Breaking News

Breaking News

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ವಕ್ಷ ಬೋರ್ಡ್‌ ನವರು ಮುಂಬರುವ ಅಧಿಕಾರ ಕಡಿಮೆ ಆಗುತ್ತೆ ಅನ್ನೋ ಭಯದಿಂದ, ಇರುವ ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಕ್ರಿಮಿನಲ್‌ ತರಾತುರಿಯಲ್ಲಿದ್ದಾರೆ. ಬಿಜೆಪಿಯ ಗಟ್ಟಿ ಹೇಳಿಕೆ ಬರದೇ ಹೋಗಿದ್ರೆ, ಉಪಚುನಾವಣೆ ಇರದೇ ಹೋಗಿದ್ರೆ, ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಹಿಂದೆ ತೆಗೆದುಕೊಳ್ಳುತ್ತೇವೆ ಅಂತ ಹೇಳ್ತಿದ್ದಾರೆ. ಕೊಡಲಿಕೆ ಇವರ್ಯಾರು? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಾರವಾಗಿ ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40-50 …

Read More »

ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್

ಹುಬ್ಬಳ್ಳಿ: ನಗರದಲ್ಲಿ ಶನಿವಾರ ರಾತ್ರಿ ಕಮಿಷನ‌ರ್ ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ ದಕ್ಷಿಣ ಉಪ ವಿಭಾಗದಲ್ಲಿ 14 ಚೆಕ್ ಪೋಸ್ಟ್ ಹಾಕಿ ವಾಹನಗಳ ಪರಿಶೀಲನೆ ಮಾಡುವಾಗ ದಾಖಲೆಗಳು ಇಲ್ಲದೆ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್ ಮಾಡಲಾಯಿತು. ಸದ್ಯ ಈ ಎಲ್ಲ ವಾಹನಗಳ ಪೈಕಿ ಇದೀಗ ವಾಹನಗಳ ಸರಿಯಾದ ದಾಖಲೆಗಳು ಇದ್ದ ವಾಹನಗಳನ್ನು ಬಿಟ್ಟು ಕಳುಹಿಸಿ, ದಾಖಲೆಗಳು ಇಲ್ಲದ ವಾಹನಗಳಿಗೆ 166500 ರೂಪಾಯಿ ದಂಡವನ್ನು ವಿಧಿಸಲಾಗಿದೆ. …

Read More »

ಮಳೆಯಿಂದ ಹಾನಿಯಾದ ಕಾಮಗಾರಿಯನ್ನು ಪರಿಶೀಲಿಸಿದ ಸತೀಶ್ ಜಾರಕಿಹೊಳಿ

ಕುಂದಗೋಳ : ಅತಿವೃಷ್ಟಿ ಪರಿಣಾಮ ಕುಂದಗೋಳ ತಾಲೂಕಿನಲ್ಲಿ ಹಾನಿಯಾದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪರಿಶೀಲಿಸಿ ಪರಿಹಾರ ಭರವಸೆ ನೀಡಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ಭೀಕರ ಮಳೆಯ ಅನಾಹುಕ್ಕೆ ರೈತಾಪಿ ಜನರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಅದರಂತೆ ಪ್ರವಾಹದ ಸೆಳೆತಕ್ಕೆ ರಸ್ತೆ ಬ್ರಿಡ್ಜ್ ಕೊಚ್ಚಿಕೊಂಡು ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಮಾಣ ಬೆಳೆಸುತ್ತಿದ್ದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ …

Read More »

ಸತತ 5 ದಿನಗಳ ಕುಸಿತದ ಹಾದಿಯಲ್ಲಿದ್ದ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 602.75 ಅಂಕ ಏರಿಕೆ

ಮುಂಬೈ: ಸತತ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಸತತ 5 ದಿನಗಳ ಕುಸಿತ ಬಳಿಕ ಇಂದು ಅಂದರೆ ವಾರದ ಮೊದಲ ದಿನವೇ ಭರ್ಜರಿ ಚೇತರಿಕೆ ಕಂಡಿದೆ. ಕಳೆದ ವಾರವಿಡೀ ಕುಸಿತದಲ್ಲೇ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ 602.75 ಅಂಕಗಳ ಏರಿಕೆಯೊಂದಿಗೆ 80,005.04 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 158.35 ಅಂಕಗಳ ಏರಿಕೆಯೊಂದಿಗೆ 24,339.15 ಅಂಕಗಳಿಗೆ ಏರಿಕೆಯಾಗಿ …

Read More »

ದೀಪಾವಳಿ ಪ್ರಯುಕ್ತ ಸಿಎಂ ಸಿದ್ದರಾಮಯ್ಯರಿಗೆ ಗೃಹ ಉತ್ಪನ್ನಗಳನ್ನು ನೀಡಿದ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೀಪಾವಳಿ ಪ್ರಯುಕ್ತ ಸಂಜೀವಿನಿ ಯೋಜನೆಯಡಿ ತಯಾರಿಸಲಾದ ಗೃಹ ಉತ್ಪನ್ನಗಳನ್ನು ನೀಡಿದರು. ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲಿಯೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಅವರ ಜೀವನ ಮಟ್ಟ ಸುಧಾರಿಸುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾ ಪಂಚಾಯತ್ ಹಾಗೂ ಸ್ವ ಸಹಾಯ ಗುಂಪುಗಳ ಪರವಾಗಿ ಗೃಹ …

Read More »

ಅತಿವೃಷ್ಟಿ ಪರಿಣಾಮ ಹಾನಿಯಾದ ಬೆಳೆಗಳಿಗೆ ಪರಿಹಾರ ಕೊಡುವಂತೆ ಮನವಿ ಸಲ್ಲಿಕೆ

ಕುಂದಗೋಳ : ಅತಿವೃಷ್ಟಿ ಪರಿಣಾಮ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ ಮತ್ತು ಮಳೆಯಿಂದ ಬಿದ್ದಂತಹ ಮನೆಗಳಿಗೆ 5 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ರತ್ನ ಭಾರತ ರೈತ ಸಮಾಜದವರು ಹುಬ್ಬಳ್ಳಿ ಲಕ್ಷ್ಮೀಶ್ವರ ರಸ್ತೆ ತಡೆ ನಡೆಸಿ ತಹಶೀಲ್ದಾ‌ರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಗಾಳಿ ಮರೇಮ್ಮದೇವಿ ದೇವಸ್ಥಾನದ ಬಳಿ ಹುಬ್ಬಳ್ಳಿ ಲಕ್ಷ್ಮೀಶ್ವರ ರಾಜ್ಯ ಹೆದ್ದಾರಿಯನ್ನು ತಡೆದು ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿ ಆಗಮಿಸಿದ ರತ್ನ ಭಾರತ ರೈತ ಸಮಾಜದವರು ಕೇಂದ್ರ …

Read More »

ಚರ್ಮಕಾರರಿಗೆ ಪ್ರತ್ಯೇಕ ಒಳಮೀಸಲಾತಿ ಸೇರಿ ಎಲ್ಲಾ ಸವಲತ್ತುಗಳನ್ನು ನೀಡುವಂತೆ ಒತ್ತಾಯ

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯವಾಗಿ, ಚರ್ಮಕಾರರಿಗೆ ಅವರ ಜನಸಂಖ್ಯೆಯ ಅನುಸಾರವಾಗಿ ಪ್ರತ್ಯೇಕ ಒಳಮೀಸಲಾತಿ ಸೇರಿ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ ಒತ್ತಾಯಿಸುತ್ತದೆಂದು ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು. ಇನ್ನು ಮೂಲ ಚರ್ಮಕಾರರ ಸುಮಾರು 15 ಲಕ್ಷ ಜನಸಂಖ್ಯೆ ಇರುವ ಈ 18 ಕ್ಕೂ ಹೆಚ್ಚಿನ ಚಮ್ಮಾರ ಸಮಗಾರ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು. ಚರ್ಮಕಾರ ಸುಮಾರು …

Read More »

ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ: ಬಂದೋಬಸ್ತ್ ಗಾಗಿ 18 ಕಂಪನಿ ಕೇಂದ್ರಪಡೆಗಳ ಆಯೋಜನೆ

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಂದೋಬಸ್ತ್ ಗಾಗಿ 18 ಕಂಪನಿ ಕೇಂದ್ರಪಡೆಗಳು ರಾಜ್ಯಕ್ಕೆ ಆಗಮಿಸಿವೆ. ಸಿಆರ್ಪಿಎಫ್, ಸಿಐಎಸ್‌ಎಫ್ ಹಾಗೂ ಬಿಎಸ್‌ಎಫ್ ಪಡೆಗಳು, ಮೂರೂ ಕ್ಷೇತ್ರಗಳಲ್ಲೂ ಸ್ಥಳೀಯ ಪೊಲೀಸರ ಜೊತೆ ಪಥಸಂಚಲನ ನಡೆಸಿವೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ 5 ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 5 ಕಂಪನಿ ಕೇಂದ್ರಪಡೆಗಳನ್ನು ಸ್ಥಳೀಯ ಪೊಲೀಸರ ಜೊತೆ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ತೀವ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೇಳಲಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ …

Read More »

ನೂತನ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್

ಬೆಂಗಳೂರು: ನೂತನ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಸಾಹಸ, ಕೃಷಿ, ಕರಾವಳಿ, ಬೀಚ್ ಪ್ರವಾಸೋದ್ಯಮ, ಪಾರಂಪರಿಕ, ಪರಿಸರ, ಶೈಕ್ಷಣಿಕ ಪ್ರವಾಸೋದ್ಯಮ, ಒಳನಾಡು, ಸಾಹಿತ್ಯ, ಕಡಲು, ವೈದ್ಯಕಿಯ, ಗಣಿಗಾರಿಕೆ, ರಾಜಕೀಯ, ಆಧ್ಯಾತ್ಮ, ಧಾರ್ಮಿಕ, ಬುಡಕಟ್ಟು, ವಿವಾಹ ಪ್ರವಾಸೋದ್ಯಮಗಳು ಬರಲಿವೆ. ಸಮಾಜದ ಎಲ್ಲಾ ಸ್ಥರಗಳ ಬಡ, ಮಧ್ಯಮ ವರ್ಗದ ಮತ್ತು ಮೇಲ್ಮಧ್ಯಮ ವರ್ಗದ ಹಾಗೂ ಗಣ್ಯ ವರ್ಗದ ಪ್ರವಾಸಿ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಹೊಸ ನೀತಿಯನ್ನು ರಚಿಸಲಾಗಿದೆ. ಸಾಹಸ, ಕೃಷಿ, …

Read More »

ಸಂಸತ್ತಿನ ಜಲಶಕ್ತಿ ಸಂಸದೀಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಗೋವಿಂದ ಕಾರಜೋಳ ನೇಮಕ

ಚಿತ್ರದುರ್ಗ: 18ನೇ ಲೋಕಸಭೆಯಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ. ಕಾರಜೋಳರವರನ್ನು ಸಂಸತ್ತಿನ ಜಲ ಶಕ್ತಿ ಸಂಸದೀಯ ಸಲಹಾ ಸಮಿತಿಯ ಸದಸ್ಯರನ್ನಾಗಿ ಲೋಕಸಭಾ ಸ್ಪೀಕರ್ ರಾದ ಓಂ ಬಿರ್ಲಾರವರು ನೇಮಕ ಮಾಡಿರುತ್ತಾರೆ. ಈ ಸಲಹಾ ಸಮಿತಿಯಲ್ಲಿ ಒಬ್ಬರು ರಾಜ್ಯ ಸಭಾ ಸದಸ್ಯರು ಹಾಗೂ 15 ಜನ ಲೋಕಸಭಾ ಸದಸ್ಯರುಗಳು ಹಾಗೂ ಇಬ್ಬರು ಪದನಿಮಿತ್ತ ಸದಸ್ಯರು ಕಾರ್ಯನಿರ್ವಹಿಸಲಿದ್ದು, ಈ ಸಲಹಾ ಸಮಿತಿಯ ಅಧ್ಯಕ್ಷರುಗಳನ್ನಾಗಿ ಸಿ.ಆರ್.ಪಾಟೀಲ್, ವಿ. ಸೋಮಣ್ಣ ಹಾಗೂ ರಾಜ್ ಭೂಷಣ್ …

Read More »