Breaking News

Breaking News

ಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಗಲಾಟೆ, ಪತಿಯಿಂದಲೇ ಪತ್ನಿಯ ಭೀಕರ ಕೊ*ಲೆ!

ಬೆಳಗಾವಿ: ಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಪತಿ-ಪತ್ನಿ ನಡುವೆ ನಡೆದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಯಭಾಗ ತಾಲೂಕಿನ ಮಾಡಲಗಿ ಗ್ರಾಮದಲ್ಲಿ ನಡೆದಿದೆ. ಕಲ್ಲವ್ವ ಮರಡಿ (55) ಕೊಲೆಯಾದ ಮಹಿಳೆಯಾಗಿದ್ದು, ಪತಿ ಸದಾಶಿವ ಮರಡಿ (67) ಆರೋಪಿಯಾಗಿದ್ದಾನೆ. ಜಾನುವಾರುಗಳಿಗೆ ಮೇವು ಹಾಕುವ ವಿಚಾರದಲ್ಲಿ ದಂಪತಿ ನಡುವೆ ಜಗಳ ನಡೆದಿತ್ತು. ಬಳಿಕ ಕಲ್ಲವ್ವ ಹಸಿರು ಮೇವು ತರಲು ಕಬ್ಬಿನ ಗದ್ದೆಗೆ ತೆರಳಿದ್ದರು. ಕೋಪಗೊಂಡಿದ್ದ ಸದಾಶಿವ ಕುಡಗೋಲು ಹಿಡಿದು ಆಕೆಯ ಹಿಂದೆಯೇ …

Read More »

ಓವರ್‌ ಟೇಕ್‌ ವೇಳೆ ಕನ್ನಡಿಗೆ ಹಾನಿ: ಬಸ್‌ ಚಾಲಕನಿಗೆ ಹಲ್ಲೆ

ಬೆಂಗಳೂರು: ಓವರ್‌ಟೇಕ್ ಮಾಡುವ ವೇಳೆ ವಿಆರ್‌ಎಲ್‌ ಬಸ್‌ನ ಮೀರರ್‌ ಮುರಿದಿದ್ದಕ್ಕೆ ಕೋಪಗೊಂಡ ಚಾಲಕ ಹಾಗೂ ಕಚೇರಿ ಸಿಬ್ಬಂದಿ ಸೀಬರ್ಡ್‌ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಸೀಬರ್ಡ್‌ ಬಸ್ ಚಾಲಕ ದಿವಾಕರ್‌ ಗೋವರ್ಧನ್‌ ಥಿಯೇಟರ್ ಬಳಿ ಓವರ್‌ಟೇಕ್‌ ಮಾಡುವಾಗ ವಿಆರ್‌ಎಲ್‌ ಬಸ್‌ನ ಮೀರರ್‌ ಮುರಿದಿದ್ದರು. ಇದರಿಂದ ಕೋಪಗೊಂಡ ವಿಆರ್‌ಎಲ್‌ ಚಾಲಕ, ಸಿಬ್ಬಂದಿಗೆ ಮಾಹಿತಿ ನೀಡಿ ಬಸ್‌ ಅಡ್ಡಗಟ್ಟಿಸಿ, ದಿವಾಕರ್‌ಗೆ ಮನಸೋಇಚ್ಛೆ ಥಳಿಸಿ …

Read More »

ಹಳೇ ಹುಬ್ಬಳ್ಳಿಯಲ್ಲಿ ಗಾಂಜಾ ದಂಧೆಗೆ ಸಿಸಿಬಿ ಬ್ರೇಕ್..! 3.213 ಕೆಜಿ ಗಾಂಜಾ ಸಹಿತ ಇಬ್ಬರು ಅರೆಸ್ಟ್; ₹1.60 ಲಕ್ಷ ಮೌಲ್ಯದ ಮಾಲು ವಶ..!

ಹಳೇ ಹುಬ್ಬಳ್ಳಿಯಲ್ಲಿ ಗಾಂಜಾ ದಂಧೆಗೆ ಸಿಸಿಬಿ ಬ್ರೇಕ್..! ಇಬ್ಬರು ಗಾಂಜಾ ಮಾರಾಟಗಾರರ ಬಂಧನ; ₹1.60 ಲಕ್ಷ ಮೌಲ್ಯದ ಮಾಲು ವಶ..! ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ…. ಹುಬ್ಬಳ್ಳಿ–ಧಾರವಾಡ ಬೈಪಾಸ್ ರಸ್ತೆಯ ಕಾರವಾರ ರಸ್ತೆ ಬ್ರಿಡ್ಜ್‌ನಿಂದ ತಿಮ್ಮಸಾಗರ ಕಡೆಗೆ ಹೋಗುವ ರಸ್ತೆಯ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಸಿಸಿಬಿ …

Read More »

ಮುಸ್ಲಿಂ ಮುಖಂಡರ ಒಗ್ಗಟ್ಟು ಎಲ್ಲಿದೆ..? DCC ಅಧ್ಯಕ್ಷ ಸ್ಥಾನಕ್ಕೆ 30ಕ್ಕೂ ಹೆಚ್ಚು ಆಕಾಂಕ್ಷಿಗಳು… ಕೆಲವೊಂದು ಮುಖಂಡರು ಧೂಳಿಪಟ ಆದ್ರಾ..?

ನಾ ಮುಂದು… ನೀ ಮುಂದು… ಹುದ್ದೆಗಾಗಿ ಪೈಪೋಟಿ; ಮುಸ್ಲಿಂ ಸಮಾಜದ ಕೆಲ ಮುಖಂಡರು ಧೂಳಿಪಟ ಆದ್ರಾ..? ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮುಸ್ಲಿಂ ಸಮಾಜದ ಮುಖಂಡರ ರಾಜಕೀಯ ನಾಯಕತ್ವದ ಬಗ್ಗೆ ಇದೀಗ ಹೊಸ ಚರ್ಚೆ ಶುರುವಾಗಿದೆ…. ಒಂದೆಡೆ ಮುಸ್ಲಿಂ ಸಮಾಜಕ್ಕೆ ಪ್ರಬಲ ಹಾಗೂ ಒಗ್ಗಟ್ಟಿನ ನಾಯಕತ್ವ ಕಾಣಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ಕೆಲವೇ ದಿನಗಳ ಹಿಂದೆ DCC ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ವಿಚಾರದಲ್ಲಿ “ನಾ ಮುಂದು… ನೀ ಮುಂದು…” ಎಂಬಂತೆ …

Read More »

ಬೆಳಂಬೆಳಗ್ಗೆ ಸಿಸಿಬಿ ಪೊಲೀಸರ ಖಡಕ್ ಆಪರೇಷನ್..! 3 ಕೆಜಿಗೂ ಅಧಿಕ ಗಾಂಜಾ ವಶ, ಇಬ್ಬರು ವಶಕ್ಕೆ ಪಡೆದಿದ್ದಾರೆ …

ಬೆಳಂಬೆಳಗ್ಗೆ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ..! 3 ಕೆಜಿಗೂ ಅಧಿಕ ಗಾಂಜಾ ವಶ.. ಇಬ್ಬರು ವಶಕ್ಕೆ ಎನ್ನಲಾಗಿದೆ..! ಹುಬ್ಬಳ್ಳಿ: ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ದಂಧೆಗೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು ಮತ್ತೆ ಖಡಕ್ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಂಬೆಳಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ತಂಡ, 3 ಕೆಜಿಗೂ ಅಧಿಕ ಗಾಂಜಾವನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ… ಕಾರ್ಯಾಚರಣೆ ವೇಳೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದ್ದು, …

Read More »

ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದಕ್ಕೆ ಜಾತಿ ನಿಂದನೆ, ಹಲ್ಲೆ ಆರೋಪ; ಐವರ ವಿರುದ್ಧ FIR ದಾಖಲು

ಲಿಂಗಸುಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಗದ್ದೆಮ್ಮ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ ಇಬ್ಬರ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದಡಿ ಐವರ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಗಪ್ಪ ಅವರು ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಯಮನೂರು, ರಮೇಶ, ತಿಮ್ಮಣ್ಣ, ಬಸವರಾಜ ಹಾಗೂ ರವಿ ಎಂಬವರು ಜಾತಿ ಹೆಸರಿನಿಂದ ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ಬಿಡಿಸಲು …

Read More »

ನಕಲಿ ಕ್ಯೂಆರ್ ಕೋಡ್ ಮೂಲಕ 12 ಲಕ್ಷ ರೂ. ವಂಚನೆ: 6 ಜನ ಅರೆಸ್ಟ್

ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿ ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ಹಣವನ್ನು ನಕಲಿ ಕ್ಯೂಆರ್ ಕೋಡ್ ಮೂಲಕ ಬೇರೆ ಖಾತೆಗೆ ವರ್ಗಾಯಿಸಿ ಸುಮಾರು ₹12 ಲಕ್ಷ ವಂಚಿಸಿದ ಆರೋಪದ ಮೇಲೆ ಆರು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಎಂಐಟಿ ಕ್ಯಾಂಪಸ್‌ನಲ್ಲಿ ಬ್ಯಾಟರಿ ಚಾಲಿತ ವಾಹನ ಸೇವೆ ನೀಡುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಕಂಪನಿಯ ಅಧಿಕೃತ ಕ್ಯೂಆರ್ ಕೋಡ್ ಬದಲಿಗೆ ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್ ಬಳಸಿ ಪ್ರಯಾಣಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. …

Read More »

ಕಲಬುರಗಿ: ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಪೇದೆ

ಕಲಬುರಗಿ: ನ್ಯಾಯಾಲಯದ ಸೂಚನೆಯಂತೆ ಪ್ರತಿ ತಿಂಗಳು ಠಾಣಾಧಿಕಾರಿ ಮುಂದೆ ಹಾಜರಾಗಬೇಕಿದ್ದ ವ್ಯಕ್ತಿಗೆ ಪ್ರತಿ ಭಾನುವಾರ ಠಾಣೆಗೆ ಬರುವಂತೆ ಸತಾಯಿಸಿ, ಬೇಲ್ ರದ್ದುಪಡಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ₹3 ಸಾವಿರ ಲಂಚ ಪಡೆದ ಆರೋಪದ ಮೇಲೆ ಸುಲೇಪೇಟ್ ಠಾಣೆಯ ರೈಟರ್ ಅನಿಲಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚಿಂಚೋಳಿ ತಾಲೂಕಿನ ಗಡಿಕೇಶ್ವಾರದ ಚಂದ್ರಶೇಖರ ರಂಗನೂರ ಅವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅನಿಲಕುಮಾರ್, ಮಧ್ಯವರ್ತಿ ಕೃಷ್ಣ ಎಂಬಾತನ …

Read More »

ಮಣಿಪಾಲ| ಮೊಬಿಲಿಟಿ ಕಂಪೆನಿಗೆ ವಂಚನೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಮಣಿಪಾಲ: ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬ್ಯಾಟರಿ ಚಾಲಿತ ವಾಹನ ಸೇವೆ ನೀಡುವ ಇಂಡಿಯಾಂಟಾ ಇ-ಮೊಬಿಲಿಟಿ ಕಂಪನಿಗೆ ₹12 ಲಕ್ಷ ವಂಚಿಸಿದ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸುವಾಗ ಕಂಪನಿಯ ಕ್ಯೂಆರ್ ಕೋಡ್ ಬದಲಿಗೆ ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್ ಬಳಸಿದ್ದರು. ಬಳಿಕ ಸಂಗ್ರಹಿಸಿದ ಹಣವನ್ನು ಮುತ್ತಣ್ಣ ಅಢೀನವರ ಅವರ ಪತ್ನಿ ಐಶ್ವರ್ಯ ಮುತ್ತಣ್ಣ ಅವರ …

Read More »

ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಮನೆ ಮೇಲೆ ಕಲ್ಲು ತೂರಾಟ: ಸಂತ್ರಸ್ತೆ ಕುಟುಂಬದವರ ಆಕ್ರೋಶ

ದಾವಣಗೆರೆ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಟುಂಬದವರು ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಚನ್ನಗಿರಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಎರಡು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿ, ಸಂತ್ರಸ್ತೆಯ ತಂದೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ಠಾಣೆ …

Read More »