BigTv News
October 18, 2026
Breaking News
ಮೈಸೂರು: ಕೆ.ಆರ್.ನಗರ ತಾಲೂಕಿನ ಎಡತೊರೆ ಗ್ರಾಮದ ಪುರಾತನ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಗೋಡೆ ಮೇಲೆ ಶಿಲುಬೆ ಹಾಗೂ ಮಸೀದಿಯ ಚಿತ್ರಗಳನ್ನು ಬಿಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯರ ವಿರೋಧದ ಬೆನ್ನಲ್ಲೇ ತಹಶೀಲ್ದಾರ್ ಸುರೇಂದ್ರ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಚಿತ್ರಗಳನ್ನು ತೆರವುಗೊಳಿಸಿದ್ದಾರೆ. ದೇವಾಲಯದ ಪಾರುಪತ್ತೇದಾರ್ ಆರತಿ ಹಾಗೂ ಕಲಾವಿದ ವಿನಯ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆ.ಆರ್.ನಗರ …
Read More »
BigTv News
October 18, 2026
Breaking News
ಬಾಗಲಕೋಟೆ: ಮುಧೋಳದ ವಿನಾಯಕ ನಗರದಲ್ಲಿ ನವರಾತ್ರಿ ದುರ್ಗಾದೇವಿ ಘಟಸ್ಥಾಪನೆ ಪೂಜೆ ವೇಳೆ ಜೋರಾಗಿ ಮಾತನಾಡದಂತೆ ಬುದ್ಧಿವಾದ ಹೇಳಿದ್ದಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಪೂಜೆಯ ವೇಳೆ ಶಾಂತವಾಗಿರುವಂತೆ ಸೂಚಿಸಿದ್ದ ನಿತಿನ್ ನಿಂಬಾಳ್ಕರ್ ಮೇಲೆ ಯುವಕರ ಗುಂಪು ಚಾಕುವಿನಿಂದ ಹಲ್ಲೆ ನಡೆಸಿದೆ. ಕತ್ತು ಹಾಗೂ ಪಕ್ಕೆಲುಬಿಗೆ ಇರಿತಕ್ಕೊಳಗಾದ ನಿತಿನ್ ಮೃತಪಟ್ಟಿದ್ದು, ರಕ್ಷಣೆಗೆ ಮುಂದಾದ ಚಿಕ್ಕಪ್ಪ ಸಂಜು ನಿಂಬಾಳ್ಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ ಶ್ರೀನಿವಾಸ ಕೊರವರ ಸೇರಿದಂತೆ ಆರು ಮಂದಿ ಆರೋಪಿಗಳ ಹೆಸರು …
Read More »
BigTv News
October 18, 2026
Breaking News
ಬೆಂಗಳೂರು: ವಿಭೂತಿಪುರ ಕೆರೆಯ ಬಳಿ 13 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಿಂಗಳ ಹಿಂದೆ ದ್ವಿಚಕ್ರ ವಾಹನ ಅಡ್ಡಗಟ್ಟಿದ ವಿಚಾರಕ್ಕೆ ನಡೆದ ಜಗಳದ ವೈಷಮ್ಯದಿಂದ ಅಕ್ಟೋಬರ್ 4ರಂದು ಬಾಲಕನ ಮೇಲೆ ಇಬ್ಬರು ದಾಳಿ ನಡೆಸಿದ್ದಾರೆ. ಬಳಿಕ ಮುಖದ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರುದಿನ ಬೆಳಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದ್ದು, …
Read More »
BigTv News
October 18, 2026
Breaking News
ವಿಜಯಪುರದಲ್ಲಿ ಸೊಸೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಗಣೇಶ ನಗರದ ನಿವಾಸಿ ರಮೇಶ ಮೂರಮಟ್ಟಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. 2020ರ ಏಪ್ರಿಲ್‌ನಲ್ಲಿ ಆರೋಪಿ ಸೊಸೆ ಮೇಲೆ ಲೈಂಗಿಕ ಹಲ್ಲೆ ನಡೆಸಿ, ವಿಷಯವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದನು. ಈ ಸಂಬಂಧ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ …
Read More »
BigTv News
October 18, 2026
Breaking News
ಕಲಬುರಗಿಯಲ್ಲಿ ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್‌ವುಲ್ ಮಲೀಕ್ ಎಂಬಾತನನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರಾಫ್ ಬಜಾರ್‌ನಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ಈತ, ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು, ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಬೀದರ್‌ನಲ್ಲಿ ವಿಶಾಲ್ ಮೇತ್ರೆ ಹಾಗೂ ದಾವಣಗೆರೆಯಲ್ಲಿ ಸುಹೇಲ್ ಎಂಬಾತನನ್ನು ಉಗ್ರರ …
Read More »
BigTv News
October 18, 2026
Breaking News
ಮಂಗಳೂರು ನಗರದ ವೆಲೆನ್ಸಿಯಾದ ಚರ್ಚ್‌ವೊಂದರ ಧರ್ಮಗುರು ಸಿಪ್ರಿಯನ್ ಪಿಂಟೋ ಅವರನ್ನು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಧರ್ಮಗುರು ವಿರುದ್ಧ ಸಂತ್ರಸ್ತರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಪ್ರಿಯನ್ ಪಿಂಟೋ ಅವರನ್ನು ಸಂಬಂಧಿಕರೊಬ್ಬರ ಮನೆಯಿಂದ ಬಂಧಿಸಿದ್ದಾರೆ.
Read More »
BigTv News
October 18, 2026
Breaking News
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಮೀಜಿ ಹಾಗೂ ವಿದ್ಯಾರ್ಥಿಗಳ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಭಾಟಿಯಾ (28) ಮತ್ತು ವೆಂಕಟ ದಿನೇಶ್ (27) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿಮಾನ ಟಿಕೆಟ್‌ಗೆ ಹಣವಿಲ್ಲ, ಪರ್ಸ್ ಕಳೆದುಹೋಗಿದೆ ಎಂದು ಸುಳ್ಳು ಹೇಳಿ ಪ್ರಯಾಣಿಕರಿಂದ ಹಣ ಪಡೆಯುತ್ತಿದ್ದರು. ಇವರ ಮಾತು ನಂಬಿದ ಟೆಕ್ಕಿಯೊಬ್ಬರು 37,300 ರೂ. ಫೋನ್‌ಪೇ ಮಾಡಿದ್ದರು. ಮತ್ತೊಂದೆಡೆ ಕಾವಿ ಧರಿಸಿ ಸಾಧುಗಳಂತೆ ನಟಿಸಿ ಹಣ ಸಂಗ್ರಹಿಸುತ್ತಿದ್ದರು. ವಿಚಾರಣೆ …
Read More »
BigTv News
October 18, 2026
Breaking News
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ವಿನಾಯಕ ನಗರದಲ್ಲಿ ದುರ್ಗಾ ಪೂಜೆ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಿತಿನ್ ನಿಂಬಾಳ್ಕರ್ (25) ಕೊಲೆಯಾದ ಯುವಕ. ದಾಂಡಿಯ ನೃತ್ಯದ ಬಳಿಕ ನಡೆಯುತ್ತಿದ್ದ ಪೂಜೆ ವೇಳೆ ಮದ್ಯದ ಅಮಲಿನಲ್ಲಿ ಬಂದ ಶ್ರೀನಿವಾಸ ಕದರಿ, ನಿತಿನ್ ಜೊತೆ ಜಗಳವಾಡಿದ್ದಾನೆ. ಬಳಿಕ ಸ್ನೇಹಿತರೊಂದಿಗೆ ಮರಳಿ ಬಂದು ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ನಿತಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಸಂಜು ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮುಧೋಳ ಪೊಲೀಸ್ ಠಾಣಾ …
Read More »
BigTv News
October 17, 2026
Breaking News
ಬೆಂಗಳೂರು: ಕೆಎಎಸ್ ಪಾಸ್ ಆಗಿದ್ದೇನೆಂದು ಸುಳ್ಳು ಹೇಳಿ ಶರಣ್ಯಳನ್ನು ಮದುವೆಯಾಗಿದ್ದ ಮಂಜುನಾಥ್, ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಮನನೊಂದು ಶರಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೊಮ್ಮಗಳನ್ನು ನೋಡಲು ಬಂದ ಶರಣ್ಯ ತಾಯಿ ಕವಿತಾ ಮೇಲೂ ಮಂಜುನಾಥ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಯಲಹಂಕ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶರಣ್ಯಳ ಇ-ಮೇಲ್‌ನಲ್ಲಿ ಪತಿಯ ಕಿರುಕುಳ ಹಾಗೂ ಬೆದರಿಕೆಯ ವಿವರಗಳು ಪತ್ತೆಯಾಗಿವೆ ಎನ್ನಲಾಗಿದೆ. ಮಗಳ ಸಾವಿನ ಮರುತನಿಖೆಗೆ ತಾಯಿ ಕವಿತಾ ಆಗ್ರಹಿಸಿದ್ದಾರೆ.
Read More »
BigTv News
October 17, 2026
Breaking News
ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಚಿನ್ನದ ಸರಕ್ಕಾಗಿ 17 ವರ್ಷದ ಪ್ರಜ್ಯೋತ್ ಕಾಂಬ್ಳೆ ಎಂಬ ಬಾಲಕನನ್ನು ಆತನ ಇಬ್ಬರು ಅಪ್ರಾಪ್ತ ಸ್ನೇಹಿತರೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಒಬ್ಬನಿಗೆ ಹುಟ್ಟುಹಬ್ಬ ಆಚರಿಸಲು, ಮತ್ತೊಬ್ಬನಿಗೆ ಬೈಕ್ ಖರೀದಿಸಲು ಹಣ ಬೇಕಾಗಿತ್ತು. ಸೆಪ್ಟೆಂಬರ್ 24ರಂದು ಪ್ರಜ್ಯೋತ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸಾಕ್ಷ್ಯ ನಾಶಪಡಿಸಲು ಮೃತದೇಹಕ್ಕೆ ಬೆಂಕಿ ಹಚ್ಚಿ, ಮೊಬೈಲ್ ಅನ್ನು ಬಸ್‌ಗೆ ಎಸೆದಿದ್ದಾರೆ. ಸುಮಾರು …
Read More »