BigTv News
September 30, 2026
Breaking News
ಉಡುಪಿ: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಮಂಗಳೂರು-ಕುಂದಾಪುರ ಖಾಸಗಿ ಎಕ್ಸ್‌ಪ್ರೆಸ್ ಬಸ್‌ನ್ನು ಇಬ್ಬರು ಕಳ್ಳರು ಕದ್ದೊಯ್ದ ಘಟನೆ ಚಿಟ್ಪಾಡಿಯಲ್ಲಿ ನಡೆದಿದೆ. ಸಿಬ್ಬಂದಿಯಂತೆ ಸಮವಸ್ತ್ರ ಧರಿಸಿ, ಹೆಲ್ಮೆಟ್ ಹಾಕಿಕೊಂಡಿದ್ದ ಕಳ್ಳನೊಬ್ಬ ಬಸ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಇನ್ನೊಬ್ಬ ಕಳ್ಳ ಸ್ಕೂಟಿಯಲ್ಲಿ ಬಸ್‌ನ್ನು ಹಿಂಬಾಲಿಸಿದ್ದು, ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಸ್ ಕಳವಾದ ಬಗ್ಗೆ ದೂರು ಬಂದ ಬಳಿಕ ಉಡುಪಿ ನಗರ ಪೊಲೀಸರು ಜಿಪಿಎಸ್ ಆಧರಿಸಿ ಹುಡುಕಾಟ ನಡೆಸಿದ್ದಾರೆ. ಕಾಪು ತಾಲೂಕಿನ ಮುದರಂಗಡಿ ಸಮೀಪದ ಮುದ್ದಾಡಿಯಲ್ಲಿ …
Read More »
BigTv News
September 30, 2026
Breaking News
ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನ 3ನೇ ಸೆಕ್ಟರ್‌ನಲ್ಲಿ ಇಬ್ಬರು ಯುವತಿಯರು ಹಾಗೂ ಆಟೋ ಚಾಲಕನ ನಡುವೆ ರಸ್ತೆಯಲ್ಲೇ ನಡೆದ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. ಘಟನೆ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಆಟೋ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ದರ ವಿಚಾರವಾಗಿ ಜಗಳ ಆರಂಭವಾಗಿದ್ದು, ಯುವತಿಯರು ಮದ್ಯದ ಅಮಲಿನಲ್ಲಿ ತಮ್ಮ ಮೇಲೆ ಮೊದಲು ಹಲ್ಲೆ ನಡೆಸಿದರು ಎಂದು ಆಟೋ ಚಾಲಕ ಆರೋಪಿಸಿದ್ದಾನೆ. ಇತ್ತ ಯುವತಿಯರು ಪೊಲೀಸರಿಗೆ ದೂರು ನೀಡಲು ಒಂದೆರಡು ದಿನಗಳ …
Read More »
BigTv News
September 30, 2026
Breaking News
ಚಿಕ್ಕಮಗಳೂರು: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ 25ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ನಕಲಿ ಲೇಡಿ ಪಿಎಸ್‌ಐ ನಿವೇದಿತಾ ಗೌಡಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಕೆಫೆ ನಡೆಸುತ್ತಿದ್ದ ಆಕೆ, ಗ್ರಾಹಕರಿಗೆ ತಾನು ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪಿಎಸ್‌ಐ ಎಂದು ಪರಿಚಯಿಸಿಕೊಂಡು ವಂಚನೆ ಮಾಡುತ್ತಿದ್ದಳು ಎನ್ನಲಾಗಿದೆ. ಪೊಲೀಸ್ ಅಧಿಕಾರಿಯಂತೆ ಕಾಣಲು ವಿಶೇಷವಾಗಿ ವೇಷ ಧರಿಸುತ್ತಿದ್ದ ನಿವೇದಿತಾ, ಪರಿಚಯವಾದವರ ಐಷಾರಾಮಿ ಕಾರುಗಳನ್ನು ಪಡೆದು ಮತ್ತೊಬ್ಬರಿಗೆ ಮಾರಾಟ ಮಾಡುವುದು …
Read More »
BigTv News
September 30, 2026
Breaking News, Crime
ಮೈಸೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು, ಬಳಿಕ ಆಕೆಯನ್ನು ತಬ್ಬಿಕೊಳ್ಳಲು ಯತ್ನಿಸಿದ ಘಟನೆ ವಿಜಯನಗರದ ಡಿಪ್ಲೊಮಾ ಕಾಲೇಜಿನ ಹಾಸ್ಟೆಲ್ ಬಳಿ ಮಂಗಳವಾರ ನಡೆದಿದೆ. ಚಂದನ್ (27) ಎಂಬಾತ ಕೃತ್ಯ ಎಸಗಿದ್ದಾನೆ. ಮಂಡ್ಯದ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಚಂದನ್, ಅದೇ ಗ್ರಾಮದ ಯುವತಿಯನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಯುವತಿ ಪ್ರೀತಿಯನ್ನು ನಿರಾಕರಿಸಿದ್ದರೂ ಪದೇಪದೇ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಪೊಲೀಸರಿಗೆ ದೂರು …
Read More »
BigTv News
September 29, 2026
Breaking News
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿಯ ವಸತಿಗೃಹದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಯನ್ನು 10 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ವಯನಾಡು ಮೂಲದ ಬಿಜು ಸಿ.ಜೆ. ಅಲಿಯಾಸ್ ಆಂಟೋನಿ ಬಿಜು (44) ಬಂಧಿತ ಆರೋಪಿ. 2016ರಲ್ಲಿ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದ ಅವಧಿ ಮುಗಿದ ಬಳಿಕ ಬಿಡುಗಡೆಯಾಗಿದ್ದ ಆತ, ನಂತರ ನ್ಯಾಯಾಲಯಕ್ಕೆ ಹಾಜರಾಗದೆ …
Read More »
BigTv News
September 29, 2026
Breaking News
ಕೋಲಾರ: ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರೊಂದು ಮಧ್ಯರಾತ್ರಿ ಏಕಾಏಕಿ ಹೊತ್ತಿ ಉರಿದ ಘಟನೆ ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಸಮೀಪ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ …
Read More »
BigTv News
September 29, 2026
Breaking News
ಬೆಂಗಳೂರು: ಗಿರಿನಗರ, ಹೆಬ್ಬಾಳ ಹಾಗೂ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹10.96 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿದ್ಯಾರಣ್ಯಪುರ ಠಾಣೆ ಪೊಲೀಸರು ಕೆ.ಆರ್.ಪುರದ ಜುನೈದ್ ಪಾಷಾ (30) ಹಾಗೂ ರಿಜ್ವಾನ್ ಬೇಗ್ (30) ಅವರನ್ನು ಬಂಧಿಸಿ, ₹21 ಲಕ್ಷ ಮೌಲ್ಯದ 105 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳ ಠಾಣೆ ಪೊಲೀಸರು ಒಡಿಶಾ …
Read More »
BigTv News
September 29, 2026
Breaking News
ಬಾಗಲಕೋಟೆ: ಯುವತಿಯರನ್ನು ಚುಡಾಯಿಸುತ್ತಿದ್ದುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನೊಬ್ಬನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೆರೂರು ಪಟ್ಟಣದಲ್ಲಿ ಕೇಳಿಬಂದಿದೆ. ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಪಾಂಡು ಬಡಿಗೇರ ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಾಂಡು ಅವರು ಯುವತಿಯರನ್ನು ಚುಡಾಯಿಸುತ್ತಿದ್ದ ವಿಚಾರವನ್ನು ಪ್ರಶ್ನಿಸಿದ್ದರಿಂದ ಕೆಲ ಯುವಕರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪಾಂಡು ಅವರ ಪಾಲಕರಾದ ಧರ್ಮಣ್ಣ …
Read More »
BigTv News
September 29, 2026
Breaking News
ಸಕಲೇಶಪುರ: ಪಟ್ಟಣದಲ್ಲಿ ಮಹಿಳೆಯರ ಸರ ದೋಚಿ ಆತಂಕ ಸೃಷ್ಟಿಸಿದ್ದ ಇಬ್ಬರು ಸರಗಳ್ಳರನ್ನು ಸಕಲೇಶಪುರ ಪೊಲೀಸರು ಮಂಗಳವಾರ ಮುಂಜಾನೆ ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಹೊಳೆ ಮಲ್ಲೇಶ್ವರ ದೇವಸ್ಥಾನದ ಬಳಿ ರಾಣಿಯಮ್ಮ ಎಂಬುವವರ 45 ಗ್ರಾಂ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಿತ್ತುಕೊಂಡು ಪರಾರಿಯಾಗಿದ್ದರು. ತಂತ್ರಜ್ಞಾನ ಹಾಗೂ ನೆಟ್‌ವರ್ಕ್ ನೆರವಿನಿಂದ ಆರೋಪಿಗಳ ಚಲನವಲನ ಪತ್ತೆಹಚ್ಚಿದ ಪೊಲೀಸರು, ಹೇಮಾವತಿ ಸೇತುವೆ ಬಳಿ ನಾಕಾಬಂದಿ ಹಾಕಿ ಅವರನ್ನು ಬೆನ್ನಟ್ಟಿದ್ದಾರೆ. ಹಳೆ ಬಸ್ ನಿಲ್ದಾಣದ …
Read More »
BigTv News
September 29, 2026
Breaking News
ಬೆಂಗಳೂರು: ದಾಸರಹಳ್ಳಿ ಸಮೀಪದ ಚೊಕ್ಕಸಂದ್ರದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ರೌಡಿಶೀಟರ್ ದೀಪು (31) ಕೊಲೆಯಾಗಿದ್ದಾನೆ. ಕಾರು ಚಾಲಕನಾಗಿದ್ದ ದೀಪು, ನಂದಿನಿ ಲೇಔಟ್‌ನಲ್ಲಿ ತಾಯಿಯೊಂದಿಗೆ ವಾಸವಾಗಿದ್ದ. ಭಾನುವಾರ ರಾತ್ರಿ ಆರೋಪಿಗಳು ಚಾಕುವಿನಿಂದ ಇರಿದು ದಾಳಿ ನಡೆಸಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಎರಡು ದಿನಗಳ ಹಿಂದೆ ದೀಪು, ಈಶ್ವರ್ ನೇಪಾಳಿ ಹಾಗೂ ಸುಮನ್ ಅಲಿಯಾಸ್ ಪಾರಿವಾಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಇದೇ ವಿಚಾರವಾಗಿ ದೀಪು ಮೇಲೆ ದಾಳಿ ನಡೆದಿರುವ …
Read More »