವು ದಿನಗಳಿಂದ ಧಾರವಾಡದ ಡಿಮಾನ್ಸ್‌ನಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇಂದು ಬೆಳಗಿನಜಾವ ಏಕಾಏಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
Read More »
admin
December 27, 2021
Breaking News, World, ಕಲಬುರಗಿ, ದೆಹಲಿ, ದೇಶ-ವಿದೇಶ, ಸುದ್ದಿ, ಹುಬ್ಬಳ್ಳಿ-ಧಾರವಾಡ
ನವದೆಹಲಿ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಮತ್ತು ಓಮೈಕ್ರಾನ್ ಆತಂಕದ ನಡುವೆ ದೆಹಲಿಯಲ್ಲಿ ಇಂದಿನಿಂದ (ಡಿ.27) ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ರವರೆಗೆ ರಾತ್ರಿ ಕಫ್ಯೂ ವಿಧಿಸಿ ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) ಆದೇಶಿಸಿದೆ. ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೆಹಲಿಯಲ್ಲೇ ಅಧಿಕ 142 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ನ್ಯಾಯಾಂಗದ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಗರ್ಭಿಣಿಯರು ಮತ್ತು …
Read More »
admin
December 27, 2021
Breaking News, ಕರ್ನಾಟಕ, ಬೆಂಗಳೂರು, ವಾಣಿಜ್ಯ, ವಿಜಯಪುರ, ವಿಶೇಷ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಬಹುದಿನಗಳ ನಿರೀಕ್ಷೆಯಲ್ಲಿದ್ದ ಎಲೆಕ್ಟ್ರಿಕಲ್ ರೈಲು ಸಂಚಾರವನ್ನು ಆರಂಭಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.ಹುಬ್ಬಳ್ಳಿಯಿಂದ ಟ್ರೈನ್ No 16592 ಮೈಸೂರು- ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್ ಮತ್ತು ಟ್ರೈನ್ No 17225 ವಿಜಯವಾಡ - ಹುಬ್ಬಳ್ಳಿ ಅಮರಾವತಿ ಎಕ್ಸ್‌ಪ್ರೆಸ್ ಎಲೆಕ್ಟ್ರಿಕಲ್ ಎರಡು ರೈಲುಗಳು …
Read More »
BigTv News
December 25, 2021
Breaking News, ಕರ್ನಾಟಕ, ಮಂಡ್ಯ, ಸುದ್ದಿ
ಮಂಡ್ಯ: ಪಾಠ ಮಾಡುತ್ತಿದ್ದ ಸಂದರ್ಭದಲ್ಲಿಯೇ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಎಲೆಚಾಕನಹಳ್ಳಿಯಲ್ಲಿ ನಡೆದಿದ್ದು, ಇಲ್ಲಿನ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕ ರಾಜೇಶ್(47) ಎಂಬುವವರು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಶಿಕ್ಷಕರು.
Read More »
BigTv News
December 25, 2021
Breaking News, ಅಪರಾಧ, ಕರ್ನಾಟಕ, ಧಾರವಾಡ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ
ಧಾರವಾಡ: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ವ್ಯಕ್ತಿಯೋರ್ವ ಸಜೀವ ದಹನಗೊಂಡಿರುವ ಘಟನೆ ಧಾರವಾಡದ ನಗರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ವಿನಾಯಕ ಚಿನಿವಾಲರ (36) ಎಂಬ ವ್ಯಕ್ತಿಯೇ ಸಜೀವ ದಹನಗೊಂಡವನು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ವಿನಾಯಕ ದೀಪ ಹಚ್ಚಲು ಹೋಗಿ ಯಡವಟ್ಟು ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿನಾಯಕ ವಿಪರೀತ ಮದ್ಯವೆಸನಿಯಾಗಿದ್ದ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೋ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿದೆಯೋ ಎಂಬುದರ ಬಗ್ಗೆ …
Read More »
BigTv News
December 25, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ