Breaking News

Breaking News

ವಿದ್ಯುತ್ ಇಲಾಖೆ ಸಿಬಂದಿ ಸೋಗಿನಲ್ಲಿ ಚಿನ್ನದ ಸರ ಕಿತ್ತು ಪರಾರಿ

ಕಾಸರಗೋಡು: ವಿದ್ಯುತ್ ಇಲಾಖೆಯ ಸಿಬ್ಬಂದಿ ಸೋಗಿನಲ್ಲಿ ಮನೆಗೆ ಬಂದ ಯುವಕನೊಬ್ಬ ಗೃಹಿಣಿಯ ಕುತ್ತಿಗೆಯಲ್ಲಿದ್ದ ಐದು ಪವನ್ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಮಂಗಳವಾರ ಸಂಜೆ ಕೊಳತ್ತೂರಿನಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಶುಭಾ ಅವರ ಮನೆಗೆ ಬಂದ ಯುವಕ, ವಿದ್ಯುತ್ ತಂತಿ ಪರಿಶೀಲಿಸುವ ನೆಪದಲ್ಲಿ ಕೊಳವೆ ಬಾವಿ ಸಮೀಪಕ್ಕೆ ತೆರಳಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಶುಭಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ. ಜಗ್ಗಾಟದ ವೇಳೆ ನಾಲ್ಕು ಪವನ್ …

Read More »

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ. ಆರೋಪಿ ಸುರೇಶ್ ಆಚಾರ್ಯ ಮಾರಕಾಯುಧ ಹಾಗೂ ಆಸಿಡ್‌ನೊಂದಿಗೆ ಅಂಗಡಿಗೆ ನುಗ್ಗಿ ಮಾಲಕ ನವೀನ್ ಕುಮಾರ್ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಠೇವಣಿ ಹಣದ ವಿವಾದವೇ ದಾಳಿಗೆ ಕಾರಣ ಎನ್ನಲಾಗಿದ್ದು, ಪೊಲೀಸರು ಆರೋಪಿ ಸುರೇಶ್ …

Read More »

ಚಿತ್ರದುರ್ಗ : ಮಗನ ಮೇಲಿನ ಹಲ್ಲೆಗೆ ಸೇಡು; ಯುವಕನ ಅಪಹರಿಸಿ ಕೊಲೆಗೈದು ಶವ ಹೂತಿಟ್ಟ ಮೂವರ ಬಂಧನ

ಚಿತ್ರದುರ್ಗ: ಮಗನ ಕಣ್ಣಿಗೆ ಹಲ್ಲೆ ಮಾಡಿದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗುರುಕಿರಣ್ ಎಂಬ ಯುವಕನನ್ನು ಅಪಹರಿಸಿ ಕೊಲೆ ಮಾಡಿ ಶವ ಹೂತು ಹಾಕಿದ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 2023ರಲ್ಲಿ ಗುರುಕಿರಣ್ ಹಾಗೂ ರಮೇಶ್ ಮಗ ಗೋಪಿ ನಡುವೆ ಗಲಾಟೆ ನಡೆದಿದ್ದು, ಗೋಪಿಯ ಬಲಗಣ್ಣಿಗೆ ಗಂಭೀರ ಗಾಯವಾಗಿತ್ತು. ಇದೇ ದ್ವೇಷದಿಂದ ರಮೇಶ್ ತನ್ನ ಸಂಬಂಧಿಕರಾದ ವಿರೂಪಾಕ್ಷ ಮತ್ತು ಸೋಮಶೇಖರ್ ಜೊತೆ ಸೇರಿ ಗುರುಕಿರಣ್‌ನನ್ನು ಆಟೋದಲ್ಲಿ …

Read More »

ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಯ ಅಪಹರಣ; ಬಾಗಲಕೋಟೆ ಮೂಲದ ಆರೋಪಿ ಬಂಧನ

ಬಾಗಲಕೋಟೆ: ಶಾಲೆಗೆ ತೆರಳುತ್ತಿದ್ದ ಪರಿಶಿಷ್ಟ ಜಾತಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ ಆರೋಪದಡಿ ಬಾಗಲಕೋಟೆ ಮೂಲದ ಗೂಡಾಸಾಬ್ ಯಾನೆ ಆಶಿಫ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಶಾಲೆಗೆ ಬಾರದಿರುವ ಬಗ್ಗೆ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದ್ದರು. ಬಳಿಕ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು, ಮಂಗಳವಾರ ರಾತ್ರಿಯೇ ಸೋಮೇಶ್ವರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ಹೇಳಿಕೆ ಆಧರಿಸಿ ಆರೋಪಿ …

Read More »

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ ಯಾರು…? ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವವರು ಯಾರು..?ಹೆಲ್ಮೆಟ್ ಇಲ್ಲ… ನಂಬರ್ ಪ್ಲೇಟ್ ಇಲ್ಲ… ತ್ರಿಬಲ್ ರೈಡಿಂಗ್‌ಗೆ ಕಡಿವಾಣವಿಲ್ಲ… ನೋ ಪಾರ್ಕಿಂಗ್‌ನಲ್ಲೇ ವಾಹನಗಳ ದರ್ಬಾರ್!ಹುಬ್ಬಳ್ಳಿ–ಧಾರವಾಡದಲ್ಲಿ ಸಂಚಾರ ನಿಯಮಗಳಿಗೆ ಬೆಲೆಯೇ ಇಲ್ವಾ? ನಿಯಮ ಉಲ್ಲಂಘಿಸುವವರಿಗೆ ಕಾನೂನಿನ ಭಯವೇ ಇಲ್ವಾ..? ಇದೀಗ ಅಪ್ರಾಪ್ತರ ಬೈಕ್ ಸವಾರಿಯ ಅವಾಂತರವೂ ಮುನ್ನೆಲೆಗೆ …

Read More »

ಪ್ಯಾಂಟ್ ಜೇಬಿನಲ್ಲಿ ₹1.30 ಕೋಟಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಯುವಕನ ಬಂಧನ

ದೇವನಹಳ್ಳಿ: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ಟೋಬರ್ 25ರಂದು ದುಬೈನಿಂದ ಆಗಮಿಸಿದ್ದ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ, ಪ್ಯಾಂಟ್ ಜೇಬಿನಲ್ಲಿ ಬಚ್ಚಿಟ್ಟಿದ್ದ 900 ಗ್ರಾಂ ತೂಕದ ₹1.30 ಕೋಟಿ ಮೌಲ್ಯದ ಚಿನ್ನದ ಸರಗಳು ಪತ್ತೆಯಾಗಿವೆ. ಚಿನ್ನವನ್ನು ವಶಪಡಿಸಿಕೊಂಡ ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆ-1962ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಚಿನ್ನದ ಮೂಲ ಹಾಗೂ ಅಕ್ರಮ ಸಾಗಣೆಯ ಉದ್ದೇಶದ ಕುರಿತು ತನಿಖೆ ಮುಂದುವರಿಸಿದ್ದಾರೆ.

Read More »

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸರ್ವೆ ನಂ.35ರ ಅರಣ್ಯ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾದ ವೇಳೆ ಚಲಪತಿ ಎಂಬಾತ ಅಡ್ಡಿಪಡಿಸಿ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಸಿಬ್ಬಂದಿಗಳಾದ ಸೋಮಶೇಖರ್, ಜಮೀರ್ ಹಾಗೂ ನವೀನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಚಲಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಅರಣ್ಯ ಇಲಾಖೆ …

Read More »

ಹೆಲ್ತ್ ಇನ್ಶೂರೆನ್ಸ್‌ ಪ್ರೀಮಿಯಂ ಪಾವತಿ ನೆಪ : ಮಹಿಳೆಗೆ 2.68 ಲಕ್ಷ ರೂ. ವಂಚನೆ

ಮಂಗಳೂರು: ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟುವ ನೆಪದಲ್ಲಿ 42 ವರ್ಷದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ₹2.68 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಇನ್ಶೂರೆನ್ಸ್ ಅವಧಿ ಮುಗಿಯಲಿದೆ ಎಂದು ಕರೆ ಮಾಡಿದ ವಂಚಕ, ವಾಟ್ಸ್‌ಆ್ಯಪ್ ಮೂಲಕ ಲಿಂಕ್ ಕಳುಹಿಸಿದ್ದಾನೆ. ಮಹಿಳೆ ಲಿಂಕ್ ಬಳಸಿ ₹27,764 ಪಾವತಿಸಿದ್ದು, ಬಳಿಕ ವೆರಿಫಿಕೇಶನ್ ನೆಪದಲ್ಲಿ ಬಂದ ಒಟಿಪಿಯನ್ನೂ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಅ.23ರಿಂದ 25ರವರೆಗೆ ಹಂತ ಹಂತವಾಗಿ ಮಹಿಳೆಯ ಖಾತೆಯಿಂದ ಒಟ್ಟು ₹2,68,803 ವರ್ಗಾವಣೆಯಾಗಿದೆ. ಈ …

Read More »

ಪೀಣ್ಯದಲ್ಲಿ ಪುಂಡರ ಅಟ್ಟಹಾಸ: ಟೀ, ಕಾಫಿ ಫ್ರೀ ಕೊಡದಿದ್ದಕ್ಕೆ ಬೇಕರಿಯಲ್ಲಿ ಗಲಾಟೆ, ಮಹಿಳಾ ಮಾಲೀಕೆಗೆ ಬೆದರಿಕೆ!

ಬೆಂಗಳೂರು: ಉಚಿತವಾಗಿ ಟೀ, ಕಾಫಿ ನೀಡುವಂತೆ ಒತ್ತಾಯಿಸಿ ಬೇಕರಿಯಲ್ಲಿ ಗಲಾಟೆ ನಡೆಸಿ ಮಹಿಳಾ ಮಾಲೀಕೆಗೆ ಜೀವ ಬೆದರಿಕೆ ಹಾಕಿರುವ ಘಟನೆ ಪೀಣ್ಯದ ಎಚ್‌ಎಂಟಿ ಲೇಔಟ್‌ನಲ್ಲಿ ನಡೆದಿದೆ. ರಥನ್ ಬೇಕರಿಗೆ ಬಂದಿದ್ದ ಕೆಲವರು ಹಣ ಕೇಳಿದ್ದಕ್ಕೆ ಆಕ್ರೋಶಗೊಂಡು, ತಾವು ರೌಡಿಗಳೆಂದು ಅವಾಜ್ ಹಾಕಿದ್ದಾರೆ. ಅಲ್ಲದೆ, ಗಾಜಿನ ಬಾಟಲಿಗಳನ್ನು ಒಡೆದು ಬೇಕರಿಗೆ ಹಾನಿ ಮಾಡಿ, ಮಾಲೀಕೆ ಹಾಗೂ ಅವರ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಮಹೇಶ್ ಮತ್ತು ರಜತ್ ಎಂಬುವವರ …

Read More »

ಬ್ರಹ್ಮಾವರ: ಕಬ್ಬಿಣದ ರಾಡ್‌ನಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

ಬ್ರಹ್ಮಾವರ: ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಸುಜಿತ್ ಪಿಂಟೋ (43) ಎಂಬಾತನನ್ನು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಬೈಕಾಡಿ ಸರ್ಕಲ್ ಬಳಿ ಮಂಗಳವಾರ ರಾತ್ರಿ ನಡೆದಿದೆ. ಮೃತ ಸುಜಿತ್ ಮೂಲತಃ ಕಲ್ಯಾಣಪುರದವರಾಗಿದ್ದು, ಬೈಕಾಡಿಯಲ್ಲಿ ನೆಲೆಸಿದ್ದರು. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ ಆಟೋರಿಕ್ಷಾ ಚಾಲಕ ಪ್ರಮೋದ್‌ನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Read More »