Breaking News

ಕರ್ನಾಟಕ

ಚಿತ್ರನಟ ದರ್ಶನ್ ಹಾಗೂ ವಿನಯ್ ಗುರೂಜಿ‌ ಸಂಕಷ್ಟ ಸಾಧ್ಯತೆ…

ಬೆಂಗಳೂರು: ಚಿತ್ರನಟ ದರ್ಶನ್ ಹಾಗೂ ವಿನಯ್ ಗುರೂಜಿ‌ ಸಂಕಷ್ಟ ಸಾಧ್ಯತೆ ಏಕಂದರೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಲಾಗಿದೆ. ಹುಲಿ ಉಂಗುರ ಪ್ರಕರಣದಲ್ಲಿ ಲಾಕ್ ಅಗ್ತಾರಾ ನಟ ದರ್ಶನ್ ಹಾಗೆ ನಟ ದರ್ಶನ್ ಬಂಧನಕ್ಕೆ ಹೆಚ್ಚಾಯಿತು ಕೂಗು ಅರಣ್ಯ ಕಾಯ್ದೆ ಉಲ್ಲಂಘನೆಯಡಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಇತ್ತ ಕೆಲವು ಸಂಘಟನೆಗಳಿಂದ ಅರಣ್ಯ ಇಲಾಖೆಗೆ ಒಂದರ ಮೇಲೋಂದರಂತೆ ದೂರು ನೀಡುತ್ತಲೇ ಇವೆ. …

Read More »

ವಿಜಯದಶಮಿಯ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ…

ಮೈಸೂರು: ಕನ್ನಡ ನಾಡಿನ ಜನರಿಗೆ ದಸರಾ ಮಹೋತ್ಸವ ವಿಜಯದಶಮಿಯ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮಳೆ ಬೆಳೆಯಾಗಿ, ರಾಜ್ಯ ಸುಭೀಕ್ಷವಾಗಲಿ ಎಂದು ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥಿಸುವುದಾಗಿ ತಿಳಿಸಿದರು. ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ವಿಜಯದಶಮಿ ಹಬ್ಬ. ಮಧ್ಯಾಹ್ನ ನಂದಿಧ್ವಜ ಪೂಜೆ ನೆರವೇರಿಸಿ, ನಂತರ ಜಂಬೂಸವಾರಿಯ ಅಂಬಾರಿ ಮೆರವಣಿಗೆ ಪ್ರಾರಂಭವಾಗಲಿದೆ. ಮೆರವಣಿಗೆ ಬನ್ನಿಮಂಟಪಕ್ಕೆ ತಲುಪಿದ ನಂತರ ಪಂಜಿನ ಮೆರವಣಿಗೆ ರಾತ್ರಿ 8 ರವರೆಗೆ …

Read More »

ಮಧ್ಯಾಹ್ನ 12 ಗಂಟೆ ಬಳಿಕ ದ್ವಾರದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ…

ಮೈಸೂರು: ಜಂಬೂ ಸವಾರಿ ವೀಕ್ಷಿಸಲು ಅರಮನೆಗೆ ಬರುವವರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆ ಬಳಿಕ ನಿಗದಿತ ದ್ವಾರದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪೊಲೀಸರು ಎಲ್ಲರನ್ನೂ ತಪಾಸಣೆ ಮಾಡಿ ಅರಮನೆಯೊಳಗೆ ಬಿಡುತ್ತಿದ್ದಾರೆ. ಜಂಬೂ ಸವಾರಿ ವೀಕ್ಷಿಸಲು ಬರುವವರಿಗೆ ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ತೆ ಮಾಡಲಾಗಿದೆ. ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್​​ ಮಾಹಿತಿ ನೀಡಿದ್ದಾರೆ

Read More »

ಕಲ್ಯಾಣಸ್ವಾಮಿ ಮಠದಲ್ಲಿ ದಸರಾ ಆಚರಣೆ….

ಬಳ್ಳಾರಿ: ಬಳ್ಳಾರಿ ನಗರದ ಕಮ್ಮರಚೇಡು ಕಲ್ಯಾಣ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀದೇವಿ ಪುರಾಣ ಪ್ರವಚನ ಹಾಗೂ ದಸರಾ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಭಾಗವಹಿಸಿದರು. ಕಲ್ಯಾಣ ಶ್ರೀಗಳಿಂದ ಆಶೀರ್ವಾಚನ ಪಡೆದು ಸಚಿವ ಬಿ.ನಾಗೇಂದ್ರ ಅವರು ಮಾತನಾಡಿದರು. ಹಲವಾರು ಸಮುದಾಯದವರು ವಾಸ ಮಾಡುವಂತ ಭಾಗದಲ್ಲಿ ಕಲ್ಯಾಣ ಶ್ರೀಗಳು ಮಠವನ್ನ ಕಟ್ಟಿ ಬೆಳಸುವಲ್ಲಿ …

Read More »

ರಾಯಚೂರಿನ ಲಿಂಗಸೂರು ತಾಲೂಕು ವ್ಯಾಪ್ತಿಯ ಕೆಲವೆಡೆ ಭೂಕಂಪ….

ಬೆಂಗಳೂರು: ಕಲ್ಯಾಣ ಕರ್ನಾಟಕ ಜಿಲ್ಲೆಯಾಗಿರುವ ರಾಯಚೂರಿನ ಲಿಂಗಸೂರು ತಾಲೂಕು ವ್ಯಾಪ್ತಿಯ ಕೆಲವೆಡೆ ಸೋಮವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವದಿಂದ ಗ್ರಾಮಸ್ಥರು ಕೆಲ ಹೊತ್ತು ಆತಂಕಕ್ಕೀಡಾದರು ಎನ್ನಲಾಗಿದೆ. ಲಿಂಗಸೂರು ತಾಲೂಕಿನ ನಿಲೋಗಲ್, ವಿರಾಪುರ, ಹಟ್ಟಿ ಮತ್ತು ಗೆಜ್ಜಲಗಟ್ಟ ಗ್ರಾಮಗಳ 2.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಗ್ರಾಮಗಳ ಸೇರಿದಂತೆ ಒಟ್ಟು 2.6 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಸದ್ಯ ಈ ಭೂಕಂಪನಿಂದ ಅದೃಷ್ಟವಶಾತ್ …

Read More »

ಟಿ.ಎ.ಶರವಣ ಪೊಲೀಸರ ಜೊತೆಗೂಡಿ ದಸರಾ ಹಬ್ಬವನ್ನು ಆಚರಣೆ…

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ಇಂದು ಪರಿಷತ್‌ ಸದಸ್ಯ ಟಿ.ಎ.ಶರವಣ ಅವರು ಜನರಿಗೆ ಭದ್ರತೆ ನೀಡುವ ಪೊಲೀಸರ ಜೊತೆಗೂಡಿ ದಸರಾ ಹಬ್ಬವನ್ನು ಆಚರಿಸಿಕೊಂಡರು. ಪೊಲೀಸ್‌ ವ್ಯವಸ್ಥೆ ಸಾಮಾಜಿಕವಾಗಿ ಭದ್ರತೆ, ರಕ್ಷಣೆಯ ವಿಚಾರದಲ್ಲಿ ಅಪಾರ ಗೌರವವನ್ನು ಹೊಂದಿದೆ. ಹಾಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್‌ ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ತಮ್ಮ ವಯಕ್ತಿಕ ಜೀವನವನ್ನು ಬಿಟ್ಟು ಜನರಿಗಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟವರು ಈ …

Read More »

ರೇಷ್ಮೆನಗರಿಯ ಜಾನಪದಲೋಕದಲ್ಲಿ ಜನಪದ ಸೊಗಡಿನ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ ಕಳೆಕಟ್ಟಿದೆ…

ರಾಮನಗರ: ನಾಡಹಬ್ಬ ದಸರಾಗೆ ರೇಷ್ಮೆನಗರಿಯ ಜಾನಪದಲೋಕದಲ್ಲಿ ಜನಪದ ಸೊಗಡಿನ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ ಕಳೆಕಟ್ಟಿದೆ. ಬೊಂಬೆ ಪ್ರದರ್ಶನ ಅಕ್ಟೋಬರ್ 15 ನವೆಂಬರ್ 15 ರವರೆಗೆ ಪ್ರಾವಾಸಿಗರ ತನುಮನ ತಣಿಸುತ್ತಿದೆ. 1996 ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮೊದಲ ಬಾರಿಗೆ ಬೊಂಬೆಗಳ ಪ್ರದರ್ಶನವನ್ನು ಪ್ರಾರಂಭಿಸಿತು. ಪ್ರತಿ ವರ್ಷದಂತೆ ಈ ವರ್ಷವೂ ಗೊಂಬೆ ಪ್ರದರ್ಶನವನ್ನು ನವರಾತ್ರಿಯ ಮೊದಲ ದಿನ ಪ್ರಾರಂಭಿಸಲಾಗಿದೆ. ಈ ವರ್ಷದ ಬೊಂಬೆಗಳ ಪ್ರದರ್ಶನದಲ್ಲಿ ವಿಶೇಷವಾಗಿ ಭಾರತದ ಸಂವಿಧಾನ ರಚನೆಯಾಗಿ 75 …

Read More »

ಬಹಳ ವಿಶೇಷ ಮತ್ತು ಸ್ಮರಣೀಯ ದಿನ: ಸಿದ್ದರಾಮಯ್ಯ

ಬೆಂಗಳೂರು: ಕೆ ಆರ್ ಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ರೈಲು ವಿಸ್ತ್ರತ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ಮೂಲಕ ಶುಕ್ರವಾರ ಉದ್ಘಾಟನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ವರ್ಚುಯಲ್ ಸಭೆ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದರು. ರಾಜ್ಯ ಯೋಜನೆ ಆಯೋಗದ ಉಪಾಧ್ಯಕ್ಷ ಪ್ರೊ ರಾಜೀವ್ ಗೌಡ, ಮಾಜಿ ಸಚಿವ, ಶಾಸಕ ಎಸ್ ಟಿ …

Read More »

ಯಾರೇ ತಪ್ಪು ಮಾಡಿದರೂ ಇದ್ರೆ ಶಿಕ್ಷೆ ಆಗಬೇಕು: ಸಿ.ಟಿ.ರವಿ

ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ಹಾಲಿಂದು ಹಾಲಿಗೆ, ನೀರಿಂದು ನೀರಿಗೆ, ಉಪ್ಪು ತಿಂದೋನು ನೀರು ಕುಡಿಲೇಬೇಕು ಎಂದು ವ್ಯಂಗ್ಯವಾಡಿದ್ದಾರೆ.ಇವೆಲ್ಲ ಹಳೇ ಕಾಲದ ಗಾದೆ ಮಾತುಗಳು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ಪ್ರಾಮಾಣಿಕರಿಗೆ ತೊಂದರೆ ಆಗಬಾರದು. ಯಾರಾದರೂ ಅಕ್ರಮ ಮಾಡಿದರೆ ಅದು ಇಂದಲ್ಲ ನಾಳೆ ಬಯಲಿಗೆ ಬರಬೇಕು. ಸುಮ್‌ ಸುಮ್ನೆ ಗಾದೆ …

Read More »

ಚಾಲಕನ ನಿಯಂತ್ರಣ ತಪ್ಪಿ ಸ್ವೀಪರ್ ಕೋಚ್ ಬಸ್‌ ಪಲ್ಟಿ..

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಸ್ವೀಪರ್ ಕೋಚ್ ಬಸ್‌ ಪಲ್ಟಿಯಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಪಾಳಾ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಬೆಂಗಳೂರು ನಿಂದ ಬೆಳಗಾವಿಯತ್ತ ಹೋಗುತ್ತಿದ್ದ ಶಿಬರ್ಡ್ ಸ್ಟೀಪ‌ರ್ ಕೋಚ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನೊಳಗೆ ಇದ್ದ ಪ್ರಯಾಣಿಕರಿಗೆ ಕೆಲವರಿಗೆ ಗಂಭೀರ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂಳಿದ ಪ್ರಯಾಣಿಕರು ಆಂಬುಲೆನ್ಸಗಾಗಿ ಕಾಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ಡ್ರೈವ‌ರ್ ನಿರ್ಲಕ್ಷ್ಯ ಕ್ಲೀಪರ್ ಕೋಚ್ ಬಸ್ …

Read More »