BigTv News
September 19, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನಕ್ಕೆ ವಿಘ್ನೇಶ್ವರ ಎಂಟ್ರಿ ಕೊಟ್ಟಿದ್ದು, ಶಾಂತಿಯುತ ರೀತಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಗಜಮುಖ ಆಗಮಿಸಿದ್ದಾನೆ.ಸಾಕಷ್ಟು ವಿರೋಧದ ನಡುವೆಯೂ ಅನುಮತಿ ಪಡೆದು ಈಗ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿದೆ. ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಹಿಂದೂಪರ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ಪ್ರತಿಷ್ಟಾಪನೆ ಮಾಡಲಾಗಿದೆ.ಇನ್ನೂ ಮೂರು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, …
Read More »
BigTv News
September 18, 2023
ಕರ್ನಾಟಕ, ಚಾಮರಾಜನಗರ, ಸುದ್ದಿ
ಚಾಮರಾಜನಗರ: ಶವಸಂಸ್ಕಾರಕ್ಕೆ ತೆರಳಿದ್ದ ವೇಳೆ ಸ್ಮಶಾನದ ಮರವೊಂದರಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ನಡೆಸಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಿತು. ಗ್ರಾಮದ ಚೆನ್ನಪ್ಪ (60) ಸಾವಿಗೀಡಾದವರು. 14 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಂಗರಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಭಾನುವಾರ ಸಂಜೆ ಕುಟುಂಬಸ್ಥರು ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನಡೆಸಿ ಚಿತೆಗೆ ಬೆಂಕಿ ಹಚ್ಚುತ್ತಿದ್ದಂತೆ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ಗುಂಪು …
Read More »
BigTv News
September 18, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ರಾಜ್ಯಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಚೌತಿಯಲ್ಲಿ ಗೌರಿ ಗಣೇಶ ಮೂರ್ತಿಗಳ ದರ ಹೆಚ್ಚಾಗಿದ್ದು, ಅಲಂಕಾರಿಕ ವಸ್ತು, ಸರಕು ಸಾಗಣೆ ಕಾರಣದಿಂದ ಶೇ. 10 ರಿಂದ 20ರಷ್ಟು ಬೆಲೆ ಜಾಸ್ತಿಯಾಗಿದೆ. ಮನೆಗಳಲ್ಲಿ ಪೂಜಿಸಲ್ಪಡುವ ಚಿಕ್ಕ ಮೂರ್ತಿಗಳಿಂದ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಡುವ ದೊಡ್ಡ ಗಾತ್ರದ ಗಣೇಶ ವಿಗ್ರಹಗಳನ್ನು ಭಾನುವಾರ ಜನತೆ ಕೊಂಡೊಯ್ಯುತ್ತಿದ್ದುದು ನಗರಗಳಲ್ಲಿ ಕಂಡುಬಂತು. ಚೌತಿಗಾಗಿ ನಗರದ ಬೀದಿ ಬೀದಿಗಳಲ್ಲಿ ಗಣೇಶ ವಿಗ್ರಹಗಳು …
Read More »
BigTv News
September 18, 2023
ಕರ್ನಾಟಕ, ಗದಗ, ಸುದ್ದಿ
ಗದಗ: ಗಣೇಶ ಹಬ್ಬ ಅಂದ್ರೆ ಸಡಗರ ಸಂಭ್ರಮ ಇದ್ದೇ ಇರುತ್ತೆ. ನಗರದಲ್ಲಿ ಹಬ್ಬಕ್ಕೆ ಮುಂಚಿನ ದಿನವೇ ಖರೀದಿ ಭರಾಟೆ ಬಲು ಜೋರಾಗಿದೆ. ಮಾರ್ಕೆಟ್ನತ್ತ ಬರುತ್ತಿರೋ ಜನ ತಮಗೆ ಇಷ್ಟವಾದ ಮೂರ್ತಿಗಳನ್ನ ಬುಕ್ ಮಾಡಿದ್ದಾರೆ. ಪರಿಸರ ಸ್ನೇಹಿ ಗಣಪತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಬೇಕು ಅನ್ನೋ ನಿಟ್ಟಿನಲ್ಲಿ ಗದಗ ಜಿಲ್ಲೆ ತಯಾರಕರು ಒಂದೇ ಸೂರಿನಡಿ ಗಣೇಶ ಮೂರ್ತಿಗಳ ಮಾರಾಟ ಮಾಡೋದಕ್ಕೆ ಮುಂದಾಗಿದ್ದು, ಪರಿಸರ ಸ್ನೇಹಿ ಗಣಪಗಳ ಮಾರಾಟವೂ ಭರ್ಜರಿಯಾಗಿ ನಡೀತಿದೆ. ಗದಗ ನಗರದ ಎಪಿಎಂಸಿ …
Read More »
BigTv News
September 18, 2023
ಕರ್ನಾಟಕ, ಮಂಡ್ಯ, ಸುದ್ದಿ
ಮಂಡ್ಯ: ಗಣಪತಿ ಹಬ್ಬ ಇನ್ನೇನು ಬಂದೇ ಬಿಡ್ತು. ಗಣಪತಿ ಹಬ್ಬದಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ ಭಕ್ತಿ-ಭಾವದಿಂದ ಪೂಜೆ ಸಲ್ಲಿಸುವುದು ವಾಡಿಕೆ. ಹೀಗಾಗಿ ಮಾರುಕಟ್ಟೆಯಲ್ಲೂ ಸಹ ಮಣ್ಣಿನ ಗಣಪ, ಪಿಒಪಿ ಗಣೇಶನ ಮೂರ್ತಿಗಳು ಮಾರಾಟಕ್ಕೆ ಸಜ್ಜಾಗಿವೆ. ಆದರೆ ಸಕ್ಕರೆ ನಗರಿ ಮಂಡ್ಯದಲ್ಲಿ ಎಲ್ಲಿಯೂ ಸಿಗದ ವಿಶೇಷ ಹಾಗೂ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳು ಬೆಲ್ಲದಲ್ಲಿ ತಯಾರಾಗಿದ್ದು, ಜನರ ಗಮನ ಸೆಳೆಯುತ್ತಿವೆ. ಹಾಗಾದ್ರೆ ಈ ಸ್ಟೋರಿ ನೋಡಿ. ಮಂಡ್ಯ ಅಂದ್ರೆ ವಿವಿಧ ಬಗೆಯ …
Read More »
BigTv News
September 18, 2023
ಕರ್ನಾಟಕ, ವಿಜಯನಗರ, ಸುದ್ದಿ
ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿ ಹಾಗೂ ಆಕೆಯ ತಾಯಿಯನ್ನು ಕೊಲೆ ಮಾಡಿರುವ ಘಟನೆ ವಿಜಯಪುರ ನಗರದ ನವಬಾಗ್ ಪ್ರದೇಶದಲ್ಲಿ ವರದಿಯಾಗಿದೆ. ರೂಪಾ ಮೇತ್ರಿ (32) ಹಾಗೂ ಅವರ ತಾಯಿ ಕಲ್ಲವ್ವ (55) ಕೊಲೆಯಾದವರು ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ಮೇತ್ರಿ ಕೊಲೆ ಆರೋಪಿ. ನವಭಾಗ್ ಪ್ರದೇಶದ ಭಾಗವಾನ್ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗಿದ್ದ ಮಲ್ಲಿಕಾರ್ಜುನ ಮೂವರು ಮಕ್ಕಳು, ಪತ್ನಿ ಹಾಗೂ ಅತ್ತೆಯೊಂದಿಗೆ ವಾಸವಿದ್ದನು. ಕಳೆದ ಆರು ತಿಂಗಳಿಂದ …
Read More »
Shaikh BigTv
September 17, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಕೆಲವು ಕಡೆ ಹಣ ತಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೆ ಅನ್ನೋ ರೂಮರ್ ಇದೆಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿದರು.ಕೆಲವೊಂದು ಕಡೆ ಸುದ್ದಿ ಹೊರಗೆ ಬರ್ತಿವೆ,ಕೆಲವೊಂದು ಕಡೆ ಹೊರಗೆ ಬರ್ತಿಲ್ಲ.ಟಿಕೆಟ್ ಕೊಡಿಸೋ ಸಲುವಾಗಿ ಇಂತಹದ್ದೊಂದು ಟೀಮ್ ರೆಡಿಯಾಯ್ತು, ಅಂದ್ರೆ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕು ಎಂದ ಶೆಟ್ಟರ್ ಹೇಳಿದರು ಎಲ್ಲೋ ಒಂದು ಕಡೆ ಹಣದ ವ್ಯವಹಾರ ನಡಿದಿದೆ ಅಂದ್ರೆ ಅದು ಬಿಜೆಪಿ ಪಕ್ಷಕ್ಕೆ …
Read More »
BigTv News
September 17, 2023
Breaking News, News, ಕರ್ನಾಟಕ, ದೆಹಲಿ, ದೇಶ-ವಿದೇಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ದ್ವಾರಕಾದಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ ‘ಯಶೋಭೂಮಿ’ಯ (ಐಐಸಿಸಿ) ಮೊದಲ ಭಾಗ ಲೋಕಾರ್ಪಣೆ ಮಾಡಲಿದ್ದಾರೆ. ಈ ಬೃಹತ್ ಸಮಾವೇಶ ಇತ್ತೀಚೆಗೆ ಜಿ20 ಸಮಾವೇಶ ನಡೆದ ಕೇಂದ್ರ ಭಾರತ್ ಮಂಟಪಕ್ಕಿಂತಲೂ ದೊಡ್ಡದು. ಇದು ವಿಶ್ವದ ಅತಿದೊಡ್ಡ MICE ಕೇಂದ್ರವಾಗಿದೆ. 1.07 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಈ ಪ್ರದರ್ಶನ ಸಭಾಂಗಣವನ್ನು ಪ್ರದರ್ಶನ, ವ್ಯಾಪಾರ …
Read More »
Shaikh BigTv
September 17, 2023
Breaking News, News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಬೆಳಗಾವಿ:ಅದ್ಧೂರಿಯಾಗಿಗಣೇಶೋತ್ಸವ ಆಚರಿಸಲು ಬೆಳಗಾವಿ ಜಿಲ್ಲೆ ಸಜ್ಜಾಗುತ್ತಿದೆ. ರುದ್ರಾಕ್ಷಿಗಳಿಂದಲೇ ತಯಾರಿಸಿರುವ ಸುಂದರ ಗಣಪನ ಮೂರ್ತಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಮೂರ್ತಿಯಲ್ಲಿ ಕಲಾವಿದನ ಕೈಚಳಕವನ್ನು ನೋಡಬಹುದು. ಸಂಪೂರ್ಣವಾಗಿ ರುದ್ರಾಕ್ಷಿಗಳಿಂದಲೇ ಕಂಗೊಳಿಸುತ್ತಿರುವ ಗಣೇಶನನ್ನು ಹಳೆ ಗಾಂಧಿ ನಗರದ ಕಲಾವಿದ ಸುನೀಲ ಸಿದ್ದಪ್ಪ ಆನಂದಾಚೆ ಸಿದ್ಧಪಡಿಸಿದ್ದಾರೆ. ತಮ್ಮ ತಂದೆ ಸಿದ್ದಪ್ಪ ಅವರಿಂದ ಬಳುವಳಿಯಾಗಿ ಪಡೆದಿರುವ ಮೂರ್ತಿ ರಚನೆ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವೃತ್ತಿಯಲ್ಲಿ ಪ್ಲಂಬರ್ ಆಗಿರುವ ಸುನೀಲ ಪ್ರವೃತ್ತಿಯಲ್ಲಿ ಪರಿಸರಸ್ನೇಹಿ ಗಣೇಶ ಮೂರ್ತಿ …
Read More »
BigTv News
September 16, 2023
ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ನವಲಗುಂದ : ವಿಧಾನಸಭಾ ಕ್ಷೇತ್ರದಲ್ಲಿ ಬಸ್‌ಗಳ ಕೊರತೆಯಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಓಡಾಡಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು ಈ ವಿಚಾರವಾಗಿ ಬೆಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿರನ್ನು ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಭೇಟಿಯಾಗಿ ನನ್ನ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ನೂತನ ಬಸ್‌ಗಳನ್ನು ಪೂರೈಸಬೇಕೆಂದು ಶಾಸಕ ಎನ್.ಎಚ್.ಕೋನರಡ್ಡಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿದರು.
Read More »