Breaking News

ಕರ್ನಾಟಕ

ಜಿಎಸ್ ಟಿ ಸೋರಿಕೆ ತಡೆಯಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ

ಬೆಂಗಳೂರು : ರಾಜ್ಯ ಸರ್ಕಾರ ಜಿಎಸ್‌ಟಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೆರಿಗೆ ರಿಟರ್ನ್ಸ್ ಸಲ್ಲಿಸಲು‌ ಮೂರು ವರ್ಷದ ಅವಧಿ ಕಲ್ಪಿಸುವುದು ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ವಿಧೇಯಕಗಳ ಮೇಲಿನ ಪರ್ಯಾಲೋಚನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕು ಮತ್ತು ಸೇವೆ ಇಡಿ ರಾಷ್ಟ್ರದಲ್ಲಿ ಏಕ ರೂಪ ತೆರಿಗೆ ಇರಬೇಕೆಂದು 2017 ರಲ್ಲಿ ಸಂವಿಧಾ‌ನ ತಿದ್ದುಪಡಿ ಮಾಡಲಾಯಿತು. ಕೆಲವು ರಾಜ್ಯಗಳು ಉತ್ಪಾದನಾ …

Read More »

ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ:ನಾಲ್ಕು ವಾಹನಗಳು ಜಖಂ.

ರಾಮನಗರ: ಬೆಂಗಳೂರು-ದಶಪಥ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸರಣಿ ಅಪಘಾತ ನಡೆದು ನಾಲ್ಕು ವಾಹನಗಳು ಜಖಂಗೊಂಡಿವೆ. ಬಿಡದಿಯ ನೆಲ್ಲಿಗುಡ್ಡೆ ಕೆರೆಯ ಸಮೀಪ ದಶಪಥ ಹೆದ್ದಾರಿಯಲ್ಲಿ ಲಾರಿ, ಬಸ್ ಹಾಗೂ ಎರಡು ಕಾರು ನಡುವೆ ಅಪಘಾತ ನಡೆದಿದೆ. ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ಈ ನಾಲ್ಕು ವಾಹನಗಳ ನಡುವೆ ಅಪಘಾತ ನಡೆದು ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಂದಗತಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಮೊದಲು ಐರಾವತ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. …

Read More »

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಆರ್ ಅಶೋಕ್ ವಾಗ್ದಾಳಿ.

ಬೆಂಗಳೂರು: ‘ಒಂದು ಕೈಯ್ಯಲ್ಲಿ ಐದು ಭಾಗ್ಯಗಳನ್ನು ಕೊಟ್ಟು, ಎರಡು ಕೈಯಲ್ಲಿ ಕಿತ್ತುಕೊಂಡರು’ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಶುಕ್ರವಾರ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿ, ‘ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಹಾಲು ಮಾಡೋದಕ್ಕೆ ಹೊರಟಿರುವ ಕಾಂಗ್ರೆಸ್ ಸರಕಾರ, ಜನರ ಮೂಗಿಗೆ ಸವರುವ ಕೆಲಸ ಮಾಡಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಾಲಿನ ದರ 5 ರೂ.ಯಿಂದ 6ರೂ.ಗೆ …

Read More »

ಚಂದ್ರಯಾನಕ್ಕೆ ವಿಶೇಷ ಶುಭಕೋರಿದ ಪರಿಸರ ಸ್ನೇಹಿ ಕಲಾವಿದ.

ಇಂದು ಮದ್ಯಾಹ್ನ 3ಕ್ಕೆ ಚಂದ್ರಯಾನ ಚಾಲನೆ ಹಿನ್ನೆಲೆ ಧಾರವಾಡದ ಕಲಾವಿದ ಚಂದ್ರಯಾನಕ್ಕೆ ವಿಶೇಷ ಶುಭಾಶಯ ಕೋರಿದ್ದಾರೆ. ಕೆಲಗೇರಿ ಗಾಯತ್ರಿಪುರದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಎಂಬಾತರು ಇಸ್ರೋದ ಕಾರ್ಯಕ್ಕೆ ಶುಭಾಶಯ ತಿಳಿಸಿದ್ದಾರೆ. LMV ರಾಕೆಟ್ ನ್ನ ಚಿಕ್ಕ ಪೈಪ್ ಗಳ ಮೂಲಕ ತಯಾರಿಸಿದ ಕಲಾವಿದ ಮಂಜುನಾಥ ಈ ಬಾರಿಯ ಚಂದ್ರಯಾನ ಯಾವುದೇ ರೀತಿಯಲ್ಲಿ ವಿಘ್ನ ಆಗದಂತೆ ಪ್ರಾರ್ಥಿಸಿದ್ದಾರೆ. ಕಳೆದ ಬಾರಿ ರೋವರ್ ಲ್ಯಾಂಡಿಂಗ್ ಸಮಸ್ಯೆ ಅನುಭವಿಸಿತ್ತು. ಆದ್ರೆ ಈ …

Read More »

ಮಾಡಿದ ಕೆಲಸ ತೃಪ್ತಿ ತಂದಿದೆ : ಶಿವಾನಂದ ಭಜಂತ್ರಿ.

ಧಾರವಾಡ: ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ. ಆದರೆ, ವೃತಿ ಮಾಡಿದ ಸ್ಥಳದಲ್ಲಿ ನಮ್ಮ ಸೇವೆಯಿಂದ ಜನ ಸಂತೃಪ್ತರಾಗಿದ್ದರೆ ಅದುವೇ ನಮಗೆ ಸಿಗುವ ದೊಡ್ಡ ಸನ್ಮಾನ, ಸಾರ್ವಜನಿಕರ ಸೇವೆಗೆ ಸದಾ ನಮ್ಮ ಮನ ಮಿಡಿಯಬೇಕು ಎಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ನಿರ್ಗಮಿತ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು. ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳು ಆಯೋಜಿಸಿದ್ದ, ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ …

Read More »

ವಾರ್ಡ್ ನಂಬರ್ 36ಕ್ಕೆ ಭೇಟಿ ಕೊಟ್ಟ ಮಹಾನಗರ ಪಾಲಿಕೆಯ ನೂತನ ಆಯುಕ್ತರು

ಹುಬ್ಬಳ್ಳಿ13 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ಈಶ್ವರ್ ಉಳ್ಳಾಗಡ್ಡಿ ಯವರು ವಾರ್ಡ್ ನಂಬರ್ 36 ಬೇಟಿ ನೀಡಿ ಉಣಕಲ್ ಸಂತೆ ಬಯಲಿನ ತೆರೆದ ಚರಂಡಿಯ ಸಮಸ್ಯೆ ಹಾಗೂ ಚನ್ನಪ್ಪನ ಕೆರೆಯಲ್ಲಿ ತುಂಬಿದ ಅಂತರಗಂಗೆಯನ್ನು ಸ್ವಚ್ಛಗೊಳಿಸುವ ಕುರಿತು ವೀಕ್ಷಣೆ ಮಾಡಿದರು. ಅವರೊಂದಿಗೆ ಮಹಾನಗರ ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ, ಹನುಮಂತ್ ಎಲಿವಾಳ, ಬಸವರಾಜ ಮಾದಳ್ಳಿ, ಶಿವಯೋಗಿ ಬೆಂಕಿಶಟ್ಟರು, ವಿಶ್ವನಾಥ್ಗೆಣಿಮ, ಬಳಿಗೇರ್, ಗುರು ಹಿರೇಮಠ, ವಿಟ್ಟಲ್ ಸಿಂಗ್ ಹಜೇರಿ, …

Read More »

ಸದಾನಂದ ಅಮರಾಪುರ್ ಈಗ ಅಂತರಾಷ್ಟ್ರೀಯ ಐರನ್ ಮ್ಯಾನ್ಈ: ಸಾಧನೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರದ ಮೊದಲ ಅಧಿಕಾರಿ.

ಧಾರವಾಡ: ಜುಲೈ 2ನೇ ತಾರೀಖಿನಂದು ಕಜಕಿಸ್ಥಾನ ದೇಶದ ರಾಜಧಾನಿ ಆಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿ 3.9 ಕಿ.ಮೀ ಈಜನ್ನು 180 ಕಿ. ಮೀ ಸೈಕ್ಲಿಂಗ್‍ನ್ನು ಹಾಗೂ 42 ಕೀ.ಮೀ. ಓಟವನ್ನು 13 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿ ಅಂತರರಾಷ್ಟ್ರೀಯ ಐರನ್ ಮ್ಯಾನ್ ಆಗಿರುವ ಸದಾನಂದ ಅಮರಾಪುರ ಈ ಸಾಧನೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರದ ಮೊದಲ ಅಧಿಕಾರಿಯಾಗಿದ್ದಾರೆ. ಈ ಮೂಲಕ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. …

Read More »

ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಐದು ಲಕ್ಷ ಸಹಿ ಅಭಿಯಾನ – ಪ್ರಮೋದ ಮುತಾಲಿಕ

ಧಾರವಾಡ: ಭಾರತ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರಲು ಐದು ಲಕ್ಷ ಸಹಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಕರೂಪದ ನಾಗರಿಕ ಸಂಹಿತೆ ಈ ವಿಷಯದ ಕುರಿತು ಇಡೀ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ಪ್ರಾರಂಭವಾಗಿದೆ. ಈ ದೇಶದಲ್ಲಿ ಒಂದೇ ಕಾನೂನು ಇರಬೇಕು ಎನ್ನುವುದಕ್ಕೆ ಬೆಂಬಲವನ್ನ ಸೂಚಿಸುತ್ತಿದ್ದೇವೆ. ಇಡೀ ಜಗತ್ತಿನಲ್ಲಿ ಎರಡೆರಡು ಕಾನೂನುಗಳು ಯಾವ …

Read More »

ಹು-ದಾ ನಗರದಲ್ಲಿ ಹಲವು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಪಿಎಸ್ಐ ಹೃದಯಾಘಾತದಿಂದ ನಿಧನ.

ಹುಬ್ಬಳ್ಳಿ: ಅವಳಿನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿಎಸ್ಐಯೋರ್ವರು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ. 1993 ರ ಬ್ಯಾಚಿನ‌ 58 ವರ್ಷದ ಹಾಜಪ್ಪ ಕಬಾಡೆ ಎಂಬ ಪಿಎಸ್ಐ ಅವರೇ ನಿಧನರಾಗಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಧಾರವಾಡದ ವಿದ್ಯಾಗಿರಿ ಠಾಣೆಯಿಂದ ಪದನ್ನೋತಿ ಹೊಂದಿ ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಕಬಾಡೆ ಅವರ ಪಾರ್ಥಿವ ಶರೀರವನ್ನ ಕೆಲಕಾಲ ಆಸ್ಪತ್ರೆಯಲ್ಲಿಟ್ಟು ನಂತರ ಅವರ ಹುಟ್ಟೂರಾದ …

Read More »

ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ:12 ಗಂಟೆಯೊಳಗೆ ಆರೋಪಿಯನ್ನು ಬಂಧಿಸವಲ್ಲಿ ಪೊಲೀಸರು ಯಶಸ್ವಿ.

ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾದ 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಮಾರುತಿ ನಗರದ ಗಜಾನನ ಪಾಟೀಲ್ (40) ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಆರೋಪಿಯು ಟ್ಯೂಷನ್‌ಗೆ ಹೋಗುತ್ತಿದ್ದ 9 ನೇ ತರಗತಿ ವಿದ್ಯಾರ್ಥಿನಿಯನ್ನು ಎತ್ತಿಕೊಂಡು ಹೋಗಿ ಅಪಹರಿಸಲು ಯತ್ನಿಸಿದ್ದ ಈ ವೇಳೆ ಬಾಲಕಿ ಕಿರುಚಿದ್ದರಿಂದ ಆರೋಪಿ ಓಡಿ ಹೋಗಿದ್ದಾನೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ …

Read More »