BigTv News
March 18, 2025
Breaking News, Crime, ಕರ್ನಾಟಕ
ಅನೈತಿಕ ಸಂಬಂಧದ ವಿಚಾರವಾಗಿ ಪತಿ ಪತ್ನಿಯೇ ನಡುವೆ ಗಲಾಟಿ ಶುರುವಾಗಿದ್ದು. ಮಾತು ಮಾತಲ್ಲೇ ಪತಿ ಪತ್ನಿಗೆ ಹೊಡೆದಿರು ಘಟನೆ ನಡೆದಿದೆ. ಬೆಳಿಗ್ಗೆ ಏಳುವಷ್ಟರಲ್ಲಿ ಪತ್ನಿಯ ಪ್ರಾಣ ಹೋಗಿದೆ. ಈ ಘಟನೆ ಬೆಂಗಳೂರು ಆನೇಕಲ್ ತಾಲೂಕಿನ ರಾಚಾಮಾನ್ ಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸುನಿತಾ ಮೃತ ಯುವತಿಯ ಹೆಸರು ದಂಪತಿಗಳಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ ಕೂಡಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.
Read More »
BigTv News
March 18, 2025
Breaking News, Crime, ಕರ್ನಾಟಕ
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಚಿಕ್ಕದೇವಸ್ಥಾನ ಬೀದಿ ನಿವಾಸಿ ಮಸಣಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೊಳ್ಳೇಗಾಲ ಪಟ್ಟಣದ ಲಿಂಗಾಣಪುರ ಹೊರ ವಲಯದ ಜಮೀನಲ್ಲಿ ಹಾದು ಹೋಗಿರುವ 63 ಕೆವಿ ವಿದ್ಯುತ್ ಟವರ್ ಲೈನ್ ತಂತಿ ಹಿಡಿದು ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಳ್ಳೇಗಾಲ ಪಟ್ಟಣ ಪೊಲೀಸರು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಸೆಸ್ಕ್ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್ಗಳು, ಅಗ್ನಿ ಶಾಮಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆಳಗೆ ಇಳಿಯುವಂತೆ …
Read More »
BigTv News
March 17, 2025
Breaking News, ಕರ್ನಾಟಕ, ಹುಬ್ಬಳ್ಳಿ
ಇಂದು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಕೇಕ್ ಕಟ್ ಮಾಡಿ ಸಾರ್ವಜನಿಕರಿಗೆ ಉಪಹಾರ ನೀಡುವ ಮೂಲಕ ತಮ್ಮ ಅಭಿಮಾನವನ್ನು ಮೆರೆದರು . ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಪ್ಪು ಅವರ ಬೃಹತ್ ಕಟೌಟ್ ಹಾಕಿ ಅಪ್ಪು ಅಪ್ಪು ಎಂದು ಜೈಕಾರ ಹಾಕಿದ್ದಾರೆ ಪಟಾಕಿ ಸಿಡಿಸಿ ಜೈಕಾರ ಹಾಕಿ ಯುವರತ್ನನ ಬರ್ತಡೆ ಸೆಲೆಬ್ರೇಟ್ …
Read More »
BigTv News
March 17, 2025
Breaking News, ಕರ್ನಾಟಕ
ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹನ ಕಾರ್ಯಕ್ರಮ ಇಂದು ನಡೆಯಲಿದ್ದು. ಕಾರ್ಯಕ್ರಮ ಹಿನ್ನೆಲೆಯಲ್ಲಿ ಅರಮನೆ ಮೈದಾನ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತವಾಗಿ ಪ್ಲೆಕ್ಸ್ ಅಳವಡಿಸಿದ್ದಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಾಕಿರುವ ಅಧಿಕೃತ ಪ್ಲೆಕ್ಸ್ ಬ್ಯಾನರ್ ಅನ್ನು ಕೂಡಲೇ ತೆಗೆದುಹಾಕಿಸಿದ್ದಾರೆ.
Read More »
BigTv News
March 17, 2025
Crime, News, ಕರ್ನಾಟಕ, ಬೆಂಗಳೂರು
ರಾಜಧಾನಿ ಬೆಂಗಳೂರುನಲ್ಲಿ ಪುಂಡರ ಹಟ್ಟಹಾಸ ಮುಂದುವರೆದಿದ್ದು ಇದೀಗ ಇಬ್ಬರ ಯುವಕರ ಮೇಲೆ ಹಲ್ಲೇ ನಡೆದಿದ್ ಘಟನೆ ಮೈಸೂರು ಮೆಟ್ರೋ ಸ್ಟ್ರೆಷನ್ ಬಳಿ ನಡೆದಿದೆ ಕಾರಿಗೆ ಪೆಟ್ರೋಲ್ ಹಾಕಿತ್ತಿರುವ ಇಬ್ಬರ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಹಲ್ಲೇಗೈದೆ ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ
Read More »
BigTv News
March 17, 2025
Crime, News, ಕರ್ನಾಟಕ, ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲಿ ಕ್ಯಾಂಟರ್ ಚಾಲಕ ಮೃತಪಟ್ಟ ಘಟನೆ ಸ್ಯಾಟ್ರ್ಯ್ ಟ್ ಬಸ್ ನಿಲ್ದಾಣದ ಬಳಿ ನಿನ್ನೆ ನಡೆದಿದೆ . ಕ್ಯಾಂಟರ್ ಚಾಲಕ ಜಗನ್ ಸಾವನಪ್ಪಿದ್ದಾನೆ. ಮೂರು ಆಟೋಗಳು ಎರಡು ಕ್ಯಾಬ್ ಗಳು ಮತ್ತು ಒಂದು ಬೈಕ್ ಸೇರಿ ಬಿಎಂಟಿಸಿ ಬಸ್ ಕೂಡ ಸಂಪೂರ್ಣವಾಗಿ ಜಕಮ್ ಗೊಂಡಿವೆ. ಈ ಬಗ್ಗೆ ಬ್ಯಾಟರಾಯಪುರನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.
Read More »
BigTv News
March 17, 2025
Breaking News, ಕರ್ನಾಟಕ
ಗೌರಿಬಿದನೂರು ತಾಲ್ಲೂಕಿನ ಹುದುಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಕಸಂದ್ರ ಗ್ರಾಮದಲ್ಲಿ ವಸತಿ, ನಿವೇಶನರಹಿತ ಪರಿಶಿಷ್ಟರಿಗೆ ನಿವೇಶನ ಮಂಜೂರು ಮಾಡಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲವೆಂದು ಬೇಸತ್ತ ಪರಿಶಿಷ್ಟ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿವೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ, ಸರ್ಕಾರದ ಗಮನಕ್ಕೆ ತಂದು ಒಂದು ತಿಂಗಳೊಳಗೆ ನಿಮ್ಮ ಬೇಡಿಕೆಗಳನ್ನುಈಡೇರಿಸುವ ಭರವಸೆ ನೀಡಿದರು.
Read More »
BigTv News
March 16, 2025
Breaking News, ಕರ್ನಾಟಕ, ದಕ್ಷಿಣ ಕನ್ನಡ
ನಾಗರಹೊಳೆ ಅರಣ್ಯದಂಚಿನ ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ಹೊಲಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಸುಮಾರು 3 ರಿಂದ 4 ವರ್ಷದ ಗಂಡು ಜಿಂಕೆ ಮೃತಪಟ್ಟಿದದೆ.ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದಾಗ ಸ್ಥಳಕ್ಕೆ ಸಿಬ್ಬಂದಿ ನವೀನ್ ಭೇಟಿ ನೀಡಿ ಪರಿಶೀಲಿಸಿ ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದರು.
Read More »
BigTv News
March 15, 2025
Breaking News, Crime, ಕರ್ನಾಟಕ, ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಎಮೆಹಟ್ಟಿ ಗ್ರಾಮದಲ್ಲಿ ಇಂದು ವಿದ್ಯುತ್ ತಗಳ್ಳಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಕಂಡು ಬಂದಿದೆ. ಮೃತ ಯುವತ್ತಿಯನ್ನು ನಿಸರ್ಗ ಎಂದು ಗುರುತಿಸಲಾಗಿದೆ. ನಿಸರ್ಗ ನೀರಿನ ಟ್ಯಾಂಕಿಗೆ ನೀರು ಬಿಡುವ ಸಲುವಾಗಿ ಮೋಟರ್ ಆನ್ ಮಾಡಲು ತೆರಳಿದರು ಆ ವೇಳೆ ಅವರಿಗೆ ಕರೆಂಟ್ ಹೊಡೆದಿದೆ ಪರಿಣಾಮ ಸ್ಥಳದಲ್ಲಿ ಕುಸಿದು ಬಿದ್ದು ನಿಸರ್ಗ ಸಾವನಪ್ಪಿದ್ದಾಳೆ. ಈ ಬಗ್ಗೆ ಹೊಳೆಹೊನ್ನೂರು ಠಾನೆಯಲ್ಲಿ ಪ್ರಕರಣ ದಾಖಲೆಯಾಗಿದೆ.
Read More »
BigTv News
March 15, 2025
Breaking News, ಕರ್ನಾಟಕ
ರಾಜ್ಯದಲ್ಲಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಸರ್ಕಾರ ಹಲವು ಬಾರಿಗಳು ಗಡವು ವಿಸ್ತರಿಸಿದ್ದು . ಇದೀಗ ಅಂತಿಮ ದಿನದ ಗಡುವನ್ನು ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿದೆ ಸರ್ಕಾರ ಈಗಾಗಲೇ ಅನೇಕ ಬಾರಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವನ್ನು ಮುಂದುಡಿದರು ವಾಹನ ಸವಾರರು ನಂಬರ್ ಪ್ಲೇಟ್ ಬದಲಾಯಿಸಲಿಲ್ಲ. ಈ ಕುರಿತು ಸರ್ಕಾರವು ಅಂತಿಮ ದಿನಾಂಕವನ್ನು ನಿಗದಿಪಡಿಸಿದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕೃತವಾಗಿ …
Read More »