Breaking News

ಕರ್ನಾಟಕ

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಪ್ರದರ್ಶನ

ಮಂಡ್ಯ: ಜಿಲ್ಲೆಯ ಕೆ. ಆರ್. ಪಟ್ಟಣದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವು ಶಿಕ್ಷಕರ ಭವನದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರಸಮನ್ವಯಾಧಿಕಾರಿ ಲಿಂಗರಾಜು ಮಾತನಾಡಿ ವಿದ್ಯಾರ್ಥಿಗಳು ವೈಜ್ಞಾನಿಕ ಜಾಗೃತಿಯನ್ನು ಮೈಗೂಡಿಸಿಕೊಂಡು ಹೊಸಹೊಸ ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಕ್ಕೆ ಮುಂದಾಗಿ ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕಾಣಿಕೆಯನ್ನು ನೀಡಬೇಕು.ಸೃಜನಶೀಲತೆ, ವಿಜ್ಞಾನಚಿಂತನೆ ಮತ್ತು ಸಮಗ್ರವಾದ ವ್ಯಕ್ತಿತ್ವವನ್ನು ಅಳವಡಿಸಿಕೊಂಡು ಮೂಲ ವಿಜ್ಞಾನದ ಸಂಶೋಧನೆಗಳ ಫಲವನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು …

Read More »

ಗಾಧ್ರಿಪಾಲನಾಯಕನ ಬೆಟ್ಟದಲ್ಲಿ ಮಳೆಗಾಗಿ ಪ್ರಾರ್ಥನೆ.

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ, ಬರದ ಛಾಯೆ ಆವರಿಸಿರುವುದರಿಂದ, ಹಿರೇಗುಂಟನೂರಿನ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಬುಧವಾರ, ತಮ್ಮ ತಮ್ಮ ಗ್ರಾಮಗಳ ಗ್ರಾಮ ದೇವರುಗಳನ್ನು, ಮೊದಲು ಕಡಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ, ಎಲ್ಲಾ ಊರಿನ ದೇವರುಗಳನ್ನು, ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿ ನಂತರ, ಗಾಧ್ರಿಪಾಲನಾಯಕನ ಬೆಟ್ಟಕ್ಕೆ ಕರೆತಂದು, ಅಲ್ಲಿ ಎಲ್ಲಾ ದೇವರುಗಳಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದರು.ಕಳೆದ ಎರಡೂ …

Read More »

ಮಹಾರಾಷ್ಟ್ರದಲ್ಲಿ ತಗ್ಗದ ವರುಣನ ಆರ್ಭಟ ಎಚ್ಚೆತ್ತುಕೊಂಡ ಅಧಿಕಾರಿಗಳು

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕಳೆದ ಹಲವು ದಿನಗಳಿಂದ ವರುಣನ ಆರ್ಭಟ ಹೆಚ್ಚಾಗಿದ್ದು, ಕೃಷ್ಣ ನದಿ ನೀರಿನ ಪ್ರಮಾಣವೂ ಸಹ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಾಗಿರುವ ಪರಿಣಾಮ ಜನರ ಜೀವನ ನಿರ್ವಹಣೆ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಎಸಿ ರವಿಂದ್ರ ಕರಲಿಂಗನವರ ಅವರ ನೇತೃತ್ವದಲ್ಲಿ ಇಂಗಳಿ ಗ್ರಾಮದ ನಡುಗಡ್ಡೆಗೆ ಅಧಿಕಾರಿಗಳ ತಂಡ ಮನೆ ಮನೆಗೆ ತೆರಳಿ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮನವಿ ಮಾಡಿಕೊಂಡರು. ತಹಸಿಲ್ದಾರ್, ಹೆಚ್ವುವರಿಯಾಗಿ ಎರಡು ಬೋಟ್ಗಗಲೊಂದಿಗೆ ಬಂದಿರುವ ಎಸ್ ಡಿ ಆರ್ …

Read More »

ಗ್ರಾಮೀಣ ಭಾಗದ ರಸ್ತೆಯ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ ಹೊಸದುರ್ಗ ಶಾಸಕ.

ಚಿತ್ರದುರ್ಗ: ‍ಆ‍ರದಹಳ್ಳಿಗೇಟ್ ನಿಂದ ಅರದಹಳ್ಳಿ ಬೋವಿಹಟ್ಟಿ ವರೆಗೆ 1,5 ಕಿಲೋಮಿಟರಗಳು ‍ರಸ್ತೆ ನಿರ್ಮಾಣಕ್ಕೆ ಇಂದು ಹೊಸ ದುರ್ಗ ಶಾಸಕ ಶೇಖರ್ ಅವರು ಭೂಮಿ ಪೂಜೆ ನೆರವೇರಿಸಿದರು.ಈ ರಸ್ತೆಯು ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

Read More »

ದರೋಡೆಗೆ ಯತ್ನಿಸಿದ್ದ ಕುಖ್ಯಾತ ಕಳ್ಳರ ಬಂಧನ.

ಆನೇಕಲ್: ದರೋಡೆಗೆ ಯತ್ನಿಸಿದ್ದ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಬೆಂಗಳೂರು ಹೊರವಲಯ ಹೆಬ್ಬಗೋಡಿ ಪೋಲಿಸರು ಯಶಸ್ವಿಯಾಗಿದ್ದಾರೆ. ಪೀಟರ್,ರಾಕೇಶ್, ಮಹೇಶ್,ಅಣ್ಣಾದೊರೈ, ರಾಜೇಶ್ ಬಂಧಿತ ಆರೋಪಿಗಳು. ಕಾಟನ್ ಪೇಟೆ, ಮೈಕೋ ಲೇಔಟ್, ಜೆಪಿ ನಗರ,ಸೇರಿದಂತೆ ಹೆಬ್ಬಗೋಡಿ ಪೋಲಿಸ್ ಠಾಣೆಗೆ ಬೇಕಾಗಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್, ಪಿಎಸ್ಐ ಶಂಕರಪ್ಪ ಅವರ ತಂಡದಿಂದ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರು ಕೊಲೆ,ದರೋಡೆ,ಕೊಲೆಗೆ ಯತ್ನ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳಾಗಿದ್ದಾರೆ. ಪೋಲಿಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ …

Read More »

ಮಂದಗೆರೆ ಹೇಮಾವತಿ ನದಿಯಲ್ಲಿ ಅಪರಿಚಿತ ಶಾಲಾ ವಿದ್ಯಾರ್ಥಿನಿಯ ಮೃತ ದೇಹ ಪತ್ತೆ

ಮಂಡ್ಯ : ಕಿಕ್ಕೇರಿ ಮಂದಗೆರೆ ಗ್ರಾಮದಲ್ಲಿ ಮಂದಗೆರೆ ಅಣೆಕಟ್ಟೆಯ ಹಿನ್ನೀರಿನ ಹೇಮಾವತಿ ನದಿಯಲ್ಲಿ ಅಪರಿಚಿತ ಶಾಲಾ ವಿದ್ಯಾರ್ಥಿನಿ(15)ಯ ಶವ ಪತ್ತೆಯಾಗಿದೆ. ಶಾಲಾ ಯೂನಿಫಾರಂ ಧರಿಸಿರುವ ವಿದ್ಯಾರ್ಥಿನಿಯು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದೇ ಏನು ಎಂಬುದು ತಿಳಿದಿಲ್ಲ. ಈ ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ತಿಳಿದವರು ಕಿಕ್ಕೇರಿ ಪೋಲಿಸ್ ಠಾಣೆ ದೂರವಾಣಿ 08230-265433 ಅಥವಾ ಮೊ. 9480804861 ಸಂಪರ್ಕಿಸಿ ಮಾಹಿತಿ ನೀಡಬೇಕಾಗಿ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮನವಿ ಮಾಡಿದ್ದಾರೆ…

Read More »

ಮರಳುಗಳ್ಳರನ್ನು ಮಟ್ಟಹಾಕಲು ಕೂಡ್ಲಿಗಿ ಪೊಲೀಸರಲ್ಲಿ ಒತ್ತಾಯ

ನಾಣ್ಯಾಪುರ: ಗ್ರಾಮದಲ್ಲಿ ಮರಳು ಗಳ್ಳರ ಹಾವಳಿ ಹೆಚ್ಚಾಗಿದ್ದು.ಅವರು ಮರಳಿನ ಜೊತೆಗೆ ಪಂಪ್ಸೆಟ್ ಸಾಮಾಗ್ರಿಗಳನ್ನೂ ಕದಿಯುತ್ತಿದ್ದಾರೆ ಮತ್ತು ಬಿತ್ತಿ ಬೆಳೆದ ಹೊಲಗಳಲ್ಲಿ ಟ್ರಾಕ್ಟರ್ ಗಳನ್ನು ಬೇಕಾಬಿಟ್ಟಿ ಓಡಿಸಿ ಬೆಳೆಹಾಳು ಮಾಡುತ್ತಿದ್ದಾರೆ ಇದರಿಂದಾಗಿ ರೈತರು ನೆಮ್ಮದಿ ಕಳೆದುಕೊಂಡಿದ್ದಾರೆ. ಕಾರಣ ಶೀಘ೯ವೇ ಕೂಡ್ಲಿಗಿ ಪೊಲೀಸರು ಮರಳುಗಳ್ಳರನ್ನು ಹಿಡಿದು ಪ್ರಕರಣ ದಾಖಲಿಸೋ ಮೂಲಕ ಅಕ್ರಮಕೋರ ರನ್ನು ಮಟ್ಟಹಾಕಬೇಕೆಂದು ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರ ಗ್ರಾಮಸ್ಥರು ಹಾಗೂ ರೈತರು ಕೂಡ್ಲಿಗಿ ಪೊಲೀಸರಲ್ಲಿ ಈ ಮೂಲಕ ಮನವಿ ಮಾಡಿದ್ದಾರೆ.ಹಲವು ಬಾರಿ …

Read More »

ಕಳ್ಳತನದ ಕುರಿತು ಎಚ್ಚರದಿಂದಿರಲು ಕೂಡ್ಲಿಗಿ ಪೋಲೀಸರಿಂದ ಗ್ರಾಮಸ್ಥರಿಗೆ ಸಲಹೆ

ಕೂಡ್ಲಿಗಿ: ಅಫರಾದ ಪ್ರಕರಣಗಳನ್ನು ನಿಯಂತ್ರಿಸುವ ಉದ್ಧೇಶದಿಂದ ಪೊಲೀಸ್ ಇಲಾಖೆ ಸಾರ್ವಜನಿಕರ ಗಮನಕ್ಕೆ ಕೆಲವೊಂದು ಪ್ರಮುಖ ಅಂಶಗಳನ್ನು ತಿಳಿಪಡಿಸಿದ್ದು ಅಂತೆಯೇ ಕೂಡ್ಲಿಗಿ ಪೊಲೀಸ್ ಠಾಣೆ ವತಿಯಿಂದ ತಾಲೂಕಿನ ಹಾಗೂ ಪಟ್ಟಣದ ನಾಗರೀಕರಿಗೆ ಹಾಗೂ ಸಾವ೯ಜನಿಕರಿಗೆ ಕೆಲವೊಂದು ಸಲಹೆ ಸೂಚನೆ ಹಾಗೂ ಅಗತ್ಯ ಸಹಕಾರ ಕೋರಿ ಪ್ರಕಟಣೆ ಯ ಮೂಲಕ ಪೊಲೀಸರು ಮನವಿ ಮಾಡಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಯಾರೇ ಕಂಬಳಿ, ಬೆಡ್ ಶೀಟ್,ಇತರೆ ಹೂದಿಕೆಗಳನ್ನು ಮಾರಲು ತಮ್ಮ ಬಳಿ …

Read More »

ಕಾಡಾನೆ ದಾಳಿಯಿಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿ

ಕೋಲಾರ: ಕೋಲಾರದಲ್ಲಿ ಕಾಡಾನೆಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ.‌ಕೋಲಾರದ ಬಂಗಾರಪೇಟೆ ತಾಲೂಕಿನ ಮಾರಂಡಹಳ್ಳಿ ಬಳಿ ಶುಕ್ರವಾರ ಬೆಳ್ಳಗ್ಗಿನ ಜಾವ ಕಾಡಾನೆಗಳು ತೋಟದ ಮೇಲೆ ದಾಳಿ ಮಾಡಿವೆ.ಕಾಡಾನೆಗಳ ದಾಳಿಯಿಂದ ಟಮೋಟೋ, ಬಾಳೆ ಬೆಳೆಗಳು ಹಾನಿಗೊಳಗಾದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನಾಶಗೊಂಡಿವೆ.‌ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.‌ಇದೇ ವೇಳೆ ಅರಣ್ಯ ಇಲಾಖೆಯಿಂದ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹ ಪಡಿಸಿದರು.

Read More »

ಮನೆ ಟಿಜ್ಯೂರಿ ಹಣ ಒಡವೆ ದೋಚಿದ ಖದೀಮರು

ಬೆಳಗಾವಿ: ಜಿಲ್ಲೆ ಕಿತ್ತೂರ ತಾಲ್ಲೂಕಿನ ನಿಚ್ಚಣಕಿ ಗ್ರಾಮದಲ್ಲಿ ಮನೆ ಟಿಜ್ಯೂರಿ ಒಡೆದು ಚಿನ್ನ , ಹಣ ದೊಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಸುಭಾಸ ಗೌಡ ಪಾಟೀಲ ಎಂಬ ಮಾಲೀಕನ ಅಂಗಡಿಯಲ್ಲಿ ಇದ್ದ ಹಣ ಹಾಗೂ ಮನೆಯಲ್ಲಿದ್ದ ಎರಡು ತೊಲಿ ಚಿನ್ನವನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಕಿತ್ತೂರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »