Breaking News

ಕರ್ನಾಟಕ

ಮೈನಿಂಗ್ ಲಾರಿಗಳ ಶಾಶ್ವತವಾಗಿ ನಿಲ್ಲಿಸಲು ಪ್ರತಿಭಟನೆ.

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರಿನ ಮಾರ್ಗದಲ್ಲಿ, ಸಂಚರಿಸುವ ಅದಿರು ತುಂಬಿದ ಲಾರಿಗಳಿಂದ ಇಲ್ಲಿನ ಸಾರ್ವಜನಿಕರಿಗೆ, ಶಾಲಾಮಕ್ಕಳಿಗೆ, ತುಂಬಾ ತೊಂದರೆಯಾಗುತ್ತಿರುವ ಜೊತೆಗೆ, ರೈತರ ಬೆಳೆಗಳಿಗೆ ಧೂಳು ಕೂತು ಬೆಳೆಗಳು ಹಾನಿಯಾಗುತ್ತಿರುವ ಜೊತೆಗೆ, ಮೈನಿಂಗ್ ಕಂಪನಿಗಳು ಮಾಡುತ್ತಿರುವ ಅರಣ್ಯ ನಾಶಾದಿಂದ ಮಳೆಯೂ ಕೂಡ ಕಡಿಮೆಯಾಗಿದ್ದು, ಇಲ್ಲಿನ ಮೈನಿಂಗ್ ಕಂಪನಿಗಳ ವಿರುದ್ದ, ಈ ಭಾಗದ ಗ್ರಾಮಸ್ಥರು ಶನಿವಾರ ಹಿರೇಗುಂಟನೂರಿನ ಮುಖ್ಯ ಬಸ್ ನಿಲ್ದಾಣದ ಬಳಿ, ದಾವಣಗೆರೆ ಸಂಸದ GM ಸಿದ್ದೇಶ್ವರ್ ರವರ ಪತ್ನಿ ಗಾಯತ್ರಿ ರವರ …

Read More »

ಸುಗಮ್ಯ ಶಿಕ್ಷಣ ಭಾಗೀದಾರರ ಪರಿಚಯ ಕಾರ್ಯಕ್ರಮ

ಮಂಡ್ಯ: ಮಂಡ್ಯ ಪಟ್ಟಣದ ರಾಮದಾಸ್ ರೆಸ್ಟೋರೆಂಟ್ ಸುಲೋಚನಮ್ಮ ಸಭಾಂಗಣದಲ್ಲಿ ಗ್ರಾಮ್ ಸಂಸ್ಥೆಯು ಸುಗಮ್ಯ ಶಿಕ್ಷಣ ಭಾಗೀದಾರರ ಪರಿಚಯ ಕಾರ್ಯಕ್ರಮ ನಡೆಯಿತು…ಸುಗಮ್ಯ ಶಿಕ್ಷಾ ಗ್ರಾಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಲ್.ಬಸವರಾಜು ಮಾತನಾಡಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದು, ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಗ್ರಾಮ್ ಸಂಸ್ಥೆಯ ಸುಗಮ್ಯಶಿಕ್ಷಾ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಿ …

Read More »

ತಾಯಿ ಹೇಳಿಕೆಯಿಂದ ಟ್ವಿಸ್ಟ್ ಪಡೆಯುತ್ತಿರುವ ಮಗು ಕಾಣೆಯಾದ ಪ್ರಕರಣ

ಉಡುಪಿ: ಕುಂದಾಪುರದ ಯಡಮೊಗ್ಗೆ‌ಯಲ್ಲಿ ನಡೆದ ಮಗು ಸಾವು ಪ್ರಕರಣ ಕ್ಕೆ ಸಂಬಂಧಿಸಿ ತಾಯಿ ರೇಖಾ ವಿರುದ್ದ ಕೊಲೆ ಹಾಗೂ ಆತ್ಮಹತ್ಯೆ ಯತ್ನ‌ ಪ್ರಕರಣ ದಾಖಲಿಸಲಾಗಿದೆ.ಯಡಮೊಗ್ಗೆ ಮಗು ಸಾವಿನ ಪ್ರಕರಣಕ್ಕೆ ಸಂಭಂಧಿಸಿ ತಾಯಿ ರೇಖಾ ವಿರುದ್ದ ಕೊಲೆ ಹಾಗೂ ಅತ್ಮಹತ್ಯೆ ಯತ್ನ ಪ್ರಕರಣಗಳು ಶಂಕರನಾರಯಣ ಠಾಣೆಯಲ್ಲಿ ದಾಖಲಾಗಿವೆ.ಮಾನಸಿಕ‌ ಖಿನ್ನತೆಯಿಂದ ಬಳಲುತ್ತಿದ್ದ ರೇಖಾ ತಮ್ಮಿಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಲು ನದಿಗಿಳಿದಿದ್ದು ,ಈ ಸಂಧರ್ಭದಲ್ಲಿ ಮಗು ಕೈಯಿಂದ ಜಾರಿ ಹೋಗಿತ್ತು , ನಂತರ …

Read More »

ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ವಾಲ್ಮೀಕಿ ಶ್ರೀ

ದಾವಣಗೆರೆ: ಪರಿಶಿಷ್ಟ ಪಂಗಡ ಕ್ಕೆ ಈಗ ಇರುವ ಶೇ ೩.೫ ರಷ್ಟು ಮೀಸಲಾತಿಯನ್ನ ಕೇಂದ್ರ ಸರ್ಕಾರದ ಮಾದರಿಯಲ್ಲಿ ಶೇ.೭.೫ಕ್ಕೆ ಏರಿಸುವಂತೆ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನಾನಂದಪುರಿ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದರು.ಸರ್ಕಾರ ಯಾವುದೇ ಇರಲಿ. ನಮ್ಮ ಬೇಡಿಕೆ ಎರಡು ತಿಂಗಳಲ್ಲಿ ಈಡೇರಬೇಕು.ವಿಳಂಬವಾದ್ರೆ ನಮ್ಮ ೧೫ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆಎಚ್ಚರಿಕೆ ನೀಡಿದರು.ಕಳೆದ ತಿಂಗಳು ಬೇಡಿಕೆ ಈಡೇರಿಕೆಗಾಗಿ ಸ್ವಾಮೀಜಿ ಪಾದಯಾತ್ರೆ ಮಾಡಿದ್ದರು. ಆ ವೇಳೆ ರಾಜ್ಯ ಸರ್ಕಾರಎರಡು …

Read More »

ಸಿಎಂ ಕುಮಾರಸ್ವಾಮಿ ವಿರುದ್ಧ ಗರಂ ಆದ ನಾರಾಯಣಸ್ವಾಮಿ

ಆನೇಕಲ್ : ಅವರ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದ ಜೆಡಿಎಸ್ ನಾಯಕರುಗಳಿಗೆ ಬಿಜೆಪಿ ಕಡೆ ಬೊಟ್ಟು ಮಾಡೋದು ಸರಿಯಲ್ಲಬಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಚಿತ್ರದುರ್ಗ ಲೋಕಸಭಾ ಸದಸ್ಯ ನಾರಾಯಣಸ್ವಾಮಿ ಆಕ್ರೋಶವನ್ನು ಹೊರ ಹಾಕಿದ್ದಾರೆ.ಆನೇಕಲ್ ನ ಮಾಯಸಂದ್ರ ಗ್ರಾಮದ ಬಳಿ ಬಿಜೆಪಿ ಸಂಘಟನೆ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದ ಜನ ತಿರಸ್ಕಾರ ಮಾಡಿದಾಗಲೇ ರಾಜೀನಾಮೆ ನೀಡಬೇಕಿತ್ತು ಆದರೆ ನೈತಿಕತೆಯಿಲ್ಲದ ಮುಖ್ಯಮಂತ್ರಿ ಕುಮಾರಸ್ವಾಮಿ ಮಗನನ್ನು ಹೀನಾಯವಾಗಿ ಸೋಲಿಸಿದ ರಾಜ್ಯದ …

Read More »

5 ಲಕ್ಷ ಮೌಲ್ಯದ ಅಕ್ರಮ ಮರಳು ವಶ

ರಾಯಚೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡ ಮೇಲೆ ದಾಳಿ ನಡೆಸಿ ಪೋಲಿಸರು ೧೦೦೦ ಮೆಟ್ಟಿಕ್ ಟನ್ ಮರಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಸ್ಪಿ ಡಾ.ಸಿ.ಬಿ ವೇದಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ಪೋಲಿಸರು ಮಾನಶಯ್ಯ , ಶಿವು ನಿಲವಂಜಿ, ಭೀಮಪ್ಪ ಎಂಬುವವರನ್ನು ಬಂಧಿಸಿದ್ದಾರೆ. ‌ ದೇವದುರ್ಗ ತಾಲೂಕಿನ ಹೇರುಂಡಿ, ನಿಲವಂಜಿ ಗ್ರಾಮಗಳಲ್ಲಿ ಪಟ್ಟಾ ಜಮೀನಿನಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದರು. ಒಟ್ಟು ಸುಮಾರು ೫ ಲಕ್ಷ ೧೦ ಸಾವಿರ ಬೆಲೆ …

Read More »

ಮೀನು ಹಿಡಿಯಲು ಹೋಗಿ ಶವವಾದ ಬಾಲಕ

ಬೆಳಗಾವಿ; ದೂಧಗಂಗಾ ನದಿಗೆ ಮೀನು ಹಿಡಿಯಲು ಹೋದ ಬಾಲಕ ಸಂಗ್ರಾಮ ಪವಾರ (೧೪) ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಸಂಗ್ರಾಮ ಪವಾರ ಚಿಕ್ಕೋಡಿ ತಾಲೂಕಿನ ಚಾಂದಶಿರದವಾಡ ಗ್ರಾಮದವನು. ದೂಧಗಂಗಾ ಮಳೆಯಿಂದಾಗಿ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನ ಶವ ಪತ್ತೆ ಮಾಡಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಂತರ್ ಜಿಲ್ಲಾ ದನಕಳ್ಳತನ ಆರೋಪಿ ಬಂಧನ

ಮಂಗಳೂರು: ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ದನಕಳ್ಳತನ ಮತ್ತು ಮಾರಾಟದ ಆರೋಪಿಸಿದ್ದಾರೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಶೀರ್ ಯಾನೆ ಆರ್ಗಾ ಬಶೀರ್, ಬಂಧಿತ ವ್ಯಕ್ತಿ ಮೂಡಬಿದ್ರೆಯ ತೋಡಾರ್ ಬಳಿ ಆರೋಪಿ ವಶಕ್ಕೆ ಪಡೆದಿದ್ದು, ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಹಲವಾರು ದನಕಳ್ಳತನ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ದನ ಕಳ್ಳತನವನ್ನೆ ಕಸುಬನ್ನಾಗಿಸಿಕೊಂಡಿದ್ದ. ಈತನ ಸಹಚರರು ದಸ್ತಗಿರಿಯಾದರೂ ಘಟನೆಯ ಬಳಿಕ …

Read More »

ಪಾಲಿಟೆಕ್ನಿಕ್ ಕಾಲೇಜು ಪ್ರವೇಶೋತ್ಸವ ಸಮಾರಂಭ

ಮಂಡ್ಯ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 2019-20ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಮಾರಂಭವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಆಶಾಕಾಮತ್ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಜೀವನದಲ್ಲಿ ಯಶಸ್ಸುಗಳಿಸಬೇಕು..ವಿಶ್ವಕಂಡ ಶ್ರೇಷ್ಠ ಎಂಜಿನಿಯರುಗಳಲ್ಲಿ ಒಬ್ಬರಾಗಿರುವ ಭಾರತರತ್ನ ಸರ್.ಎಂ‌.ವಿಶ್ವೇಶ್ವರಯ್ಯ ಅವರಂತೆ ಶ್ರೇಷ್ಠ ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು..ಸರ್.ಎಂ.ವಿ ಅವರ ಜೀವನದ ಆದರ್ಶಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಭವಿಷ್ಯದ ಎಂಜಿನಿಯರುಗಳಾಗಲು ಪ್ರಯತ್ನ …

Read More »

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ

ಬೆಳಗಾವಿ ; ಟಾಟಾ ಐಸಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಇಬ್ಬರು ವ್ಯಕ್ತಿಗಳು ಸೇರಿ 9 ಲಕ್ಷ ಮೌಲ್ಯ ಮಧ್ಯವನ್ನು ಇಂದು ಬೆಳಗಾವಿ ಉಪವಿಭಾಗದ ಅಬಕಾರಿ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಗೋವಾದಿಂದ MH 13 AN 8312 ನಂಬರಿನ ಟಾಟಾ ಐಸಿಯಲ್ಲಿ ಅಕ್ರಮವಾಗಿ ಮಹಾರಾಷ್ಟ್ರ ಕ್ಕೆ ಸಾಗಿಸುತ್ತಿದ್ದ ಸಾರಾಯಿಯನ್ನು ಬೆಳಿಗ್ಗೆ ಚನ್ನಮ್ಮ ಸರ್ಕಲ್ ನಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ಬಸಪ್ಪಾ ಕೊಲಿ, ರಮೇಶ ಕಾಂಬಳೆ …

Read More »