Breaking News

ಬೆಳಗಾವಿ

ಸ್ವಗ್ರಾಮಕ್ಕೆ ತೆರಳಿದ ಸಂತೋಷ್ ಮೃತದೇಹ : ಆರೋಪಿಯನ್ನು ಬಂಧಿಸುವವರೆಗು ಅಂತ್ಯ ಕ್ರಿಯೆ ಇಲ್ಲ

ಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ‌ ಲಂಚದ ಆರೋಪ‌ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಮೃತದೇಹವನ್ನು ಸ್ವಗ್ರಾಮ ಬಡಸದತ್ತ ತೆಗೆದುಕೊಂಡು ಹೋಗಲಾಗುತ್ತಿದೆ. ಕಿತ್ತೂರು ತಾಲ್ಲೂಕಿನ ಎಂ‌.ಕೆ. ಹುಬ್ಬಳ್ಳಿ ಮೂಲಕ ಬಡಸ ಗ್ರಾಮಕ್ಕೆ ಸಾಗಿಸಲಾಗುತ್ತಿದೆ. ಅಲ್ಲಿದ್ದ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ ಕುಟುಂಬದವರು, ಆರೋಪಗಳನ್ನು ಬಂಧಿಸಲು ಅಗತ್ಯವಾದ ದಾಖಲೆಗಳು ಇವೆ. ನಮ್ಮ ಬಳಿಯೂ ಸಾಕಷ್ಟಿವೆ. ಅವುಗಳನ್ನು ಕೊಡಲಾಗುವುದು. ಆರೋಪಗಳನ್ನು ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. …

Read More »

ಬಡವರನ್ನು ಬಡವರಾಗಿಯೇ ಮಾಡುವುದು ಬಿಜೆಪಿ ಸಿದ್ಧಾಂತ

ಬೆಳಗಾವಿ : ಬಡವರನ್ನು ಬಡವರಾಗಿಯೇ ಮಾಡುವುದು ಬಿಜೆಪಿ ಸಿದ್ಧಾಂತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದರು.

Read More »

ಸ್ವಗ್ರಾಮಕ್ಕೆ ಮರಳಿದ ಯೋಧರಿ ಅದ್ದೂರಿ ಸ್ವಾಗತ

ಅಥಣಿ(ಬೆಳಗಾವಿ): ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಸ್ವಗ್ರಾಮಕ್ಕೆ ಮರಳಿದ ಯೋಧರಿಗೆ ವಿಶೇಷ ರೀತಿಯಲ್ಲಿ ಬರಮಾಡಿಕೊಳ್ಳಲಾಯಿತ್ತು. ಮೂವರು ಯೋಧರಾದ ಕಾಶಿನಾಥ ಗುರವ, ಬಸಪ್ಪ ಹಳ್ಳದಮಳ, ಮಹೇಶ ಹೊಸಟ್ಟಿ ಅವರನ್ನು ತಾಲೂಕಿನ ಮಾಜಿ ಸೈನಿಕರ ಸಂಘ ಹಾಗೂ ಅಥಣಿ ಜನತೆ ಅದ್ಧೂರಿ ಸ್ವಾಗತದ ಮೂಲಕ ಬರಮಾಡಿಕೊಂಡರು.

Read More »

ಪೋಲಿಸ್ ಯಲ್ಲಪ್ಪ ಭಜಂತ್ರಿಗೆ ಮುಖ್ಯಮಂತ್ರಿ ಪದಕ

ಬೆಳಗಾವಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೊಡಮಾಡುವ ಮುಖ್ಯಮಂತ್ರಿ ಪದಕಕ್ಕೆ ಈ ಬಾರಿ ಬೆಳಗಾವಿಯ ನಾಲ್ವರು ಅಧಿಕಾರಿಗಳು ಭಾಜನರಾಗಿದ್ದಾರೆ. ರಾಜ್ಯ ಮೀಸಲು ಪೊಲೀಸ್ ಪಡೆಯ ಇಲಾಖೆಯಲ್ಲಿ ವಾದ್ಯ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ARSI ಯಲ್ಲಪ್ಪ ಬಾಳಪ್ಪ ಭಜಂತ್ರಿ ಅವರಿಗೆ ಏಪ್ರಿಲ್ 2 ರಂದು ಕೊಡಮಾಡುವ ಮುಖ್ಯಮಂತ್ರಿ ಪದಕ ದೊರೆತಿದ್ದು ಇಲಾಖೆಯ ಹಿರಿಯ ಅಧಿಕಾರಿಗಳು, ಸಂಬಂಧಿಕರು ಸ್ನೇಹಿತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಯಲ್ಲಪ್ಪ …

Read More »

ಬಸ್‌ನಲ್ಲಿ ಕಿಟಕಿಯಿಂದ ಕೈಹೊರಚಾಚಿ ಪ್ರಯಾಣಿಸಿದ ವೃದ್ಧನ ಕೈ ಕಟ್

ಬೆಳಗಾವಿ : ಬಸ್‌ನಲ್ಲಿ ಕಿಟಕಿಯಿಂದ ಕೈಹೊರಚಾಚಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರ ಕೈಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧರ ಕೈ ತುಂಡಾದ ಘಟನೆ ತಾಲೂಕಿನ ಕದ್ರಾ ಬಳಿ ಸಂಭವಿಸಿದೆ . ಅಂಕೋಲಾ ಬೆಳಗಾವಿ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಣಸಿ ಮೂಲದ ಲಕ್ಷಣ ಪಿ ರಾಜುಗಾರ ( 74 ) ಗಯಗೊಂಡ ವೃದ್ಧರಾಗಿದ್ದಾರೆ . ಕದ್ರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ …

Read More »

ನಡು ರಸ್ತೆಯಲ್ಲಿ ಪತ್ನಿಯ ಹತ್ಯೆ ಮಾಡಿದ ಪತಿರಾಯ

ಬೆಳಗಾವಿ : ಮಹಾನಗರದ ಪ್ರವೇಶ ದ್ವಾರದ ಬಳಿ ನಡು ರಸ್ತೆಯಲ್ಲಿ ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಮಧ್ಯಾಹ್ನ ನಡೆದಿದೆ. ಪತಿಯಿಂದಲೇ ಪತ್ನಿ ಮೇಲೆ ಮಾರಾಕಾಸ್ತ್ರದಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು,ಬೆಳಗಾವಿಯ ಕೋಟೆ ಕರೆ ಬಳಿ ಮಧ್ಯಾಹ್ನ ಎರಡು ಗಂಟೆ ವೇಳೆ ಘಟನೆ ನಡೆದಿದೆ. 24 ವರ್ಷದ ಹೀನಾ ಕೌಸರ್ ಮೇಲೆ ಪತಿ ಮಂಜೂರ್‌ನಿಂದ ಹಲ್ಲೆ ನಡೆದಿದೆ.ಆರೋಪಿ ಪತಿ ಮಂಜೂರ್ ಇಲಾಹಿ ನದಾಫ್ …

Read More »

ಅದ್ದೂರಿಯಾಗಿ ಮದುವೆಯಾಗಲು ಹೋಗಿ ಸಿಲಿಕಿಕೊಂಡ ಖದೀಮರು

ಎಅದ್ದೂರಿಯಾಗಿ ಮದುವೆಯಾಗಲು ಬ್ಯಾಂಕ್ ಸಿಬ್ಬಂದಿ ಜೊತೆಗೂಡಿ ಕೋಟ್ಯಂತರ ರೂಪಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಮುರಗೋಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್ನಲ್ಲಿ ಕಳ್ಳತನ ಮಾಡಿದ್ದರು. ನಕಲಿ ಕೀ ಬಳಸಿ ಬ್ಯಾಂಕ್ ಸಿಬ್ಬಂದಿ ಬಸವರಾಜ ಕಳ್ಳತನ ಮಾಡಿದ್ದ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಬಸವರಾಜ ಹುಣಶಿಕಟ್ಟಿ(30), ಸಂತೋಷ್ ಕಂಬಾರ(31), ಗಿರೀಶ್ ಬೆಳವಲ(26) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 4.37 ಕೋಟಿ, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ …

Read More »

ಮೂರನೇಯ ಪತ್ನಿಯಿಂದಲೇ ಬರ್ಬರವಾಗಿ ಹತ್ಯೆಯಾದ ಪತಿ

ಎಮೂರನೇಯ ಮದುವೆಯಾಗಿದ್ದ ಪತ್ನಿಯಿಂದಲೇ ಬರ್ಬರವಾಗಿ ಹತ್ಯೆಯಾದ ಘಟನೆ ನಡೆದಿದೆ. ಈ ಸಂಬಂಧ ಮಹಿಳೆ ಮತ್ತು ಆಕೆಯ ಪುತ್ರ, ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 26 ರಂದು ರಾತ್ರಿ ಪತಿಯ ಕುತ್ತಿಗೆಗೆ ಸೀಳಿ ಪತ್ನಿ ಹತ್ಯೆ ಮಾಡಿದ್ದಳು. ಪತಿ ಬೇಕರಿ ಬ್ಯುಸಿನೆಸ್ ಮಾಡುತ್ತಿದ್ದ. ಆದರೆ ಇತ್ತೀಚೆಗೆ ನಷ್ಟವಾಗಿದ್ದ ಕಾರಣಕ್ಕೆ ಮನೆ ಮಾರಿ ಸಾಲ ತೀರಿಸಲು ಪತ್ನಿ ಬಳಿ ಒತ್ತಾಯಿಸುತ್ತಿದ್ದ. ಆದರೆ ಪತ್ನಿ ಇದಕ್ಕೆ ಒಪ್ಪಿರಲಿಲ್ಲ. ಈ ವಿಚಾರವಾಗಿ ದಂಪತಿ ನಡುವೆ ವೈಮನಸ್ಯವಿತ್ತು. …

Read More »

ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಬೆಳಗಾವಿ : ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ನಗರದ ಹಿಂಡಲಗಾ ಗಣಪತಿ ಮಂದಿರದ ಬಳಿ ನಡೆದಿದೆ . ತಾಯಿ ಕೃಷಾ (36), ಮಗಳು ಭವಿರಾ (4) ಶವ ಪತ್ತೆಯಾಗಿದ್ದು , ಮಗ ‌ ವಿರೇನ್ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ . ಎಸ್ ​ ಡಿಆರ್ ​ ಎಫ್ ತಂಡದಿಂದ ವಿರೇನ್ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ . ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

Read More »

ಪತ್ರಕರ್ತ, ಲೇಖಕ ಭೀಮಸೇನ ತೊರಗಲ್ಲ ನಿಧನ

ಬೆಳಗಾವಿ: ಪತ್ರಕರ್ತ, ಲೇಖಕ ಭೀಮಸೇನ ತೊರಗಲ್ಲ ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು. ಭೀಮಸೇನ ತೊರಗಲ್ಲಗೆ 82 ವರ್ಷ ವಯಸ್ಸಾಗಿತ್ತು. ಇವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಅವರ ಇಚ್ಛೆಯಂತೆ ಯಾವುದೇ ವಿಧಿ-ವಿಧಾನಗಳಿಲ್ಲದೆ ಶಹಪುರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

Read More »