Breaking News

Breaking News

ದಾವಣಗೆರೆ ಮೂಲದ ಯುವಕನ ಕೊಲೆ ಪ್ರಕರಣ: ಆರೋಪಿಯ ಬಂಧನ

ಕಾಸರಗೋಡು: ಹಣದ ವ್ಯವಹಾರದ ವಿಚಾರಕ್ಕೆ ನಡೆದ ಜಗಳದಲ್ಲಿ ಸ್ನೇಹಿತನನ್ನೇ ಇರಿದು ಕೊಲೆ ಮಾಡಿದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ನಿವಾಸಿ ರಾಮ್ ನಾಯಕ್ ಅಲಿಯಾಸ್ ರಮೇಶ್ (31) ಬಂಧಿತ ಆರೋಪಿ. ಹೊಸಪೇಟೆ ಲಿಂಗನಾಯಕನಹಳ್ಳಿ ನಿವಾಸಿ ರಮೇಶ್ (38) ಅಂಗಡಿಪದವಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸೆ.4ರಂದು ಸಂಜೆ ಸ್ನೇಹಿತರಾದ ಇಬ್ಬರೂ ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಹಣದ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ರಮೇಶ್‌ಗೆ ಇರಿದು ಕೊಲೆ …

Read More »

ಬೆಳಗಾವಿಯಲ್ಲಿ ವ್ಯಾಪಕ ಗಾಂಜಾ ದಂಧೆ – ಶಾಲಾ, ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್‌!

ಬೆಳಗಾವಿ: ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಯುವಕರನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಕ್ಷಯಕುಮಾರ ಅಂಕಲಗಿ (20), ಆದರ್ಶ ಹಿರೇಮಠ (25) ಹಾಗೂ ಮಣಿಕಂಠ ಉಗರಖೋಡಾ (20) ಬಂಧಿತ ಆರೋಪಿಗಳು. ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ಗಾಂಜಾ, ಬೈಕ್ ಹಾಗೂ ಮೊಬೈಲ್ ಸೇರಿದಂತೆ ಒಟ್ಟು ₹1.80 …

Read More »

ಪುನುಗು ಬೆಕ್ಕಿನ ಅಕ್ರಮ ಸಾಗಣೆ – ಮೂವರ ಬಂಧನ!

ತುಮಕೂರು: ಕಾರಿನಲ್ಲಿ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ತಿಪಟೂರು ಅರಣ್ಯ ಇಲಾಖೆ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಕೆ.ಬಿ. ಕ್ರಾಸ್ ಬಳಿಯ ಹಾಲುಗೋಣ ಗ್ರಾಮದ ಸಮೀಪ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು, ಪುನುಗು ಬೆಕ್ಕನ್ನು ರಕ್ಷಿಸಿದ್ದಾರೆ. ಬಂಧಿತರನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಅಶೋಕ್ (55), ರವಿ ಕುಮಾರ್ (40) ಹಾಗೂ ಚಿಕ್ಕನಾಯಕನಹಳ್ಳಿಯ ಪರೇಶ್ ಸ್ವಾಮಿ (52) ಎಂದು ಗುರುತಿಸಲಾಗಿದೆ. ವನ್ಯಜೀವಿಗಳ ಬೇಟೆ ನಡೆಯುತ್ತಿದೆ …

Read More »

ಚಲಿಸುತ್ತಿದ್ದ ಇವಿ ಎಲೆಕ್ಟ್ರಿಕ್ ಬಸ್‌ನಲ್ಲಿ ಭಾರಿ ಬೆಂಕಿ, ಸಂಪೂರ್ಣ ಭಸ್ಮ

ಹುಣಸೂರು: ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್ ಬಸ್‌ಗೆ ಹುಣಸೂರು-ಮೈಸೂರು ಹೆದ್ದಾರಿಯ ಮಧುಗಿರಿ ಕೊಪ್ಪಲು ಕ್ರಾಸ್ ಬಳಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್‌ನ ಸಸ್ಪೆನ್ಷನ್ ಬಲೂನ್ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಹಾಗೂ ನಿರ್ವಾಹಕಿಯ ಸಮಯಪ್ರಜ್ಞೆಯಿಂದ 16 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಾಲಕ ರಾಮಚಂದ್ರ ಹಾಗೂ ನಿರ್ವಾಹಕಿ ಸುನಂದಮ್ಮ ಕೂಡಲೇ ಬಸ್‌ನ್ನು ರಸ್ತೆ ಬದಿಗೆ ನಿಲ್ಲಿಸಿ, ಪ್ರಯಾಣಿಕರನ್ನು ಲಗೇಜ್ ಸಮೇತ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಮಾಹಿತಿ …

Read More »

ಗೃಹಸಚಿವರ ತವರು ಜಿಲ್ಲೆ ಕಲಬುರಗಿಯಲ್ಲೇ ಖೋಟಾ ನೋಟು ಜಾಲ ಪತ್ತೆ! ಪೊಲೀಸ್ ದಾಳಿ ವೇಳೆ ಬಾಡಿಗೆ ಮನೆಯಲ್ಲಿ ಕಂಡಿದ್ದೇನು?

ಕಲಬುರಗಿ: ಖೋಟಾ ನೋಟು ತಯಾರಿಸಿ ಚಲಾವಣೆಗೆ ತರಲು ಸಂಚು ರೂಪಿಸಿದ್ದ ಜಾಲವನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ಕಲರ್ ಪ್ರಿಂಟರ್ ಬಳಸಿ ನಕಲಿ ನೋಟು ಮುದ್ರಿಸುತ್ತಿದ್ದ ದಶರಥ್ ರಾಠೋಡ್ ಹಾಗೂ ಸಿದ್ರಾಮ್ ಎಂಬುವರನ್ನು ಬಂಧಿಸಲಾಗಿದ್ದು, ₹500 ಮುಖಬೆಲೆಯ 28 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಓರ್ವ ಆರೋಪಿ ಅಶ್ವಿನ್ ಕುಮಾರ್ ಪರಾರಿಯಾಗಿದ್ದಾನೆ. ಸಾಲ ತೀರಿಸಲು ಆರೋಪಿಗಳು ಖೋಟಾ ನೋಟು ತಯಾರಿಸುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಕಳೆದ …

Read More »

ಕಮಿಷನರ್ ಖದರ್‌ಗೆ ಕ್ರಿಮಿನಲ್‌ಗಳಿಗೆ ನಡುಕ..! ಸಾಹೇಬರೇ ಫುಲ್ ಅಲರ್ಟ್ — ಖಾಕಿ ಮೇಲೆ ಕಲೆ ಬೀಳದಂತೆ ಕಠಿಣ ಕಾವಲು!

ರೌಡಿಗಳಿಂದ ಅಂತರ..! ಡ್ರಗ್ಸ್ ಪೆಡ್ಲರ್‌ಗಳಿಗೆ ನೋ ಎಂಟ್ರಿ — ಕ್ರಿಮಿನಲ್‌ಗಳಿಂದ ಖಾಕಿ ದೂರವಿದ್ದರೆ ಪೊಲೀಸ್ ಇಲಾಖೆ ಇನ್ನಷ್ಟು ಕ್ಲೀನ್..! ಖಾಕಿ ಕ್ಲೀನ್‌.. ಕಮಿಷನರ್ ಖಡಕ್..! ಬೋರಸೆ ಸಾಹೇಬರ ಹೆಸರಲ್ಲಿ ಯಾರಿಗೂ ‘ಪವರ್’ ಆಟ ಬೇಡ — ಕ್ರಿಮಿನಲ್‌ಗಳಿಗೆ ನೋ ಎಂಟ್ರಿ.. ಕಮಿಷನರ್ ಖದರ್ ಶುರು..! ಸಾಹೇಬರೇ ಫುಲ್ ಅಲರ್ಟ್..! ಹುಬ್ಬಳ್ಳಿ-ಧಾರವಾಡ: ಹೊಸ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಎಂಟ್ರಿಯಾಗುತ್ತಿದ್ದಂತೆ ಖಾಕಿ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ..! ಅಧಿಕಾರ ಸ್ವೀಕರಿಸಿದ ದಿನದಿಂದಲೇ …

Read More »

ಗೋಕುಲ ರಸ್ತೆಯ ಹೋಟೆಲ್‌ಗಳಿಗೆ ಖಾಕಿ ಶಾಕ್‌: ವೀಕೆಂಡ್‌ ಪಾರ್ಟಿ ಹೆಸರಲ್ಲಿ ತಡರಾತ್ರಿ ಆಟಕ್ಕೆ ಬ್ರೇಕ್‌!

ಗೋಕುಲ ರಸ್ತೆಯ ಹೋಟೆಲ್‌ಗಳಿಗೆ ಖಾಕಿ ಶಾಕ್..! ವೀಕೆಂಡ್ ಪಾರ್ಟಿ ಹೆಸರಲ್ಲಿ ತಡರಾತ್ರಿ ಆಟ? — ದಿಢೀರ್ ದಾಳಿಗೆ ಕೆಲವರು ಎಸ್ಕೇಪ್,! ನೂತನ ಕಮಿಷನರ್ ಎಫೆಕ್ಟ್‌..! ಹೋಟೆಲ್‌ಗಳ ಮೇಲೆ ಪೊಲೀಸರ ಖಡಕ್‌ ಆಪರೇಷನ್‌ ಐಸ್ ಕ್ಯೂಬ್‌, ಬಾಂಬೆ 63 ಮೇಲೆ ದಾಳಿ — ತಡರಾತ್ರಿ ಚಟುವಟಿಕೆಗಳಿಗೆ ಬ್ರೇಕ್‌? ಹುಬ್ಬಳ್ಳಿ: ನೂತನ ಪೊಲೀಸ್‌ ಕಮಿಷನರ್‌ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಹುಬ್ಬಳ್ಳಿ ಪೊಲೀಸರು ಫುಲ್‌ ಆ್ಯಕ್ಟಿವ್‌ ಆಗಿದ್ದಾರೆ. ನಗರದ ಗೋಕುಲ ರಸ್ತೆಯ ಪ್ರತಿಷ್ಠಿತ ಹೋಟೆಲ್‌ಗಳ …

Read More »

ಬೆಂಗಳೂರಲ್ಲಿ ಭಯಾನಕ ಹಾರರ್ : ಮಧ್ಯರಸ್ತೆಯಲ್ಲಿ ಗಂಡನ ಎದುರಲ್ಲೇ ನಡೀತು ಲೈಂಗಿಕ ದೌರ್ಜನ್ಯ

ಬೆಂಗಳೂರಿನ ಐಟಿಸಿ ಫ್ಲೈಓವರ್ ಮೇಲೆ ಮುಂಜಾನೆ ದಂಪತಿಯನ್ನು ಅಡ್ಡಗಟ್ಟಿದ ಐದಾರು ಮಂದಿ ದುಷ್ಕರ್ಮಿಗಳು ಚಾಕು ತೋರಿಸಿ ಹಲ್ಲೆ ನಡೆಸಿ, ಮೊಬೈಲ್, ಬ್ರಾಸ್‌ಲೆಟ್ ಹಾಗೂ ಪರ್ಸ್ ದೋಚಿದ್ದಾರೆ. ಸ್ನೇಹಿತರ ಮನೆಗೆ ತೆರಳಿ ಆಟೋದಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ದರೋಡೆ ಬಳಿಕ ಮಹಿಳೆಯನ್ನು ಆಟೋದಿಂದ ಹೊರಗೆಳೆದು, ಆಕೆಯ ಪತಿಯ ಎದುರಲ್ಲೇ ಲೈಂಗಿಕ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ. ಮಹಿಳೆ ಕಿರುಚಾಡುತ್ತಿದ್ದಂತೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಆಘಾತಕ್ಕೊಳಗಾದ ದಂಪತಿ ಪುಲಕೇಶಿ ನಗರ ಪೊಲೀಸ್ …

Read More »

12 ಲಕ್ಷ ಸಾಲಕ್ಕೆ ಕೋಟಿ ಮೌಲ್ಯದ ಆಸ್ತಿ ಕಬಳಿಸಿದ ಮೀಟರ್ ಬಡ್ಡಿ ದಂಧೆಕೋರರು!- ತಾಯಿ-ಮಗಳ ಕಣ್ಣೀರು

ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರು ₹12 ಲಕ್ಷ ಸಾಲ ನೀಡುವ ನೆಪದಲ್ಲಿ ₹1.5 ಕೋಟಿ ಮೌಲ್ಯದ 12 ಪ್ಲಾಟ್‌ಗಳನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುರೇಖಾ ಕಬಾಡಿ ಹಾಗೂ ಮಗಳು ಅಂಬಿಕಾ ಕಬಾಡಿ ಅವರು ತಲಾ ₹6 ಲಕ್ಷ ಸಾಲ ಪಡೆದಿದ್ದು, ₹7 ಲಕ್ಷಕ್ಕೂ ಹೆಚ್ಚು ಬಡ್ಡಿ ಪಾವತಿಸಿದ್ದಾರೆ ಎನ್ನಲಾಗಿದೆ. ಹಾಫ್‌ ರಿಜಿಸ್ಟ್ರೇಷನ್ ನೆಪದಲ್ಲಿ ಆಸ್ತಿಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದು, ನಕಲಿ ದಾಖಲೆಗಳ ಮೂಲಕ ₹4ರಿಂದ ₹5 ಕೋಟಿ …

Read More »

ಮ್ಯಾಟ್ರಿಮೋನಿಯಲ್​​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ವೈದ್ಯೆಗೆ ಪಂಗನಾಮ: ಪೀಕಿದ್ದು 2.2 ಲಕ್ಷಕ್ಕೂ ಅಧಿಕ ಹಣ

ಬೆಂಗಳೂರು: ಮ್ಯಾಟ್ರಿಮೋನಿಯಲ್‌ ಪೋರ್ಟಲ್‌ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಬೆಂಗಳೂರಿನ ವೈದ್ಯೆಗೆ ಮದುವೆಯಾಗುವುದಾಗಿ ನಂಬಿಸಿ ಬರೋಬ್ಬರಿ ₹22.2 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ. ತಾನು ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿರುವ ನೇತ್ರ ತಜ್ಞ ಡಾ. ಗಣೇಶ್ ಬರ್ಮನ್ ಎಂದು ಪರಿಚಯಿಸಿಕೊಂಡಿದ್ದ ಆರೋಪಿ, ಭಾರತಕ್ಕೆ ಮರಳಿ ದೆಹಲಿಯಲ್ಲಿ ಆಸ್ಪತ್ರೆ ಆರಂಭಿಸುವುದಾಗಿ ವೈದ್ಯೆಗೆ ತಿಳಿಸಿದ್ದ. ಬಳಿಕ ತನ್ನ ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿ, ಆಸ್ಪತ್ರೆ ಯೋಜನೆಗಾಗಿ ವಿವಿಧ ಏಜೆಂಟ್‌ಗಳ ಖಾತೆಗೆ …

Read More »