Breaking News

Breaking News

ಚಿನ್ನಾಭರಣ, ಹಣ ದರೋಡೆ ಆರೋಪ; 17 ವರ್ಷದ ಬಾಲಕ ಸೇರಿ ಮೂವರ ಬಂಧನ

ಕಾಸರಗೋಡು: ಲಾಡ್ಜ್ ಕೊಠಡಿಯಲ್ಲಿ ತಂಗಿದ್ದ ಯುವಕ ಮತ್ತು ಆತನ ಗೆಳತಿಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿದ ಆರೋಪದ ಮೇಲೆ 17 ವರ್ಷದ ಬಾಲಕ ಸೇರಿದಂತೆ ಮೂವರನ್ನು ಕಾಸರಗೋಡು ಟೌನ್ ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ಉದೈಫ್ (22) ಮತ್ತು ಆತನ ಗೆಳತಿ ಲಾಡ್ಜ್‌ನಲ್ಲಿ ತಂಗಿದ್ದಾಗ ಆರೋಪಿಗಳು ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿ, ಯುವತಿ ಧರಿಸಿದ್ದ ಕಿವಿಯೋಲೆಗಳನ್ನು ಕಸಿದುಕೊಂಡಿದ್ದಾರೆ. ಅಲ್ಲದೆ, ಎಟಿಎಂ ಕಾರ್ಡ್ ಕಸಿದುಕೊಂಡು ₹10 ಸಾವಿರ …

Read More »

ಅನೈತಿಕ ಸಂಬಂಧ ಶಂಕೆ – ಗೋಡಂಬಿ ತೋಟದಲ್ಲಿ ಅಟ್ಟಾಡಿಸಿ ಪತ್ನಿ ಹತ್ಯೆ!

ಚಿಕ್ಕಬಳ್ಳಾಪುರ: ಸಂಬಂಧಿಕರ ತಿಥಿ ಕಾರ್ಯಕ್ಕೆಂದು ಪತ್ನಿಯ ತವರು ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಗೋಡಂಬಿ ತೋಟಕ್ಕೆ ಕರೆದೊಯ್ದು ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಮೃತಳನ್ನು ಪದ್ಮಾ ಎಂದು ಗುರುತಿಸಲಾಗಿದ್ದು, ಆರೋಪಿ ಚಂದ್ರಶೇಖರ್ ಕೊಲೆ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. 14 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಮೂವರು ಮಕ್ಕಳಿದ್ದಾರೆ. ಚಂದ್ರಶೇಖರ್‌ಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದ್ದು, ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ …

Read More »

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಪತ್ನಿಗೆ ಚಿಕಿತ್ಸೆ ಕೊಡಿಸಿ ಬೈಕ್‌ನಲ್ಲಿ ಮನೆಗೆ ತೆರಳಲು ನಿಂತಿದ್ದ ವೇಳೆ ಪತ್ನಿಯ ಎದುರಲ್ಲೇ ಗುಂಡಿನ ದಾಳಿ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ಡಿಜೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯಾಸೀನ್ ಭಾಗಿಯಾಗಿದ್ದ. ಇದೇ ದ್ವೇಷದಿಂದ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯಾಸೀನ್ ಇನ್‌ಸ್ಟಾಗ್ರಾಂನಲ್ಲಿ ಭಯ ಹುಟ್ಟಿಸುವ ವಿಡಿಯೋಗಳನ್ನು …

Read More »

ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ; ಪತ್ನಿ ಮೇಲಿನ ದ್ವೇಷಕ್ಕೆ ಇಡೀ ಕುಟುಂಬವನ್ನೇ ಮುಗಿಸಿದ ಪತಿ!

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕ ಇಂದುಶೇಖರ್ ಎಂಬಾತ ಪತ್ನಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಎರಡು ದಿನಗಳ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಸುನೀತಾ, ಅತ್ತೆ ರೂಪವತಿ, ಇಬ್ಬರು ಬಾಮೈದರು, ಇಬ್ಬರು ಸೊಸೆಯಂದಿರು ಹಾಗೂ ಏಳು ವರ್ಷದ ಬಾಲಕ ಹತ್ಯೆಯಾದವರು. ಪತ್ನಿ ತವರು ಮನೆಯವರೊಂದಿಗೆ ಸಂಬಂಧ ಮುಂದುವರಿಸಿದ್ದಕ್ಕೆ ಕೋಪಗೊಂಡಿದ್ದ ಆರೋಪಿ, …

Read More »

ಬೆಳಗಾವಿ | ₹2.39 ಕೋಟಿ ದರೋಡೆ ಪ್ರಕರಣ: 7 ಆರೋಪಿಗಳ ಬಂಧನ

ಬೆಳಗಾವಿ: ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ₹2.68 ಕೋಟಿ ಸಂಗ್ರಹಿಸಿ, ಬಳಿಕ ದರೋಡೆ ಮಾಡಿದ್ದ ಪ್ರಕರಣವನ್ನು ಮೂಡಲಗಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿ ₹2.39 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಪೊಲೀಸ್ ಕಾನ್‌ಸ್ಟೆಬಲ್ ಚಿದಾನಂದ ಕುರಬೆಟ್ ಈ ಕೃತ್ಯದ ಕಿಂಗ್‌ಪಿನ್ ಎನ್ನಲಾಗಿದೆ. ₹1 ಲಕ್ಷಕ್ಕೆ ₹1.30 ಲಕ್ಷ ನೀಡುವುದಾಗಿ ನಂಬಿಸಿ ಐವರಿಂದ ಒಟ್ಟು ₹2.68 ಕೋಟಿ ಸಂಗ್ರಹಿಸಿದ್ದ. ಅಕ್ಟೋಬರ್ 30ರಂದು ಹಣ …

Read More »

ಡೇಟಿಂಗ್ ಆಯಪ್ ಪರಿಚಯ; ನಿರ್ಜನ ಪ್ರದೇಶದಲ್ಲಿ ಹಲ್ಲೆ, ದರೋಡೆ – ನಾಲ್ವರ ಬಂಧನ

ಬೆಂಗಳೂರು: ಡೇಟಿಂಗ್ ಆಯಪ್ ಮೂಲಕ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಭೇಟಿಯಾಗುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಹಣ ದರೋಡೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಿಷಿರಾಜ್ ಸಿಂಗ್ (18), ವಂಶಿ (21), ವೆಂಕಟೇಶ್ (25) ಹಾಗೂ ದರ್ಶನ್ (24) ಬಂಧಿತರು. ಡೇಟಿಂಗ್ ಆಯಪ್ ಮೂಲಕ ಸಂತ್ರಸ್ತನಿಗೆ ಪರಿಚಯವಾಗಿದ್ದ ಆರೋಪಿ, ಭೇಟಿಯಾಗುವ ನೆಪದಲ್ಲಿ ನಿರ್ಜನ …

Read More »

ಮಠದ ವಿಗ್ರಹ ಮಾರಾಟ ಆರೋಪ: FIR ದಾಖಲಾಗುತ್ತಿದ್ದಂತೆ ಬ್ರಹ್ಮಾವರದ ಬಾಳೆಕುದ್ರು ಮಠಾಧೀಶರು ನಾಪತ್ತೆ

ಉಡುಪಿ: ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದ ಮಠಾಧೀಶ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮಠದಲ್ಲಿದ್ದ ಪುರಾತನ ವಿಗ್ರಹಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ ಆರೋಪ ಸ್ವಾಮೀಜಿ ವಿರುದ್ಧ ಕೇಳಿಬಂದಿದೆ. ಮಠದಲ್ಲಿದ್ದ ನರಸಿಂಹ, ಗಣಪತಿ, ಮಹಿಷಮರ್ದಿನಿ ಸೇರಿದಂತೆ ಆರು ವಿಗ್ರಹಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಶಿಷ್ಯ ಜಗದೀಶ್ ಐತಾಳ್ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಗ್ರಹಗಳು ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿರುವುದು ಕಂಡುಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ …

Read More »

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹರೀಶ್ ಟಿ. ಅಲಿಯಾಸ್ ಹರಿ ಬಂಧಿತ ಆರೋಪಿ. ಅಕ್ಟೋಬರ್ 29ರಂದು ಕೃಷ್ಣ ಜ್ಯುವೆಲ್ಲರ್ಸ್‌ಗೆ ಬಂದಿದ್ದ ಈತ, ಎರಡು ಚಿನ್ನದ ಸರ ಹಾಗೂ ಏಳು ಉಂಗುರಗಳನ್ನು ಧರಿಸಿಕೊಂಡು ಕನ್ನಡಿಯಲ್ಲಿ ನೋಡಿಕೊಳ್ಳುವಂತೆ ನಟಿಸಿ, ಮಾಲೀಕರ ಗಮನ ಬೇರೆಡೆ ಸೆಳೆದು ಪರಾರಿಯಾಗಿದ್ದ. ದೂರು …

Read More »

ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ದ್ವೇಷ – ಪುರೋಹಿತನನ್ನೇ ಕೊಚ್ಚಿ ಕೊಂದ ದುಷ್ಕರ್ಮಿ!

ಬೆಳಗಾವಿ: ಅಂತರ್ಜಾತಿ ವಿವಾಹ ಮಾಡಿಸಿಕೊಟ್ಟಿದ್ದಕ್ಕೆ ಜ್ಯೋತಿಷಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಾನಕಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮಂದಾರ್ ಅಜಿತ್ ರಾಂಡೆ (35) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾಸೋ ಅಲಿಯಾಸ್ ದೀಪಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮಗಳು ಅನುಜಾ, ಕಳೆದ ಜನವರಿಯಲ್ಲಿ ಓಂಕಾರ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ಮದುವೆಯನ್ನು ಜ್ಯೋತಿಷಿ ಮಂದಾರ್ ಮಾಡಿಸಿಕೊಟ್ಟಿದ್ದರಿಂದ ಆರೋಪಿ ದ್ವೇಷ ಬೆಳೆಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಅಕ್ಟೋಬರ್ 31ರಂದು ಮತ್ತೊಂದು …

Read More »

ಹೂವಿನ ಬ್ಯಾಗ್ ಇಡುವ ವಿಚಾರಕ್ಕೆ ಶುರುವಾಯ್ತು ಕಿರಿಕ್ – ಹೊಸಕೋಟೆ ಮಾರ್ಕೆಟ್‌ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ!

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ರಾಘವೇಂದ್ರ ಸರ್ಕಲ್ ಬಳಿಯ ಹೂವಿನ ಮಾರುಕಟ್ಟೆಯಲ್ಲಿ ಸಣ್ಣ ವಿಚಾರಕ್ಕೆ ಎರಡು ಗ್ರಾಮಗಳ ಯುವಕರ ನಡುವೆ ಭೀಕರ ಮಾರಾಮಾರಿ ನಡೆದಿದೆ. ಹೂವಿನ ಬ್ಯಾಗ್ ಇಡುವ ವಿಚಾರವಾಗಿ ವೆಂಕಟಾಪುರ ಮತ್ತು ಕುಂಬಳಹಳ್ಳಿ ಗ್ರಾಮದ ಯುವಕರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ನೂಕಾಟ, ತಳ್ಳಾಟ ಹಾಗೂ ಹಲ್ಲೆಗೆ ತಿರುಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ …

Read More »