ಚಿಕ್ಕೋಡಿ: ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕುಮಠಳ್ಳಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪೋಟೋಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವಾಟ್ಸಅಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಕುಮಠಳ್ಳಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿರುವ ಭಾವಚಿತ್ರ ವೈರಲ್ ಆಗಿದೆ. ಮಹೇಶ ಕುಮಠಳ್ಳಿ ವರ್ತನೆಯಿಂದ ಜೆಡಿಎಸ್,ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಿದ್ದು ಈ ಮೂಲಕ ವ್ಯಕ್ತವಾಗಿದೆ. ಕಾರ್ಯಕರ್ತರು ಬೆನ್ನಿಗೆ ಚೂರಿ ಹಾಕಿದ ಮಹೇಶ್ ಕುಮಠಳ್ಳಿ ನಮ್ಮ ಕ್ಷೇತ್ರದ ಪಾಲಿಗೆ ಸತ್ತು …
Read More »ಅತೃಪ್ತ ಶಾಸಕರ ನಡೆ ಬೇಸರ ತರಿಸಿದೆ: ಧ್ರುವನಾರಾಯಣ
ಚಾಮರಾಜನಗರ:ರಾಜಕಾರಣದಲ್ಲಿ ಗೆದ್ದಂತಹ ಶಾಸಕರಿಗೆ ಪಕ್ಷ ನಿಷ್ಠೆ ಇರಬೇಕು. ಇತ್ತೀಚಿನ ಈ ಬೆಳವಣಿಗೆಗಳು ಬಹಳ ನೋವು ತರುವಂತಹದ್ದು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿದ್ದಾರೆ.ಹನೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಗೆದ್ದು ಅಧಿಕಾರಕ್ಕಾಗಿ ಹಪಹಪಿಸುವುದು ಸರಿಯಲ್ಲ,ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷಕ್ಕೆ ಗೌರವ ಕೊಡಬೇಕು. ಇದರಿಂದ ಜನರಿಗೂ ಸಹ ರಾಜಕಾರಣಿಗಳ ಮೇಲೆ ವಿಶ್ವಾಸ ಇರುತ್ತದೆ.ಮೂರು- ನಾಲ್ಕು ಬಾರಿ ಗೆದ್ದಿರುವವರಿಗೂ ಅಧಿಕಾರದ ಮೇಲೆ ಆಸೆ ಇರುತ್ತೆ, ಆದ್ರೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ ಎಂದರು.ಅನಿಲ್ …
Read More »ಮೈತ್ರಿಯ ಮತ್ತೊಂದು ವಿಕೆಟ್ ಪತನ ನಿರೀಕ್ಷೆ
ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ರಾಜೀನಾಮೆ ಪರ್ವಕ್ಕೀಗ ಮತ್ತೊಂದು ಮೈತ್ರಿ ವಿಕೆಟ್ ಬೀಳುವ ನಿರೀಕ್ಷೆ ಇದೆ. ಚಳ್ಳಕೆರೆ ಕಾಂಗ್ರೇಸ್ ಶಾಸಕ ಟಿ.ರಘುಮೂರ್ತಿ ರಾಜೀನಾಮೆ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಚಿತ್ರದುರ್ಗ ಜಿಲ್ಲೆಯ ಮಾಜಿ ಸಚಿವ ಹೆಚ್. ಆಂಜನೇಯ ಅವರ ನಡತೆಗೆ ಬೇಸರಗೊಂಡ ರಘುಮೂರ್ತಿ ರಾಜೀನಾಮೆ ನೀಡಬಹುದೆಂಬ ಮಾಹಿತಿ ದೊರೆತಿದೆ. ಸಮುದಾಯದ ಕಡೆಗಣನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ತಮ್ಮದೇ ಸಮುದಾಯದ ಹೀರೋ ರಮೇಶ್ ಜಾರಕಿಹೊಳಿ ಆದೇಶದ …
Read More »ಮುಂದೆಯೂ ಕುಮಾರಸ್ವಾಮಿಯೇ ಸಿಎಂ
ದಾವಣಗೆರೆ: ಸಿದ್ದರಾಮಯ್ಯ , ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂಬುದು ಸುಳ್ಳು. ಕುಮಾರಸ್ವಾಮಿ ಯೇ ಮುಂದೂವರೆಯುವ ಸಾಧ್ಯತೆ ಇದೆಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು. ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಕುರಿತು ಇಷ್ಟೆಲ್ಲಾ ಬೆಳವಣಿಗೆಗಳು, ಗೊಂದಲಗಳು ನಡೆಯುತ್ತಿದ್ದರೂ ಯಾವುದೇ ಮುಖಂಡರು ನನಗೆ ಬೆಂಗಳೂರಿಗೆ ಬರಲು ಕರೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸದ್ಯಕ್ಕೆ ಸರ್ಕಾರದಲ್ಲಿ ಏನು ಆಗುತ್ತಿದೆ ಎಂದು ಹೇಳಲು ಆಗುವುದಿಲ್ಲ ಎಂದರು.ಕುಮಾರಸ್ವಾಮಿ ಹಾಗೂ …
Read More »ಹೆಣ್ಣು ಕೊಟ್ಟ ಅತ್ತೆಯ ಮೇಲೆ ಅಳಿಯನಿಂದ ಮಾರಣಾಂತಿಕ ಹಲ್ಲೆ
ದಾವಣಗೆರೆ; ಅಳಿಯನೇ ಅತ್ತೆಗೆ ಮಚ್ಚಿನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಹೊಂಡದ ವೃತ್ತದ ಬಳಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆ ಭಾಗ್ಯ ಎಂದು ತಿಳಿದುಬಂದಿದೆ. ಆರೋಪಿ ಅಭಿರಾಜ್ ಅಲಿಯಾಸ ಚೋಟು ಎಂಬಾತನನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಗಾಂಧಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದಿಲ್ಲ. ಸಧ್ಯ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆಯನ್ನು ಚೀಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Read More »ಜು.11ರಂದು ಐಬಿಎಂಆರ್ ನಲ್ಲಿ ಉದ್ಯೋಗ ಮೇಳ
ಹುಬ್ಬಳ್ಳಿ: ಐಬಿಎಂಆರ್ ಕಾಲೇಜು ಹಾಗೂ ಆಕ್ಸ್ಫರ್ಡ್ ಪಾಲಿಟೆಕ್ನಿಕ್ ಸಹಯೋಗದಲ್ಲಿ ಜು.11 ರಂದು ಪ್ರಗತಿ -2019 ಉದ್ಯೋಗ ಮೇಳವನ್ನು ವಿದ್ಯಾನಗರದ ಐಬಿಎಂಆರ್ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಐಬಿಎಂಆರ್ ನಿರ್ದೇಶಕ ರೀಯಾಜ ಬಸರಿ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಬಿಸಿನೆಸ್ ಎಜುಕೇಶನ್ ಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿರುವ ಐಬಿಎಂಆರ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸೂಕ್ತ ಪ್ಲೇಸ್ ಮೆಂಟ್ ಮಾಡುವಂತ ಕಾರ್ಯವನ್ನು ಸುಮಾರು ಒಂಬತ್ತು ವರ್ಷಗಳಿಂದ ನಡೆಸುತ್ತಾ …
Read More »ಕರುವನ್ನು ಬಲಿ ತೆಗೆದುಕೊಂಡ ಚಿರತೆ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾತರಕಿ ಗುಡ್ಲಾನೂರು ಗ್ರಾಮದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು,ಕರುವನ್ನು ತಿಂದು ಹೋಗಿರುವ ಘಟನೆ ಇಂದು ನಡೆದಿದೆ.ಚಿರತೆ ದಾಳಿಯಿಂದ ಕಂಗಾಲಾಗಿರುವ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಹರಸಾಹಸಪಡುತ್ತಿದ್ದಾರೆ.ಕೆಲ ದಿನಗಳ ಹಿಂದಿನಿಂದ ಊರ ಹೊರಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ರಾತ್ರಿಯಾಗುತ್ತಿದ್ದಂತೆಯೇ ಊರೊಳಗಡೆ ನುಗ್ಗಿ ಸಣ್ಣ ಕರುಗಳನ್ನು ತಿಂದು ಹೋಗುತ್ತಿರುವುದು ಮಾಮೂಲಿಯಾಗಿದೆ.ಇದರಿಂದ ಸಾವ೯ಜನಿಕರು ಆತಂಕದಿಂದ ಬದುಕುತ್ತಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Read More »ಆಡೂ ಆಟ ಆಡು ಆಡು ಆಡಿ ನೋಡು. ಏಯ್ ರಾಜಾ.. ಏಯ್ ರಾಣಿ.. ಏಯ್ ಜೋಕರ್.. ಇದು ಸಿನಿಮಾ ಹಾಡೇನೋ ನಿಜ. ಆದರೆ,
Exclusive ವರದಿ-1ಹುಬ್ಬಳ್ಳಿ:-ವೀಕ್ ಎಂಡ್ ಬಂದ್ರೇ ಹುಬ್ಬಳ್ಳಿಯ ಸರ್ಕಾರಿ ಬಂಗಲೆಯಲ್ಲೇ ರಾಜಾರೋಷವಾಗಿ ಇಸ್ಪೀಟ್ ಆಡ್ತಾರೆ. ಅಸಲಿಗೆ ಇದು ಇಸ್ಪೀಟ್ ಕ್ಲಬ್ ಆಗ್ಬಿಟ್ಟಿದೆ. ಆಡೋರ್ ಯಾರ್ ಗೊತ್ತಾ.. ನಿವೃತ್ತ ಸರ್ಕಾರಿ ಅಧಿಕಾರಿಗಳೇ.. ಇದು ಸುಳ್ಳೇನಲ್ಲ. ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿಗಳಿಗೆ ಇಲ್ಲಿ ಕಾರ್ಡ್ ಆಡೋ ಖಯಾಲಿ. ಈಗಿರುವ ಸರ್ಕಾರಿ ಅಧಿಕಾರಿಗಳೇ ಇಸ್ಪೀಟ್ ಆಡೋರಿಗೆ ರೆಡ್ ಕಾರ್ಪೆಟ್ ಹಾಕ್ತಾರೆ ಅನ್ನೋದು ನಾಚಿಕೆಗೇಡಿನ ಸಂಗತಿ.ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ದೇಶಪಾಂಡೆ ನಗರದ ಪ್ರವಾಸಿ ಮಂದಿರದಲ್ಲಿ ‘ಕಾರ್ಡ್’ ಕುದುರೆಗಳ …
Read More »ನಾರಾಯಣಗೌಡರ ಬಗ್ಗೆ ಹಗುರವಾಗಿ ಮಾತನಾಡಿದ ಚಂದ್ರಶೇಖರ
ಮಂಡ್ಯ: ಜಿಲ್ಲೆ ಯ ಶಾಸಕ ನಾರಾಯಣಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಮುಖಂಡರಾದ ಬಸ್ ಕೃಷ್ಣೇಗೌಡ ಮತ್ತು ರಾಜಾಹುಲಿ ದಿನೇಶ್ ಅವರ ಕ್ರಮವನ್ನು ಶಾಸಕ ನಾರಾಯಣಗೌಡರ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ.ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕೆ. ಆರ್.ಪೇಟೆಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸತತವಾಗಿ ನಾರಾಯಣಗೌಡರ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿರುವ ಮಾಜಿಶಾಸಕರನ್ನುಏಕವಚನದಲ್ಲಿ ನಿಂಧಿಸುತ್ತಾ, ಬಾಲಿಷವಾದ ಹೇಳಿಕೆಯನ್ನು ನೀಡುತ್ತಾ ತಾಲ್ಲೂಕಿನ ಪ್ರಬುದ್ಧ ಮತದಾರರ ಆಕ್ರೋಶಕ್ಕೆ …
Read More »ಹಾಲಿನ ಡೈರಿಗೆ ನುಗ್ಗಿದ ಬಸ್
ಉಡುಪಿ: ಬೆಳ್ಳಂಬೆಳ್ಳಿಗ್ಗೆ ಅತೀವೇಗವಾಗಿ ಚಲಾಯಿಸುತ್ತಿದ್ದ ಎಕ್ಸ್ ಪ್ರೆಸ್ ಬಸ್ಸೊಂದು ನಿಯಂತ್ರಣ ತಪ್ಪಿ ಹಾಲಿನ ಡೈರಿಗೆ ನುಗ್ಗಿದ ಘಟನೆ ಉಡುಪಿಯ ಕಡಿಯಾಳಿಯಲ್ಲಿ ನಡೆದಿದೆ.ಕಾರ್ಕಳದಿಂದ ಉಡುಪಿಗೆ ಅಗಮಿಸುತ್ತಿದ್ದ ಗಣೇಶ್ ಟ್ರಾವೆಲ್ಸ್ ಎಕ್ಸ್ ಪ್ರೆಸ್ ಚಾಲಕ ಕಡಿಯಾಳಿ ಒಶಿಯಾನ್ ಪರ್ಲ್ ಹೊಟೇಲ್ ಬಳಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದೆ,ಬಸ್ಸು ನೇರವಾಗಿ ರಸ್ತೆ ಫುಟ್ ಪಾತ್ ಹತ್ತಿ ಅಂಗಡಿಗೆ ಡಿಕ್ಕಿ ಹೊಡೆದಿದೆ.ಫುಟ್ ಪಾತ್ ಎತ್ತರದಲ್ಲಿ ಕಾರಣ ಬಸ್ಸಿನ ವೇಗ ಕಡಿಮೆಯಾಗಿ ನಿಂತಿದೆ. ಹಾಲಿನ ಡೈಲಿಯೊಳಗಡೆ ಇದ್ದ ಇಬ್ಬರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





