BigTv News
March 7, 2025
Breaking News, Crime, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಇತ್ತೀಚಿಗೆ ತಣ್ಣಗಾದ ಹಳೆ ಹುಬ್ಬಳ್ಳಿ ಪ್ರಕರಣಗಳ ಮಧ್ಯೆ ಇದೀಗ ಒಂದಿಷ್ಟು ಸ್ಥಳೀಯ ಯುವಕರಿಂದ ಹೊಡೆದಾಟ ಪ್ರಕರಣವು ಬೆಳಕಿಗೆ ಬಂದಿದೆ. ಮಾರ್ಚ್ 5ರಂದು ಸುಮಾರು ರಾತ್ರಿ 11:30ಕ್ಕೆ ತಿಮ್ಮಸಾಗರ ರೋಡ್ ಐ.ಟಿ.ಐ ಕಾಲೇಜ್ ಹತ್ತಿರ ಕಾಲೇಜು ಯುವಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣವು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಂಟು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿತರಾದ : ದೀಪಕ್ ಪೂಜಾರ್,ರಾಘವೇಂದ್ರ ಪೂಜಾರ್, ಅಮರ್ …
Read More »
BigTv News
March 7, 2025
SPECIAL NEWS, ಕರ್ನಾಟಕ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಇದೇ ಮಾರ್ಚ್ 8ರಂದು ಮಹಿಳಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಲವು ಸಂಬಂಧ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಹುಬ್ಬಳ್ಳಿ ನಗರದ ತೋಳನ್ಕೆರೆ ಮುಂಭಾಗದಲ್ಲಿ ಬೈಕ್ ರ್ಯಾಲಿ ಇಂದ ಈ ಕಾರ್ಯಕ್ರಮವು ಶುರುವಾಗಲಿದೆ ದಿನಾಂಕ 8 ರಂದು ಬೈಕ್ ರ್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ಗೇಮ್ಸ್ ಚಟುವಟಿಕೆಗಳನ್ನು ಹಾಗೂ ಲಕ್ಕಿ ಡಿಪ್ ವ್ಯವಸ್ಥೆ ಮಾಡಲಾಗಿದೆ. ದಿನಾಂಕ 9 ರಂದು ಯೋಗಾಸನದ ಮೂಲಕ …
Read More »
BigTv News
March 5, 2025
Health & Fitness, News, SPECIAL NEWS, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಇದೀಗ ಹುಬ್ಬಳ್ಳಿಯಲ್ಲಿ ನಾಳೆಯಿಂದ ಗರ್ಭದಾರಣೆ ಜಾಗೃತಿ ಮಾಸ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹುಬ್ಬಳ್ಳಿಯ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗರ್ಭಿಣಿಯರು ಮತ್ತು ಗರ್ಭಧಾರಣೆ ಪೂರ್ವ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ. ದಿನಾಂಕ ಮಾರ್ಚ್ 3ರಿಂದ ದಿನಾಂಕ ಮಾರ್ಚ್ 13ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಆರೋಗ್ಯ ತಪಾಸಣಾ ಶಿಬಿರವು ನಡೆಯಲಾಗುತ್ತದೆ. ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ. ಶೋಭಾ ಬೆಂಬಳಗಿ …
Read More »
Shaikh BigTv
November 3, 2024
Breaking News, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಶಿಗ್ಗಾಂವಿ ಉಪಚುನಾವಣೆ ಗೆಲುವಿಗಾಗಿ ಸಭೆ ಮಾಡಲಾಗಿದೆ ಮೂರು ಪುರಸಭೆ, ಆರು ಜಿಲ್ಲಾ ಪಂಚಾಯತ್, 23 ತಾಲೂಕ ಪಂಚಾಯತ್ ಸಭೆ ಮಾಡಿದ್ದೇವೆ. ಸಭೆಯಲ್ಲಿ ಅನೇಕ ಹಿರಿಯರು ಭಾಗಿಯಾಗಿದ್ದು ಪದಾಧಿಕಾರಿಗಳಿಗೆ ಅನೇಕ ಸೂಚನೆ ಕೊಟ್ಟಿದ್ದೇವೆ. ನಮ್ಮ ಪ್ರಕಾರ ಶಿಗ್ಗಾಂವಿಯಲ್ಲಿ ನಾವೇ ಗೆಲ್ತೀವಿ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದೆ ನಾನು …
Read More »
Shaikh BigTv
October 25, 2024
Breaking News, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ ಫಯಾಜ್ ತೂರೆವಾಲೆ ಎಂಬಾತನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 2 ಲಕ್ಷ 25 ಸಾವಿರ ಮೌಲ್ಯದ ವಿವಿಧ ಕಂಪನಿಗಳ 6 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಆರ್.ನಾಯಕ, ಪಿಎಸ್ಐ ರವಿ ವಡ್ಡರ್ ಹಾಗೂ ಸಿಬ್ಬಂದಿಗಳಾದ ಸಿ.ಎಫ್.ಅಂಬಿಗೇರ, ಎನ್.ಐ. ನೀಲಗಾರ, ಹನುಮಂತ ಕರಗಾಂವಿ, ಆರ್.ಎಸ್.ಹರಕಿ, ಬಿ.ಎಸ್.ಗಳಗಿ, ಆರ್.ಎಚ್. ಹಿತ್ತಲಮನಿ, ಎಸ್.ಎಸ್.ಮೇಟಿ, ಜಿ.ವಿ.ವಗ್ಗಣ್ಣವರ ತಂಡದ …
Read More »
Shaikh BigTv
October 19, 2024
Breaking News, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ : ಪ್ರಲ್ಹಾದ್ ಜೋಶಿ ಹಾಗೂ ಅವರ ಸಹೋದರ ಬೇರೆ ಬೇರೆಯಾಗಿದ್ದಾರೆ.ಅವರಿಗೆ ಪ್ರಲ್ಹಾದ್ ಜೋಶಿಗೂ ಸಂಬಂಧವಿಲ್ಲ.ಸುಮ್ಮನೆ ಅವರ ಹೆಸರು ಎಳೆದು ತಾರಲಾಗುತ್ತಿದೆ.ಎಲ್ಲೆಡೆ ಒಳ್ಳೆಯವರು ಇದ್ದಂತೆ, ಕೆಟ್ಟವರು ಇರ್ತಾರೆ.ನನ್ ಮೇಲೆ ಯಾವುದೇ ವಾರೆಂಟ್ ಇಲ್ಲ ಎಂದು ಪ್ರಲ್ಹಾದ್ ಜೋಶಿ ಸಹೋದರನ ಮೇಲೆ ವಂಚನೆ ಪ್ರಕರಣ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕ್ರಿಯಿಸಿದರು. ನಗರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು ನಾನು ದಾವಣಗೆರೆಯಲ್ಲೇ ಇದ್ದೆ, ಎಸ್ಪಿ ಪಕ್ಕದಲ್ಲೇ ಇದ್ದೆ ಅಲ್ಲಿಯೇ ಊಟ …
Read More »
Shaikh BigTv
October 8, 2024
Breaking News, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಪವಿತ್ರ ಪ್ರವಾದಿ ಹಜರತ ಮುಹಮ್ಮದ್ ಪೈಗಂಬರ್ ಅವರ ಕುರಿತು ತನ್ನ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಮ್ಮದ್ ಪೈಗಂಬರಿಗೆ ಅವಹೇಳನಕಾರಿ ನಿಂದನೆ ಮಾಡಿ ಶಾಂತಿ ಸುವ್ಯವಸ್ಥೆ ಹಾಗೂ ಸಹೋದರತೆಗೆ ಭಂಗ ತರುವ ದುರುದ್ದೇಶದಿಂದ ಹಾಗೂ ಮುಸ್ಲಿಮರ ಅಸ್ಮಿತೆಯನ್ನು ಪ್ರಶ್ನಿಸುವ …
Read More »
Shaikh BigTv
September 9, 2024
Breaking News, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಹೊಸ ಸಿಎಂ, ಹೊಸ ಸರ್ಕಾರನಾ ಅಂದ್ರೆ ಕಾಲ ನಿರ್ಣಯ ಮಾಡುತ್ತದೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮುಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದ್ದೇವೆ ಅಂತಾರೆ. ಸಿದ್ದರಾಮಯ್ಯ ಹೋಗೋದು ಫಿಕ್ಸ್ ಆಗಿದ್ದು, ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಂದು ಡಜನ್‌ಗೂ ಹೆಚ್ಚು ಜನ ಆಕಾಂಕ್ಷಿಗಳಾಗಿದ್ದಾರೆ. ಸಿಎಂ ಸಂಗೊಳ್ಳಿ …
Read More »
BigTv News
September 4, 2024
Breaking News, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಕಳೆದ ಬಾರಿ ರಾಜ್ಯದಲ್ಲಿ ಸಾಕಷ್ಟು ಹೈಡ್ರಾಮಗೆ ಕಾರಣವಾಗಿದ್ದ ಹುಬ್ಬಳ್ಳಿಯ ಇದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಯ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿಯೂ ಈದ್ದಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಸಿಕ್ಕಿದೆ. ಈ ಬಾರಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಗಣೇಶೋತ್ಸವದ ಆಚರಣೆಗೆ ಅವಕಾಶ ನೀಡಿದೆ. ಸೆಪ್ಟೆಂಬರ್ 7 ರಂದು ಗಣೇಶ ಪ್ರತಿಷ್ಠಾಪನೆ ಮಾಡಿ ಬಳಿಕ ಸೆಪ್ಟೆಂಬರ್ 9ರಂದು ಗಣೇಶ ವಿಸರ್ಜನೆ ಮಾಡುವಂತೆ ಸೂಚಿಸಿ ಮೂರು …
Read More »
Shaikh BigTv
September 4, 2024
Breaking News, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ತಿಳಿಸಿದರು. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಸರ್ವ ಧರ್ಮದ ಮುಖಂಡರ ಸಭೆ ನಡೆಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾವುದೇ ರೀತಿಯಲ್ಲೂ ಕಾನೂನು ಉಲಂಘಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
Read More »