Breaking News

Breaking News

ಬೈಕ್‌ನಲ್ಲಿ ಬೆನ್ನಟ್ಟಿದ ಭಜರಂಗದಳ ಕಾರ್ಯಕರ್ತರು; ಕೊನೆಗೆ ಸಿಕ್ಕಿಬಿತ್ತು 8 ಟನ್ ಗೋಮಾಂಸ ತುಂಬಿದ ಲಾರಿ!

ವಿಜಯಪುರದಿಂದ ಇಂಡಿ ಮಾರ್ಗವಾಗಿ ತೆಲಂಗಾಣಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಗೋಮಾಂಸವನ್ನು ಭಜರಂಗದಳ ಕಾರ್ಯಕರ್ತರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ತಡೆದಿದ್ದಾರೆ. ಹಲವು ಕಿಲೋಮೀಟರ್‌ಗಳವರೆಗೆ ಬೈಕ್‌ನಲ್ಲಿ ಲಾರಿಯನ್ನು ಚೇಸ್ ಮಾಡಿ ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಾರಿ ಪರಿಶೀಲಿಸಿದಾಗ ಕಂಟೇನರ್‌ನಲ್ಲಿ ಅಂದಾಜು 8 ಟನ್‌ಗೂ ಹೆಚ್ಚು ಮಾಂಸ ಪತ್ತೆಯಾಗಿದೆ. ಈ ಬಗ್ಗೆ ಇಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಂಸದ ಮಾದರಿಯನ್ನು FSL …

Read More »

ಪ್ರೀತಿ ನಿರಾಕರಿಸಿದ್ದಕ್ಕೆ ಬರ್ಬರ ಹತ್ಯೆ​​​, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ 16 ವರ್ಷದ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2021ರ ಆಗಸ್ಟ್ 1ರಂದು ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಜಾತ್ರೆಗೆ ತೆರಳಿದ್ದ ಬಾಲಕಿಯನ್ನು ಅಮೀರ್ ಲಾಲ್‌ಸಾಬ್ ಜಮಾದಾರ್ ಹಿಂಬಾಲಿಸಿ ಪ್ರೀತಿಸುವಂತೆ ಒತ್ತಾಯಿಸಿದ್ದ. ಬಾಲಕಿ ನಿರಾಕರಿಸಿ ಪೋಷಕರಿಗೆ ತಿಳಿಸುವುದಾಗಿ ಹೇಳಿದ್ದಕ್ಕೆ ಕೋಪಗೊಂಡ ಆರೋಪಿ, ಮಟನ್ ಕತ್ತರಿಸುವ ಚಾಕುವಿನಿಂದ ಎದೆ, ಬೆನ್ನು ಹಾಗೂ ಕೈಗೆ ಇರಿದು ಕೊಲೆ …

Read More »

ಎಣ್ಣೆ ಹೊಡೆಯಲು ಹೋಗಿ ಮನೆ ಮುಂದೆ ಕ್ಯಾಬ್ ಪಾರ್ಕ್; ಪ್ರಶ್ನಿಸಿದ ಮನೆ ಮಾಲೀಕನಿಗೆ ‘ನಾನ್ ಯಾರ್ ಗೊತ್ತಾ?’ ಎಂದು ಕಿರಿಕ್!

ಬೆಂಗಳೂರು: ಬಾರ್‌ಗೆ ಮದ್ಯ ಸೇವಿಸಲು ತೆರಳಿದ್ದ ಕ್ಯಾಬ್ ಚಾಲಕ ಮನೆ ಮುಂದೆ ವಾಹನ ನಿಲ್ಲಿಸಿದ್ದನ್ನು ಪ್ರಶ್ನಿಸಿದ ಮನೆ ಮಾಲೀಕನೊಂದಿಗೆ ಗಲಾಟೆ ಮಾಡಿಕೊಂಡು ಹಲ್ಲೆಗೆ ಯತ್ನಿಸಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಚೋಹಳ್ಳಿ ರಸ್ತೆಯಲ್ಲಿ ನಡೆದಿದೆ. ಮನೆ ಮುಂದೆ ಸುಮಾರು ಒಂದು ಗಂಟೆ ಕ್ಯಾಬ್ ನಿಂತಿದ್ದರಿಂದ ಮಾಲೀಕ ವಾಹನದಲ್ಲಿದ್ದ ನಂಬರ್‌ಗೆ ಕರೆ ಮಾಡಿ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಸ್ಥಳಕ್ಕೆ ಬಂದ ಚಾಲಕ ಮನೆ ಮಾಲೀಕನೊಂದಿಗೆ ವಾಗ್ವಾದ ನಡೆಸಿದ್ದು, ಬಳಿಕ …

Read More »

ಮೆಕ್ಕೆಜೋಳದ ಹೊಲದಲ್ಲಿ ರೈತ ಅನುಮಾನಾಸ್ಪದ ಸಾವು

ಶಿವಮೊಗ್ಗ: ಮೆಕ್ಕೆಜೋಳದ ಹೊಲದಲ್ಲಿ ರೈತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಳವಳ್ಳಿಯಲ್ಲಿ ನಡೆದಿದೆ. ಕೈಕಾಲುಗಳನ್ನು ಕಟ್ಟಿದ ರೀತಿಯಲ್ಲಿ 31 ವರ್ಷದ ಒಡಕೇಶಪ್ಪ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ ಮೆಕ್ಕೆಜೋಳದ ಹೊಲಕ್ಕೆ ಹೋಗುವುದಾಗಿ ತೆರಳಿದ್ದ ಒಡಕೇಶಪ್ಪ ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಮೆಕ್ಕೆಜೋಳದ ಹೊಲದಲ್ಲಿ ಹುಡುಕಾಟ ನಡೆಸಿದಾಗ ಒಡಕೇಶಪ್ಪ ಮೃತದೇಹ ಪತ್ತೆಯಾಗಿದೆ. ಕೈಕಾಲುಗಳನ್ನು ಕಟ್ಟಿ ಅವರನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ …

Read More »

ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಹತ್ಯೆ : ಚಿಕನ್ ಪೀಸ್ ವಿಚಾರಕ್ಕೆ ಚಾಕುವಿನಿಂದ ಇರಿದು ಕೊಂದ ಪಾಪಿ!

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಚಿಕನ್ ಪೀಸ್ ವಿಚಾರಕ್ಕೆ ಶುರುವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮದ್ಯಪಾನ ಮಾಡುತ್ತಿದ್ದ ವೇಳೆ “ನನಗಿಂತ ನೀನೇ ಹೆಚ್ಚು ಚಿಕನ್ ತಿನ್ನುತ್ತಿದ್ದೀಯಾ” ಎಂದು ಅರುಣಕುಮಾರ್ ಬಲಿಷ್ಟರ್ ಚವ್ಹಾಣ ಸ್ನೇಹಿತ ಸೀತಾರಾಮ್ ಚಂದ್ರದೇವ್ ಜೊತೆ ಜಗಳ ಮಾಡಿಕೊಂಡಿದ್ದಾನೆ. ಇಬ್ಬರೂ ‘ಪ್ರಿಯಾ ಸ್ಟೀಲ್ಸ್’ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದು, ಆಗಸ್ಟ್ 23ರಂದು ರಾತ್ರಿ ಇತರ ಕಾರ್ಮಿಕರೊಂದಿಗೆ ಚಿಕನ್ ಅಡುಗೆ ಮಾಡಿ ಮದ್ಯಪಾನ ಮಾಡುತ್ತಿದ್ದರು. ಬಳಿಕ ಇಬ್ಬರ …

Read More »

ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ: ಬಿಡಿಸಲು ಹೋದ ಜೈಲು ಸಿಬ್ಬಂದಿ ಮೇಲೂ ಹಲ್ಲೆ!

ಹಾಸನ ನಗರದ ಸಂತೇಪೇಟೆಯ ಜಿಲ್ಲಾ ಕಾರಾಗೃಹದಲ್ಲಿ ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಮೋಹನಕುಮಾರ್ ಹಾಗೂ ರಂಗಸ್ವಾಮಿ ನಡುವೆ ಫೋನ್ ಕರೆ ಮಾಡುವ ವಿಚಾರಕ್ಕೆ ಆರಂಭವಾದ ಜಗಳ, ಬಳಿಕ ಹೊಡೆದಾಟಕ್ಕೆ ತಿರುಗಿದೆ. ಜಗಳ ಬಿಡಿಸಲು ಮುಂದಾದ ಜೈಲು ಮುಖ್ಯ ವೀಕ್ಷಕರಾದ ಪರಶುರಾಮ ಹಾಗೂ ವೀರೇಶ್ ಸಂಗಮದ್ ಮೇಲೂ ಹಲ್ಲೆ ನಡೆದಿದೆ. ಪಿಸಿಎಸ್ ಕೊಠಡಿಗೆ ನುಗ್ಗಿದ ಒಂಬತ್ತು ಮಂದಿ ಕೈದಿಗಳು ಸಿಬ್ಬಂದಿ ಮೇಲೆ ಹಲ್ಲೆ …

Read More »

ನಾಲ್ಕನೇ ಮಹಡಿಯಿಂದ ಹಾರಿ ಗೃಹಿಣಿ ಆತ್ಮಹತ್ಯೆ!

ಮೈಸೂರು: ನಾಲ್ಕನೇ ಮಹಡಿಯಿಂದ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿಜಯನಗರದ ಮರಿಮಲ್ಲಪ್ಪ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ವಿಧ್ಯಾರ್ಥಿನಿಯಾಗಿರುವ ತಾಯಿ ಪ್ರೀತಿ(30) ಆತ್ಮಹತ್ಯೆಗೆ ಶರಣಾದವರು. ಪ್ರೀತಿ ಹಲವು ದಿನಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ. ಟೀಚರ್ ಪೇರೆಂಟ್ಸ್ ಮೀಟಿಂಗ್ ಅಟೆಂಡ್ ಮಾಡಿದ್ದ ಪ್ರೀತಿರವರು ನಂತರ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರೀತಿ ರವರ ಇಬ್ಬರು ಹೆಣ್ಣುಮಕ್ಕಳು ಮರಿಮಲ್ಲಪ್ಪ ಶಾಲೆ ವಿದ್ಯಾರ್ಥಿನಿಯರಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಐಸಿಸ್ ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ‌ ಸಂಚು: ಬೆಂಗಳೂರಿನ ಸೂತ್ರಧಾರಿಗೆ 7 ವರ್ಷ ಜೈಲು ಶಿಕ್ಷೆ

ISIS ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೈಯದ್ ಫಸಿಯುರ್ ರೆಹಮಾನ್‌ಗೆ ಬೆಂಗಳೂರಿನ NIA ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ ₹48 ಸಾವಿರ ದಂಡ ವಿಧಿಸಿದೆ. 2020ರ ಜನವರಿ 10ರಂದು ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ಬಳಿಕ NIA ತನಿಖೆ ಕೈಗೆತ್ತಿಕೊಂಡಿತ್ತು. ‘ಅಲ್-ಹಿಂದ್ ISIS’ ಸಂಚಿಗೆ ಸಂಬಂಧಿಸಿದಂತೆ ಒಟ್ಟು 20 ಆರೋಪಿಗಳ ವಿರುದ್ಧ 3 ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಗುರುಪ್ಪನಪಾಳ್ಯದಲ್ಲಿ ನಡೆದ …

Read More »

ಕೇವಲ 14 ಕಿ.ಮೀ.ಗೆ ಬರೋಬ್ಬರಿ 4000 ರೂ. ಬಾಡಿಗೆ! ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಮಹಿಳೆಗೆ ಕ್ಯಾಬ್ ಡ್ರೈವರ್‌ ವಂಚನೆ

ಬೆಂಗಳೂರು, ಆಗಸ್ಟ್ 30: ಯುನೈಟೆಡ್ ಕಿಂಗ್‌ಡಮ್‌ನಿಂದ ಮೂರು ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಮಹಿಳೆಯೊಬ್ಬರಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕ ವಂಚನೆ ಮಾಡಿದ್ದಾನೆ. ಕೇವಲ 14 ಕಿ.ಮೀ. ಪ್ರಯಾಣಕ್ಕೆ ಬರೋಬ್ಬರಿ ₹4,000 ಬಾಡಿಗೆ ಪಡೆದು, ನಕಲಿ ರಶೀದಿ ನೀಡಿದ್ದಾನೆ. ಕಂಟೆಂಟ್ ಕ್ರಿಯೇಟರ್ ಅಬೀಷ್ನಾ. ಎನ್ ಅವರು ಈ ಕಹಿ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ಯಾಕ್ಸಿ ಹತ್ತುವ ಮುನ್ನ ದರ ಕೇಳಿದಾಗ ಚಾಲಕ ಮೀಟರ್ ಚಾರ್ಜ್ ಎಂದು ನಂಬಿಸಿದ್ದ. …

Read More »

ಡೇಟಿಂಗ್ ಆಯಪ್ ಪರಿಚಯವಾದ ಯುವತಿಯಿಂದ ವಂಚನೆ: ಪಬ್​ಗೆ ಕರೆದು ಯುವಕನ ಕಿಡ್ನ್ಯಾಪ್!

ಬೆಂಗಳೂರು, ಆಗಸ್ಟ್ 30: ಡೇಟಿಂಗ್ ಆಪ್ ಮೂಲಕ ಯುವಕರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ ಜಾಲವೊಂದು ಬೆಳಕಿಗೆ ಬಂದಿದೆ. ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ 33 ವರ್ಷದ ಯುವಕನನ್ನು ಅಪಹರಿಸಿ, ಬೆದರಿಸಿ ಬರೋಬ್ಬರಿ ₹3.7 ಲಕ್ಷ ದೋಚಲಾಗಿದೆ. ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿದ್ದ ಯುವತಿ ಭೇಟಿಯಾಗುವಂತೆ ಕರೆಸಿಕೊಂಡು, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾಳೆ. ಅಲ್ಲಿ ನಾಲ್ವರು ವ್ಯಕ್ತಿಗಳು ಯುವಕನನ್ನು ಬೆದರಿಸಿ ಅಪಹರಿಸಿ, ನಗದು ಹಾಗೂ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಎಟಿಎಂನಿಂದ ₹45 …

Read More »