admin
September 12, 2019
ಜಿಲ್ಲೆ, ಬೆಳಗಾವಿ
ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಸಾವಿರಾರು ಎಕರೆ ಭೂಮಿ ನೀಡುತ್ತಿರುವ ವಿಚಾರವಾಗಿ ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಕಿಡಿಕಾರಿದ್ದಾರೆ. ಈ ಹಿಂದೆ ನಮ್ಮ ನೆಲದ ಮಣ್ಣನ್ನ ಬೇರೆ ಕಡೆ ಕೊಡಬಾರದು ಅಂತ ಸಿದ್ದರಾಮಯ್ಯ, ಕುಮಾರಸ್ವಾಮಿ ಸ್ಟ್ರೈಕ್ ಮಾಡಿದ್ರು. ಆದ್ರೇ ಈಗ ಅವರೇ ಜಿಂದಾಲ್ ಗೆ ಭೂಮಿ ಕೊಟ್ರೆ ಅದು ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತೇ, ಇದರಿಂದ ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದರ ವಿರುದ್ದ ಬಿಜೆಪಿ ಸ್ಟ್ರೈಕ್ ಮಾಡಲಿದೆ ಅದಕ್ಕೆ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ನಿನ್ನೆ ಬೆಳಿಗ್ಗೆ ಶಾಲೆಗೆ ಹೋಗುತ್ತೆನೆಂದು ಹೋದ ಬಾಲಕಿರು ನಾಪತ್ತೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಪಟ್ಟಣದ ಗುರುಪ್ರಸಾದ ಕಾಲೋನಿಯಾ ನಿವಾಸಿಗಳಾದ ಹಾಗೂ ಅಮೃತ ವಿದ್ಯಾಲಯದಲ್ಲಿ 9 ನೇಯ ತರಗತಿ ಓದುತ್ತಿರುವ ಬಾಲಕಿಯರಾಗಿದ್ದಾರೆ. ಶರಣ್ಯ ಮಲಕನ್ನವರ ೧೫, ಕಾವ್ಯಾ ಖಂಡಪ್ ೧೫ , ಇಬ್ಬರು ನಾಪತ್ತೆಯಾದ ಬಾಲಕಿಯರು. ಈ ಕುರಿತುಬೆಳಗಾವಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯರಿಗಾಗಿ ಪೋಲಿಸರು ಮತ್ತು ಸಂಭಂದಿಕರು ಹುಡುಕಾಟ ನಡೆಸಿದ್ದಾರೆ.
Read More »
admin
September 12, 2019
ಜಿಲ್ಲೆ, ಮಂಡ್ಯ
ಮಂಡ್ಯ ಜಿಲ್ಲೆ ಕಿಕ್ಕೇರಿ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ರಾಮ ಬಿನ್ ಲೇಟ್.ಪುಟ್ಟೇಗೌಡ(48) ರೈತಾಪಿ ಕೆಲಸ ಮಾಡಿಕೊಂಡಿದ್ದು ಮಂಗಳೂರು ಹೆಂಚಿನ ಮನೆಯ ಸ್ನಾನದ ಕೊಠಡಿಯಲ್ಲಿ ಒಣ ಹುಲ್ಲನ್ನು ಶೇಖರಣೆ ಮಾಡಿದ್ದು, ಇದನ್ನು ಜಾನುವಾರುಗಳಿಗೆ ಹಾಕಲು ಹೋದಾಗ ಮನೆಗೆ ಕರೆಂಟ್ ಡಿಸ್ ಕನೆಕ್ಟ್ ಮಾಡಿದ್ದರಿಂದ ದೀಪ ಹಚ್ಚಲು ಹೋದಾಗ ಆಕಸ್ಮಿಕವಾಗಿ ಬೆಂಕಿ ಒಣ ಹುಲ್ಲಿಗೆ ತಗುಲಿ ತಕ್ಷಣ ಬೆಂಕಿ ಆವರಿಸಿಕೊಂಡಿದೆ. ಈತ ಇದೇ ಕೊಠಡಿ ಯಿಂದ ಹೊರಬರಲು ದಿಕ್ಕು …
Read More »
admin
September 12, 2019
ಜಿಲ್ಲೆ, ಮಂಡ್ಯ
ವಿಶ್ವ ಯೋಗ ದಿನದ ಅಂಗವಾಗಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಯೋಗಗುರು ಗೋ ಪಶುಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು ನಡೆಸಲಾಗಿದ್ದು,.ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಜೂನ್ 21ರಂದು ವಿಶ್ವಯೋಗ ದಿನದ ಅಂಗವಾಗಿ ವೇದಬ್ರಹ್ಮ ಯೋಗಪಟು ಶ್ರೀ ಗೋಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು ನಡೆಯಿತು.ಜೂನ್ 21ರಂದು ವಿಶ್ವ ಯೋಗದಿನದ ಅಂಗವಾಗಿ 5 …
Read More »
admin
September 12, 2019
ಜಿಲ್ಲೆ, ದಕ್ಷಿಣ ಕನ್ನಡ
ಆರಭಿ ಸಮುದ್ರದಲ್ಲಿ ಬಲವಾದ ಬಿರುಗಾಳಿ ಬಿಸುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರಗೊಂಡಿದೆ . ಉಳ್ಳಾಲದಲ್ಲಿ ಕಡಲ್ಕೊರೆತ ಕೂಡ ತೀವ್ರಗೊಂಡಿದೆ .ಈ ಭಾಗದಲ್ಲಿ ಹಲವು ಮನೆಗಳು ಅಪಾಯದಲ್ಲಿವೆ .ಇಂದು ಸಂಜೆ 7 ಗಂಟೆಗೆ ಉಳ್ಳಾಲದ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ ನ ಹಿಂಭಾಗದಲ್ಲಿ ಸಣ್ಣ ಕೋಣೆ ಕಡಲ್ಕೊರೆತ ಹಾವಳಿಗೆ ಸಿಲುಕಿ ಸಮುದ್ರ ಪಾಲಾಗಿದೆ.ಈ ದ್ರಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿದೆ .
Read More »
admin
September 12, 2019
ಜಿಲ್ಲೆ, ಬೆಳಗಾವಿ
ಉತ್ತರ ಕನ್ನಡದ ಜೋಯಿಡಾ ಉಪವಿಭಾಗದ ಎಇಇ ಉದಯ ಛಬ್ಬಿ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ಬಿಗ್ ಶಾಕ್ ನೀಡಿದೆ. ಬೆಳಗಾವಿಯ ಭಾಗ್ಯನಗರದ ಕೃಷಿ ಕಾಲೋನಿಯಲ್ಲಿರುವ ಉದಯ ಛಬ್ಬಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉದಯ ಛಬ್ಬಿ ಜೋಯಿಡಾ ಉಪವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಯಾಗಿದ್ದಾರೆ. ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
Read More »
admin
September 12, 2019
ಜಿಲ್ಲೆ, ಬೆಂಗಳೂರು ಗ್ರಾಮಾಂತರ
ದಲಿತ ಯುವಕನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ ಇಂದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಾಪ್ ಎಂಬ ದಲಿತ ಯುವನನ್ನು ಬೆತ್ತಲೆಗೊಳಿಸಿ ಗುಂಡ್ಲುಪೇಟೆಯಲ್ಲಿ ಪೈಶಾಚಿಕ ಕೃತ್ಯ ವೆಸಗಿದ್ದರು. ಇದರ ಹಿನ್ನೆಲೆಯಲ್ಲಿ ಆನೇಕಲ್ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮೂಲಕ ಆರೋಪಿಗಳನ್ನು ಬಂದಿಸುವಂತೆ ಆಗ್ರಹಿಸಿದರು. ಚಾಮರಾಜನಗರ ಲೋಕಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್ ಹಾಗೂ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಬೆಳಗಾವಿ ಮಾಜಿ ಶಾಸಕನ ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ ಈಗ ರಸ್ತೆಗೆ ಬಂದು ನಿಂತಿದೆ. ಎಂಇಎಸ್ ಮಾಜಿ ಶಾಸಕ ದಿ. ಸಂಭಾಜೀ ಪಾಟೀಲ್ ಗೆ ಸೇರಿದ ಆಸ್ತಿಗಾಗಿ ಸಂಭಾಜೀ ಪತ್ನಿ ಉಜ್ವಲಾ ಪಾಟೀಲ್ ಹಾಗೂ ಸೊಸೆ ನಡುವೆ ಜಗಳ ಎದಿದ್ದು, ಅತ್ತೆ ಬಂದೂಕು ತೋರಿಸಿ ಹೆದರಿಸುತ್ತಿದ್ದಾಳೆ ಎಂದು ಸೊಸೆ ಆರೋಪ ಮಾಡಿದ್ದಾರೆ. ಈ ಒಂದು ಗಲಾಟೆ ಬೆನಕನಹಳ್ಳಿ ಗ್ರಾಮದ ಫಾರ್ಮ್ ಹೌಸ್ ಬಳಿ ಮಾಡಿಕೊಂಡಿದ್ದಾರೆ. ಸಂಭಾಜೀ ಪಾಟೀಲ್ ಎರಡನೇ ಸೊಸೆ ಸಾಧನಾ …
Read More »
admin
September 12, 2019
ಉಡುಪಿ, ಜಿಲ್ಲೆ
ಕರಾವಳಿಯಲ್ಲಿ ನಿನ್ನೆ ಮಧ್ಯಾಹ್ನ ದಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಕೆಲವೆಡೆ ವಿದ್ಯೂತ್ ಕಂಬಗಳು ನೆಲಕ್ಕುರುಳಿದೆ. ೧೦೦ ಮಿಲಿಮೀಟರ್ ಸುರಿದ ಮಳೆಯಿಂದ ನಗರದಲ್ಲಿ ವಾಯು ಚಂಡಮಾರುತ ಹಿನ್ನಲೆಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ. ಇನ್ನೂ ಸಮುದ್ರದಲ್ಲಿ ಹೆಚ್ಚಿದ ಅಲೆಗಳ ಅಬ್ಬರದಿಂದ ಸಮುದ್ರ ತೀರದಲ್ಲಿನ ಜನರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದೆ. ಹಾಗೂ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದ್ದಾರೆ.
Read More »
admin
September 12, 2019
ಜಿಲ್ಲೆ, ತುಮಕೂರು
ಕಾರ್ಖಾನೆಗಳಿಂದ ವಾತಾವರಣ ಕಲುಶಿತ ಗೊಳ್ಳುತ್ತಿರುವ ಬಗ್ಗೆ ವರದಿ ಮಾಡಲು ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರು, ಕ್ಯಾಮೆರಾಮನ್ ಗಳ ಮೇಲೆ ಕಾರ್ಖಾನೆಯ ನೌಕರರು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಪಬ್ಲಿಕ್ ಟಿ ವಿ ವರದಿಗಾರ ಮಂಜುನಾಥ್ ತಾಳಮಕ್ಕಿ, ರಾಜ್ ನ್ಯೂಸ್ ವರದಿಗಾರ ಮಹೇಶ್, ಹಾಗೂ ಕ್ಯಾಮೆರಾಮನ್ ದೇವರಾಜು, ಸಮಯ ಟಿವಿ ಕ್ಯಾಮೆರಾಮನ್ ಚಂದನ್ ಹಲ್ಲೆಗೊಳಗಾದವರು. ನಗರದ ಹೊರವಲಯದ ಸತ್ಯಮಂಗಲ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬೇಳೂರು ಬಾಯರ್ ಕಾರ್ಖಾನೆ ನೌಕರರು …
Read More »