Breaking News

Breaking News

ಮದುವೆ ಸಮಾರಂಭದಲ್ಲೇ ರಕ್ತದಾಟ..! ‘ಫ್ರೂಟ್ ಇರ್ಫಾನ್’ ಕೇಸ್‌ನ ಪ್ರಮುಖ ಆರೋಪಿ ಹ್ಯಾರಿಸ್ ಪಠಾಣ್ ಮೇಲೆ ದಾಳಿ..!

2020ರ ಕೊಲೆ ಕೇಸ್‌ಗೆ ಮತ್ತೆ ರಕ್ತದ ನೆರಳು..! ಹ್ಯಾರಿಸ್ ಪಠಾಣ್ ಮೇಲೆ ಏಕಾಏಕಿ ಹಲ್ಲೆ..! ಹುಬ್ಬಳ್ಳಿ ಬ್ರೇಕಿಂಗ್: ಫ್ರೂಟ್ ಇರ್ಫಾನ್ ಕೊಲೆ ಕೇಸ್‌ಗೆ ಮತ್ತೆ ರಕ್ತದ ನೆರಳು… ಮದುವೆ ಸಮಾರಂಭದಲ್ಲೇ ಪ್ರಮುಖ ಆರೋಪಿ ಹ್ಯಾರಿಸ್ ಪಠಾಣ್ ಮೇಲೆ ದಾಳಿ..! ಹುಬ್ಬಳ್ಳಿ: 2020ರಲ್ಲಿ ನಡೆದ ಕುಖ್ಯಾತ ರೌಡಿ ಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ‘ಫ್ರೂಟ್ ಇರ್ಫಾನ್’ ಅಲಿಯಾಸ್ ಇರ್ಫಾನ್ ಹಂಚಿನಾಳ ಹತ್ಯೆ ಪ್ರಕರಣ ಇದೀಗ ಮತ್ತೆ ಸದ್ದು ಮಾಡಿದೆ… 2020ರ …

Read More »

ಸಾಗುವಾನಿ ಮರ ಅಕ್ರಮ ಸಾಗಾಟಕ್ಕೆ ಯತ್ನ: ಪ್ರಕರಣ ದಾಖಲು

ಶಿಗ್ಗಾವಿ ತಾಲ್ಲೂಕಿನ ದುಂಡಶಿ ವಲಯದ ಹೊಸೂರ ಗ್ರಾಮದಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಿಸಲು ಯತ್ನಿಸಿದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದೆ. ಕಾರ್ಯಾಚರಣೆಯಲ್ಲಿ 5.255 ಘನ ಮೀಟರ್ ಮರದ ದಿಮ್ಮಿಗಳು, ಎರಡು ಕೊಡಲಿಗಳು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಮರದಲ್ಲಿ ಏಳು ಸಾಗುವಾನಿ ಬೊಲೆಗಳು, ನಾಲ್ಕು ಸಾಗುವಾನಿ ಗೋಲ ತುಂಡುಗಳು ಹಾಗೂ 22 ಮಿಶ್ರ ಗೋಲ ತುಂಡುಗಳು ಸೇರಿವೆ. ಖಚಿತ ಮಾಹಿತಿ ಆಧರಿಸಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ …

Read More »

ಜಾಗದ ವಿಚಾರಕ್ಕೆ ಭೀಕರ ಗಲಾಟೆ! ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಸೇರಿ ಹಲವರ ವಿರುದ್ಧ FIR

ಬೆಂಗಳೂರು: ಜಾಗದ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್, ಅವರ ಸಹೋದರರು ಸೇರಿದಂತೆ ಹಲವರ ವಿರುದ್ಧ ಹುಳಿಮಾವು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೊಲೆ ಯತ್ನ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಹೊಮ್ಮದೇವನಹಳ್ಳಿ ಗ್ರಾಮಠಾಣಾ-91ರ ಸೈಟ್ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ. ಅ.4ರಂದು ರಾತ್ರಿ ಫಾತಿಮಾ ಹಾಗೂ ಕಾಣಿಕ್ಯ ರಾಜ್ ದಂಪತಿ ಮನೆ ಬಳಿ 25ರಿಂದ 30 ಮಂದಿ ತೆರಳಿ ಲಾಂಗು, ಮಚ್ಚು, ದೊಣ್ಣೆ ಹಾಗೂ ಕಲ್ಲುಗಳಿಂದ …

Read More »

ಹಾಸನದಲ್ಲಿ ಚಿನ್ನಾಭರಣಕ್ಕಾಗಿ ವೃದ್ಧೆಯ ಭೀಕರ ಕೊಲೆ; ಪ್ಲಾಸ್ಟಿಕ್ ಚೀಲದಲ್ಲಿ ಶವ ಪತ್ತೆ!

ಹಾಸನ: ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ವೃದ್ಧೆಯ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತರನ್ನು ಹಿರೀಹಳ್ಳಿಕೊಪ್ಪಲು ಗ್ರಾಮದ ಲಕ್ಷ್ಮಮ್ಮ (67) ಎಂದು ಗುರುತಿಸಲಾಗಿದೆ. ಅಕ್ಟೋಬರ್ 3ರಂದು ವಿಜಿ ಕೊಪ್ಪಲಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಲಕ್ಷ್ಮಮ್ಮ ಬಳಿಕ ನಾಪತ್ತೆಯಾಗಿದ್ದರು. ಅಕ್ಟೋಬರ್ 6ರಂದು ಪತಿ ಅಣ್ಣೇಗೌಡರು ಪೊಲೀಸರಿಗೆ ದೂರು ನೀಡಿದ ಬಳಿಕ ಶೋಧ ನಡೆಸಿದಾಗ ನಾಲೆಯಲ್ಲಿ ಶವ ಪತ್ತೆಯಾಗಿದೆ. ಚಿನ್ನಾಭರಣ ದೋಚುವ …

Read More »

ಗರ್ಭಿಣಿಯ ವೇಷ ಧರಿಸಿ ಭ್ರೂಣಲಿಂಗ ಪತ್ತೆ ಕೇಂದ್ರಕ್ಕೆ ಎಸಿ ಭೇಟಿ – ಕರಾಳ ಜಾಲ ಬಯಲು!

ಬಾಗಲಕೋಟೆ: ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣಹತ್ಯೆ ಜಾಲದ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರದ ಜತ್ತ ತಾಲೂಕಿನ ವಿವಿಧೆಡೆ ದಾಳಿ ನಡೆಸಿದ್ದಾರೆ. ಮಹಿಳಾ ಅಧಿಕಾರಿಗಳು ಗರ್ಭಿಣಿ ಹಾಗೂ ಸಂಬಂಧಿಕರಂತೆ ಮಾರುವೇಷದಲ್ಲಿ ಜಾಲದೊಳಗೆ ಪ್ರವೇಶಿಸಿ ಮಾಹಿತಿ ಕಲೆಹಾಕಿದ್ದರು. ಮಹಾಲಿಂಗಪುರದ ನಕಲಿ ವೈದ್ಯೆ ಕವಿತಾ ನೀಡಿದ ಮಾಹಿತಿ ಆಧರಿಸಿ ಜಾಡರ ಬಬಲಾದಿ, ಕರ್ಜಗಿ ಸೇರಿದಂತೆ ಹಲವು ಕಡೆ ದಾಳಿ ನಡೆಸಲಾಗಿದ್ದು, ಅಕ್ರಮ ಸ್ಕ್ಯಾನಿಂಗ್ ಯಂತ್ರ, ಎಂಟಿಬಿ ಡ್ರಗ್ಸ್ ಹಾಗೂ ಎರಡು ಇಂಜೆಕ್ಷನ್‌ಗಳು ಪತ್ತೆಯಾಗಿವೆ. …

Read More »

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿವೇದನೆ ನಿರಾಕರಿಸಿದ್ದ ಯುವತಿಗೆ ಮೂರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ ಆಕೆಯ ಮೇಲೆ ಗಂಭೀರ ದಾಳಿ ನಡೆಸಿದ ಘಟನೆ ಸೆ.29ರಂದು ವಿಜಯನಗರದ ಡಿಪ್ಲೊಮಾ ಕಾಲೇಜಿನ ಹಾಸ್ಟೆಲ್ ಬಳಿ ನಡೆದಿದೆ. ಹಲಗೂರು ಗ್ರಾಮದ ಚಂದನ್ (27) ಆರೋಪಿಯಾಗಿದ್ದು, ಘಟನೆಯಲ್ಲಿ ಯುವತಿ ಹಾಗೂ ಚಂದನ್ ಇಬ್ಬರೂ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವತಿ ಈ ಹಿಂದೆ ಪೋಷಕರೊಂದಿಗೆ ಹಲಗೂರು ಠಾಣೆಗೆ ದೂರು ನೀಡಿದ್ದರೂ, ರಾಜಿ ಪಂಚಾಯಿತಿ ಬಳಿಕವೂ ಚಂದನ್ …

Read More »

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಪುಂಡರ ಅಟ್ಟಹಾಸ: ಕಾಲಿನಿಂದ ಒದ್ದು, ಹಲ್ಲೆ: ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ದೊಡ್ಡಬಳ್ಳಾಪುರ: ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಇಬ್ಬರು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಪಾಲನಜೋಗಹಳ್ಳಿಯಲ್ಲಿ ನಡೆದಿದೆ. ಹರಹಾನ್ ಸಾರಿಹಾನ್ ಹಾಗೂ ಬಸೀರ್ ಅಲಿಯಾಸ್ ಗಿಡ್ಡ ಜಗಳವಾಡುತ್ತಿದ್ದ ವೇಳೆ ಸ್ಥಳೀಯರು 112ಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಮಣಿಕಂಠ ಮತ್ತು ರಾಯಪ್ಪ ಪೂಜಾರಿ ಜಗಳ ಬಿಡಿಸಲು ಮುಂದಾದಾಗ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ, ಕಾಲಿನಿಂದ ಒದ್ದಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರ ಎದೆ, ಕೈಕಾಲುಗಳಿಗೆ …

Read More »

8 ವರ್ಷದ ವಿಶೇಷಚೇತನ ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್

ಬೆಂಗಳೂರು: ದಕ್ಷಿಣ ಹೊರವಲಯದಲ್ಲಿ 8 ವರ್ಷದ ಶ್ರವಣದೋಷ ಹೊಂದಿರುವ ತನ್ನದೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಹರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕಳೆದ ವಾರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳಡಿ ಬಂಧಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Read More »

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ₹1 ಕೋಟಿ ಮೌಲ್ಯಕ್ಕೆ ಹಾವನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯಿಂದ ಜೀವಂತ ಹಾವು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 970 ಸಾಫ್ಟ್ ಕೋರಲ್ ಸೀ ಫ್ಯಾನ್‌ಗಳು ಹಾಗೂ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಿ ಆರು …

Read More »

ಹುಬ್ಬಳ್ಳಿಯಲ್ಲಿ ಕಳ್ಳರು ಬಾಲ ಬಿಚ್ಚಿದ್ರಾ..? ರಾತ್ರಿ 2 ಗಂಟೆಗೆ ಮನೆಗೆ ಕನ್ನ! ಹಳೇ ಹುಬ್ಬಳ್ಳಿಯಲ್ಲಿ ಮತ್ತೆ ಕಳ್ಳರ ಹಾವಳಿ..! ಬೀಗ ಮುರಿದು ಮನೆಗೆ ನುಗ್ಗಿದ ಖದೀಮರು..

ಹಳೇ ಹುಬ್ಬಳ್ಳಿಯಲ್ಲಿ ಕಳ್ಳರ ಕೈಚಳಕ..! ರಾತ್ರಿ 2 ಗಂಟೆಗೆ ಮನೆ ಬೀಗ ಮುರಿದು ಕಳ್ಳತನ – ಪೊಲೀಸರ ಪರಿಶೀಲನೆ.. ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇಪಾರಿ ಪ್ಲಾಟ್, ಶಿವಶಂಕರ ಕಾಲೋನಿಯ 6ನೇ ಕ್ರಾಸ್‌ನಲ್ಲಿ ರಾತ್ರಿ ಸುಮಾರು 2 ಗಂಟೆ ವೇಳೆಗೆ ಮನೆ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ…. ಅಬ್ದುಲ್ ಹಮೀದ್ ಬಳಾರಿ ಎಂಬುವವರ ಮನೆಯಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಕಳ್ಳರು ಬೀಗ ಮುರಿದು …

Read More »