BigTv News
November 5, 2026
Breaking News
ಬೆಳಗಾವಿ: ಒಂದು ಕೋಟಿ ರೂ. ನೀಡಿದರೆ ಬ್ಯಾಂಕ್ ಖಾತೆಗೆ 1.30 ಕೋಟಿ ರೂ. ಜಮೆ ಮಾಡುವುದಾಗಿ ಆಮಿಷವೊಡ್ಡಿ ₹2.68 ಕೋಟಿ ದರೋಡೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮಾಜಿ ಗನ್‌ಮ್ಯಾನ್ ಕೂಡ ಇದ್ದಾನೆ ಎನ್ನಲಾಗಿದೆ. ಐವರಿಂದ ಒಟ್ಟು ₹2.68 ಕೋಟಿ ಸಂಗ್ರಹಿಸಿದ್ದ ಆರೋಪಿಗಳು, ಅ. 30ರಂದು ಮೂಡಲಗಿಯಲ್ಲಿ ಹಣ ಎಣಿಸುವ ನೆಪದಲ್ಲಿ ಶೆಡ್‌ಗೆ ಕರೆಸಿಕೊಂಡಿದ್ದರು. ಬಳಿಕ ಕಣ್ಣಿಗೆ …
Read More »
BigTv News
November 5, 2026
Breaking News
ಬೆಂಗಳೂರು: ಮಗಳೊಂದಿಗೆ ಏಕಾಂತದಲ್ಲಿದ್ದ ಕೆಲಸಗಾರನನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಗಿಲು ನಿವಾಸಿ ಕಿರಣ್ (23) ಕೊಲೆಯಾದ ಯುವಕ. ಆರೋಪಿ ತಂದೆ ಆನಂದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ್ ಬಳಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ಆತನ ಮಗಳ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಇಬ್ಬರೂ ಮನೆಯಲ್ಲಿದ್ದಾಗ ದಿಢೀರನೆ ಬಂದ ಆನಂದ್, ಮಗಳನ್ನು ಸಂಬಂಧಿಕರ ಮನೆಗೆ ಕಳುಹಿಸಿ ಕಿರಣ್‌ನನ್ನು ಕೊಠಡಿಯಲ್ಲಿ …
Read More »
BigTv News
November 5, 2026
Breaking News
ನಾಯಕನಹಟ್ಟಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ತೆಲಂಗಾಣದ ಬೋಡಿಗ ಶ್ರೀನಿವಾಸ್ ಎಂಬುವವರಿಗೆ ₹10 ಲಕ್ಷ ವಂಚಿಸಿದ ಆರೋಪದ ಮೇಲೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಸವನಹಳ್ಳಿ ಗ್ರಾಮದ ಡಿ. ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೆ. 26ರಂದು ಚಿನ್ನಹಗರಿ ಹಳ್ಳದ ಬಳಿ ಶ್ರೀನಿವಾಸ್ ಅವರಿಗೆ ಪರಿಚಯವಾಗಿದ್ದ ಆರೋಪಿ, ತನ್ನ ಹೆಸರು ತಿಪ್ಪೇಸ್ವಾಮಿ ಎಂದು ಸುಳ್ಳು ಹೇಳಿ 250 ಗ್ರಾಂ ಚಿನ್ನ ನೀಡಿ ₹10 ಲಕ್ಷ ಪಡೆದು ಪರಾರಿಯಾಗಿದ್ದ. ಈ …
Read More »
BigTv News
November 5, 2026
Breaking News
ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ ಪರಿಚಯವಾದ ಆರೋಪಿ, ಬಳಿಕ ಯುವತಿಯ ಮೊಬೈಲ್ ಸಂಖ್ಯೆ ಪಡೆದು ಮಡಿವಾಳದ ಹೋಟೆಲ್‌ಗೆ ಆಹ್ವಾನಿಸಿದ್ದಾನೆ. ಹೋಟೆಲ್‌ನಲ್ಲಿ ಇಬ್ಬರೂ ಮದ್ಯ ಸೇವಿಸಿದ್ದು, ಯುವತಿಗೆ ನಶೆ ಬರುವಂತೆ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಳಿಕ ಯುವತಿ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ …
Read More »
BigTv News
November 4, 2026
Breaking News
ಬೆಂಗಳೂರು: ಬೈಕ್‌ಗೆ ಕಾರು ತಗುಲಿದ ವಿಚಾರಕ್ಕೆ ಮಹಿಳೆಯೊಂದಿಗೆ ಗಲಾಟೆ ನಡೆಸಿ, ಹೆಲ್ಮೆಟ್‌ನಿಂದ ಕಾರು ಜಖಂಗೊಳಿಸಿದ ಮೂವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ (20), ಇಸ್ಮಾಯಿಲ್ (21) ಹಾಗೂ ಶಿವಕುಮಾರ್ (22) ಬಂಧಿತರು. ಅ.18ರಂದು ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಮಹಿಳೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಟ್ರಿಪಲ್ ರೈಡಿಂಗ್ ಮಾಡುತ್ತಿದ್ದ ಆರೋಪಿಗಳ ಬೈಕ್‌ಗೆ ಕಾರು ತಗುಲಿದೆ. ಇದರಿಂದ ಕೋಪಗೊಂಡ ಆರೋಪಿಗಳು ಮಹಿಳೆಯೊಂದಿಗೆ ಜಗಳವಾಡಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆಲ್ಮೆಟ್‌ನಿಂದ …
Read More »
BigTv News
November 4, 2026
Breaking News
ಬೆಂಗಳೂರು: ಮೈಸೂರಿನಲ್ಲಿ ಓದುತ್ತಿದ್ದ ಯುವತಿ, ತನ್ನ ತಂದೆಯ ಬಳಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಕಿರಣ್ (24) ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ರಜೆಗೆ ಮನೆಗೆ ಬಂದಿದ್ದ ಯುವತಿ, ತಂದೆ-ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಿರಣ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ತಮಿಳುನಾಡಿಗೆ ಹೋಗುವುದಾಗಿ ಹೇಳಿ ಪತ್ನಿಯೊಂದಿಗೆ ಹೊರಟಿದ್ದ ತಂದೆ ಆನಂದ್ ಕೆಲವೇ ಗಂಟೆಗಳಲ್ಲಿ ವಾಪಸ್ ಬಂದಾಗ ಇಬ್ಬರೂ ಒಂದೇ ಕೊಠಡಿಯಲ್ಲಿರುವುದನ್ನು ಕಂಡು ಆಕ್ರೋಶಗೊಂಡಿದ್ದಾನೆ. ಮಗಳನ್ನು ಸಂಬಂಧಿಕರ ಮನೆಗೆ ಕಳುಹಿಸಿ, ಕಿರಣ್‌ಗೆ ಬ್ಯಾಟ್ ಹಾಗೂ …
Read More »
BigTv News
November 4, 2026
Breaking News
ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಕಳ್ಳಬೇಟೆ ನಿಯಂತ್ರಣ ಕೇಂದ್ರದ ಬಳಿಯ ಸೇತುವೆಯಲ್ಲಿ 40–50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಪತ್ತೆಯಾದ ರೀತಿ ಕೊಲೆ ಶಂಕೆಗೆ ಕಾರಣವಾಗಿದ್ದು, ಮಳೆ ನೀರಿನಲ್ಲಿ ಕೊಚ್ಚಿ ಬಂದಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಶವವನ್ನು ಮಂಗಳೂರು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ …
Read More »
BigTv News
November 4, 2026
Breaking News
ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅ.31ರಂದು ಅಂಗಡಿಗೆ ಬಂದ ಆರೋಪಿ ಯುವತಿಯ ಕೈಗಳಿಗೆ ಫೆವಿಕ್ವಿಕ್ ಅಂಟಿಸಿ, ಚಾಕು ತೋರಿಸಿ ಬೆದರಿಸಿ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪತ್ನಿಯ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದುದರಿಂದ ಕೃತ್ಯ ಎಸಗಿರುವುದಾಗಿ …
Read More »
BigTv News
November 4, 2026
Breaking News
ಬೆಂಗಳೂರು: ಮಗಳೊಂದಿಗೆ ಮನೆಯ ಕೊಠಡಿಯಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಕೆಲಸಗಾರನನ್ನು ಪೈಪ್ ಹಾಗೂ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ 45 ವರ್ಷದ ವ್ಯಾಪಾರಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಕಿರಣ್ (24) ಕೊಲೆಯಾದ ಯುವಕ. ವ್ಯಾಪಾರಿಯ ಮಗಳು ಹಾಗೂ ಕಿರಣ್ ನಡುವೆ ಸ್ನೇಹ ಬೆಳೆದಿತ್ತು. ಮಂಗಳವಾರ ಮನೆಗೆ ವಾಪಸ್ ಬಂದ ತಂದೆ ಇಬ್ಬರನ್ನೂ ಕಂಡು ಆಕ್ರೋಶಗೊಂಡು ಕಿರಣ್‌ನನ್ನು ಮನೆಯಲ್ಲೇ ಕೂಡಿಹಾಕಿ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ …
Read More »
BigTv News
November 4, 2026
Breaking News
ಉಡುಪಿ: ಮಣಿಪಾಲದಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ಯುವಕರ ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲೇ ಭೀಕರ ಹೊಡೆದಾಟ ನಡೆದಿದೆ. ಮೊದಲು ಇಬ್ಬರ ನಡುವೆ ಆರಂಭವಾದ ಜಗಳ ಬಳಿಕ ಎರಡು ಗುಂಪುಗಳ ಮಾರಾಮಾರಿಗೆ ತಿರುಗಿದೆ. ಜನಸಂಚಾರ ಹೆಚ್ಚಿರುವ ರಸ್ತೆಯಲ್ಲೇ ಯುವಕರು ಹೊಡೆದಾಡಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವೆಂದರೆ, ಮಣಿಪಾಲ ಪೊಲೀಸ್ ಠಾಣೆಯಿಂದ ಕೆಲವೇ ಅಂತರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಬ್, ಬಾರ್‌ಗಳ ಮುಂದೆ ಪದೇಪದೇ ಗಲಾಟೆಗಳು ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ …
Read More »