BigTv News
October 16, 2026
Breaking News
ಕುಂದಾಪುರ, ಅ.16: ವಾಲ್ತೂರು ಕೊಕ್ಕೋಡಿಗೆ ಹೋಗುವ ದಾರಿಯ ಗೇರು ಹಾಡಿಯಲ್ಲಿ ಮೇಯುತ್ತಿದ್ದ ದನವನ್ನು ಕಳವು ಮಾಡಲು ಯತ್ನಿಸಿದ ಆರೋಪಿಗಳು, ವ್ಯಕ್ತಿಯೊಬ್ಬರನ್ನು ಕಂಡು ಕಾರು ಬಿಟ್ಟು ಪರಾರಿಯಾದ ಘಟನೆ ಅ.15ರಂದು ನಡೆದಿದೆ. ಕಾವ್ರಾಡಿ ಗ್ರಾಮದ ಪ್ರಕಾಶ್ ಎಂಬವರಿಗೆ ಸೇರಿದ ದನವನ್ನು ಇಮ್ತಿಯಾಝ್, ರಿಜ್ವಾನ್ ದಸ್ತಗೀರ್ ಮತ್ತು ಜಿಮಾಮ್ ಎಂಬವರು ಕಾರಿಗೆ ತುಂಬಿಸಲು ಎಳೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರನ್ನು ಕಂಡು ದನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಸುಮಾರು 2 ಕಿ.ಮೀ. ದೂರದ ಕಾವ್ರಾಡಿ ಗ್ರಾಮದ ಜೋಗಿಬೆಟ್ಟು …
Read More »
BigTv News
October 16, 2026
Breaking News
ಬೆಂಗಳೂರು:ಕಲ್ಯಾಣ ಕರ್ನಾಟಕ ಭಾಗದಲ್ಲಿ ನಕಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆದ ಆರೋಪದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 52 ಗ್ರೂಪ್-ಡಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಇಲಾಖೆ ಸೂಚಿಸಿದೆ. 2015ರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು 2023ರಲ್ಲಿ ಬಂದ ದೂರಿನ ತನಿಖೆಯಿಂದ ಬೆಳಕಿಗೆ ಬಂದಿದೆ. ಕೆಲವರು ಮೂಲತಃ 230 ಅಂಕ ಪಡೆದಿದ್ದರೂ, ನಕಲಿ ಅಂಕಪಟ್ಟಿಗಳ …
Read More »
BigTv News
October 16, 2026
Breaking News
ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ಗ್ರಾಫಿಕ್ಸ್ ಕಾರ್ಡ್ ಖರೀದಿಸಲು ಮುಂದಾದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ₹1,61,660 ವಂಚಿಸಿದ್ದಾರೆ. ಅ. 4ರಂದು ದೂರುದಾರರು ಗ್ರಾಫಿಕ್ಸ್ ಕಾರ್ಡ್‌ಗಾಗಿ ಹುಡುಕಾಟ ನಡೆಸಿದಾಗ, ಗಣೇಶ್ ಎಲೆಕ್ಟ್ರಾನಿಕ್ಸ್ ಹೆಸರಿನ ಕಂಪನಿಯ ಜಾಹೀರಾತು ಕಂಡುಬಂದಿದೆ. ಬಳಿಕ ವಾಟ್ಸ್‌ಆಯಪ್ ಮೂಲಕ ಸಂಪರ್ಕಿಸಿದ ಆರೋಪಿಗಳು ಜಿಎಸ್‌ಟಿ ಬಿಲ್ ಕಳುಹಿಸಿ ನಂಬಿಕೆ ಮೂಡಿಸಿದ್ದಾರೆ. ಅ. 6ರಂದು ದೂರುದಾರರು ಆರೋಪಿಗಳು ನೀಡಿದ ಯುಪಿಐ ಐಡಿಗೆ ₹1 ಲಕ್ಷ ಹಾಗೂ ಮರುದಿನ ಮತ್ತೊಂದು ಯುಪಿಐ ಐಡಿಗೆ ₹61,660 ವರ್ಗಾಯಿಸಿದ್ದಾರೆ. …
Read More »
BigTv News
October 16, 2026
Breaking News
ಮಂಗಳೂರು: ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಗರದ ಚರ್ಚ್‌ನ ಧರ್ಮಗುರುವಿನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ಪ್ರಕಾರ, ಚಾಕ್ಲೆಟ್ ನೀಡಿ ಹಾಗೂ ಪ್ರೀತಿಯ ಮಾತುಗಳಿಂದ ಪುಸಲಾಯಿಸಿ ಬಾಲಕರನ್ನು ಚರ್ಚ್‌ನ ಕೊಠಡಿಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಆಗಸ್ಟ್ 14ರಂದು ಕೂಡ ಬಾಲಕನ ಮೇಲೆ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕರು ಈ ವಿಚಾರವನ್ನು ಸ್ನೇಹಿತರ …
Read More »
BigTv News
October 16, 2026
Breaking News
ತುಮಕೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಎಸ್.ಎಸ್.ಪುರಂನಲ್ಲಿ ನಡೆದಿದೆ. ಪವಿತ್ರ (33) ಗಂಭೀರವಾಗಿ ಗಾಯಗೊಂಡಿದ್ದು, ಪತಿ ನಾಗರಾಜು (35) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗರಾಜು ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಪವಿತ್ರ ಅವರನ್ನು ಸ್ಥಳೀಯರು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ …
Read More »
Shaikh BigTv
October 16, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಗಿರಣಿಚಾಳ ಸಮೀಪ ಕಸಕಂಟಿಗಳಲ್ಲಿ ಅಪರಿಚಿತ ಶವ ಪತ್ತೆ..! ಹುಬ್ಬಳ್ಳಿ: ನಗರದ ಗಿರಣಿಚಾಳ ಸಮೀಪದ ರಸ್ತೆಯ ಪಕ್ಕದಲ್ಲಿರುವ ಕಸಕಂಟಿಗಳಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ…. ಕಸಕಂಟಿಗಳ ನಡುವೆ ಶವ ಬಿದ್ದಿರುವುದನ್ನು ಗಮನಿಸಿದ ಹಿನ್ನೆಲೆಯಲ್ಲಿ ವಿಷಯ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕಸಕಂಟಿಗಳಲ್ಲಿದ್ದ ಶವವನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ… ಮೃತ …
Read More »
BigTv News
October 16, 2026
Breaking News
ಮುಳಬಾಗಿಲು: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯ ಲಾಡ್ಜ್‌ನಲ್ಲಿ ಪತಿಯೇ ಪತ್ನಿಯನ್ನು ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ. ಮುಳಬಾಗಿಲಿನ ಆಸಿಯಾ (28) ಕೊಲೆಯಾದ ಮಹಿಳೆ. ಆಸಿಯಾ ಮತ್ತು ಪತಿ ನವೀದ್ ಬಾಷಾ ಬೆಂಗಳೂರಿನಿಂದ ಮದನಪಲ್ಲಿಗೆ ತೆರಳಿ ಲಾಡ್ಜ್‌ನಲ್ಲಿ ತಂಗಿದ್ದರು. ಈ ವೇಳೆ ಪತಿ ಬಿಯರ್ ಬಾಟಲಿಯಿಂದ ಚುಚ್ಚಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೃತ್ಯದ ಬಳಿಕ …
Read More »
BigTv News
October 16, 2026
Breaking News
ಬೆಳ್ತಂಗಡಿ: ನಾವೂರಿನ ಸ್ವಾತಿ ಕಟ್ಟಡದಲ್ಲಿರುವ ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರವಿಕುಮಾರ್ (31), ದಿನೇಶ್ ಪ್ರಭು (51) ಮತ್ತು ಸುರೇಶ್ ಪಿ.ಎನ್. (44) ಎಂದು ಗುರುತಿಸಲಾಗಿದೆ. ಅಕ್ಟೋಬರ್ 7ರ ತಡರಾತ್ರಿ ನಡೆದ ಬೆಂಕಿ ಹಚ್ಚಿದ ಘಟನೆಯಲ್ಲಿ ವೈದ್ಯಕೀಯ ಸಲಕರಣೆಗಳು ಹಾಗೂ ಔಷಧಿಗಳು ಸುಟ್ಟುಹೋಗಿದ್ದು, ಸುಮಾರು ₹3 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. …
Read More »
BigTv News
October 16, 2026
Breaking News
ಬೆಂಗಳೂರು: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಕಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದ ಕಲ್ಯಾಣ ಕರ್ನಾಟಕ ವೃಂದದ 52 ಗ್ರೂಪ್-ಡಿ ನೌಕರರನ್ನು ಅಮಾನತುಗೊಳಿಸಲಾಗಿದೆ. 2016ರಲ್ಲಿ ನೇಮಕಗೊಂಡಿದ್ದ ಈ ಸಿಬ್ಬಂದಿ ವಿವಿಧ ಜಿಲ್ಲಾ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2023ರಲ್ಲಿ ಬಂದ ದೂರಿನ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಅಕ್ರಮ ಬೆಳಕಿಗೆ ಬಂದಿದೆ. ಕೇವಲ 230 ಅಂಕ ಪಡೆದಿದ್ದ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳ …
Read More »
BigTv News
October 16, 2026
Breaking News
ಮೈಸೂರು: ಕಳೆದ ವರ್ಷ ದಸರಾ ವೇಳೆ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಕಾರ್ತಿಕ್ (32) ಅಪರಾಧಿ ಎಂದು ಮೈಸೂರಿನ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ. ನಾಳೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಪೋಷಕರೊಂದಿಗೆ ತಂಗಿದ್ದ ಬಾಲಕಿಯನ್ನು ಅಕ್ಟೋಬರ್ 9ರಂದು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು 24 ಗಂಟೆಯೊಳಗೆ ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದರು. …
Read More »