Breaking News

Breaking News

ಬೆಂಗಳೂರಲ್ಲಿ ರಕ್ತಪಾತ: ಬಾರ್‌ನಲ್ಲಿ ಗುರಾಯಿಸಿದ್ದೇ ತಪ್ಪಾಯ್ತು, ಯುವಕನ ಎದೆಗೆ ಬಾಟಲಿ ಚುಚ್ಚಿ ಹತ್ಯೆ

ಬೆಂಗಳೂರು ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನನ್ನು ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮೃತನನ್ನು ಉದಯ್ ಕುಮಾರ್ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಚೆಲುವ ಮತ್ತು ತೇಜ್ ಎಂಬುವರ ವಿರುದ್ಧ ಆರೋಪ ಕೇಳಿಬಂದಿದೆ. ಬಾರ್‌ನಲ್ಲಿ ಕುಳಿತಿದ್ದ ವೇಳೆ ಉದಯ್ ಆರೋಪಿಗಳ ಕಡೆಗೆ ಗುರಾಯಿಸಿದ್ದ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಆರೋಪಿಗಳು ಉದಯ್‌ನನ್ನು ಹಿಂಬಾಲಿಸಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ, ಒಡೆದ ಬಾಟಲಿಯಿಂದ …

Read More »

ಗುಡ್ಡದಲ್ಲಿ ಯುವತಿಯ ಸುಟ್ಟ ಮೃತದೇಹ ಪತ್ತೆ ಪ್ರಕರಣ ಭೇದಿಸಿದ ಬೆಳಕವಾಡಿ ಪೊಲೀಸರು

ಮಂಡ್ಯ ಜಿಲ್ಲೆಯ ಜವನಗಹಳ್ಳಿ ಗುಡ್ಡದ ಸಮೀಪ ಪತ್ತೆಯಾಗಿದ್ದ ಮಹಿಳೆಯ ಸುಟ್ಟ ಶವ ಪ್ರಕರಣವನ್ನು ಬೆಳಕವಾಡಿ ಪೊಲೀಸರು ಭೇದಿಸಿದ್ದಾರೆ. ನಳಿನಿ ಎಂಬ ಯುವತಿಯನ್ನು ಮದುವೆಗೆ ಒತ್ತಾಯಿಸುತ್ತಿದ್ದಳು ಎಂಬ ಕಾರಣಕ್ಕೆ ರಾಜಶೇಖರ್ ಕೊಲೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಕೈಗಡಿಯಾರ, ಉಂಗುರ, ಹೇರ್‌ಕ್ಲಿಪ್ ಹಾಗೂ ಮನೆಯ ಕೀ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಸಿಸಿಟಿವಿ ದೃಶ್ಯಗಳ ನೆರವಿನಿಂದ …

Read More »

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಟೋರಿಯಸ್ ದಲ್ಲಾಳಿ ಅರೆಸ್ಟ್!

ಬೆಂಗಳೂರು ನಗರದ ಮಾದನಾಯಕನಹಳ್ಳಿ ಪೊಲೀಸರು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವೇಶ್ಯಾವಾಟಿಕೆ ದಂಧೆಯ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಚೇತನ್ ಕುಮಾರ್ ಅಲಿಯಾಸ್ ಮಂಗಳಮುಖಿ ಚೇತನ್ (40) ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮಂಗಳಮುಖಿಯ ವೇಷ ಧರಿಸುತ್ತಿದ್ದ ಚೇತನ್, ದೆಹಲಿ ಹಾಗೂ ಮುಂಬೈ ಸೇರಿದಂತೆ ಹೊರರಾಜ್ಯಗಳಿಂದ ಯುವತಿಯರನ್ನು ಕರೆತಂದು ಅನೈತಿಕ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಜುಲೈ 6ರಂದು …

Read More »

10 ವರ್ಷದ ದ್ವೇಷಕ್ಕೆ ರೌಡಿಶೀಟರ್​ ಬರ್ಬರ ಹತ್ಯೆ, ಮಹಿಳೆ ಕೊಟ್ಟಳು ಸಾಥ್​, ಬಯಲಾಯ್ತು ಅಕ್ಷತಾ ಡೆಡ್ಲಿ ಗೇಮ್​!

ಬೆಂಗಳೂರು ಜೆಪಿ ನಗರದಲ್ಲಿ ರೌಡಿಶೀಟರ್ ರಾಜು ಅಲಿಯಾಸ್ ಹಲ್ಮುರ್ಕ ರಾಜು ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಹತ್ಯೆಗೆ ಸಹಕರಿಸಿದ ಆರೋಪದ ಮೇಲೆ ಅಕ್ಷತಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜು ಇದ್ದ ಸ್ಥಳವನ್ನು ಹಂತಕರಿಗೆ ತೋರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಅದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಪ್ರಮುಖ ಆರೋಪಿ ಬ್ಯಾಟ್ ಸಂತು ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಅಕ್ಷತಾ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. …

Read More »

ಚರ್ಚಿನಗುಡ್ಡದಲ್ಲಿ ಬೆಂಕಿ ಹಚ್ಚಿ ಕೊ*ಲೆ: ಆಸ್ತಿ ಗಲಾಟೆ ಹಿನ್ನೆಲೆ ಅಣ್ಣ, ಅಳಿಯನ ಬಂಧನ

ಕೊಪ್ಪಳ: ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಸಹೋದರ ಮತ್ತು ಅಳಿಯ ಸೇರಿ ಕೊಲೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಘಟನೆ ಕನಕಗಿರಿ ತಾಲೂಕಿನ ಕೆಸರಹಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ (33) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆತನ ಸಹೋದರ ಅಯ್ಯನಗೌಡ ಮಾಲಿ ಪಾಟೀಲ್ ಹಾಗೂ ಅಳಿಯ ಗಂಗಾಧರ ಆದ್ಯಪ್ಪ ಮಾಲಿ ಪಾಟೀಲ್ ಅವರನ್ನು ಕನಕಗಿರಿ ಪೊಲೀಸರು ಬಂಧಿಸಿದ್ದಾರೆ. ಜೂನ್ …

Read More »

ಚಿಂತಾಮಣಿಯಲ್ಲಿ ಡಬಲ್ ಮರ್ಡರ್ : ಕತ್ತು ಕೊಯ್ದು ಸಹೋದರಿಯರ ಹತ್ಯೆ ಮಾಡಿ ಆರೋಪಿ ಪರಾರಿ

ಚಿಂತಾಮಣಿ: ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ಪತ್ನಿ ಹಾಗೂ ನಾದಿನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿಂತಾಮಣಿ ಪಟ್ಟಣದ ಜೆಜೆ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಶಮಾ (30) ಮತ್ತು ಆಕೆಯ ಸಹೋದರಿ ರೇಷಾ (20) ಎಂದು ಗುರುತಿಸಲಾಗಿದೆ. ಆರೋಪಿ ಏಜಾಝ್‌ಖಾನ್‌ ಪತ್ನಿಯನ್ನು ಮಕ್ಕಳೊಂದಿಗೆ ಮನೆಗೆ ಕರೆತರುವ ವಿಚಾರವಾಗಿ ಜಗಳವಾಡಿ, ಬಳಿಕ ಪತ್ನಿ ಮತ್ತು ಮಧ್ಯೆ ಬಂದ ನಾದಿನಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಘಟನೆಯ ಬಳಿಕ ಆರೋಪಿ …

Read More »

ಶಾಂಪೂ, ಪಾಮ್ ಆಯಿಲ್ ಸೇರಿಸಿದ ಸಿಂಥೆಟಿಕ್ ಹಾಲು ಮಾರಾಟ ದಂಧೆ ಬಯಲಿಗೆ: 13 ಮಂದಿ ಅರೆಸ್ಟ್

ಮಹಾರಾಷ್ಟ್ರ: ₹11.48 ಕೋಟಿ ಮೌಲ್ಯದ ಬೃಹತ್ ಸಿಂಥೆಟಿಕ್ ಹಾಲಿನ ದಂಧೆಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಹಾಗೂ ಪೊಲೀಸರು ಭೇದಿಸಿದ್ದು, ಇದುವರೆಗೆ 13 ಆರೋಪಿಗಳನ್ನು ಬಂಧಿಸಿದ್ದಾರೆ. ಪುಣೆ, ಅಹಲ್ಯಾನಗರ, ಸೋಲಾಪುರ, ಜಲ್ನಾ ಮತ್ತು ಥಾಣೆ ಸೇರಿದಂತೆ 13 ಸ್ಥಳಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 20,000 ಲೀಟರ್ ಶಂಕಿತ ನಕಲಿ ಹಾಲು, ಕಲಬೆರಕೆ ರಾಸಾಯನಿಕಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಐದು ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಿ, ನಾಲ್ಕು …

Read More »

ಫೋನ್ ಪೇ ಮೂಲಕ ಲಂಚ, ಭ್ರಷ್ಟ ಅಧಿಕಾರಿಯನ್ನು ಲಾಕ್ ಮಾಡಿದ ಲೋಕಾ!

ಕಲಬುರಗಿ: ಸರ್ಕಾರದ ವಸತಿ ಯೋಜನೆಯ ಅನುದಾನ ಬಿಡುಗಡೆ ಮಾಡಲು ಫಲಾನುಭವಿಯಿಂದ ಫೋನ್‌ಪೇ ಮೂಲಕ ₹15 ಸಾವಿರ ಲಂಚ ಸ್ವೀಕರಿಸುತ್ತಿದ್ದ ಕರದಾಳ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸಂತೋಷ ರಾಠೋಡರನ್ನು ಕಲಬುರಗಿ ಲೋಕಾಯುಕ್ತ ಪೊಲೀಸರು ಬಣ್ಣದ ಕೈಯಲ್ಲಿ ಬಂಧಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯ 3ನೇ ಮತ್ತು 4ನೇ ಕಂತಿನ ಹಣ ಬಿಡುಗಡೆಗೆ ಆರೋಪಿ ಒಟ್ಟು ₹22 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ₹15 ಸಾವಿರವನ್ನು ಫೋನ್‌ಪೇ ಮೂಲಕ …

Read More »

11 ತಿಂಗಳ ಮಗುವನ್ನ ಫುಟ್ಬಾಲ್​ ರೀತಿ ಒದ್ದ ತಾಯಿ, ಎಸೆದು ಕೊಂದ ತಂದೆ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ, ಹತ್ಯೆಗೆ ಕಾರಣವೇನು?

ಬೆಂಗಳೂರು: 11 ತಿಂಗಳ ಹೆಣ್ಣು ಮಗುವನ್ನು ತಂದೆ-ತಾಯಿಯೇ ಹತ್ಯೆ ಮಾಡಿದ ಆರೋಪದ ಪ್ರಕರಣದಲ್ಲಿ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಪೊಲೀಸರು ಮಗುವಿನ ತಂದೆ ಶೇಖಪ್ಪ (22)ನನ್ನು ಬಂಧಿಸಿದ್ದು, ತಾಯಿ ವಿಜಯಲಕ್ಷ್ಮಿ ತಲೆಮರೆಸಿಕೊಂಡಿದ್ದಾಳೆ. ಜೂನ್ 9ರಂದು ಕಿತಗನೂರಿನಲ್ಲಿ ನಡೆದ ಘಟನೆ ಬಳಿಕ ಮಗು ಮಂಚದಿಂದ ಬಿದ್ದು ಮೃತಪಟ್ಟಿದೆ ಎಂದು ದಂಪತಿ ಹೇಳಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ದೇಹದೊಳಗಿನ ಗಂಭೀರ ಗಾಯಗಳು, ಮೂಳೆ ಮುರಿತಗಳು ಹಾಗೂ …

Read More »

ರಬ್ಬರ್ ಶೀಟ್ ನಿರ್ಮಾಣ ಘಟಕಕ್ಕೆ ಬೆಂಕಿ

ಕಾಸರಗೋಡು: ಬದಿಯಡ್ಕ ನೆಕ್ರಾಜೆ ಸನಿಹದ ಆಲಂಕೂಡ್ಲಿನಲ್ಲಿ ರಬ್ಬರ್ ಶೀಟ್ ನಿರ್ಮಾಣ ಘಟಕಕ್ಕೆ ಬೆಂಕಿ ತಗುಲಿದ ಪರಿಣಾಮ ನಷ್ಟ ಉಂಟಾಗಿದೆ. ಲಕ್ಷ್ಮೀಶ ಬಳ್ಳುಳ್ಳಾಯ ಎಂಬುವರ ಮನೆ ಸನಿಹ ಚಟುವಟಿಕೆ ನಡೆಸುತ್ತಿದ್ದ ಘಟಕದಲ್ಲಿ ಬೆಂಕಿ ಉಂಟಾಗಿದ್ದು, ರಬ್ಬರ್ ಶೀಟ್, ಬಾಗಿಲು ಮತ್ತಿತರ ಸಾಮಗ್ರಿಗಳು ಹಾನಿಗೀಡಾಗಿ 2 ಲಕ್ಷ ರೂ.ನಷ್ಟ ಸಂಭವಿಸಿದೆ. ಕಾಸರಗೋಡು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ಶಮನಗೊಳಿಸಿ, ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ. ಘಟಕಕ್ಕೆ ತಲುಪಲು ಸೂಕ್ತ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಅಗ್ನಿಶಾಮಕ …

Read More »