Breaking News

Breaking News

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಊರ ಜಾತ್ರೆಯ ವೇಳೆ ಅಟ್ಟಾಡಿಸಿ ವ್ಯಕ್ತಿಯ ಬರ್ಬರ ಹತ್ಯೆ!

ಹಳೆ ವೈಷಮ್ಯ ಹಿನ್ನೆಲೆ ಊರ ಜಾತ್ರೆಯ ವೇಳೆ ಅಟ್ಟಾಡಿಸಿ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹನುಮಂತಯ್ಯನಪಾಳ್ಯದಲ್ಲಿ ಈ ಒಂದು ಕೊಲೆ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ರಾಮಾಂಜಿನಪ್ಪ (45) ಎಂದು ತಿಳಿದುಬಂದಿದೆ. ಕೊಲೆಗೈದ ಬಳಿಕ ಬೈಕ್ ಸಮೇತ ಗುಡ್ಡದ ಬಳಿ ಆರೋಪಿಗಳು ರಾಮಾಂಜಿನಪ್ಪ ಶವ ಎಸೆದು ಪರಾರಿಯಾಗಿದ್ದಾರೆ. ರಸ್ತೆ ಬದಿ ಬಿದ್ದಿದ್ದ ಬೈಕ್ ಪರಿಶೀಲನೆ ಮಾಡಿದಾಗ ಶವ ಪತ್ತೆಯಾಗಿದೆ. ಘಟನೆ ಕುರಿತಂತೆ ದೊಡ್ಡ ಬೆಳವಂಗಲ …

Read More »

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ ಜಗಳಕ್ಕೆ ಪೊಲೀಸರೇ ಮಧ್ಯಪ್ರವೇಶ ಬೆಕ್ಕು ಗರ್ಭಿಣಿ ಆಯ್ತು… ಆದರೆ ಜಗಳ ಯಾರದ್ದು…? ನೆರೆಹೊರೆಯವರ ‘ವಿಚಿತ್ರ’ ವಾರ್! ಬೆಂಗಳೂರು: ಸಣ್ಣ ವಿಷಯಕ್ಕೆ ದೊಡ್ಡ ಗಲಾಟೆ ಆಗೋದು ಹೊಸದೇನಲ್ಲ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಘಟನೆ ಕೇಳಿದ್ರೆ ನೀವು ಕೂಡ ನಕ್ಕುಬಿಡ್ತೀರಾ ಅಥವಾ ಆಶ್ಚರ್ಯ ಪಡ್ತೀರಾ ಅನ್ನೋದು ಖಚಿತ!. ನಗರದ …

Read More »

ಗಾಂಜಾ ಸೇವನೆ: ಪದವಿ ವಿದ್ಯಾರ್ಥಿ ವಿರುದ್ಧ ಸುಮೊಟೊ ಪ್ರಕರಣ ದಾಖಲು

ಶಿವಮೊಗ್ಗ: ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಪದವಿ ವಿದ್ಯಾರ್ಥಿಯೊಬ್ಬನ ವಿರುದ್ಧ ವಿನೋಬನಗರ ಪೊಲೀಸ್ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ.ರಾತ್ರಿ ಗಸ್ತು ವೇಳೆ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ಅಸ್ವಸ್ಥನಂತೆ ತೂರಾಡುತ್ತಿರುವುದು ಗಮನಕ್ಕೆ ಬಂದಿದೆ. ವರ್ತನೆ ಶಂಕಾಸ್ಪದವಾಗಿದ್ದರಿಂದ ತಕ್ಷಣ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಗಾಂಜಾ ಸೇವನೆ ಮಾಡಿರುವ ಅನುಮಾನ ವ್ಯಕ್ತವಾಗಿದ್ದರಿಂದ ಯುವಕನನ್ನು ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷಾ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು …

Read More »

ಮಾಣಿ : ಕಲ್ಲಿನಿಂದ ಜಜ್ಜಿ ಹಲ್ಲೆ, ಆರೋಪಿ ಬಂಧನ

ವಿಟ್ಲ: ಒಂದು ವರ್ಷದ ಹಿಂದೆ ಆದ ಗಲಾಟೆಯ ಬಗ್ಗೆ ಮತ್ತೆ ತಕರಾರೆತ್ತಿ ಪರಿಚಯಸ್ಥ ವ್ಯಕ್ತಿ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ ಘಟನೆ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಮಾಣಿ ನಿವಾಸಿ ವಿಶ್ವನಾಥ (28) ಅವರು ಎ.12ರಂದು ಸಂಜೆ ಮನೆಯಲ್ಲಿದ್ದಾಗ, ಆತನ ಪರಿಚಯಸ್ತ ನವೀನ್ ಎಂಬಾತ ಬಂದು, ಒಂದು ವರ್ಷದ ಹಿಂದೆ ನಡೆದಿದ್ದ ಗಲಾಟೆ ಬಗ್ಗೆ ತಕರಾರು ತೆಗೆದು ಕಲ್ಲಿನಿಂದ ಹಲ್ಲೆ ನಡೆಸಿದ್ದು, ಜೀವಬೆದರಿಕೆ ಒಡ್ಡಿದ್ದಾನೆ.ಗಾಯಗೊಂಡ ವಿಶ್ವನಾಥ ಅವರನ್ನು, ನೆರೆಕೆರೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ …

Read More »

ಕಲ್ಬುರ್ಗಿಯಲ್ಲಿ ಘೋರ ಘಟನೆ : ಬಾವಿಯಲ್ಲಿ, ಕೈ ಕಟ್ಟಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆ!

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಂದಿನಿ (16) ಮತ್ತು ಸಂಜನಾ (17) ಎಂಬ ಇಬ್ಬರು ಬಾಲಕಿಯರ ಶವಗಳು ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ಅಘಾತ ವಿಷಯ ಏನೆಂದರೆ, ಇಬ್ಬರ ಕೈಗಳನ್ನು ಹಗ್ಗದಿಂದ ಕಟ್ಟಿದ ಸ್ಥಿತಿಯಲ್ಲಿ ಶವಗಳು ಕಂಡುಬಂದಿರುವುದು ಪ್ರಕರಣಕ್ಕೆ ಗಂಭೀರ ತಿರುವು ನೀಡಿದೆ. ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಸಂಬಂಧ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ …

Read More »

2 ಎಕರೆ ಜಮೀನಿಗೆ ರಕ್ತಪಾತ: ಯಾದಗಿರಿಯಲ್ಲಿ ಯುವಕನ ಭೀಕರ ಹತ್ಯೆ!

ಯಾದಗಿರಿ: ಮಾವಿನಮಟ್ಟಿ ಗ್ರಾಮನಲ್ಲಿ ಕೇವಲ 2 ಎಕರೆ ಜಮೀನಿನ ವಿವಾದವು ಭೀಕರ ಹಿಂಸಾಚಾರಕ್ಕೆ ತಿರುಗಿದೆ. ಮಲ್ಲಪ್ಪ ಮತ್ತು ಹನುಮಂತರಾಯ ಕುಟುಂಬಗಳ ನಡುವೆ ಕಳೆದ 4 ವರ್ಷಗಳಿಂದ ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದ ಜಗಳ ನಡೆಯುತ್ತಿತ್ತು. ಇದೇ ವೈಷಮ್ಯ ಈಗ ಕೊಲೆಯವರೆಗೆ ತಲುಪಿದೆ. ಆರೋಪಿಗಳ ಗುಂಪು 27 ವರ್ಷದ ಪರಮೇಶ್ವರ ಎಂಬ ಯುವಕನ ಮೇಲೆ ತಲ್ವಾರ್ ಮತ್ತು ದೊಣ್ಣೆಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ರೇವಣಸಿದ್ದನಿಗೂ ಗಂಭೀರ …

Read More »

ಮನೆಗೆ ಖನ್ನ ಹಾಕಿ ಚಿನ್ನ-ನಗದು ದೋಚಿದ ಕಳ್ಳರು

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿನ ಕನ್ನಂಪಲ್ಲಿ ಬಡಾವಣೆಯಲ್ಲಿ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ನಡೆದಿದೆ. ಪಶುವೈದ್ಯ ಮನೋಜ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆಯವರು ಹೊರಗಿದ್ದ ವೇಳೆ ಬೀಗ ಒಡೆದು ಕಳ್ಳರು ಒಳನುಗ್ಗಿದ್ದಾರೆ. ಕಳ್ಳರು ಸುಮಾರು 10.80 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡಿದ್ದಾರೆ. ಇದರಲ್ಲಿ 137 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ ಹಾಗೂ 60 ಸಾವಿರ ರೂ. ನಗದು …

Read More »

ಸಂಚಾರಕ್ಕೆ ಅಡ್ಡಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಕುಂಟಿಕಾನ ಮೇಲ್ಸೇತುವೆ ಬಳಿ ಕಾವೂರಿನಿಂದ ಮಂಗಳೂರು ನಗರಕ್ಕೆ ಬರುವ ರಸ್ತೆಯಲ್ಲಿ ವಾಹನವನ್ನು ಅಡ್ಡ ಇಟ್ಟು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಕುಂಜತ್ತಬೈಲ್ ನಿವಾಸಿ ತನ್ಸೀರ್ (25) ಮತ್ತು ಗದಗ ಜಿಲ್ಲೆ ನರಗುಂದ ತಂಡಾಪುರ ಓಣಿಲೆ ಚಂದ್ರ ಶೇಖರ್ (55) ವಿರುದ್ಧ ಪ್ರಕರಣ ದಾಖಲಾಗಿದೆ. ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ ವಿಚಾರದಲ್ಲಿ ಈ ಇಬ್ಬರ ನಡುವೆ ಗಲಾಟೆಯಾಗಿದೆ. ಪರಿಣಾಮ ಇಬ್ಬರೂ …

Read More »

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಘೋರ ದುರಂತ : ಕಾರು ಹರಿದು 7 ವರ್ಷದ ಬಾಲಕಿ ಸಾವು, 9 ಜನರು ಗಂಭೀರ!

ಚಿಕ್ಕಮಗಳೂರು: ಜಿಲ್ಲೆಯ ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸದದ್ದು, ಮೆರವಣಿಗೆಯ ಮೇಲೆ ಕಾರು ಹರಿದ ಪರಿಣಾಮ 7 ವರ್ಷದ ಸಾನ್ವಿ ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿದ್ದ ಜನರ ಮೇಲೆ ನುಗ್ಗಿದೆ. ಈ ದುರ್ಘಟನೆಯಲ್ಲಿ ಬಾಲಕಿ …

Read More »

ಅಂತರ ಜಿಲ್ಲಾ ಕಳ್ಳನ ಬಂಧಿಸಿದ ಅಣ್ಣಿಗೇರಿ ಪೋಲಿಸರು

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನವಾಗಿದ್ದ ಸುಮಾರು ₹6 ಲಕ್ಷ ಮೌಲ್ಯದ ಒಟ್ಟು 14 ಮೋಟರ್ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಕಳ್ಳತನ ಪ್ರಕರಣಗಳಿಗೆ ಸಂಬಂಧ ಇರಬಹುದೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಣ್ಣಿಗೇರಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪ್ರಶಂಸಿಸಿದ್ದಾರೆ.

Read More »