Breaking News

ದೇಶ-ವಿದೇಶ

ಪ್ರೀತಿ, ಪ್ರೇಮ, ಮದುವೆ, ಡಿವೋರ್ಸ್.. ಪ್ರತಿ ತಿಂಗಳು 5000 ರೂ ನೀಡುವಂತೆ ಮಹಿಳೆಗೆ ಕೋರ್ಟ್ ಆದೇಶ..

ಮಧ್ಯ ಪ್ರದೇಶದ ಕೌಟುಂಬಿಕ ನ್ಯಾಯಾಲಯವು ವಿಶೇಷ ಪ್ರಕರಣ ಒಂದರಲ್ಲಿ ವಿಚ್ಛೇದಿತ ಪತ್ನಿಯು ಪತಿಗೆ ಜೀವನಾಂಶವಾಗಿ ಪ್ರತಿ ತಿಂಗಳು 5 ಸಾವಿರ ರೂಪಾಯಿ ಹಣ ನೀಡಬೇಕು ಎಂದು ಆದೇಶ ನೀಡಿದೆ.ಪತಿ-ಪತ್ನಿ ಕಿತ್ತಾಟ, ದೂರು ಪ್ರತಿದೂರು ದಾಖಲುಮಹಿಳೆ ಒಬ್ಬಳು ತನ್ನ ಗಂಡ ವರದಕ್ಷಿಣೆಗಾಗಿ ನಿತ್ಯವೂ ಕಿರುಕುಳ ನೀಡುತ್ತಾನೆ. ಮಾನಸಿಕವಾಗಿಯೂ ಹಿಂಸೆ ನೀಡುತ್ತಿದ್ದಾನೆ. ಆತನಿಂದ ನನಗೆ ಮುಕ್ತಿ ಕರುಣಿಸಿ ಎಂದು ಆರೋಪಿಸಿ ಪತಿಯ ವಿರುದ್ಧ ಕೋರ್ಟ್​ನಲ್ಲಿ ದೂರು ನೀಡಿದ್ದಳು. ಪ್ರತಿಯಾಗಿ ಪತಿಯೂ ಕೂಡ ಪತ್ನಿ …

Read More »

ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನ ಸಾರ್ವತ್ರಿಕ ಚುನಾವಣಾ ಕಣಕ್ಕೆ ಧುಮುಕಿದ್ದಾರೆ…..

ಮುಂದಿನ ವರ್ಷ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಪಾಕಿಸ್ತಾನ ಇಸ್ಲಾಂ ರಾಷ್ಟ್ರ ಅಂತ ಈಗಾಗ್ಲೆ ಘೋಷಿಸಿಕೊಂಡಿದೆ. ಆದರೆ ಅಲ್ಲಿಯೂ ಹಿಂದೂ ಜನಾಂಗ ವಾಸವಿದೆ. ಇದೀಗ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಅಲ್ಲಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪಾಕಿಸ್ತಾನದಲ್ಲಿ ಮಾತ್ರವಲ್ಲ ಭಾರತದಲ್ಲೂ ಅವರು ಸದ್ದು ಮಾಡ್ತಿದ್ದಾರೆ. ಫೆಬ್ರವರಿ 8, 2024 ರಂದು ಅಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಇದೆ. ಇತ್ತ ಭಾರತಲ್ಲೂ ಈ ಚುನಾವಣೆ ಸಿಕ್ಕಾಪಟ್ಟೆ …

Read More »

ಅಮೆರಿಕ ತನ್ನ ಬುದ್ಧಿ ಬಿಡೋದಿಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಅವರಿವರ ನಡುವೆ ಈ ದೇಶ ತಂದಿಟ್ಟು ಆಟ ನೋಡುತ್ತೆ…

ಅಮೆರಿಕ ತನ್ನ ಬುದ್ಧಿ ಬಿಡೋದಿಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಅವರಿವರ ನಡುವೆ ಈ ದೇಶ ತಂದಿಟ್ಟು ಆಟ ನೋಡುತ್ತೆ ಅನ್ನೋ ಆರೋಪ ಇದೆ. ಅದರಲ್ಲೂ ಅಮೆರಿಕ ವೆಪನ್ಸ್ ಮಾರಾಟಕ್ಕೆ ಹೀಗೆ ಯುದ್ಧಗಳನ್ನ ಬೆಂಬಲಿಸುತ್ತೆ ಅನ್ನೋ ಗಂಭೀರ ಆರೋಪ ಕೂಡ ಇದೆ. ಹೀಗಿದ್ದಾಗ ಇಸ್ರೇಲ್ ಹಾಗೂ ಹಮಾಸ್ ಯುದ್ಧದಲ್ಲಿ ಕೂಡ ಅಮೆರಿಕ ತನ್ನ ದ್ವಂದ್ವ ನೀತಿ ಮುಂದುವರಿಸಿದೆ. ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಬೆಂಕಿ ಹೊತ್ತಿಕೊಂಡು ಬರೋಬ್ಬರಿ 2 ತಿಂಗಳ …

Read More »

ಇಲ್ಲೊಬ್ಬರು ಚಿನ್ನ ಹಾಗೂ ಪ್ಲಾಟಿನಂನಿಂದ ವಿವಾರ ನೌಕೆಯನ್ನು ತಯಾರಿ….

ಕೈಯಲ್ಲಿ ದುಡ್ಡಿದ್ದರೆ ಏನು ಮಾಡಕ್ಕಾಗಲ್ಲ ಅಲ್ವಾ? ಇಲ್ಲೊಬ್ಬರು ಚಿನ್ನ ಹಾಗೂ ಪ್ಲಾಟಿನಂನಿಂದ ವಿವಾರ ನೌಕೆಯನ್ನು ತಯಾರಿಸಿದ್ದರೆ. ಈ ನೌಕೆಯನ್ನು ತಯಾರಿಸಲು 10,000 ಕೆಜಿ ಚಿನ್ನ ಬಳಸಿದ್ದಾರೆ, ಜೊತೆಗೆ ಪ್ಲಾಟಿನಂ ಕೂಡ ಬಳಸಿದ್ದಾರೆ ಇದರ ಬೆಲೆ ಎಷ್ಟಿದೆ ಎಂಬುವುದನ್ನು ನೀವೇ ಊಹಿಸಬಹುದು. ಇದು ಪ್ರಪಂಚದ ಅತ್ಯಂತ ದುಬಾರಿ ನೌಕೆಯಾಗಿದೆ. ಬ್ರಿಟನ್‌ನ ಗ್ಯಾಡ್ಜೆಟ್‌ ಗುರುಯಾಗಿರುವ ಸ್ಟುವರ್ಟ್ ಹ್ಯೂಸ್ ಐಪ್ಯಾಡ್‌ ತಯಾರಿಯಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ತಯಾರಿಸಿದ ನೌಕೆ ಇದಾಗಿದೆ. ಇದರ ಬೆಲೆ $4.8 …

Read More »

ಪ್ಲಾಸ್ಟಿಕ್ ಜಾರ್‌ನಲ್ಲಿ ನಾಗರ ಹಾವನ್ನು ತಂದು ಪತ್ನಿ ಮತ್ತು ಮಗಳು ಮಲಗಿದ್ದ ಕೋಣೆಗೆ ಹಾವನ್ನು ಬಿಟ್ಟಿದ್ದಾನೆ…

ಬರ್ಹಾಂಪುರ: ವಿಷಪೂರಿತ ಹಾವನ್ನು ಕೋಣೆಗೆ ಬಿಡುವ ಮೂಲಕ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಘಟನೆ ಒಡಿಶಾದ ಗಂಜಾಂದಲ್ಲಿ ನಡೆದಿದೆ. 25 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಂಜಾಂನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕಬಿಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಗಾಂವ್ ಗ್ರಾಮದಲ್ಲಿ ಒಂದೂವರೆ ತಿಂಗಳ ಹಿಂದೆ ಈ ಘಟನೆ ನಡೆದಿದೆ. ಆರೋಪಿಯನ್ನು ಕೆ ಗಣೇಶ್ ಪಾತ್ರ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಕೆ ಬಸಂತಿ ಪತ್ರಾ …

Read More »

ಅಮೆರಿಕ ಸರ್ಕಾರಕ್ಕೆ ವಲಸಿಗರ ನಿಯಂತ್ರಣವೇ ದೊಡ್ಡ ತಲೆನೋವಾಗಿದೆ……

ಅಮೆರಿಕ ಅಕ್ರಮ ವಲಸಿಗರ ಕಾಟಕ್ಕೆ ಬೇಸತ್ತು ಹೋಗಿದ್ದು, ಅಲ್ಲಿನ ಸರ್ಕಾರಕ್ಕೆ ವಲಸಿಗರ ನಿಯಂತ್ರಣವೇ ದೊಡ್ಡ ತಲೆನೋವಾಗಿದೆ. ಪರಿಸ್ಥಿತಿ ಹೀಗಿದ್ದಾಗ ಏನು ಮಾಡೋದು ಅಂತ ಬೈಡನ್ ಆಡಳಿತ ಪರದಾಡುವ ಸ್ಥಿತಿಯಲ್ಲೇ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಮೆರಿಕ ಈಗ ಬರೋಬ್ಬರಿ 6.4 ಮಿಲಿಯನ್ ಅಕ್ರಮ ವಲಸಿಗರಿಗೆ ತಾಣವಾಗಿ ಹೋಗಿದೆಯಂತೆ. ಈ ಪೈಕಿ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ? ಒಂದು ಜಮಾನ ಇತ್ತು, ಕೇವಲ 20 ಅಥವಾ 30 ವರ್ಷಗಳ ಹಿಂದೆ ಅಮೆರಿಕದಲ್ಲಿ ಹೋಗಿ …

Read More »

ಕೆಂಪು ಸಮುದ್ರದಲ್ಲಿ ಹೈಜಾಕ್ ಮಾಡಿರುವ ಈ ಹಡಗು ಸದ್ಯ ಯೆಮೆನ್‌ನ ಹೊಡೆಡಾ ಬಂದರು ಪ್ರದೇಶದಲ್ಲಿದೆ ಎಂದು ಹಡಗಿನ ಮಾಲೀಕರು ಹೇಳಿದ್ದಾರೆ…

ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಇಸ್ರೇಲ್‌ಗೆ ಸೇರಿದ ಸರಕು ಸಾಗಾಣಿಕೆ ಹಡಗು ‘ಗ್ಯಾಲಕ್ಸಿ ಲೀಡರ್’ ಅನ್ನು ಎಮೆನ್ ದೇಶದ ಹೌತಿ ಬಂಡುಕೋರರು ಅಪಹರಿಸಿದ್ದರು. ಈಗ ಹಡಗು ಅಪಹರಿಸಿದ್ದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಕೆಂಪು ಸಮುದ್ರದಲ್ಲಿ ಹೈಜಾಕ್ ಮಾಡಿರುವ ಈ ಹಡಗು ಸದ್ಯ ಯೆಮೆನ್‌ನ ಹೊಡೆಡಾ ಬಂದರು ಪ್ರದೇಶದಲ್ಲಿದೆ ಎಂದು ಹಡಗಿನ ಮಾಲೀಕರು ಹೇಳಿದ್ದಾರೆ. ಈ ದೊಡ್ಡ ಹಡಗನ್ನು ಹೇಗೆ ಅಪಹರಿಸಲಾಯಿತು ಎನ್ನುವ ವಿಡಿಯೋ ಬಿಡುಗಡೆ ಮಾಡಿದ್ದು, ಯಾವ ಸಿನಿಮಾ …

Read More »

ಚಂಡೀಗಢ, ಮುಂಬೈ ಮತ್ತು ಬೆಂಗಳೂರಿನಲ್ಲಿ ವೀಸಾ ಮತ್ತು ಕಾನ್ಸುಲರ್ ಸೇವೆಗಳ ಕಾರ್ಯಾಚರಣೆಗಳಿಗೆ ತಡೆ…

ಒಟ್ಟಾವ್‌: ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷ ಮುಂದುವರಿದಿದೆ. ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರವನ್ನು ಕೆನಡಾ ತೆಗೆದುಕೊಂಡಿದೆ. ಅದೇ ರೀತಿ ಚಂಡೀಗಢ, ಮುಂಬೈ ಮತ್ತು ಬೆಂಗಳೂರಿನಲ್ಲಿ ವೀಸಾ ಮತ್ತು ಕಾನ್ಸುಲರ್ ( ದೂತಾವಾಸ ) ಸೇವೆಗಳ ಕಾರ್ಯಾಚರಣೆಗಳಿಗೆ ತಡೆ ನೀಡಿದೆ. ಕೆನಡಾ ಸರ್ಕಾರದ ಈ ನಿರ್ಧಾರವು ವಲಸೆ ಮತ್ತು ವೀಸಾ ಅರ್ಜಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಬಹುದು ಎಂದು ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ. ಇದರ ಪರಿಣಾಮವಾಗಿ ಕೆನಡಾದ …

Read More »

ಯುದ್ಧ ಇಡೀ ಜಗತ್ತನ್ನು ನಿಧಾನವಾಗಿ ಸಾವಿನ ಕೂಪಕ್ಕೆ ತಳ್ಳುತ್ತಿದೆ…

ನ್ಯೂಯಾರ್ಕ್: ಯುದ್ಧ ಇಡೀ ಜಗತ್ತನ್ನು ನಿಧಾನವಾಗಿ ಸಾವಿನ ಕೂಪಕ್ಕೆ ತಳ್ಳುತ್ತಿದೆ. ಅತ್ತ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಭೀಕರ ಕಾಳಗ ನಡೆಯುತ್ತಿದ್ದರೆ, ಇನ್ನೊಂದ್ಕಡೆ ಉಕ್ರೇನ್ ಹಾಗೂ ರಷ್ಯಾ ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿವೆ. ಹೀಗೆ ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲೇ ವಿಶ್ವಸಂಸ್ಥೆ ಹಮಾಸ್ ಉಗ್ರರಿಗೆ ಖಡಕ್ ಸೂಚನೆ ನೀಡಿದೆ. ಹಾಗಾದರೆ ಈಗ ಹಮಾಸ್‌ಗೆ ವಿಶ್ವಸಂಸ್ಥೆ ನೀಡಿರುವ ಸಂದೇಶ ಏನು?ಯಾರದ್ದೋ ಕಿಚ್ಚು ಇನ್ಯಾರದ್ದೋ ಕಿತ್ತಾಟ. ಆದ್ರೂ ಅಮಾಯಕರು ಸಾಯುವುದು ಎಷ್ಟು …

Read More »

ಪ್ಯಾಲೆಸ್ತೀನ್‌ ಸ್ವತಂತ್ರವಾಗಲಿ ಎಂದು ಘೋಷಣೆ….

ನ್ಯೂಯಾರ್ಕ್: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಬಾಂಬ್ ದಾಳಿಯನ್ನು ಖಂಡಿಸಿ ಸಾವಿರಾರು ಪ್ರತಿಭಟನಾಕಾರರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಬೀದಿಗಿಳಿದಿದ್ದಾರೆ. ಪ್ಯಾಲೆಸ್ತೀನ್‌ ಸ್ವತಂತ್ರವಾಗಲಿ ಎಂದು ಘೋಷಣೆ ಕೂಗಿದ್ದಾರೆ. ಅಮೆರಿಕ ಸರ್ಕಾರ ಇಸ್ರೇಲ್‌ ಪರ ಬ್ಯಾಟ್‌ ಬೀಸಿದ ಸಂದರ್ಭದಲ್ಲೇ ಈ ಪ್ರತಿಭಟನೆಗಳು ಭುಗಿಲೆದ್ದಿವೆ. ಇದು ಯುಎಸ್‌ ಅಧ್ಯಕ್ಷ ಜೋ ಬೈಡನ್‌ ಅವರನ್ನು ಚಿಂತೆಗೀಡು ಮಾಡಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.ಇಸ್ರೇಲಿ ಆಕ್ರಮಣ ಗಾಜಾದ ಮೇಲೆ ಅಕ್ರಮಣ ಮಾಡುತ್ತಿದೆ. ಪ್ಯಾಲೆಸ್ತೀನ ಪ್ರದೇಶಗಳು ವಿಮೋಚನೆಯಾಗಬೇಕಿದೆ’ ಎಂದು ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿದ್ದಾರೆ.

Read More »