ಹುಬ್ಬಳ್ಳಿ: ಶ್ರೀಕೃಷ್ಣ ಜನ್ಮಾಷ್ಟಮಿ-2024ರ ಪ್ರಯುಕ್ತವಾಗಿ ಭಗವಾನ್ ಶ್ರೀ ಕೃಷ್ಣನ 5251 ನೇ ಅವತಾರ ವಾರ್ಷಿಕೋತ್ಸವವನ್ನು ಇಸ್ಕಾನ್ ಧಾರವಾಡದ ನೂತನ ದೇವಸ್ಥಾನ ಪರಿಸರದಲ್ಲಿ ಇಂದು ಸಂಜೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ನರೇಂದ್ರ ಟೋಲ್ ಪ್ಲಾಜಾ ಹತ್ತಿರ, ಎನ್. ಹೆಚ್ 4 ರಸ್ತೆ, ಹಿರೇಮಲ್ಲಿಗವಾಡದಲ್ಲಿರುವ ನೂತನ ಇಸ್ಕಾನ್ ದೇವಸ್ಥಾನ ಪರಿಸರದಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಅಭಿಷೇಕ, ಕೃಷ್ಣಕಥೆ, ಮಹಾ ಮಂಗಳಾರತಿ ಮತ್ತು ಪ್ರಸಾದ ನಡೆಯಲಿವೆ. ಕಲಿಯುಗದಲ್ಲಿ ಅತ್ಯುನ್ನತ …
Read More »ಹುಬ್ಬಳ್ಳಿಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ
ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್ನ ಆರ್.ಕೆ.ಕೊಕಾಟಿ ಹೈಸ್ಕೂಲ್ ಶಾಲೆಯಲ್ಲಿ, 1996ರಿಂದ 2003ರ ವರೆಗೆ ಎಸ್ಎಸ್ಎಲ್ಸಿ ಕಲಿತ ವಿದ್ಯಾರ್ಥಿಗಳು, ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿ ತಮಗೆ ಕಲಿಸಿದ ಗುರುಗಳಿಗೆ ಸತ್ಕರಿಸಿದರು. ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಕಾರ್ಯವನ್ನು ವಿದ್ಯಾರ್ಥಿಗಳು ನೆನೆದರು. ಗುರು-ಶಿಷ್ಯರು ಒಂದು ಕಡೆ ಸೇರಿ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಅಲ್ಲದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂತಸಪಟ್ಟರು. ಈ ಬಗ್ಗೆ ಕಲಿಸಿದ ಗುರುಗಳು ಏನು …
Read More »ಮಾಜಿ ರಾಜ್ಯಪಾಲರ ವಿರುದ್ಧ ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದ ಮಾಜಿ ಸಿಎಂ
ಹುಬ್ಬಳ್ಳಿ: ಹಂಸರಾಜ್ ಭಾರದ್ವಾಜ್ ಒಬ್ಬ ರಾಜಕಾರಣಿಯ ಗವರ್ನರ್ ಆಗಿದ್ದ. ಅಂವ ರಾಜಕಾರಣಿ ಗವರ್ನರ್ ಆಗಿ ವರ್ತಿಸಿದ. ಮಾಜಿ ರಾಜ್ಯಪಾಲರ ವಿರುದ್ಧ ಏಕ ವಚನದಲ್ಲಿಯೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಂಸರಾಜ್ ಭಾರದ್ವಾಜ್ ರಾಜಕಾರಣ ಬಿಟ್ಟರೆ ಬೇರೇನು ಮಾಡಲಿಲ್ಲ. ದಿನ ಬೆಳಗಾದರೆ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿತು…? ಅವತ್ತು ರಾಜ್ಯಪಾಲರ ಭಾಷೆ, ರಾಜ್ಯಪಾಲರ ನಿರ್ಧಾರ ಇವರಿಗೆ ಬೇಕಾಗಿತ್ತು. …
Read More »ಭರತ್ ಶಿಗ್ಗಾವಿಯಿಂದ ಸ್ಪರ್ಧಿಸಲ್ಲ : ಬೊಮ್ಮಾಯಿ
ಹುಬ್ಬಳ್ಳಿ: ನನ್ನ ಪುತ್ರ ಭರತ್ ಬೊಮ್ಮಾಯಿ ಗೆ ಶಿಗ್ಗಾವಿ ಟಿಕೇಟ್ ಕೇಳಿಲ್ಲ. ಭರತ್ ಶಿಗ್ಗಾವಿಯಿಂದ ಸ್ಪರ್ಧಿಸಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾವಿ ಸವಣೂರು ಕ್ಷೇತ್ರದ ಜನ ಭರತ್ ಗೆ ಟಿಕೇಟ್ ಕೊಡಲು ಒತ್ತಡ ತಂದಿಲ್ಲ.ಜೋಶಿಯವರನ್ನು ಭೇಟಿಯಾಗಲು ಶಿಗ್ಗಾವಿ ಕ್ಷೇತ್ರದ ಜನ ಹೋಗಿದ್ದ ಉದ್ದೇಶವೇ ಬೇರೆ.ಆದ್ರೆ ಅದು ಬೇರೆ ರೀತಿಯ ಪ್ರಚಾರವಾಗಿದೆ.ಪಕ್ಷಕ್ಕೆ ಕೆಲಸ ಮಾಡಿದ ನಿಷ್ಠರಿಗೆ ಟಿಕೆಟ್ ಕೊಡುವಂತೆ ಕೇಳಿದ್ದಾರೆ. ಕಷ್ಟದಲ್ಲಿ ಪಕ್ಷ ಕಟ್ಟಿದವರಿಗೆ ಟಿಕೆಟ್ …
Read More »ಆಗಸ್ಟ್ 26 ರಂದು ತಹಶೀಲ್ದಾರ್ ಕಚೇರಿಯಲ್ಲಿ ಕೃಷ್ಣ ಜಯಂತಿ
ಕುಂದಗೋಳ: ತಾಲೂಕು ಆಡಳಿತದ ವತಿಯಿಂದ ಇದೇ ಆಗಸ್ಟ್ 26 ರಂದು ಸೋಮವಾರ ತಾಲೂಕು ದಂಡಾಧಿಕಾರಿಗಳ ಸಭಾ ಭವನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪೂಜೆ, ಸ್ವಾಗತ ಹಾಗೂ ಪ್ರಾಸ್ತಾವಿಕ, ಉದ್ಘಾಟನೆ, ಉದ್ಘಾಟನಾ ಭಾಷಣ, ಸಾಧಕರಿಗೆ ಸನ್ಮಾನ, ಶಾಲಾ ಮಕ್ಕಳಿಂದ ಕೃಷ್ಣನ ವೇಷ ಭೂಷಣ ಸ್ಪರ್ಧೆ, ಉಪನ್ಯಾಸ, ಮುಖ್ಯ ಅತಿಥಿಗಳ ಭಾಷಣ, ಅಧ್ಯಕ್ಷೀಯ ಭಾಷಣ ಮತ್ತು ವಂದನಾರ್ಪಣೆ ನಡೆಯಲಿದೆ. ಈ ಕಾರ್ಯಕ್ರಮವು ತಹಶೀಲ್ದಾರ್ ರಾಜು ಮಾವರಕರ ನೇತೃತ್ವದಲ್ಲಿ ನೆರವೇರಲಿದ್ದು, …
Read More »ಕಾರ್ಕಳದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಕಿಡಿಕಾರಿದ ಮುತಾಲಿಕ್
ಧಾರವಾಡ: ಕಾರ್ಕಳದಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ. ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾರ್ಕಳದಲ್ಲಿ ನಡೆದಿದ್ದು ಸಾಮೂಹಿಕ ಅತ್ಯಾಚಾರ. ಅಲ್ತಾಫ್ ಎನ್ನುವವನು ಅತ್ಯಂತ ಕ್ರೌರ್ಯವಾಗಿ ಯುವತಿಯನ್ನು ಕರೆದುಕೊಂಡು ಹೋಗಿ ತನ್ನ ಸಹಚರರನ್ನೂ ಕರೆದುಕೊಂಡು ಹೋಗಿ ಯುವತಿಗೆ ಮತ್ತು ಬರುವ ಔಷಧಿ ಕೊಟ್ಟು ಎಲ್ಲರೂ ಸೇರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಅವನ ಜೊತೆ ಯಾರೆಲ್ಲ …
Read More »ತೆರೆದ ರಸ್ತೆ ಗುಂಡಿ: ವಾಹನ ಸಂಚಾರಕ್ಕೆ ಅಸ್ತವ್ಯಸ್ತ
ಕುಂದಗೋಳ : ರಸ್ತೆಯ ನಡುವೆ ಗುಂಡಿಯೊಂದು ತೆರೆದಿದ್ದು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಹಿರೆನೇರ್ತಿ ಚಿಕ್ಕನೇರ್ತಿ ರಸ್ತೆ ಮದ್ಯೆ ಸೃಷ್ಟಿಯಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಹಿರೆನೇರ್ತಿ ಚಿಕ್ಕನೇರ್ತಿ ಇಕ್ಕಟ್ಟಾದ ರಸ್ತೆ ಮದ್ಯೆ ಗುಂಡಿಯೊಂದು ತೆರೆದಿದೆ. ಸದ್ಯ ಸಾರಿಗೆ ಬಸ್ ಸೇರಿದಂತೆ ಹಲವು ವಾಹನ ಸಂಚಾರ ಮಾಡುವ ಈ ರಸ್ತೆ ಗುಂಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಈ ಬಗ್ಗೆ ಸ್ಥಳೀಯ ಜನರು ಲೋಕೋಪಯೋಗಿ …
Read More »ಪ್ರಯಾಣಿಕ ಬಿಟ್ಟ ಹೋದ ಬ್ಯಾಗ್ ನ್ನು ಮರಳಿಸಿದ ಆಟೋ ಚಾಲಕ
ಧಾರವಾಡ: ಪ್ರಯಾಣಿಕ ಬಿಟ್ಟು ಹೋದ ಬ್ಯಾಗ್ ಅನ್ನು ಆಟೋ ಚಾಲಕ ಪೊಲೀಸರ ಸಮ್ಮುಖದಲ್ಲಿ ಮರಳಿಸಿ ಮಾನವೀಯತೆ ಮೆರೆದಿದ್ದಾರೆ. ನಗರದ ಜರ್ಮನ್ ಆಸ್ಪತ್ರೆಯಿಂದ ಧಾರವಾಡ ಹಳೇ ಬಸ್ ನಿಲ್ದಾಣದ ವರೆಗೆ ಆಟೋ ಹತ್ತಿ ಬಂದಿದ್ದರು.ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಗುಳಪ್ಪ ನಿಂಗಪ್ಪ ಕವಳಿ ಎಂಬುವರು ಬ್ಯಾಗ್ ಆಟೋದಲ್ಲಿ ಬಿಟ್ಟು ಹೋಗಿದ್ದು, ನಂತರ ಧಾರವಾಡ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬ್ಯಾಗಿನಲ್ಲಿ ಫೋನ್, ಒಂದು ತೊಲೆ ಬಂಗಾರ ಚೈನ್, ಪರ್ಸ್ ಹಾಗೂ …
Read More »ಛಬ್ಬಿ ಗಣಪತಿ ದರ್ಶನ ಸೆ.7 ರಿಂದ 9 ರವರೆಗೆ
ಹುಬ್ಬಳ್ಳಿ : ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಕುಲಕರ್ಣಿ ಮನೆತನದಿಂದ ಕೆಂಪು ಗಣಪತಿ ಉತ್ಸವವು ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ. ಎಸ್ ರಾಮಚಂದ್ರ ಕುಲಕರ್ಣಿ, ಮೋಹನರಾವ ಕುಲಕರ್ಣಿ, ವಿನಾಯಕ ಕುಲಕರ್ಣಿ, ನಾರಾಯಣರಾವ ಕುಲಕರ್ಣಿ, ಸೋಮರಾವ ಕುಲಕರ್ಣಿ, ವಿಶ್ವನಾಥ ವಾಸುದೇವ ಕುಲಕರ್ಣಿ ಹಾಗೂ ಮಾಲತೇಶ ಕುಲಕರ್ಣಿ ಅವರ ಮನೆಗಳಲ್ಲಿ ಅದ್ದೂರಿಯಾಗಿ ಉತ್ಸವ ಆಚರಿಸಲಾಗುತ್ತಿದೆ. ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಗಳಲ್ಲಿ ಆಯುಧಗಳನ್ನು ಹೊಂದಿರುವುದು ಇಲ್ಲಿನ …
Read More »ಕೃಷಿ ಅಧಿಕಾರಿಗಳ ಸಲಹೆ ಪಡೆದು ಉತ್ತಮ ಬೇಸಾಯ ರೂಡಿಸಿಕೊಳ್ಳಿ : ಸುರಕೋಡ
ಕುಂದಗೋಳ : ಕೃಷಿ ಇಲಾಖೆ ಸವಲತ್ತು ಹಾಗೂ ಕೃಷಿ ಅಧಿಕಾರಿಗಳ ಸಲಹೆ ಪಡೆದು ಉತ್ತಮ ಬೇಸಾಯದ ಕ್ರಮಗಳನ್ನು ರೈತರು ರೂಢಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಮಂಜುಳಾ ಸುರಕೋಡ ಹೇಳಿದರು. ಅವರು ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದ ಎಲ್.ಡಿ.ಸಿ ಕಂಪನಿ ಮತ್ತು ದೇಶಪಾಂಡೆ ಫೌಂಡೇಶನ್ ನೇತೃತ್ವದಲ್ಲಿ ನಡೆದ ರೈತರು ಸಭೆಯ ನೇತೃತ್ವ ವಹಿಸಿ ಮಾತನಾಡಿ ರೈತರಿಗೆ ಹತ್ತಿ ಬೆಳೆ ಬಗ್ಗೆ ಸಲಹೆ ನೀಡಿದರು. ದೇಶಪಾಂಡೆ ಫೌಂಡೇಶನ್ ಮತ್ತು ಎಲ್.ಡಿ.ಸಿ ಕೃಷಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





