Shaikh BigTv
September 16, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಸೈಟ್ ಇಲ್ಲ.. ಹಣವೂ ಇಲ್ಲ..! 215 ಜನರ ಅಳಲು—ಡೆವಲಪರ್ ವಿರುದ್ಧ ಕ್ರಮ ಯಾವಾಗ.? Agrahar Timmasagar, Mavanur Road, Hubli ಹುಬ್ಬಳ್ಳಿಯ ಅಮರ್ ನಗರ ಲೇಔಟ್‌ನಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 215 ಜನರಿಗೆ ವಂಚನೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ… ಸೈಟ್ ಸಿಗುತ್ತೆ ಎಂಬ ನಂಬಿಕೆಯಿಂದ ಹಣ ನೀಡಿದ ಜನರು ಇದೀಗ ಸೈಟ್‌ವೂ ಇಲ್ಲ, ಹಣವೂ ಇಲ್ಲ ಎಂಬ ಆರೋಪದೊಂದಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ… ಕಷ್ಟಪಟ್ಟು ದುಡಿದ …
Read More »
BigTv News
September 16, 2026
Breaking News
ಬೆಂಗಳೂರು: ರಸ್ತೆ ಬದಿ ಮಲಗಿದ್ದ 19 ವರ್ಷದ ಯುವಕನ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಕಾಡುಗೊಂಡನಹಳ್ಳಿ ಠಾಣೆ ವ್ಯಾಪ್ತಿಯ ವೆಂಕಟೇಶಪುರದಲ್ಲಿ ನಡೆದಿದೆ. ಮಹೇಶ್ ಕೊಲೆಯಾದ ಯುವಕ. ಸೆ.14ರಂದು ತಡರಾತ್ರಿ ರಾಮಟೆಂಟ್ ರಸ್ತೆಯ ಬದಿ ಮಹೇಶ್ ಮಲಗಿದ್ದ ವೇಳೆ ದುಷ್ಕರ್ಮಿಗಳು ಯಾವುದೋ ವಿಚಾರಕ್ಕೆ ಆತನೊಂದಿಗೆ ಜಗಳ ತೆಗೆದು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹೇಶ್ ಮೃತಪಟ್ಟಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ವೆಲ್ಡಿಂಗ್ ಶಾಪ್‌ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ …
Read More »
BigTv News
September 16, 2026
Breaking News
ನವದೆಹಲಿ: ಸಿಗರೇಟ್ ಹೊತ್ತಿಸಲು ಬೆಂಕಿ ಪೊಟ್ಟಣ ನೀಡದ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೇಶವಪುರಂ ಪ್ರದೇಶದ ಮದ್ಯದಂಗಡಿ ಬಳಿ ನಡೆದ ಘಟನೆಯಲ್ಲಿ 30 ವರ್ಷದ ಭವಾನಿ ಮೃತಪಟ್ಟಿದ್ದು, ಆಶಾರಾಂ ಗಾಯಗೊಂಡಿದ್ದಾರೆ. ಬೆಂಕಿ ಪೊಟ್ಟಣ ಕೇಳಿದಾಗ ಮೂವರು ನಿರಾಕರಿಸಿದ್ದರಿಂದ ವಾಗ್ವಾದ ನಡೆದಿದ್ದು, ಬಳಿಕ ಆರೋಪಿಗಳು ಚಾಕುವಿನಿಂದ ಭವಾನಿ ಮತ್ತು ಆಶಾರಾಂ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಭವಾನಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನರೇಶ್ ಬಹದ್ದೂರ್ …
Read More »
BigTv News
September 16, 2026
Breaking News
ನಾಗಮಂಗಲ ತಾಲೂಕು ಕಚೇರಿ ಆವರಣದ ಕಸದ ತೊಟ್ಟಿಯಲ್ಲಿ ಮಹತ್ವದ ಕಂದಾಯ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಭಿಲೇಖಾಲಯ ಶಾಖೆಯ ವಿಷಯ ನಿರ್ವಾಹಕ ಹಾಗೂ ಎಸ್‌ಡಿಎ ಎಂ. ಅಶೋಕ್ ಕುಮಾರ್ ಅವರನ್ನು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅಮಾನತುಗೊಳಿಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಸೂಚಿಸಿದ್ದಾರೆ. ಸೆ.15ರಂದು ಕಸದ ತೊಟ್ಟಿಯಲ್ಲಿ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ವೇಳೆ ಹಳೆಯ ಆರ್‌ಟಿಸಿಗಳು, ಪಹಣಿಗಳು, ಖಾತೆ ನಮೂನೆಗಳು ಹಾಗೂ ಭೂ ಪರಿವರ್ತನೆಗೆ ಸಂಬಂಧಿಸಿದ ಕಡತಗಳು ಪತ್ತೆಯಾಗಿವೆ. ನಿಯಮಾನುಸಾರ …
Read More »
BigTv News
September 16, 2026
Breaking News
ಪಾವಗಡದ ಕಡಮಲಕುಂಟೆ ಬೆಟ್ಟದಲ್ಲಿ ಕಳೆದೊಂದು ತಿಂಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ನಕಲಿ ನಕ್ಸಲ್ ಕನಿಕಲಬಂಡೆ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಚ್ಚಾ ಬಾಂಬ್ ಸ್ಫೋಟಕ್ಕೆ ಯತ್ನ ಹಾಗೂ ನಕ್ಸಲ್ ಪಾರ್ಟಿ ಹೆಸರಿನಲ್ಲಿ ಬೆದರಿಕೆ ಪತ್ರ ಸೇರಿದಂತೆ ಮೂರು ಪ್ರಕರಣಗಳಲ್ಲಿ ವೆಂಕಟೇಶ್ ವಾಂಟೆಡ್ ಆಗಿದ್ದ. ಆರೋಪಿಗಾಗಿ 250ಕ್ಕೂ ಹೆಚ್ಚು ಪೊಲೀಸರ ತಂಡ ಬೆಟ್ಟದಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸಿ, ನಿನ್ನೆ ರಾತ್ರಿ ಬಂಧಿಸಿದೆ. ಬಳಿಕ ವೈದ್ಯಕೀಯ ತಪಾಸಣೆ ನಡೆಸಿ ವಿಚಾರಣೆ ಆರಂಭಿಸಲಾಗಿದೆ. ವೆಂಕಟೇಶ್ ವಿರುದ್ಧ …
Read More »
BigTv News
September 16, 2026
Breaking News
ಹುಬ್ಬಳ್ಳಿ: ಗಣೇಶ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆ ವೇಳೆ ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದದಲ್ಲಿ ಡಿಜೆ ಬಳಸಿ ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸಿದ ಆರೋಪದಡಿ ಹು-ಧಾ ಅವಳಿ ನಗರದಲ್ಲಿ ಡಿಜೆ ಮಾಲಕರು ಹಾಗೂ ಆಪರೇಟರ್‌ಗಳ ವಿರುದ್ಧ 6 ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿ ಎಪಿಎಂಸಿ-ನವನಗರ ಹಾಗೂ ಧಾರವಾಡ ಉಪನಗರ ಠಾಣೆಯಲ್ಲಿ ತಲಾ 1, ಧಾರವಾಡ ಶಹರ ಹಾಗೂ ವಿದ್ಯಾಗಿರಿ ಠಾಣೆಯಲ್ಲಿ ತಲಾ 2 ಪ್ರಕರಣ ದಾಖಲಾಗಿವೆ. ಸೆ.14ರಂದು ಅಮರಗೋಳ-ಅಧ್ಯಾಪಕನಗರದಿಂದ ಗಾಮನಗಟ್ಟಿಗೆ ತೆರಳುತ್ತಿದ್ದ ಗಣೇಶ …
Read More »
BigTv News
September 16, 2026
Breaking News
ಹಾಸನ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ 23 ವರ್ಷದ ಯುವತಿ ಲಾಡ್ಜ್ ರೂಮಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ ನಡೆದಿದೆ. ಬೆಂಗಳೂರಿನ ನಾಗಸಂದ್ರ ನಿವಾಸಿ ವರ್ಷ ಮೃತ ಯುವತಿ. ಪ್ರಿಯಕರ ರಘು ಹಾಗೂ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಮೂರು ದಿನಗಳ ಕಾಲ ಭೈರವೇಶ್ವರ ಬೆಟ್ಟ, ಮಜಗಹಳ್ಳಿ ಫಾಲ್ಸ್ ಸೇರಿದಂತೆ ಹಲವೆಡೆ ಪ್ರವಾಸ ಮಾಡಿದ್ದ ತಂಡ, ಬಳಿಕ ಲಾಡ್ಜ್‌ನಲ್ಲಿ ತಂಗಿತ್ತು. ಸ್ನಾನಕ್ಕೆಂದು ತೆರಳಿದ್ದ ವರ್ಷ ರೂಮಿನಲ್ಲೇ ಮೃತಪಟ್ಟಿದ್ದಾಳೆ. ಕೂಡಲೇ …
Read More »
BigTv News
September 16, 2026
Breaking News
ಬೆಳಗಾವಿ: ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ (26) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿಪಾಲು ಸಂಬಂಧ ಅರ್ಜಿ ಸಲ್ಲಿಸಲು ತಂದೆ-ಮಗಳು ಪಂಚಾಯಿತಿ ಕಚೇರಿಗೆ ಬಂದಿದ್ದ ವೇಳೆ ರುದ್ರಪ್ಪ ಅವರ ಸಹೋದರರಾದ ಬಸಪ್ಪ, ಸಂಗಪ್ಪ ಹಾಗೂ ರುದ್ರಪ್ಪ ಅವರ …
Read More »
BigTv News
September 16, 2026
Breaking News
ಕಲಬುರಗಿ ಜಿಲ್ಲೆಯ ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ಚಿತಕೋಟೆ ಅವರ ವೈಯಕ್ತಿಕ ಕಾರಿಗೆ ಕಾನ್ಸ್ಟೇಬಲ್ ರಾಜಶೇಖರ ವರನಾಳ್ ಬೆಂಕಿ ಹಚ್ಚಿದ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರು ಕಾನ್ಸ್ಟೇಬಲ್ ವಿರುದ್ಧ ದೂರು ನೀಡಿದ್ದಕ್ಕೆ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ರಾಜಶೇಖರ ವರನಾಳ್ ನಾಲ್ಕು ವರ್ಷ ಮಹಾಗಾಂವ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇತ್ತೀಚೆಗೆ ಚಿಂಚೋಳಿ ಠಾಣೆಗೆ ವರ್ಗಾವಣೆಯಾಗಿದ್ದ. ತನ್ನ ವಿರುದ್ಧ ದೂರು ದಾಖಲಿಸಿದ್ದಕ್ಕೆ ಸಿಟ್ಟಾಗಿ PSI ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ …
Read More »
BigTv News
September 16, 2026
Breaking News
ಬೆಂಗಳೂರು: ಕೋಲಾರ ಜಿಲ್ಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಜಂಟಿ ದಾಳಿಯಲ್ಲಿ ಸುಮಾರು 10 ಟನ್ ರಾಸಾಯನಿಕ ಮಿಶ್ರಿತ ಹಾಗೂ ಕೃತಕ ಬಣ್ಣ ಬಳಿದ ಅಡಿಕೆಯನ್ನು ಜಪ್ತಿ ಮಾಡಿದ್ದಾರೆ. ಮುಳಬಾಗಿಲು ಟಿಎಚ್‌ಒ ಡಾ. ಸುಗುಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಅಡಿಕೆಯಲ್ಲಿ ಕಲರಿಂಗ್ ಏಜೆಂಟ್ ಬಳಸಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಹಾರ …
Read More »