Breaking News

News

ಹರ್ ಘರ್ ತಿರಂಗಾ ಹಾಗೂ ರಾಷ್ಟ್ರಾಭಿಮಾನದ ಜಾಗೃತಿಯ ಪಥಸಂಚಲನವು ಚೆನ್ನಮ್ಮ ವೃತ್ತದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳಿಂದ ನಡೆಯಿತು.

ಹುಬ್ಬಳ್ಳಿ: ಅಮೃತಮಹೋತ್ಸವದ ಸ್ವಾತಂತ್ರ್ಯೋತ್ಸವ ನಿಮಿತ್ತವಾಗಿ ಹರ್ ಘರ್ ತಿರಂಗಾ ಹಾಗೂ ರಾಷ್ಟ್ರಾಭಿಮಾನದ ಜಾಗೃತಿಯ ಪಥಸಂಚಲನವು ನಗರದ ಚೆನ್ನಮ್ಮ ವೃತ್ತದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳಿಂದ ನಡೆಯಿತು. ಪ್ರತಿ ಮನೆಯ ಅಂಗಳದಲ್ಲಿ ಅರಳಿದ ತ್ರಿವರ್ಣದ ರಂಗೋಲಿ, ಪ್ರತಿ ಮನೆಯ ಮೇಲೆ ರಾರಾಜಿಸಲಿ ತ್ರಿವರ್ಣ ಭಾರತದ ಧ್ವಜ ಎಂಬ ಪರಿಕಲ್ಪನೆಯನ್ನುಟ್ಟುಕೊಂಡು ಚಿನ್ಮಯ ಪಿಯು ಆ್ಯಂಡ್ ಡಿಗ್ರಿ ಕಾಲೇಜು ಮತ್ತು ಹಮ್ ಭಾರತಿ ಫೌಂಡೇಶನ್ ವತಿಯಿಂದ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಇದಕ್ಕೂ ಮುಂಚೆ ಶಾಸಕರಾದ ಮಹೇಶ್ …

Read More »

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಹುಬ್ಬಳ್ಳಿಯಲ್ಲಿ ನೆಟ್ಟಿದ್ದ ಮರ ಇನ್ನು ನೆನಪು ಮಾತ್ರ.

ಹುಬ್ಬಳ್ಳಿ: ಅಂದು ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕ ದಿನ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಅಮೋಘ ಘಳಿಗೆ.ಬಿಡನಾಳ ಗ್ರಾಮದಲ್ಲಿ ಅಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಆ ಅಮೃತ ಘಳಿಗೆಯನ್ನು ಸ್ಮರಣೆಯಲ್ಲಿಟ್ಟುಕೊಳ್ಳಲು ಬಿಡನಾಳದಲ್ಲಿ ಅಂದು ನಾಲ್ವರು ಯುವಕರು ನೆಟ್ಟಿದ್ದ ಮರವನ್ನು ಇದೀಗ ಅರಣ್ಯ ಇಲಾಖೆ ತೆರವುಗೊಳಿಸಿದೆ. ಬೃಹತ ಮರ ಧರೆಗೆ ಉರುಳುತ್ತದೆ ಎಂಬ ಕಾರಣಕ್ಕೆ ತೆರವುಗೊಳಿಸಲಾಗಿದೆ. ಕಳೆದ ವರ್ಷವಷ್ಟೇ ಆಜಾಧಿಕಾ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಈ ಮರಕ್ಕೆ ಹೂವಿನಿಂದ ಅಲಂಕರಿಸಲಾಗಿತ್ತು. ಮರಕ್ಕೆ …

Read More »

ಮೂಲಭೂತ ಸೌಕರ್ಯ ಪ್ರತಿಯೊಬ್ಬರಿಗೂ ತಲುಪಬೇಕು – ಶಾಸಕ ಕೋನರಡ್ಡಿ

ನವಲಗುಂದ : ತಾಲೂಕಿನ ಅಳಗವಾಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಎನ್.ಎಚ್.ಕೋನರಡ್ಡಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಅಳಗವಾಡಿ ಗ್ರಾಮದಲ್ಲಿ ಬಹಳ ದಿನದಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, 5ಎಕರೆ ಜಮೀನಿನಲ್ಲಿ ನವಗ್ರಾಮ ನಿರ್ಮಾಣ, ಕುಡಿಯುವ ನೀರಿಗಾಗಿ ಹೊಸ ಬೋರವೆಲ್ ಕೊರೆಸಲು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕೋನರಡ್ಡಿ ಮೂಲಭೂತ ಸೌಕರ್ಯ ಪ್ರತಿಯೊಬ್ಬರಿಗೂ ತಲುಪಬೇಕು ಸರ್ಕಾರದ ಯೋಜನೆ ಇರುವದು ನಿಮಗಾಗಿ, ನವಗ್ರಾಮ ನಿರ್ಮಾಣ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ವತ್ತಾಯ …

Read More »

ಟೊಮೆಟೋ ಬೆಲೆ ದಿಢೀರ್ 40 ರೂ.ಗೆ ಕುಸಿತ – ಗ್ರಾಹಕರು ಫುಲ್ ಖುಷ್

ಬೆಂಗಳೂರು, ಕೆಲವು ದಿನಗಳಿಂದ ಭಾರೀ ದುಭಾರಿಯಾಗಿದ್ದ ಟೊಮೆಟೋ ಬೆಲೆ ಇದೀಗ ದಿಢೀರ್ ಅಗಿ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ.ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಇಳಿಕೆಯಾಗಿದ್ದು, 15 ಕೆಜಿ ಬಾಕ್ಸ್ 2,000-2,500 ರೂಪಾಯಿ ಕಂಡಿದ್ದ ಟೊಮೆಟೋ ಬೆಲೆ ಈಗ 450 ರೂಪಾಯಿಗೆ ಇಳಿದಿದೆ. ಇನ್ನು ಮಳೆ ಇದ್ದ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮೆಟೋ ಸರಬರಾಜು ಆಗದ ಕಾರಣ ಬೆಲೆ ಜಾಸ್ತಿ ಆಗಿತ್ತು. ಮಳೆ ನಿಂತ ಕಾರಣ ಇದೀಗ …

Read More »

ಶಿಶುಪಾಲನಾ ಕೇಂದ್ರ ಆಗಸ್ಟ್ 15ಕ್ಕೆ ಆರಂಭ-ಸಿದ್ದತೆ ಗಮನಿಸಿದ ಸಿಇಓ ಸ್ವರೂಪ

ಕುಂದಗೋಳ: ಕಳೆದ ಐದು ದಿನಗಳಿಂದ ಕುಂದಗೋಳ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆಯುತ್ತಿರುವ ಶಿಶುಪಾಲನಾ ಆರೈಕೆ ತರಬೇತಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿ.ಕೆಯವರು ಭೇಟಿ ನೀಡಿದರು. ಹಾಗೂ ಶಿಶುಪಾಲನಾ ಆರೈಕೆದಾರರಿಗೆ ಉದ್ದೇಶ ಮತ್ತು ಸದುಪಯೋಗದ ಕುರಿತು ತಿಳಿಸಿದರು. ಬಳಿಕ ಕುಂದಗೋಳ ತಾಲೂಕಿನಲ್ಲಿ ಶೀಘ್ರವೇ ಆರಂಭಗೊಳ್ಳಲಿರುವ 17 ಶಿಶುಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯತ್ ಸಿಇಓ ಅವರು ಅಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಕಟ್ಟಡದ ಸ್ಥಿತಿಗತಿ ಅವಲೋಕಿಸಿದರು. …

Read More »

ಆಸ್ಪತ್ರೆ ವ್ಯವಸ್ಥೆ ಪರಿಶೀಲಿಸಿದ ಎಂ.ಆರ್.ಪಾಟೀಲ್

ಕುಂದಗೋಳ: ಮನುಷ್ಯ ನಿತ್ಯದ ಕೆಲಸ, ಒತ್ತಡ, ಕುಟುಂಬ ನಿರ್ವಹಣೆ, ಸವಾಲುಗಳ ಬೆನ್ನುಬಿದ್ದು ತಮ್ಮ ಅಮೂಲ್ಯ ಜೀವನದ ಆರೋಗ್ಯಕರ ಚಟುವಟಿಕೆ ಮರೆತಿದ್ದಾರೆ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು. ಅವರು ರೋಟರಿ ಕ್ಲಬ್ ವತಿಯಿಂದ ಕುಂದಗೋಳ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯದ ಮಹತ್ವ ಹಾಗೂ ಕಾಳಜಿ ಕುರಿತು ಮಾತನಾಡಿ, ರೈತಾಪಿ ಜನ ಹಿಂದೆ ಈಗಲೂ ಅತಿ ಅಚ್ಚುಕಟ್ಟಾದ ಜೀವನಕ್ಕೆ ಹೊಂದಿಕೊಂಡು ನಿಶ್ಚಿಂತೆಯಿಂದ ಇದ್ದಾರೆ, …

Read More »

ಅಭಿವೃದ್ಧಿಯ ಪಥದಂತ. ಸಾಗಲು ಎಮ್.ಎನ್ ಮೋರೆ ಬಣ ಬೆಂಬಲಿಸಿ

ಧಾರವಾಡ:– ಮರಾಠಾ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮರಾಠಾ ವಿದ್ಯಾಪ್ರಸಾರಕ ಮಂಡಳ ಮಂಡಳದ ಚುನಾವಣೆಯಲ್ಲಿ ನನ್ನನ್ನು ಹಾಗೂ ಎಮ್.ಎನ್.ಮೋರೆ ತಂಡವನ್ನು ಬೆಂಬಲಿಸಿ ಅಮುಲ್ಯವಾದ ಮತವನ್ನು ಉದಯಿಸುತ್ತಿರುವ ಸೂರ್ಯನ ಗುರುತಿಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಸಿ, ಆಶೀರ್ವದಿಸಬೇಕೆಂದು ಮರಾಠಾ ಸಮಾಜದ ಮುಖಂಡರಾದ ಸುಭಾಸ ಶಿಂದೆ ಕೋರಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮರಾಠಾ ಸಮಾಜ ಬಾಂಧವರು ಅಭಿವೃದ್ಧಿಗೆ ಒತ್ತು ಕೊಟ್ಟು ನಮ್ಮನ್ನು ಜಯಶಾಲಗೊಳಿಸಿದ್ದೀರಿ, ಅದರಂತೆ ಮರಾಠಾ ಮಂಡಳದ ಅನೇಕ ಅಭಿವೃದ್ಧಿ ಹಗಲರುಳು ನಮ್ಮ ತಂಡದೊಂದಿಗೆ …

Read More »

ಅಮೃತ ಗ್ರಾಪಂ ಯೋಜನೆ ಉದ್ಘಾಟಿಸಿದ ಶಾಸಕ ಎಂ.ಆರ್.ಪಾಟೀಲ್

ಕುಂದಗೋಳ : ಮತಕ್ಷೇತ್ರದ ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇವನೂರ ಹಾಗೂ ಬಿಳೇಬಾಳ ಗ್ರಾಮಗಳಲ್ಲಿ ಅಮೃತ ಗ್ರಾಮ ಪಂಚಾಯತ್ ಯೋಜನೆ ಅಡಿ ನಿರ್ಮಾಣಗೊಂಡಿರುವ ವಿವಿಧ ಕಾಮಗಾರಿಗಳನ್ನು ಶಾಸಕ ಎಂ.ಆರ್.ಪಾಟೀಲ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ಪ್ರೀತಿ ಅಭಿಮಾನಕ್ಕೆ ನನ್ನಿಂದ ಅಭಿವೃದ್ಧಿ ಕೊಡುಗೆ ನೀಡುವೆ ಎಂದರು, ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವದು ಖುಷಿ ತಂದಿದೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಕಾರಣಿಭೂತರಾದ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಅಭಿನಂದಿಸಿದರು

Read More »

ತಾಳೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮ

ಧಾರವಾಡ: ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡರ ಜನ್ಮ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈವೆಟ್ ಲಿಮಿಟೆಡ್ ಕಂಪೆನಿರವರ ಸಹಯೋಗದಲ್ಲಿ ಧಾರವಾಡ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮಹಾಂತಯ್ಯ ಹಿರೇಮಠರವರ ಹೊಲದಲ್ಲಿ ತಾಳೆ ಸಸಿ ನಾಟಿ ಮಾಡುವ ಮೂಲಕ ತಾಳೆ-ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮದ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಶಿವಲೀಲಾ ವಿನಯ ಕುಲಕರ್ಣಿ ರವರು ಆಗಮಿಸಿದ್ದರು. ಮರೇವಾಡ ಗ್ರಾಮ ಪಂಚಾಯತ್ …

Read More »

ರಾಜ್ಯದ ಮೊದಲ ಮಹಿಳಾ ಪೋಲಿಸ್ ಕಮೀಷನರ್ ರೇಣುಕಾ ಸುಕುಮಾರ ಅಧಿಕಾರ ಸ್ವೀಕಾರ..

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ರೇಣುಕಾ ಸುಕುಮಾರ ಅಧಿಕಾರ ಸ್ವೀಕಾರ ಮಾಡಿದರು. ಹು-ಧಾ ಮೊದಲ ಮಹಿಳಾ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ರೇಣುಕಾ ಸುಕುಮಾರ, ಪೊಲೀಸ್ ಕಮೀಷನರೇಟ್ ವತಿಯಿಂದ ಗೌರವ ವಂದನೆ ಮಾಡಿಕೊಂಡರು. ಇನ್ನು, ರೇಣುಕಾ ಸುಕುಮಾರ ರಾಜ್ಯದಲ್ಲಿಯೇ ಮೊದಲ ಮಹಿಳಾ ಪೊಲೀಸ್ ಕಮೀಷನರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸರ್ಕಾರದ ಆದೇಶದಂತೆ ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಕಮೀಷನರ್ ಆಗಿ ಈಗ ಅಧಿಕಾರ ಸ್ವೀಕಾರ ಮಾಡಿದರು. …

Read More »