Breaking News

ಹುಬ್ಬಳ್ಳಿ ಸುದ್ದಿ

ಕುಸುಗಲ್ ಗ್ರಾಮದಲ್ಲಿ ಸಮುದಾಯ ಜಾಗೃತೀಕರಣ ಪಾಕ್ಷಿಕ‌ ಕಾರ್ಯಕ್ರಮ

ಹುಬ್ಬಳ್ಳಿ ಸಣ್ಣ ಕುಟುಂಬ ಸುಖಿ ಕುಟುಂಬ, ಗಂಡಿರಲಿ ಹೆಣ್ಣಿರಲಿ ಮಕ್ಕಳೆರಡೇ ಇರಲಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸೋಫಿಯಾ ಹೇಳಿದರು.ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಸಮುದಾಯ ಜಾಗೃತೀಕರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನ ಆಯ್ಕೆ ಮಾಡಿಕೊಳ್ಳುತ್ತೇವೆ …

Read More »

ಜುಲೈ.5 ರಂದು ಅವಳಿ ನಗರದ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ ವಿವರ

ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜುಲೈ 5 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ. ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು ಗೋಕುಲ ರಸ್ತೆ / ನೆಹರೂ ನಗರ ಆನ್‌ಲೈನ್ ವ್ಯಾಪ್ತಿಯ- ಮಯೂರ ನಗರ, ಅಂಬಾಭವಾನಿ ದೇವಸ್ಥಾನ, ಬಿಜಾಪೂರ ಲೈನ್, ಗಿರಣಿ ಲೈನ್, ಕೃಷ್ಣಾ ಪಾರ್ಕ.ನೆಹರೂನಗರ ವ್ಯಾಪ್ತಿಯ- ರಾಜೇಂದ್ರ ನಗರ, ಚೇತನಾ ಕಾಲನಿ, ಚೇತನ ನಗರ, ನಾವಳ್ಳಿ …

Read More »

ಪ್ಲಾಸ್ಟಿಕ್‌ ಬಳಕೆ ವ್ಯಾಪರಸ್ಥರಿಗೆ ದಂಡ ವಿಧಿಸಿದ ಮಹಾನಗರ ಪಾಲಿಖೆ ಅಧಿಕಾರಿಗಳು

ಹುಬ್ಬಳ್ಳಿ: ಪ್ಲಾಸ್ಟಿಕ್ ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿದರೂ ಕೂಡ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾತ್ರ ಎಗ್ಗಿಲ್ಲದೇ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 8ರ ಸಹಾಯಕ ಆಯುಕ್ತ ಮಲ್ಲಿಕಾರ್ಜುನ ಬಿ.ಎಮ್ ಅವರ ನೇತೃತ್ವದಲ್ಲಿ ವಲಯ ಕಚೇರಿ 8ರ ವಿವಿಧ ಪ್ರದೇಶದಲ್ಲಿ ನಿಷೇಧಿತ ಪ್ಲಾಸ್ಟಿಕ್ ರೆಡ್ ಮಾಡಿ ದಂಡ ವಿಧಿಸಲಾಯಿತು. ಇನ್ನು …

Read More »

ಹುಬ್ಬಳ್ಳಿ ಕೇಬಲ್ ಆಪರೇಟರ್ ವೈ ಯೋಹಾನ್ ನಿಧನ: ಪತ್ರಕರ್ತರಿಂದ ಸಂತಾಪ;

ಹುಬ್ಬಳ್ಳಿಯ ಕೇಬಲ್ ಆಪರೇಟರ್ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದ ಯೇಶಮಲ್ಲಾ ಯೋಹಾನ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ನಾಲ್ಕು ಗಂಟೆಗೆ ಗದಗ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಯೋಹಾನ ಅವರು ಇಬ್ಬರು ಗಂಡು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ವೈ. ಯೋಹಾನ್ ಅವರು ವೃತ್ತಿಯಲ್ಲಿ ಟೇಲರಿಂಗ್ ಕೆಲಸ ಮಾಡುತ್ತಲೇ ಕೇಬಲ್ ವ್ಯವಹಾರಕ್ಕೆ ಇಳಿದಿದ್ದರು. ಅವರ ಕಾರ್ಯಕ್ಷಮತೆ ಎಷ್ಟಿತ್ತೆಂದರೆ ಕೆಲವೇ ವರ್ಷಗಳಲ್ಲಿ ವೈ. …

Read More »

ಬಿ.ಎಸ್,ಏಪ್.‌ ನಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ ಗ್ರಾಮಸ್ಥರು

ಹುಬ್ಬಳ್ಳಿ: ಈತ ನಮ್ಮೂರ ಯೋಧ! ನಮ್ಮ ದೇಶದ ಹೆಮ್ಮಯ ಪುತ್ರ , ಗಡಿಯಲ್ಲಿ ಸೇವೆ ಸಲ್ಲಿಸಿ ಊರಿಗೆ ಬಂಧಾನ್‌ ನೋಡ್ರಿ ಎಂದು ಗ್ರಾಮದ ಜನರು ಸಂತೋಷದಿಂದ ಯೋಧನಿಗೆ ಸ್ವಾಗತ ಕೋರಿದ್ದಾರೆ ಮಕ್ಕಳು ಮಹಿಳೆಯರು ಹಾಗೂ ಗ್ರಾಮದ ಗುರುಹಿರಿಯರು ಹೆಮ್ಮೆಯ ಯೋಧನಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನು ಮಕ್ಕಳು, ಹಿರಿಯರು ವೀರಯೋಧನಿಗೆ ಹೂ ಕೊಟ್ಟು, ಕೈ ಕುಲಕುತ್ತಾ ಅಭಿನಂದನೆ ತಿಳಿಸಿದ್ದಾರೆ, ಹಿರಿಯರನ್ನ ಕಾಣುತ್ತಲೇ ತಾನೇ ಕಾಲಿಗೆ ಬಿದ್ದು ಅವರ ಆಶೀರ್ವಾದ ಬೇಡುತ್ತಾ ಶಿರಗುಪ್ಪಿ …

Read More »

ವಿಮಾನ ನಿಲ್ದಾಣ ಉನ್ನತೀಕರಣ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಮಹತ್ವದ ಸಭೆ

ಹುಬ್ಬಳ್ಳಿ: 03, ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್ ಸುಧಾರಣೆ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪ್ರಸ್ತಾವನೆಗೆ ಸ್ಪಂದಿಸಿ ಕೇಂದ್ರ ಸರಕಾರ ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವರು, ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಲಿದೆ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ರಾಜ್ಯದ 2ನೇ …

Read More »

ಆನಂದ ನಗರದಲ್ಲಿ ಪೋಲಿಸ್‌ ರಿಂದ ಭಾವೈಕ್ಯತಾ ಭೋಜನ ಕೂಟ

ಹುಬ್ಬಳ್ಳಿ ಧಾರವಾಡ ಪೋಲಿಸ್‌ ಕಮೀಷನರೇಟ್‌ ಹಳೇ ಹುಬ್ಬಳ್ಳಿ ಪೋಲಿಸ್‌ ಠಾಣೆಯ ಜನಸ್ನೇಹಿ ಪೋಲಿಸ್‌ ಬೀಟ್‌ 52 ರ ಬ್ರಕೀದ್‌ ಹಬ್ಬದ ಪ್ರಯುಕ್ತ ಭಾವೈಕ್ಯತಾ ಬೋಜನ ಕೂಟವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ ಪೋಲಿಸ್‌ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಬಾಗಿಯಾಗಿದ್ದರು, ಹುಬ್ಬಳ್ಳಿಯ ನವ ಆನಂದ ನಗರದಲ್ಲಿನ ವೆಲ್‌ ಕಮ್‌ ಸಭಾ ಭವನದಲ್ಲಿ ಈ ಕಾರ್ಯಕ್ರಮನ್ನು ಆಯೋಜನೆ ಮಾಡಲಾಗಿತ್ತು, ನವ ಆನಂದ ನಗರ ಮುಸ್ಲಿಂ ಹಾಗೂ ಹಿಂದು ಭಾಂದವರು ಕಾರ್ಯಕ್ರಮದಲ್ಲಿ …

Read More »

ಪತ್ನಿಯನ್ನೇ ಕೊಲೆ ಮಾಡಿದ ದುಷ್ಟ ಪತಿರಾಯ ಪರಾರಿ

ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ದುಷ್ಟ ಪತಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಪತ್ನಿ ಸುಧಾಳನ್ನು ಕೊಲೆ ಮಾಡಿರುವ ಪತಿ ಶಿವಯ್ಯ ಹಿರೇಮಠ ಪರಾರಿಯಾಗಿದ್ದಾನೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಶಿವಯ್ಯ ಮತ್ತು ಸುಧಾ, ಪಾಲಕರಿಂದ ದೂರ ಇದ್ದರು. ನೇಕಾರ ನಗರದ ಬಾಡಿಗೆ ಮನೆಯಲ್ಲಿದ್ದ ದಂಪತಿಗೆ ಒಂದೂವರೆ ತಿಂಗಳ ಗಂಡು ಮಗುವಿದೆ‌. ಗಂಡಹೆಂಡತಿ ನಡುವೆ ಹೊಂದಾಣಿಕೆ ಕೊರತೆಯಿಂದ ಆಗಾಗ ಜಗಳ ನಡೆಯುತ್ತಿತ್ತು …

Read More »

ಹುಬ್ಬಳ್ಳಿಯ ಆಕ್ಸ್ ಫರ್ಡ ಕಾಲೇಜನಲ್ಲಿ ಗುರುಪೂರ್ಣಿಮೆ ದಿನಾಚರಣೆ

ಕುಸುಗಲ್ ರಸ್ತೆಯ ಡಾ.ಆರ್.ಬಿ.ಪಾಟೀಲ್ ಮಹೇಶ್ – ಆಕ್ಸ್‌ಫರ್ಡ ಪಿಯು ವಿಜ್ಞಾನ ಮಹಾವಿದ್ಯಾಲಯ ಹುಬ್ಬಳ್ಳಿ . ಇಂದು ಗುರುಪೂರ್ಣಿಮೆ, ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಂ ಎಸ್ ಅವರಿಗೆ ಕಾಲೇಜಿನ ಶಿಕ್ಷಕ ವೃಂದವರಿಂದ. ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಶ್ರೀ ಅನೀಲ ಕದಂ, ಶ್ರೀ ಮುತ್ತಪ್ಪ ಚಿಕ್ಕರಾಯರ್, ಶ್ರೀ ವೀರೇಶ ಬಿಜ್ಜರಗಿ, ಶ್ರೀಮತಿ ಸೌಮ್ಯ ಶಾಂತಗಿರಿ, ನಿಶಾ ವರ್ಮ, ಅಕ್ಷತಾ ಜಿತೂರಿ, …

Read More »

ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಿ, ರಾಜಣ್ಣ ಕೊರವಿ ಅವರಿಂದ ಸಾರ್ವಜನಿಕರಲ್ಲಿ ಮನವಿ

ಹುಬ್ಬಳ್ಳಿ-03 : ವಾರ್ಡ್ ನಂಬರ್ 36ರಲ್ಲಿ ಬರುವ ಚನ್ನಪ್ಪನ ಕೆರೆಗೆ ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ರಾಜಣ್ಣ ಕೊರವಿ, ಭೇಟಿ ನೀಡಿ ಮಾತನಾಡಿದ ಅವರು ಚನ್ನಪ್ಪನ ಕೆರೆಯಲ್ಲಿ ಬೆಳೆದಂತಹ ಅಂತರಗಂಗೆ ಕಸವನ್ನ ಕೂಡಲೇ ಸ್ವಚ್ಛಗೊಳಿಸಬೇಕು ಹಾಗೂ ಕೆರೆಗೆ ಬರುವ ಒಳಚರಂಡಿ ನೀರನ್ನು ತಡೆಯಬೇಕು, ಹಾಗೂ ಸಾರ್ವಜನಿಕರು ಕಸವನ್ನು ಕೆರೆಯಲ್ಲಿ ಒಗೆಯುವುದನ್ನು ನಿಲ್ಲಿಸಬೇಕು ಮತ್ತು ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪಾಲಿಕೆ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು. …

Read More »