Breaking News

Shaikh BigTv

ವಿವಿಧ ಸ್ಥಳಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 54 ರ ವ್ಯಾಪ್ತಿಯ ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಸಿದ್ದಲಿಂಗೇಶ್ವರ ಕಾಲೋನಿ ಹಾಗೂ ವಿಕಾಸ ನಗರದ ಸಾರ್ವಜನಿಕರಿಂದ ರಸ್ತೆ ಕಾಮಗಾರಿ ಹಾಗೂ ಸಂಚಾರ ದಟ್ಟಣೆ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮೋಹನ ಬರೋಡೆ, ಸಂದೀಪ ಜಡಿ, ವಿನಾಯಕ ದೊಂಗಡಿ ಇದ್ದರು.

Read More »

“ನನ್ನ ಭಾರತ ಅಡಿಯಲ್ಲಿ ದೀಪಾವಳಿ ವಿಥ್ ಮೈ ಭಾರತ” ಸ್ವಚ್ಚತಾ ಕಾರ್ಯಕ್ರಮ

ಹುಬ್ಬಳ್ಳಿ: ನಗರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಭಾರತ ಸರಕಾರದ ನೆಹರು ಯುವ ಕೇಂದ್ರ, ಶ್ರೀ ವಾಯುಪುತ್ರ ಸಾಂಸ್ಕೃತಿಕ ಕಲಾ ಕ್ರೀಡಾ ಶಿಕ್ಷಣ, ಗ್ರಾಮ ಅಭಿವೃದ್ಧಿ ಯುವ ಸಂಘ, ರಂಗಜೀವನ ಸಂಘ, ಚಂದ್ರ ಸ್ಪೂರ್ತಿ ಸಾಂಸ್ಕೃತಿಕ ಕಲಾ ಸಂಘ ಹಾಗೂ ಆದರ್ಶ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಇವರ ಸಹಯೋಗದಲ್ಲಿ ಇಂದು “ನನ್ನ ಭಾರತ ಅಡಿಯಲ್ಲಿ ದೀಪಾವಳಿ ವಿಥ್ ಮೈ ಭಾರತ” ಅಂಗವಾಗಿ ನಗರದ ಹಲವೆಡೆ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ …

Read More »

ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಹಾಗೂ ಶಹರ ಠಾಣೆಯ ಪೋಲಿಸರು ದಾಳಿ: 19 ಜನ ಆರೋಪಿಗಳ ಬಂಧನ

ಹುಬ್ಬಳ್ಳಿ: ಮಂಟೂ‌ರ್ ರಸ್ತೆಯಲ್ಲಿ ರೌಡಿಶೀಟರ್‌ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಹಾಗೂ ಶಹರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಆರೋಪದಡಿಯಲ್ಲಿ 6 ಜನ ರೌಡಿ ಶೀಟರ್‌ಗಳು ಸೇರಿದಂತೆ 19 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಟೂ‌ರ್ ರಸ್ತೆಯ ಮನೆಯೊಂದರಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಲವು ರೌಡಿ ಶೀಟರ್‌ಗಳು ಸೇರಿ ಇಸ್ಪೀಟ್ ಆಡಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಹಲವು …

Read More »

ವಿದ್ಯಾರ್ಥಿಗಳಿಗೆ ನೋಂದಣಿ ಕಾರ್ಯಕ್ರಮ

ಕುಂದಗೋಳ : ಕೌಶಲ್ಯ ಅಭಿವೃದ್ಧಿ ಕೈಗಾರಿಕ ತರಭೇತಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹುಬ್ಬಳ್ಳಿ ವೃತ್ತಿ ಮಾರ್ಗದರ್ಶನ ಮತ್ತು ಸಂಚಾರಿ ನೋಂದಣಿ ಕಾರ್ಯಕ್ರಮವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಿವಾನಂದ ಬೆಂತೂರ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪಾಲಕರ ಆಸೆಯಂತೆ ತಾವುಗಳು ಜ್ಞಾನವನ್ನು ಪಡೆದು ವೃತ್ತಿ ಬದುಕು ಸೃಷ್ಟಿಸಿಕೊಳ್ಳಿರಿ ವಿದ್ಯಾರ್ಥಿಗಳೇ ತಮ್ಮ ಬದುಕಿನ ಮಾರ್ಗವನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು ಸರ್ಕಾರ ಯುವ ನಿಧಿ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ …

Read More »

ವಕ್ಷ ಆಸ್ತಿ ವಿರೋಧಿಸಿ ಶ್ರೀರಾಮ ಸೇನೆ ಪ್ರತಿಭಟನೆ

ಧಾರವಾಡ: ರೈತರ ಜಮೀನಿನ ಪಹಣಿ ಪತ್ರಿಕೆಯಲ್ಲಿ ವಕ್ಷ ಆಸ್ತಿ ಎಂದು ನಮೂದಾಗಿದ್ದರಿಂದ ಆಕ್ರೋಶಗೊಂಡ ರೈತರು ಧಾರವಾಡ ತಹಶೀಲ್ದಾರ್ ಕಚೇರಿ ಎದುರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಮಾಜಿ ಶಾಸಕರಾದ ಅಮೃತ ದೇಸಾಯಿ ಹಾಗೂ ಸೀಮಾ ಮಸೂತಿ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಅವರ ಜಮೀನಿಗೆ ವಕ್ಷ ಆಸ್ತಿ ಎಂದು ನಮೂದಾಗಿದ್ದರಿಂದ ಕಂಗಾಲಾದ ರೈತರು ಧಾರವಾಡ ತಹಶೀಲ್ದಾರ್ …

Read More »

ರಾಜಕೀಯಕ್ಕೆ ಬಂದು ಯಾರಾದರೂ ಜಾತಿ ಮಾಡಿದ್ರೆ, ಅವನು ನಾಲಾಯಕ್ ವ್ಯಕ್ತಿ: ಜಮೀ‌ರ್ ಅಹಮ್ಮದ್

ಹುಬ್ಬಳ್ಳಿ: ಮುಜರಾಯಿ ಬೇರೆಯಲ್ಲ ವಕ್ಷ ಬೇರೆಯಲ್ಲ, ನಾವು ಅಲ್ಲಾ ಅಂತೇವೆ, ನೀವು ದೇವರಂತಿರಿ ಅಷ್ಟೇ, ನಾನು ಮುಸ್ಲಿಂ ಆಗುವುದಕ್ಕಿಂತ ಮುಂಚೆ ನಾನೊಬ್ಬ ಭಾರತೀಯ, ಯಾರೂ ತಾಯಿಯ ಹೊಟ್ಟೆಯಲ್ಲಿ ಕೇಳಿ ಹುಟ್ಟಲ್ಲ, ರಾಜಕೀಯಕ್ಕೆ ಬಂದು ಯಾರಾದರೂ ಜಾತಿ ಮಾಡಿದ್ರೆ, ಅವನು ನಾಲಾಯಕ್ ವ್ಯಕ್ತಿ ಎಂದು ಸಚಿವ ಜಮೀ‌ರ್ ಅಹಮ್ಮದ್ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ’ ಅಂತ ನಮ್ಮ ಇಸ್ಲಾಂ ಹೇಳಿಕೊಟ್ಟಿದೆ. ಅನಧಿಕೃತವಾಗಿ ಏನಾದರೂ …

Read More »

ನೂರಕ್ಕೆ ನೂರು ಶಿಗ್ಗಾಂವಿಯಲ್ಲಿ ನಾವೇ ಗೆಲ್ಲುತ್ತೇವೆ: ಸಚಿವ ಜಮೀ‌ರ್ ಅಹ್ಮದ್

ಹುಬ್ಬಳ್ಳಿ: ಬೆಂಗಳೂರಲ್ಲಿ ಮೂರು ದಿನದಿಂದ ಖಾದ್ರಿ ನನ್ನ ಜೊತೆಗೆ ಇದ್ದಾರೆ. ಟಿಕೆಟ್ ಕೊಟ್ಟಿಲ್ಲ ಅಂತ ಎಲ್ಲೋ ಒಂದು ಕಡೆ ಅಸಮಾಧಾನ ಇತ್ತು. ಅಭಿಮಾನಿಗಳು ನಾಮಪತ್ರ ಕೊಡಲೇಬೇಕು ಅಂತ ಮಾಡಿಸಿದ್ದಾರೆ. ಈಗ ಒಪ್ಪಿಕೊಂಡು ನಾಳೆ ನಾಮಪತ್ರ ಹಿಂದೆ ಪಡೆಯುತ್ತಾರೆಂದು ಹುಬ್ಬಳ್ಳಿಯಲ್ಲಿ ಸಚಿವ ಜಮೀ‌ರ್ ಅಹ್ಮದ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಖಾದ್ರಿ ನಾಲ್ಕು ಬಾರಿ ಸೋತಿದ್ದಾರೆ. ಕಳೆದ ಬಾರಿ ಪಠಾಣ್‌ಗೆ ಕೊಟ್ಟಿದ್ವಿ. ಸಿಂಪತಿ ಇದೆ ಅಂತ ಕೊಡಿ ಅಂದ್ರು ಕೊಡೋಕೆ ಆಗಿಲ್ಲ. …

Read More »

ವಕ್ಸ್ ಬೋರ್ಡ್ ವಿರುದ್ಧ ಕಿಡಿಕಾರಿದ ಜೋಶಿ

ಧಾರವಾಡ: ಕಾಂಗ್ರೆಸ್ ಪಕ್ಷ ನೆಹರೂ ಕಾಲದಲ್ಲಿ ವಕ್ಸ್ ಕಾನೂನು ಮಾಡಿದೆ. ಅದನ್ನು ಯಾಕೆ ಮಾಡಿತು ಎಂಬುದು ಗೊತ್ತಿಲ್ಲ. 2013ರಲ್ಲಿ ಅದಕ್ಕೆ ದೇಶದ ಯಾವ ವಿಭಾಗಕ್ಕೂ ಇರಲಾರದ ಅಧಿಕಾರವನ್ನು ಕಾಂಗ್ರೆಸ್‌ನವರು ಕೊಟ್ಟರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಕ್ಸ್ ಬೋರ್ಡ್ ವಿರುದ್ಧ ಕಿಡಿಕಾರಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ಗೂ ವಕ್ಸ್‌ ನೋಟಿಫಿಕೇಷನ್ ವಿಚಾರಿಸುವ ಅಧಿಕಾರ ಇಲ್ಲ ಎಂದು ಹೇಳಿದ್ದರು. ಇಂತವರದ್ದು ಹುಚ್ಚು ಧೈರ್ಯ ಎನ್ನಬೇಕಾ ಅಥವಾ ಮೈಯಲ್ಲಿನ ಸೊಕ್ಕು …

Read More »

ಡಾ.ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ

ನವಲಗುಂದ: ಖ್ಯಾತ ಚಲನಚಿತ್ರ ನಟ, ಕರ್ನಾಟಕ ರತ್ನ ದಿ.ಪುನೀತ ರಾಜಕುಮಾರ ಅವರ 3ನೇಯ ಪುಣ್ಯಸ್ಮರಣೆಯ ಪ್ರಯುಕ್ತ ನಗರದ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು . ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಕೋನರೆಡ್ಡಿ, ಭಾಗವಹಿಸಿ ಪುನೀತ್ ಅವರ ಭಾವಚಿತ್ರಕ್ಕೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಒಳ್ಳೆಯದನ್ನು ಬಯಸುವ ಪ್ರತೀ ಹೃದಯದಲ್ಲೂ ಜೀವಂತವಾಗಿದ್ದಾರೆ ಎಂದರು.

Read More »

ಕಾರ್ತಿಕ ಮಾಸದ ದಿಂಡಿ ಪಾದಯಾತ್ರೆ

ನವಲಗುಂದ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರ್ತಿಕ ಮಾಸದ ದಿಂಡಿ ಪಾದಯಾತ್ರೆಯನ್ನು ತಾಲೂಕಿನ ಅಳಗವಾಡಿ ಗ್ರಾಮದ ಶ್ರೀ ಹರಿಮಂದಿರ ದೇವಸ್ಥಾನದ ಭಕ್ತರು ಕೈಗೊಂಡರು. ಸತತವಾಗಿ 11ವರ್ಷಗಳ ಕಾಲ ಪಾದಯಾತ್ರೆ ಮಾಡಿದ ಈ ಗ್ರಾಮದ ಭಕ್ತರು ಈ ಬಾರಿ 12ವರ್ಷದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇನ್ನೂ ಯಾತ್ರಾರ್ಥಿಗಳು ಪಂಡರಾಪುರ ತಲುಪಲು 15ದಿನ ತೆಗೆದುಕೊಳ್ಳುವರು. ಪ್ರತಿ ದಿನ ಇವರ ಪಾದಯಾತ್ರೆಗೆ ಒಬ್ಬೊಬ್ಬರಂತೆ ಭಕ್ತರು ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದಾರೆ. ಪಾದಯಾತ್ರೆಯಲ್ಲಿ ಶ್ರೀ ಹರಿಯ ಸ್ಮರಣೆ, …

Read More »