Breaking News

ಬೆಂಗಳೂರು

ಕಿರಣ್ ರಾಜ್ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಸುದ್ದಿಯಾಗಿದ್ದಾರೆ…

ಬೆಂಗಳೂರು: ಗುರುತೇಜ್ ಶೆಟ್ಟಿ ನಿರ್ದೇಶನದ “ರಾನಿ” ಚಿತ್ರದ ನಾಯಕ ಕಿರಣ್ ರಾಜ್ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಸುದ್ದಿಯಾಗಿದ್ದಾರೆ..ಈ ಹಿಂದೆ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ronny ಚಿತ್ರದ ಟೈಟಲ್ ಬಿಡುಗಡೆ ಮಾಡಿ ದಾಖಲೆ ಮಾಡಿದ್ದರು. ಈಗ ಹಿಮಾಚಲ ಪ್ರದೇಶಕ್ಕೆ ಹೋಗಿ 10 ದಿನ ಟ್ರೈನಿಂಗ್ ಪಡೆದು 8000 ಅಡಿ ಏತ್ತರದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಚಿತ್ರರಂಗದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿದ ಮೊದಲ ನಟ ಎನ್ನುವ ದಾಖಲೆ …

Read More »

ಚಿತ್ರನಟ ದರ್ಶನ್ ಹಾಗೂ ವಿನಯ್ ಗುರೂಜಿ‌ ಸಂಕಷ್ಟ ಸಾಧ್ಯತೆ…

ಬೆಂಗಳೂರು: ಚಿತ್ರನಟ ದರ್ಶನ್ ಹಾಗೂ ವಿನಯ್ ಗುರೂಜಿ‌ ಸಂಕಷ್ಟ ಸಾಧ್ಯತೆ ಏಕಂದರೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಲಾಗಿದೆ. ಹುಲಿ ಉಂಗುರ ಪ್ರಕರಣದಲ್ಲಿ ಲಾಕ್ ಅಗ್ತಾರಾ ನಟ ದರ್ಶನ್ ಹಾಗೆ ನಟ ದರ್ಶನ್ ಬಂಧನಕ್ಕೆ ಹೆಚ್ಚಾಯಿತು ಕೂಗು ಅರಣ್ಯ ಕಾಯ್ದೆ ಉಲ್ಲಂಘನೆಯಡಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಇತ್ತ ಕೆಲವು ಸಂಘಟನೆಗಳಿಂದ ಅರಣ್ಯ ಇಲಾಖೆಗೆ ಒಂದರ ಮೇಲೋಂದರಂತೆ ದೂರು ನೀಡುತ್ತಲೇ ಇವೆ. …

Read More »

ನಾಡಿನ ಜನತೆಗೆ ದಸರಾ ಹಬ್ಬದ ಶುಭಾಷಯವನ್ನ ತಿಳಿಸಿದ ಯಶ್​​ ಮತ್ತು ರಾಧಿಕಾ….

ಕಿಂಗ್ ಸ್ಟಾರ್ ಯಶ್ ದಸರಾ ಹಬ್ಬವನ್ನ ಜೋರಾಗಿಯೇ ಆಚರಿಸುತ್ತಿದ್ದಾರೆ. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಷಯವನ್ನ ತಿಳಿಸಿದ್ದಾರೆ ಯಶ್​​ ಮತ್ತು ರಾಧಿಕಾ. ಇದೀಗ ದಸರಾ ಹಬ್ಬದ ನಿಮಿತ್ತ ಯಶ್​​ ಮತ್ತು ರಾಧಿಕಾ ಪೋಟೋಶೂಟ್​​​ ಮಾಡಿಸಿಕೊಂಡಿದ್ದು, ಈ ಫೋಟೋಶೂಟ್​ ನೋಡುಗರ ಗಮನ ಸೆಳೆಯುತ್ತಿದೆ. ಮಿಸ್ಟರ್ ಆಯಂಡ್ ಮಿಸಸ್ ರಾಮಾಚಾರಿ ಸಾಂಪ್ರದಾಯಿಕ ಉಡುಗೆ ಅಂದ್ರೆ ರಾಧಿಕಾ ಪಂಡಿತ್​​ ಲೈಟ್​ ಬ್ಲೂ ಕಲರ್​ನ ಸೀರೆಯುಟ್ರೆ ಯಶ್​​ ರಾಧಿಕಾ ಸೀರೆಗೆ ಮ್ಯಾಚ್​​​ ಆಗುವಂತೆ ಗ್ರೇ ಕಲರ್​​ …

Read More »

ಬಿಗ್‌ಬಾಸ್‌ ಮನೆಯಿಂದ್ಲೇ ಅರೆಸ್ಟ್….

ಬಿಗ್‌ ಬಾಸ್ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್‌ ಅರೆಸ್ಟ್ ಮಾಡಲಾಗಿದೆ. ಕೊರಳಿಗೆ ಹುಲಿ ಉಗುರಿನ ಡಾಲರ್ ಹಾಕೊಂಡಿದ್ದ ಕಾರಣಕ್ಕೆ ಬಿಗ್‌ಬಾಸ್‌ ಮನೆಯಿಂದ್ಲೇ ಅರೆಸ್ಟ್ ಮಾಡಿದ್ದಾರೆ ಅರಣ್ಯಾಧಿಕಾರಿಗಳು. ಇದೀಗ 14 ದಿವಸ ಜೈಲಿಗೂ ಹಾಕಲಾಗಿದೆ. ಆದರೆ, ಸಂತೋಷ್ ಕೊರಳಿನಲ್ಲಿದ್ದದ್ದು ಹುಲಿ ಉಗುರು ಅಂತಾ ನಮಗೂ ಗೊತ್ತಿರಲಿಲ್ಲ ಅಂತಿದ್ದಾರೆ ಕುಟುಂಬಸ್ಥರು. ಇನ್ನು ಪ್ರಕರಣದ ಸಂಬಂಧ ಬಿಗ್​ ಬಾಸ್​ ಮನೆಯಿಂದಲೇ ವರ್ತೂರ್ ಸಂತೋಷ್ ಅನ್ನು ಅರೆಸ್ಟ್ ಮಾಡಿದ್ದು, ಬಿಗ್ ಬಾಸ್​ ನೋಡುಗರಲ್ಲಿ ಮತ್ತೆ …

Read More »

ರಾಯಚೂರಿನ ಲಿಂಗಸೂರು ತಾಲೂಕು ವ್ಯಾಪ್ತಿಯ ಕೆಲವೆಡೆ ಭೂಕಂಪ….

ಬೆಂಗಳೂರು: ಕಲ್ಯಾಣ ಕರ್ನಾಟಕ ಜಿಲ್ಲೆಯಾಗಿರುವ ರಾಯಚೂರಿನ ಲಿಂಗಸೂರು ತಾಲೂಕು ವ್ಯಾಪ್ತಿಯ ಕೆಲವೆಡೆ ಸೋಮವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವದಿಂದ ಗ್ರಾಮಸ್ಥರು ಕೆಲ ಹೊತ್ತು ಆತಂಕಕ್ಕೀಡಾದರು ಎನ್ನಲಾಗಿದೆ. ಲಿಂಗಸೂರು ತಾಲೂಕಿನ ನಿಲೋಗಲ್, ವಿರಾಪುರ, ಹಟ್ಟಿ ಮತ್ತು ಗೆಜ್ಜಲಗಟ್ಟ ಗ್ರಾಮಗಳ 2.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಗ್ರಾಮಗಳ ಸೇರಿದಂತೆ ಒಟ್ಟು 2.6 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಸದ್ಯ ಈ ಭೂಕಂಪನಿಂದ ಅದೃಷ್ಟವಶಾತ್ …

Read More »

ಕರ್ನಾಟಕ ಸರ್ಕಾರ ನರೇಗಾ ಯೋಜನೆಯಡಿ ಕಾಮಗಾರಿಗಳ ಮೊತ್ತಗಳನ್ನು ಪರಿಷ್ಕರಣೆ ಮಾಡಿದೆ.

ಬೆಂಗಳೂರು: ಕರ್ನಾಟಕ ಸರ್ಕಾರ ನರೇಗಾ ಯೋಜನೆಯಡಿ ಕಾಮಗಾರಿಗಳ ಮೊತ್ತಗಳನ್ನು ಪರಿಷ್ಕರಣೆ ಮಾಡಿದೆ. ವೈಯಕ್ತಿಕ ಕಾಮಗಾರಿ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಿದೆ. ಇದಕ್ಕೆ ಅನ್ವಯವಾಗುವ ಷರತ್ತುಗಳನ್ನು ಸಹ ವಿವರಿಸಿದೆ.ಆಯುಕ್ತರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜ್ಞಾಪನಾ ಪತ್ರವನ್ನು ಬರೆದಿದ್ದಾರೆ. 2022-23ನೇ ಪ್ರಧಾನ ವಾರ್ಷಿಕ ಸುತ್ತೋಲೆಯನ್ನು ಉಲ್ಲೇಖ ಮಾಡಿದ್ದಾರೆ.

Read More »

ಬೇರೆಯವರದ್ದನ್ನು ತನಿಖೆಗೆ ನೀಡದೆ ನನ್ನದನ್ನು ಮಾತ್ರ ನೀಡಿದರು: ಡಿ.ಕೆ.ಶಿ

ಬೆಂಗಳೂರು: ರಾಜಕೀಯ ಉದ್ದೇಶಕ್ಕಾಗಿಯೇ ಯಡಿಯೂರಪ್ಪ ಅವರು ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದೆ. ಬಿಜೆಪಿ ಪಕ್ಷದ ಶಾಸಕರ ವಿರುದ್ಧವೂ ಬೇಕಾದಷ್ಟು ಪ್ರಕರಣಗಳಿವೆ. ಬೇರೆಯವರದ್ದನ್ನು ತನಿಖೆಗೆ ನೀಡದೆ ನನ್ನದನ್ನು ಮಾತ್ರ ನೀಡಿದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು. ಈ ಕುರಿತು ಶುಕ್ರವಾರ ಕುಮಾರಕೃಪ ಅತಿಥಿಗೃಹದ ಬಳಿ ಮಾಧ್ಯಮಗಳ ಪ್ರಶ್ನೆಗಳ ಜೊತೆಗೆ ಮಾತನಾಡಿದ ಅವರು, ಅಡ್ವೋಕೇಟ್ ಜನರಲ್ ಅವರೇ ಈ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು …

Read More »

ಶಿವಣ್ಣ ‘ಘೋಸ್ಟ್‌’ ನೋಡುವುದಕ್ಕೆ ತುದಿಗಾಲಲ್ಲಿ ನಿಂತ ಅಭಿಮಾನಿಗಳು…

ದಕ್ಷಿಣ ಭಾರತದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕ್ರೇಜ್ ದುಪ್ಪಟ್ಟಾಗಿದೆ. ‘ಜೈಲರ್’ ಸಿನಿಮಾ ನೋಡಿ ಶಿವಣ್ಣನನ್ನು ಮೆಚ್ಚಿಕೊಂಡಿರೋ ಅಭಿಮಾನಿಗಳು ‘ಘೋಸ್ಟ್‌’ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಹೀಗಾಗಿ ಶಿವಣ್ಣ ಹಾಗೂ ಶ್ರೀನಿ ಕಾಂಬಿನೇಷನ್‌ನ ಮೊದಲ ಸಿನಿಮಾದ ಮೇಲೆ ನಿರೀಕ್ಷೆ ಇದ್ದಿದ್ದು ನಿಜ. ಶಿವಣ್ಣ ಖದರ್, ಲುಕ್ ಒಂದು ಕಡೆಯಾದರೆ, ಇನ್ನೊಂದು ಕಡೆ ಶಿವಣ್ಣನ ಮಾಸ್ ಎಂಟ್ರಿ ಹೇಗಿರುತ್ತೋ ಅನ್ನೋ ಕುತೂಹಲವಿತ್ತು. ಮಧ್ಯರಾತ್ರಿಯಿಂದಲೇ ‘ಘೋಸ್ಟ್’ ಸ್ಪೆಷಲ್ ಶೋ ಕಂಡಿದೆ. ರಾತ್ರಿ 12 ಗಂಟೆಯ ಮೇಲೆ …

Read More »

ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷರಾಗಿ ಹೆಚ್‌ ಡಿ ಕುಮಾರಸ್ವಾಮಿ..

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು,ಮುಸ್ಲಿಂ ಮುಖಂಡ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡರು, ಸಿಎಂ ಇಬ್ರಾಹಿಂ ಅವರನ್ನ ಪಕ್ಷದಿಂದ ಉಚ್ಚಾಟಿಸಿದ್ದು, ನೂತನ ರಾಜ್ಯಾಧ್ಯಕ್ಷರಾಗಿ ಹೆಚ್‌ ಡಿ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಿದ್ದಾರೆ. ಹೌದು, ಗುರುವಾರ ಜೆಪಿ ಭವನದಲ್ಲಿ ಕೋರ್‌ ಕಮಿಟಿ ಸಭೆ ನಡೆಸಿದ್ದು, ಸಭೆಯಲ್ಲಿ ಶಾಸಕರು ಹಾಗೂ ಮುಖಂಡರ ಜೊತೆಗೆ ದೇವೇಗೌಡರು …

Read More »

ಸಂಗೀತಾ ಭಟ್ ಸದ್ಯ ಹಿರಿತೆರೆಯಲ್ಲಿ ಬ್ಯುಸಿ….

ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪಂಜರದ ಗಿಳಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಸಂಗೀತಾ ಭಟ್ ಸದ್ಯ ಹಿರಿತೆರೆಯಲ್ಲಿ ಬ್ಯುಸಿ. ಅದ್ಭುತ ನಟನೆಯ ಮೂಲಕ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಸಂಗೀತಾ ಭಟ್ ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ’ ಧಾರಾವಾಹಿಯಲ್ಲಿ ನಾಗಿಣಿಯಾಗಿ ಕಾಣಿಸಿಕೊಂಡಿದ್ದರು. ಅಂದ ಹಾಗೇ ಸಂಗೀತಾ ಭಟ್ ಅವರಿಗೂ ಸ್ಟಾರ್ ಸುವರ್ಣಗೂ ಇದು ಹೊಸ ಭಾಂದವ್ಯವೇನಲ್ಲ.. ಬದಲಿಗೆ …

Read More »