Breaking News

Breaking News

Featured Video Play Icon

ಪೊಲೀಸ್ ಠಾಣೆಯಲ್ಲಿ ಲಂಚದ ಲೆಕ್ಕ! ₹5 ಸಾವಿರ ಪಡೆದ ASI ಮೇಡಂ; ಮತ್ತೆ ₹5 ಸಾವಿರಕ್ಕೆ ಡಿಮಾಂಡ್…?

ಸ್ಟಿಂಗ್ ಆಪರೇಷನ್‌ನಲ್ಲಿ ಗಿರಿಗಿರಿ ₹500ರ ನೋಟುಗಳ ಎಣಿಕೆ! ₹5 ಸಾವಿರದ ಬಳಿಕ ಮತ್ತೆ ₹5 ಸಾವಿರಕ್ಕೆ ಬೇಡಿಕೆ..? ಎಲ್ಲಿ ನೋಡಿದರೂ ಭ್ರಷ್ಟಾಚಾರ.! ಪೊಲೀಸ್ ಠಾಣೆಯಲ್ಲೂ ಲಂಚದ ಲೆಕ್ಕಾಚಾರ…? ಪೊಲೀಸ್ ಠಾಣೆಯಲ್ಲಿ ಸ್ಟಿಂಗ್ ಆಪರೇಷನ್: ₹5ಸಾವಿರದ ಬಳಿಕ ಮತ್ತೆ ₹5ಸಾವಿರ..? ಹೌದು ವೀಕ್ಷಕರೇ… ಇದು ಬರೀ ಮಾತಲ್ಲ… ವಿಡಿಯೋ ದಾಖಲೆ ಇದೆ..! ಪೊಲೀಸ್ ಠಾಣೆಯಲ್ಲಿ ನಡೆದ ಸ್ಟಿಂಗ್ ಆಪರೇಷನ್‌ನ ಸಂಪೂರ್ಣ ವಿಡಿಯೋ ನಮ್ಮ ಬಳಿ ಇದೆ.ವಿಡಿಯೋದಲ್ಲಿ ₹500ರ ನೋಟುಗಳನ್ನು ಗಿರಿಗಿರಿ ಎಣಿಸುವ …

Read More »

ಗದಗದಲ್ಲಿ ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ : ಮಹಿಳೆ ಕುಟುಂಬಸ್ಥರಿಂದ ಯುವಕನ ಬರ್ಬರ ಹತ್ಯೆ!

ಗದಗ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಪುಟ್ಟಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ. ಈರಣ್ಣ ಅಗಸಿಬಾಗಿಲು (35) ಕೊಲೆಯಾದ ಯುವಕ. ರೇಣುಕಾ ಎಂಬುವರ ಜೊತೆ ಈರಣ್ಣ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕುಟುಂಬಸ್ಥರು ಹಲವು ಬಾರಿ ಬುದ್ಧಿವಾದ ಹೇಳಿದ್ದರೂ, ಈರಣ್ಣ ಮತ್ತೆ ರೇಣುಕಾಗೆ ಸನ್ನೆ ಮಾಡಿದ್ದರಿಂದ ಆಕೆಯ ಪತಿ ಹಾಗೂ ಕುಟುಂಬಸ್ಥರು ಆತನ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ …

Read More »

ಮಂಗಳೂರು: ಸ್ವಂತ ತಂಗಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದಿದ್ದ ಅಣ್ಣನಿಗೆ 4 ವರ್ಷ ಜೈಲು ಶಿಕ್ಷೆ

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಸ್ವಂತ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2019ರ ಅಕ್ಟೋಬರ್ 8ರಂದು ಮೊಬೈಲ್ ಬಳಸುವ ವಿಚಾರಕ್ಕೆ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಜೊತೆ ಜಗಳವಾಡಿದ್ದ ಸ್ಯಾಮ್ಸನ್, ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದ. ಐಪಿಸಿ 304(II) ಅಡಿ 4 …

Read More »

ಬೆಂಗಳೂರಲ್ಲಿ ದೂರು ನೀಡಲು ಬಂದ ವ್ಯಕ್ತಿಯಿಂದ ಗರ್ಭಿಣಿ ಪೊಲೀಸ್ ಸಿಬ್ಬಂದಿ ಮೇಲೆ ರಾಡ್‌ನಿಂದ ಹಲ್ಲೆ : ಆರೋಪಿ ಅರೆಸ್ಟ್!

ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಗರ್ಭಿಣಿ ಪಿಸಿ ಶಿಲ್ಪಾ ಅವರ ಮೇಲೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಚೆನ್ನೈ ಮೂಲದ ಗಜೇಂದ್ರ ಮೊಬೈಲ್ ಕಳೆದುಹೋದ ಬಗ್ಗೆ ದೂರು ನೀಡಲು ಬಂದಿದ್ದ. ಹಿರಿಯ ಅಧಿಕಾರಿಗಳು ಇಲ್ಲದ ಕಾರಣ ಬೆಳಿಗ್ಗೆ ಬರುವಂತೆ ಶಿಲ್ಪಾ ತಿಳಿಸಿದ್ದಕ್ಕೆ ಕೋಪಗೊಂಡು, ಬಳಿಕ ಠಾಣೆಗೆ ಮರಳಿ ಬಂದು ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಲ್ಪಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ …

Read More »

ಟವೆಲ್‌ನಿಂದ ಕತ್ತು ಹಿಸುಕಿ ಗಂಡನನ್ನೇ ಕೊಂದ ಹೆಂಡತಿ; ಬೆಚ್ಚಿಬೀಳಿಸಿದ ವಿಡಿಯೋ ವೈರಲ್

ಗಂಡನನ್ನೇ ಉಸಿರುಗಟ್ಟಿಸಿ ಕೊಂದ ಹೆಂಡತಿ: ಶಾಕಿಂಗ್ ಘಟನೆಯ ವಿಡಿಯೋ ವೈರಲ್ ಉತ್ತರ ಪ್ರದೇಶದ ಬುಲಂದ್‌ಶಹರ್ ನಗರ ಕೊತ್ವಾಲಿ ವ್ಯಾಪ್ತಿಯ ಬಹಲೀಂಪುರ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತಿಯನ್ನು ಟವೆಲ್‌ನಿಂದ ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಆರೋಪ ಪತ್ನಿ ಮೇಲಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೆಯಲ್ಲೇ ನಡೆದ ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ಪ್ರೀತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, …

Read More »

ಮನೆಗೆ ನುಗ್ಗಿ ಯುವತಿಯ ಕೊಲೆಗೆ ಯತ್ನ: ಕೇಸು ದಾಖಲು

ಕಾಸರಗೋಡು: ಮನೆಗೆ ನುಗ್ಗಿ ಯುವತಿಯ ಕೊಲೆಗೆ ಯತ್ನಿಸಿದ ಹಾಗೂ ತಡೆಯಲು ಬಂದ ಯುವತಿಯ ತಾಯಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನಿಧೀಶ್ ವಿರುದ್ಧ ಬದಿಯಡ್ಕ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿದ್ದಾರೆ. ಪೈಕ ಬಾಲಡ್ಕದ ಬಿ.ಶ್ರೀಷ್ಮ (21) ನೀಡಿದ ದೂರಿಗೆ ಬದಿಯಡ್ಕ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿದ್ದಾರೆ. ಆ.23 ರಂದು ರಾತ್ರಿ ಮನೆಗೆ ನುಗ್ಗಿ ಕೊಲೆ ಯತ್ನ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶ್ರೀಷ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. …

Read More »

ಪುತ್ತೂರಲ್ಲಿ ಕಳವಾದ ಓಮ್ನಿ ತಮಿಳುನಾಡಲ್ಲಿ ಆಂಬುಲೆನ್ಸ್ ಆಯ್ತು: ನಾಲ್ವರು ಆರೋಪಿಗಳು ಪೊಲೀಸ್ ಬಲೆಗೆ

ಪುತ್ತೂರು: ಮಾಡ್ನೂರು ಕಾವು ಎಂಬಲ್ಲಿ ನಡೆದ ಓಮ್ನಿ ಕಾರು ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅಂತರ್‌ರಾಜ್ಯ ಕಳ್ಳತನದಲ್ಲಿ ಭಾಗಿಯಾಗಿದ್ದ ಕೇರಳದ ಮೂವರು ಹಾಗೂ ತಮಿಳುನಾಡಿನ ಓರ್ವ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹2.5 ಲಕ್ಷ ಮೌಲ್ಯದ ಓಮ್ನಿ ಕಾರು ಹಾಗೂ ಕಳ್ಳತನಕ್ಕೆ ಬಳಸಿದ್ದ ₹1 ಲಕ್ಷ ಮೌಲ್ಯದ ಕೆಟಿಎಂ ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ ಓಮ್ನಿ ಕಾರನ್ನು ಕೇರಳಕ್ಕೆ ಕೊಂಡೊಯ್ದು, ಬಳಿಕ ತಮಿಳುನಾಡಿಗೆ ಮಾರಾಟ ಮಾಡಲಾಗಿತ್ತು. ಅಲ್ಲಿ ಕಾರನ್ನು ಆಂಬುಲೆನ್ಸ್‌ …

Read More »

ಹನೂರು ಎನ್‌ಕೌಂಟರ್ ಬೆನ್ನಲ್ಲೇ ಬಯಲಾಯ್ತು ಅಂತರರಾಷ್ಟ್ರೀಯ ಸ್ಮಗ್ಲಿಂಗ್ ಜಾಲ!- ಚೀನಾ, ಮಲೇಷಿಯಾಗೆ ಚಿಪ್ಪುಹಂದಿ ಕಳ್ಳಸಾಗಣೆ

ಚಾಮರಾಜನಗರ: ಹನೂರು ಕಾಡಿನಲ್ಲಿ ನಡೆದ ಬೇಟೆಗಾರರ ಎನ್‌ಕೌಂಟರ್‌ ಪ್ರಕರಣದ ತನಿಖೆಯಲ್ಲಿ ಅಂತರರಾಷ್ಟ್ರೀಯ ಚಿಪ್ಪುಹಂದಿ ಕಳ್ಳಸಾಗಣೆ ಜಾಲ ಬಯಲಾಗಿದೆ. ಚಾಮರಾಜನಗರ ಹಾಗೂ ತಮಿಳುನಾಡಿನ ಗಡಿ ಭಾಗದಲ್ಲಿ ಬೇಟೆಯಾಡಿದ ಚಿಪ್ಪುಹಂದಿಗಳ ಚಿಪ್ಪನ್ನು ಚೀನಾ, ಮಲೇಷಿಯಾಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಜಾಲದ ರೂವಾರಿ ಮುನಿಯಾಂಡಿ ಎನ್ನಲಾಗಿದ್ದು, ಆತನೊಂದಿಗೆ ಎಂಎಸ್ಸಿ ಪದವೀಧರ ರಾಬರ್ಟ್‌ ಪಿಂಟೋ ಪೆರಿಯನಾಯಗನ್‌ ಸಂಪರ್ಕ ಹೊಂದಿದ್ದ. ಮುನಿಯಾಂಡಿ ಸೂಚನೆಯಂತೆ ರಾಬರ್ಟ್‌ ಚಿಪ್ಪುಹಂದಿಯ ಅವಶೇಷಗಳನ್ನು ಮನೆಯ ನೀರಿನ ಸಂಪಿನಲ್ಲಿ ಬಚ್ಚಿಟ್ಟು, ಬಳಿಕ ರಹಸ್ಯ ಮಾರ್ಗದ …

Read More »

ಈದ್‌-ಮಿಲಾದ್‌ ಮೆರವಣಿಗೆ ವೇಳೆ ಗಲಾಟೆ, ಪುನೀತ್ ಕೆರೆಹಳ್ಳಿ ಸೇರಿ 8 ಮಂದಿ ಅರೆಸ್ಟ್​

ಬೆಂಗಳೂರು: ಈದ್‌-ಮಿಲಾದ್‌ ಮೆರವಣಿಗೆ ವೇಳೆ ಬಸವನಗುಡಿ ಎನ್‌.ಆರ್‌. ರಸ್ತೆಯಲ್ಲಿ ರಾಷ್ಟ್ರರಕ್ಷಣಾ ಪಡೆ ಕಾರ್ಯಕರ್ತರು ಹಾಗೂ ಮತ್ತೊಂದು ಕೋಮಿನ ಯುವಕರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮುರುಳಿ ಎಂಬ ಕಾರ್ಯಕರ್ತನ ತಲೆಗೆ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಸಂಘಟನೆ ಮುಖಂಡ ಪುನೀತ್‌ ಕೆರೆಹಳ್ಳಿ ಸೇರಿದಂತೆ ಹಲವರು ರಸ್ತೆಯಲ್ಲಿ ಧರಣಿ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್‌ಐಆರ್‌ ದಾಖಲಾಗಿದ್ದು, ಪುನೀತ್‌ …

Read More »

ಬೆಂಗಳೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ: ಯುವಕನ ಮೇಲೆ ಹಲ್ಲೆ, ಸ್ಥಳದಲ್ಲಿ ಬಿಗುವಿನ ವಾತಾವರಣ

ಬೆಂಗಳೂರು: ಬಸವನಗುಡಿಯ ಕೆ.ಆರ್. ರಸ್ತೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪುನೀತ್ ಕೆರೆಹಳ್ಳಿ ಅವರ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದ್ದು, ಮೆರವಣಿಗೆಯಲ್ಲಿ ಘೋಷಣೆ ಕೂಗಿದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಮುರಳಿ ಎಂಬ ಯುವಕನ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಖಂಡಿಸಿ ಪುನೀತ್ ಕೆರೆಹಳ್ಳಿ …

Read More »