BigTv News
September 4, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನಗೊಂಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಧಾರವಾಡದ ಮಮತಾ ಫಾರ್ಮಹೌಸ್ ನಲ್ಲಿ ಮಾತನಾಡಿದ ಅವರು ನಾನು ಕಟ್ಟಾ ಕಾಂಗ್ರೇಸ್ಸಿಗ, ನನಗೆ ಬಿಜೆಪಿ ಸಿದ್ಧಾಂತ ಆಗಿ ಬರಲ್ಲ. ಹೀಗಾಗಿ ಕಾಂಗ್ರೇಸ್ ಬಿಟ್ಟು ಹೋಗಲ್ಲ ಎಂದಿದ್ದಾರೆ. ಕಾಂಗ್ರೇಸ್, ಬಿಜೆಪಿ ಪಕ್ಷದವರು ಎಲ್ಲರನ್ನು ಕರೆಯುತ್ತಿರುತ್ತಾರೆ.ಹಾಗಂತ ಹೋಗೋಕೆ ಆಗಲ್ಲ ಎಂದು ಸ್ಪಷ್ಟಪಡಿಸಿದರು. ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ …
Read More »
BigTv News
September 1, 2023
News, ಕರ್ನಾಟಕ, ಜಿಲ್ಲೆ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಬಿಜೆಪಿ ಕುರಿತು ಶೆಟ್ಟರ್ ಅವರು ಬಿಜೆಪಿ ಪಕ್ಷ ಮುಳುಗುತ್ತಿರುವ ಹಡಗು ಬಿ.ಎಲ್ ಸಂತೋಷ್ ಅವರು ಮೊದಲು ಪಕ್ಷದಲ್ಲಿದವರನ್ನು ಉಳಿಸಿಕೊಳ್ಳಲಿ ಅವರ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು ಉಳಿಸಿಕೊಂಡು, ಪಕ್ಷದ ಅಸ್ತಿತ್ವ ಉಳಸಿಕೊಂಡರೆ ಸಾಕಾಗಿದೆ. ಒಂದು ವೇಳೆ ಅವರ ಸಂಪರ್ಕದಲ್ಲಿ ಶಾಸಕರುಗಳು ಇದ್ದರೆ ನಾಳೆಯಿಂದಲೇ ಆಪರೇಶನ್ ಸ್ಟಾರ್ಟ್ ಮಾಡಲಿ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿಎಲ್ ಸಂತೋಷ್ ಹೇಳಿಕೆ ವಿಚಾರವಾಗಿ, …
Read More »
BigTv News
September 1, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ನವಲಗುಂದ: ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ರ ಒಂದನೇ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕ್ರೀಡಾ ಕೂಟ ಜರುಗಿದವು. ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣ ಪದ್ಧತಿ ಇದ್ದ ಕಾಲದಿಂದಲೇ ಶಿಕ್ಷಣದೊಂದಿಗೆ ದೈಹಿಕ ವ್ಯಾಯಾಮ ಹಾಗೂ ಮನರಂಜನೆಗಾಗಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಈ ಪದ್ಧತಿ ಇಂದಿನ ಶಿಕ್ಷಣ ಪದ್ಧತಿವರೆಗೂ ಮುಂದುವರಿದೆ ಎಂದು ಮುಖ್ಯೋಪಾಧ್ಯಾಯರಾದ ಡಿ.ಜೆ ಹುಲ್ಲೂರ ಹೇಳಿದರು. ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಬೆಳೆಸಲು ಅವಕಾಶ …
Read More »
BigTv News
September 1, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಶಿಕ್ಷಣ ಹಾಗೂ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸೆ.5 ರಿಂದ ಅ.5 ರವರೆಗೆ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ವತಿಯಿಂದ ಭಾರತ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಷನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು. ನಗರದ ಸರ್ಕಾರಿ ನೌಕರರ ಭವನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಹಳೆ ಪಿಂಚಣಿ ಜಾರಿಗೆಗೊಳಿಸಬೇಕು. ರಾಷ್ಟ್ರೀಯ ಏಕರೂಪ ವೇತನ ನೀಡಬೇಕು. ನೂತನ ಶಿಕ್ಷಣ ನೀತಿಯ ಲೋಪದೋಷಗಳನ್ನು ಸರಿಪಡಿಸಬೇಕು. ಅರೆಕಾಲಿಕ ಶಿಕ್ಷಕರನ್ನು ಕೈಬಿಡಬೇಕು ಎಂದು …
Read More »
BigTv News
September 1, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ನವಲಗುಂದ: ಹನ್ನೆರಡನೆಯ ಶತಮಾನದಲ್ಲಿ ಕಾಯಕ ವರ್ಗದಿಂದ ಬಂದ ಅನೇಕರು ಶಿವಶರಣರಾದರು. ಬಸವಣ್ಣನವರು ದುಡಿಯುವ ವರ್ಗದಿಂದ ಬಂದ ಹಲವರಿಗೆ ಅವಕಾಶ ಕಲ್ಪಿಸಿದರು. ವಿಶ್ವದ ಪ್ರಥಮ ಸಂಸತ್ ಎಂದೇ ಖ್ಯಾತಿ ಪಡೆದ ಅನುಭವ ಮಂಟಪದಲ್ಲಿ ಇಂತಹ ಎಲ್ಲ ಶಿವಶರಣರಿಗೆ ಗೌರವ ದೊರಕಿತು. ಅಂತಹ ಶಿವಶರಣರಲ್ಲಿ ಪ್ರಮುಖರಾದವರು ನೂಲಿಯ ಚಂದಯ್ಯನವರು. ದಲಿತ ವರ್ಗದಿಂದ ಬಂದ ಅವರ ವಚನಗಳಲ್ಲಿ ಕಾಯಕ ನಿಷ್ಠೆಗೆ ಹೆಚ್ಚು ಮಹತ್ವವಿದೆ. ಹೀಗಾಗಿ ಅವರು ಶ್ರೇಷ್ಠ ವಚನಕಾರರು ಎಂದು ಶಿಕ್ಷಕ ಸಾಹಿತಿ ಡಾ.ಸಿದ್ಧಲಿಂಗೇಶ …
Read More »
BigTv News
August 30, 2023
News, ಕರ್ನಾಟಕ, ಜಿಲ್ಲೆ, ಮೈಸೂರು, ಸುಳ್ಯ
ಬೆಂಗಳೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ರಾಹುಲ್ ಗಾಂಧಿ ಚಾಲನೆ ನೀಡಿದರು. ಡಿಜಿಟಲ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವ ರಾಜ್ಯ ಸರ್ಕಾರ ಇಂದು ಗೃಹಲಕ್ಷಿ ಯೋಜನೆಯ 2,000 ರೂ. ಹಣವನ್ನು ಮಹಿಳೆಯರ ಖಾತೆಗೆ ವರ್ಗಾಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಕರ್ನಾಟಕ ಅಭಿವೃದ್ಧಿ ಮಾದರಿ ಆಡಳಿತಕ್ಕೆ 100 ದಿನಗಳು …
Read More »
BigTv News
August 30, 2023
News, ಕರ್ನಾಟಕ, ಜಿಲ್ಲೆ, ರಾಜಕೀಯ, ಸುದ್ದಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ಲೋಕಸಭಾ ಚುನಾವಣೆಯ ಗಿಮಿಕ್ ಇಟ್ಟುಕೊಂಡೇ ಸಿಲಿಂಡರ್ ದರ ಇಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪ ಸದಸ್ಯ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದರು. ರಾಜ್ಯದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಇಲ್ಲಿನ ಶಬರಿ ನಗರದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್’ದೊಳಗೆ ಲೋಕಸಭಾ ಚುನಾವಣೆ ಮಾಡುವ ಸಂಭವವಿದ್ದು, ಅಷ್ಟರೊಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ದರಗಳನ್ನು ಇಳಿಸಬಹುದು ಹಾಗೂ ಸಾಧ್ಯವಾದರೇ …
Read More »
BigTv News
August 30, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ನವಲಗುಂದ : ತಾಲೂಕು ಅಭಿವೃದ್ಧಿಗೆ ಉದ್ಯಮಿದಾರರ ಹೂಡಿಕೆ ಅಗತ್ಯವಾದದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಕೈಗೊಳ್ಳುವ ಕೆಲಸಕ್ಕೆ ನಿಮ್ಮ ಹೂಡಿಕೆ ಮುಖ್ಯವಾದದ್ದು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು. ಅವರು ಅಣ್ಣಿಗೇರಿ ಪಟ್ಟಣದ ಸುರಕೋಡ ಸಹೋದರರಿಂದ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಪ್ರೀತಿಯ ಭೋಜನ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂಧರ್ಬದಲ್ಲಿ ಅಣ್ಣಿಗೇರಿ ಪುರಸಭೆಯ ಮಾಜಿ ಅಧ್ಯಕ್ಷ ಈಶ್ವರಪ್ಪ ಉಳ್ಳಾಗಡ್ಡಿ ಮಾಜಿ ಕ್ರಡಲ್ ಅಧ್ಯಕ್ಷರಾದ ಷಣ್ಮುಖ ಗುರಿಕಾರ, ಅಣ್ಣಿಗೇರಿ ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷ …
Read More »
BigTv News
August 29, 2023
News, ಕರ್ನಾಟಕ, ಜಿಲ್ಲೆ, ಸುದ್ದಿ, ಹಾವೇರಿ
ಹಾವೇರಿ: ವೆಲ್ಡಿಂಗ್ ಮಾಡುವಾಗ ಬೃಹತ್ ಪಟಾಕಿಯ ಗೊಡೋನ್ ಗೆ ಬೆಂಕಿ ತಗುಲಿ ಸುಮಾರು 1 ಕೋಟಿ ಮೌಲ್ಯದ ಸಿಡಿಮದ್ದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿಯ ಇರುವ ಭೂಮಿಕಾ ಟ್ರೇಡರ್ಸ್ ಎಂಬ ಗೊಡೋನ್ ನಲ್ಲಿ ನಡೆದಿದೆ. ಸಿ ಜಿ ವಿರೇಶ್ ಎಂಬುವವರಿಗೆ ಸೇರಿದ್ದ ಗೊಡೋನ್ ಆಗಿದ್ದು, ಕೆಲಸ ಮಾಡುತ್ತಿದ್ದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಶಿವಕಾಶಿ ಎಂಬಲ್ಲಿಯಿಂದ ಬಂದಿದ್ದ ಪಟಾಕಿ ಸಾಮಾಗ್ರಿಗಳನ್ನು ಇಂದು …
Read More »
BigTv News
August 29, 2023
News, ಕರ್ನಾಟಕ, ಜಿಲ್ಲೆ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಅವರೆಲ್ಲರೂ ಹೊಲದಲ್ಲಿ ಬೆವರು ಹರಿಸಿ ದೇಶಕ್ಕ ಅನ್ನ ಹಾಕುವ ಅನ್ನದಾತ. ಆದರೆ ಅನ್ನದಾತ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾನೆ. ಹೆಸ್ಕಾಂ ಕಚೇರಿಯ ಮುಂದೆಯೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹ ಜ್ಯೋತಿ ಯೋಜನೆಯಿಂದ ಒಂದು ಕಡೆಗೆ ಖುಷಿಯ ಕ್ಷಣಗಳನ್ನು ಮೆಲುಕು ಹಾಕುವಷ್ಟರಲ್ಲಿಯೇ ಅನ್ನದಾತನಿಗೆ ಸಂಕಷ್ಟ ಎದುರಾಗಿದೆ. ಒಂದು ಕಡೆ ಕೈಕೊಟ್ಟ ಮಳೆ, ಇನ್ನೊಂದೆಡೆ ಬರಗಾಲದ ಛಾಯೆ. ಇನ್ನೂ ಅಲ್ಪ ಸ್ವಲ್ಪ ಇರುವ ನೀರಾವರಿಗೆ ಸಮರ್ಪಕ ವಿದ್ಯುತ್ ಸರಬರಾಜು …
Read More »