Breaking News

BigTv News

ಚಾಮರಾಜನಗರ: 27 ತಿಂಗಳ ಸಂಬಳ ಬಾಕಿ; ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲೇ ‘ವಾಟರ್ ಮ್ಯಾನ್’ ಆತ್ಮಹತ್ಯೆ!

ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಕಿರುಕುಳ ಹಾಗೂ 27 ತಿಂಗಳಿಂದ ಸಂಬಳ ಸಿಗದೆ ಮನನೊಂದ ‘ವಾಟರ್ ಮ್ಯಾನ್’ ಪಂಚಾಯಿತಿ ಕಚೇರಿಯ ಕಿಟಕಿ ಗ್ರಿಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಂಗನೂರಿನಲ್ಲಿ ನಡೆದಿದೆ.ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧ್ಯಕ್ಷೆಯ ಪತಿ ಮೋಹನ್‌ಕುಮಾರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮೇಗೌಡ ಸೇರಿದಂತೆ ಪಂಚಾಯಿತಿ ಅಧಿಕಾರಿಗಳು 27 ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಲಾಗಿದೆ.

Read More »

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕೊಲೆ: ಆರೋಪಿ ವಿಘ್ನೇಶ್ ಬಂಧನ

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಕೋ ಕಿಲ್ಲರ್ ವಿಘ್ನೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.ಯುವತಿ ಯಾಮಿನಿ ಕೊಲೆ ಪ್ರಕರಣದಲ್ಲಿ ಸದ್ಯ ಶ್ರೀರಾಂಪುರ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಮುಖ್ಯ ಆರೋಪಿ ವಿಘ್ನೇಶ್ ಜೊತೆ ಹರೀಶ್ ಕೂಡ ಬಂಧನ.ಕೊಲೆಯ ನಂತರ ಹರೀಶ್ ಬೈಕ್‌ನಲ್ಲಿ ವಿಘ್ನೇಶ್‌ನ್ನು ಸೋಲದೇವನಹಳ್ಳಿಗೆ ಕರೆದೊಯ್ದಿದ್ದ. ಪೊಲೀಸರು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ, 14 ಗಂಟೆಯೊಳಗೆ ಇಬ್ಬರನ್ನೂ ಹಿಡಿದಿದ್ದಾರೆ.ವಿಘ್ನೇಶ್‌ ಯಾಮಿನಿಗೆ ಬಲವಂತವಾಗಿ ಮಾಂಗಲ್ಯ ಕಟ್ಟಿದ್ದನಂತೆ, ಮನೆಯಲ್ಲಿ …

Read More »

ಐಪಿಎಸ್ ಅಧಿಕಾರಿ ಪುರಣ್ ಕುಮಾರ್ IAS ಪತ್ನಿ ವಿರುದ್ಧ ಎಫ್‌ಐಆರ್ ದಾಖಲು!

ಹರಿಯಾಣ ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ರೋಹ್ಟಕ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಎಫ್‌ಐಆರ್‌ನಲ್ಲಿ ಐಪಿಎಸ್ ಅಧಿಕಾರಿ ವೈ ಪುರಣ್ ಕುಮಾರ್ ಅವರ ಗನ್‌ಮ್ಯಾನ್ ಸುಶೀಲ್, ಕುಮಾರ್ ಅವರ ಪತ್ನಿ ಪಿ ಅವನೀತ್ ಕೌರ್, ಬಟಿಂಡಾ ಗ್ರಾಮಾಂತರ ಶಾಸಕ ಅಮಿತ್ ರತ್ನ ಮತ್ತು ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಾಗಿದೆ.

Read More »

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ ಆರೋಪಿ ಗುರುತು ಪತ್ತೆ.!

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ ಆರೋಪಿ ಗುರುತು ಪತ್ತೆಯಾಗಿದ್ದು, ಆತನನ್ನು ಬಂಧಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ವ್ಯಕ್ತಿಯೋರ್ವ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ್ದು, ದಾನೇಶ್ ನರೋಣ ಎಂಬಾತನನ್ನು ಬಂಧಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.ನನಗೆ ಬೆದರಿಕೆ ಕರೆ ಬರುತ್ತಿದೆ ಎಂದು ಆರೋಪಿಸಿದ್ದ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಬೆದರಿಕೆ ಕರೆಯ ವಿಡಿಯೋ ರಿಲೀಸ್ ಮಾಡಿದ್ದಾರೆ.

Read More »

ವಿಜಯಪುರ: ಮದ್ಯ ಸೇವಿಸಿದ ಬಳಿಕ ಮೂವರ ನಡುವೆ ಜಗಳ: ಇಬ್ಬರು ಸೇರಿ ಓರ್ವನ ಹತ್ಯೆ!

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವನನ್ನು ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿ ನಡೆದಿದೆ.ಪೊಲೀಸ್ ಪ್ರಕಾರ. ಕುಡಿದ ನಶೆಯಲ್ಲಿ ಮೂವರು ಯುವಕರ ನಡುವಿನ ಜಗಳದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.ಕೊಲೆಯಾದ ಯುವಕ, ಇಬ್ಬರು ಆರೋಪಿಗಳೊಂದಿಗೆ ಸೇರಿ ಒಟ್ಟಿಗೆ ಮದ್ಯ ಸೇವಿಸಿದ್ದರು. ಕುಡಿಯಲು ಮೂವರು ಯುವಕರು ಒಟ್ಟಿಗೆ ಬಂದಿದ್ದರು. ಕುಡಿದ ಬಳಿಕ ಮೂವರ ನಡುವೆ ಏನೋ ಕಾರಣಕ್ಕೆ ಜಗಳ ಉಂಟಾಗಿದೆ. ಈ ವೇಳೆ ಇಬ್ಬರು ಯುವಕರು ಒಬ್ಬನನ್ನು …

Read More »

ವರ್ಚುವಲ್‌ ಕೋರ್ಟ್ ಕಲಾಪದ ವೇಳೆ ವಕೀಲರ ಅಸಭ್ಯ ವರ್ತನೆ – ದಿಲ್ಲಿ ಹೈಕೋರ್ಟ್‌ ಕ್ಲಿಪ್‌ ವೈರಲ್‌

ದೆಹಲಿ ಹೈಕೋರ್ಟ್‌ನ ವರ್ಚುವಲ್ ವಿಚಾರಣೆಯ ಸಮಯದಲ್ಲಿ ವಕೀಲರೊಬ್ಬರು ಅನುಚಿತವಾಗಿ ವರ್ತನೆ ಮಾಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.ಸಾಮಾನ್ಯವಾಗಿ ಕೋರ್ಟ್‌ನ ವಿಚಾರಣೆಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತದೆ. ಅದರಲ್ಲಿ ಕೋರ್ಟ್‌ ಕಲಾಪಗಳು ಅಥವಾ ನ್ಯಾಯಾಧೀಶರು ಬುದ್ದಿವಾದ ಹೇಳುವ ವಿಡಿಯೋಗಳೇ ಜಾಸ್ತಿ ಇರುತ್ತದೆ. ಆದರೆ ಸದ್ಯ ವೈರಲ್‌ ಆಗುತ್ತಿರುವ ವಿಡಿಯೋ ಮಾತ್ರ ಬಹಳ ಅವಮಾನಕಾರಿಯಾಗಿದೆ. ಆನ್‌ಲೈನ್ ಸೆಷನ್‌ಗೆ ಮೊದಲು ವಕೀಲರು ಮಹಿಳೆಯೊಬ್ಬರ ಅನುಚಿತ ವೈಯಕ್ತಿಕ ಕೆಲಸದಲ್ಲಿ …

Read More »

ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!

ಸದಾ ಹಿಂಸೆ ಅನುಭವಿಸುತ್ತಿದ್ದ ಆ ಹೆಂಡತಿ, ಆವತ್ತು ತವರಿಗೆ ಹೋಗಿ ಬರುತ್ತೇನೆ ಎಂದು ಗಂಡನ ಬಳಿ ಹೇಳಿದ್ದಳು. ಈ ಮಾತಿಗೆ ಉದ್ರೇಕಗೊಂಡ ಪತಿ, ಪತ್ನಿಗೆ ಬಲವಾಗಿ ಕಪಾಳಕ್ಕೆ ಹೊಡೆದಿದ್ದಾನೆ. ಪತಿಯ ಬಲವಾದ ಪೆಟ್ಟಿಗೆ ಆಕೆ ಅಲ್ಲೇ ಕುಸಿದುಬಿದ್ದು ತಕ್ಷಣವೇ ಪ್ರಾಣ ಬಿಟ್ಟಿದ್ದಾಳೆ.ಪತ್ನಿ ಸಾವನ್ನಪ್ಪಿದ ನಂತರ ದಾರಿ ತೋಚದೇ ಹೋದ ಆ ಕ್ರೂರಿ ಗಂಡ, ತನ್ನ ಪಾಪದ ಕೃತ್ಯವನ್ನು ಮುಚ್ಚಿಹಾಕಲು ನಿರ್ಧರಿಸುತ್ತಾನೆ. ಆತ ತಕ್ಷಣವೇ ಶವವನ್ನು ತನ್ನ ಜಮೀನಿನಲ್ಲಿದ್ದ ಬೋರ್‌ವೆಲ್‌ ಒಳಗೆ …

Read More »

ಬೆಂಗಳೂರಲ್ಲಿ ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನೇ ಕೊಂದ ಡಾಕ್ಟರ್: FSL ವರದಿಯಲ್ಲಿ ಸತ್ಯ ಬಯಲು, ಅರೆಸ್ಟ್.

ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ವೈದ್ಯ ಪತ್ನಿಯನ್ನೇ ಇಂಜೆಕ್ಷನ್ ನೀಡಿ ಡಾಕ್ಟರ್ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂಬುದಾಗಿ ನಾಟಕವಾಡಿದ್ದಾರೆ. ಆ ಬಳಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇಂಜೆಕ್ಷನ್ ನೀಡಿ ಹತ್ಯೆಗೈದಿರುವಂತ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ.ಮದುವೆಯ ನಂತ್ರ ಪತ್ನಿ ಡಾ.ಕೃತಿಕಾರೆಡ್ಡಿಗೆ ಇರುವಂತ ಅನಾರೋಗ್ಯ ಸಮಸ್ಯೆಯು ಪತಿ ಡಾ.ಮಹೇಂದ್ರರೆಡ್ಡಿಗೆ ಗೊತ್ತಾಗಿತ್ತು. ಇದೇ ಕಾರಣಕ್ಕೆ ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದಂತ ಪತ್ನಿ ಡಾ.ಕೃತಿಕಾರೆಡ್ಡಿ ಹತ್ಯೆಗೆ ಪ್ಲಾನ್ ಮಾಡಿದ್ದರು. ಹುಷಾರು ತಪ್ಪಿದ್ದ ಕಾರಣ …

Read More »

ಮೂಡುಬಿದಿರೆ | ಸಾಮೂಹಿಕ ಅತ್ಯಾಚಾರಕ್ಕೆ ಸಂಚು: ನಾಲ್ವರ ಬಂಧನ: ಬಾಲಕಿಯರ ರಕ್ಷಣೆ

ನಿಡ್ಡೋಡಿ ಗ್ರಾಮದ ಕಲ್ಲಕುಮೇರಿನ ಮನೆಯೊಂದಕ್ಕೆ ಮೂಡುಬಿದಿರೆ ಪೊಲೀಸ್ ಇನ್‍ಸ್ಪೆಕ್ಟರ್ ಸಂದೇಶ್ ಕುಮಾರ್ ನೇತೃತ್ವದ ಪೊಲೀಸರ ತಂಡ ಸೋಮವಾರ ರಾತ್ರಿ ದಾಳಿ ನಡೆಸಿ ನಾಲ್ವರು ಯುವಕರನ್ನು ಬಂಧಿಸಿದ್ದು, ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ.ನಿಡ್ಡೋಡಿ ಕಲ್ಲಕುಮೇರಿನ ಮಹೇಶ, ಕಟೀಲಿನ ಯಜ್ಞೇಶ್, ಮೂಲ್ಕಿ ನಡುಗೊಡೆಯ ದಿಲೀಪ್, ಬಜಪೆ ಕೊಂಡೆಮೂಲೆಯ ಶ್ರೀಕಾಂತ್ ಬಂಧಿತರು.

Read More »

ಶೇ.10 ಕಮಿಷನ್‌ ಆಸೆಗೆ 22 ಮಕ್ಕಳ ಕೊಂದ ವೈದ್ಯರು!

ಮಧ್ಯಪ್ರದೇಶದಲ್ಲಿ 22 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಸಿರಫ್‌ ಅನ್ನು ಶಿಫಾರಸು ಮಾಡಲು ಡಾ. ಪ್ರವೀಣ್‌ ಸೋನಿ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.ಮಕ್ಕಳ ಸಾವಿನ ಬೆನ್ನಲ್ಲೇ ಪೊಲೀಸರು, ಮಕ್ಕಳಿಗೆ ಸಿರಪ್‌ ಶಿಫಾರಸು ಮಾಡಿದ್ದ ಡಾ.ಚಿಕ್ಕಮಕ್ಕಳಿಗೆ ಕೋಲ್ಡ್ರಿಫ್‌ ಸೂಕ್ತವಲ್ಲ ಎಂದು ಗೊತ್ತಿದ್ದರೂ ಆ.24ರಿಂದ ಅ.4ರ ಅವಧಿಯಲ್ಲಿ ಹಲವು ಮಕ್ಕಳಿಗೆ ಡಾ.ಸೋನಿ ಅದೇ ಸಿರಫ್‌ ಶಿಫಾರಸು ಮಾಡಿದ್ದರು ಎಂದೂ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.ಈ ನಡುವೆ ಜಾಮೀನು …

Read More »