Breaking News

Breaking News

ಎನ್. ಶಶಿಕುಮಾರ್ ದಿಢೀರ್ ಎಕ್ಸಿಟ್, ಸ್ಥಳ ರಹಿತ ವರ್ಗಾವಣೆ; ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಭೂಷಣ್ ಗುಲಾಬರಾವ್ ಕಮಿಷನರ್

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬೋರ್ಸೆ ಭೂಷಣ್ ಗುಲಾಬರಾವ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಸೈಬರ್ ಕ್ರೈಮ್, ಅಪರಾಧ ತನಿಖೆ, ನಾರ್ಕೋಟಿಕ್ಸ್ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಅವರಿಗೆ ಅನುಭವವಿದೆ. ಈ ಹಿಂದೆ ಕಮಿಷನರ್ ಆಗಿದ್ದ ಎನ್. ಶಶಿಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಯಾವುದೇ ಹೊಸ ಹುದ್ದೆ ನೀಡಲಾಗಿಲ್ಲ. ಅವರ ಸ್ಥಳ ರಹಿತ ವರ್ಗಾವಣೆ ಪೊಲೀಸ್ …

Read More »

ಮರಳು ದಂಧೆಯಲ್ಲಿ ಖಾಕಿಯ ‘ಮಂತ್ಲಿ’ ಆಟ? ಠಾಣೆಯಲ್ಲೇ ಲಾರಿ, ಮೇಲ್ವಿಚಾರಣೆ ಯಾರದ್ದು..?

ಧಾರವಾಡ–ಹುಬ್ಬಳ್ಳಿ: ಅಕ್ರಮ ಮರಳು ಸಾಗಾಟದ ಲಾರಿಗಳನ್ನು ಬಿಡಿಸಲು ಲಂಚದ ಬೇಡಿಕೆ ಇಟ್ಟ ಆರೋಪದಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಂತೆ, ಇದೀಗ ಈ ಪ್ರಕರಣದ ಬೆನ್ನಲ್ಲೇ ಖಾಕಿಯ ಮೇಲೆಯೇ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ… ಮರಳು ದಂಧೆಯಲ್ಲಿ ಲಾರಿಗಳಿಂದ ‘ಮಂತ್ಲಿ’ ಹಣ ಫಿಕ್ಸ್ ಮಾಡಿ ವಸೂಲಿ ಮಾಡಲಾಗುತ್ತಿತ್ತೇ..? ವಸೂಲಿ ಮಾಡಿದ ಹಣದಲ್ಲಿ ಮೇಲಧಿಕಾರಿಗಳಿಗೂ ಪಾಲು ಹೋಗುತ್ತಿತ್ತೇ..? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ… ಇನ್ನೊಂದೆಡೆ, ಇನ್ಸ್‌ಪೆಕ್ಟರ್‌ಗಳು ಸ್ವಲ್ಪ ಜಾಸ್ತಿ …

Read More »

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಸ್ಟಂಟ್: ಪೊಲೀಸರ ಬಲೆಗೆ ಬಿದ್ದ ಸವಾರರು, ಮುಂದೆ ಕಾದಿದೆ ಕಠಿಣ ಶಿಕ್ಷೆ!

ಮುಂಬೈ: ಕೋಸ್ಟಲ್ ರೋಡ್ ಸುರಂಗದಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ 14 ವಾಹನಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಾಹನಗಳ ಸಾಲು ಈದ್ ಮಿಲಾದ್ ಮೆರವಣಿಗೆಗೆ ಸಂಬಂಧಿಸಿದ್ದು ಎನ್ನಲಾಗಿದೆ. CCTV ಹಾಗೂ ANPR ಕ್ಯಾಮೆರಾಗಳ ದೃಶ್ಯ ಆಧರಿಸಿ ವಾಹನಗಳ ನಂಬರ್ ಪ್ಲೇಟ್ ಗುರುತಿಸಿ ಮಾಲೀಕರಿಗೆ ನೋಟಿಸ್ ಹಾಗೂ ಇ-ಚಲನ್ ಕಳುಹಿಸಲಾಗಿದೆ. ವಿಚಾರಣೆ ಬಳಿಕ ಇನ್ನಷ್ಟು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಅಪಾಯಕಾರಿ ಚಾಲನೆಗೆ ಮೋಟಾರು ವಾಹನ ಕಾಯ್ದೆಯಡಿ ಕಠಿಣ ಕ್ರಮ …

Read More »

ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ!

ಗದಗ, ಆ.29: ISROದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕ-ಯುವತಿಯರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ವಿಜಯಪುರ ಮೂಲದ ಡಿಪ್ಲೋಮಾ ವಿದ್ಯಾರ್ಥಿ ಈರಣ್ಣ ಬಡಿಗೇರ್‌ನನ್ನು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಮೋಸಹೋದವರೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.bಆರೋಪಿ ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿ, ತಾನು ISRO ಉದ್ಯೋಗಿ ಎಂದು ಪರಿಚಯಿಸಿಕೊಂಡು ಜಾಬ್ ಆಫರ್ ನೀಡುವುದಾಗಿ ನಂಬಿಸಿ ಫೋನ್‌ಪೇ ಮೂಲಕ ಹಣ ಪಡೆದುಕೊಳ್ಳುತ್ತಿದ್ದ. 30ಕ್ಕೂ ಹೆಚ್ಚು ಮಂದಿ ಈತನಿಂದ ಮೋಸಹೋಗಿದ್ದಾರೆ ಎನ್ನಲಾಗಿದೆ. …

Read More »

ಉತ್ತರ ಕನ್ನಡ | ಪಡಿತರ ಅಕ್ಕಿ ಅಕ್ರಮ ಸಾಗಾಟ: 473 ಚೀಲ ಅಕ್ಕಿ ವಶ

ಶಿರಸಿ: ಸಿದ್ದಾಪುರದಿಂದ ಕೊಲ್ಲಾಪುರಕ್ಕೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ನಿಲೇಕಣಿ ಬಳಿ ಲಾರಿ ತಡೆದು ಪರಿಶೀಲಿಸಿದಾಗ 50 ಕೆ.ಜಿ. ತೂಕದ 473 ಚೀಲ ಪಡಿತರ ಅಕ್ಕಿ ಪತ್ತೆಯಾಗಿದೆ. ಅಕ್ಕಿ ಸಾಗಾಟಕ್ಕೆ ಬಳಸಿದ್ದ 10 ಚಕ್ರದ ಲಾರಿ ಹಾಗೂ ಚಾಲಕನನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿರಸಿ ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ನಗರ ಠಾಣೆ ಪಿಎಸ್‌ಐ ನರಸಿಂಹಲು ನೇತೃತ್ವದಲ್ಲಿ …

Read More »

ಮನೆಗೆ ನುಗ್ಗಿ ಬೀಗ ಹಾಕ್ತೀವಿ ಎಂದ ಮೈಕ್ರೋ ಫೈನಾನ್ಸ್ – ಬೆದರಿದ ಯುವಕ‌ ಆತ್ಮಹತ್ಯೆಗೆ ಶರಣು!

ಹುಣಸೂರು: ಮೈಕ್ರೋಫೈನಾನ್ಸ್ ಸಿಬ್ಬಂದಿಯ ಕಿರುಕುಳ ಹಾಗೂ ಅವಮಾನಕ್ಕೆ ಹೆದರಿ 32 ವರ್ಷದ ರಂಜಿತ್ ಎಂಬ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಂಜಾಪುರ ಗ್ರಾಮದಲ್ಲಿ ನಡೆದಿದೆ. ಮನೆ ನಿರ್ಮಾಣಕ್ಕಾಗಿ ₹12 ಲಕ್ಷ ಸಾಲ ಪಡೆದಿದ್ದ ರಂಜಿತ್, ಬಡ್ಡಿ ಸೇರಿ ₹8 ಲಕ್ಷ ಮರುಪಾವತಿಸಿದ್ದರು. ಆದರೆ ಕೃಷಿಯಲ್ಲಿ ನಷ್ಟವಾಗಿದ್ದರಿಂದ ಕಂತು ಪಾವತಿಸಲು ತೊಂದರೆಯಾಗಿತ್ತು. ಕಂತು ವಿಳಂಬವಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಎರಡು ಬಾರಿ ಮನೆಗೆ ಬೀಗ ಹಾಕಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಮತ್ತೆ ಮನೆಗೆ …

Read More »

ಮಾಗಡಿಯಲ್ಲಿ ಮೂವರು ಕಳ್ಳರ ಬಂಧನ: ₹20 ಲಕ್ಷ ಮೌಲ್ಯದ ವಸ್ತು ಜಪ್ತಿ

ಮಾಗಡಿ: ಸರಣಿ ಕಳವು ಪ್ರಕರಣ ಭೇದಿಸಿರುವ ಮಾಗಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ₹20.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 12 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆಗಸ್ಟ್ 7ರಂದು ಗೇರಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು, ಮಲಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಅದೇ ದಿನ ದೇವಸ್ಥಾನ ಹಾಗೂ ಬೈಚಾಪುರ ಗ್ರಾಮದ ಮನೆಯಲ್ಲೂ ಕಳವು ನಡೆದಿತ್ತು. ಆರೋಪಿಗಳ …

Read More »

ಹುಳಿಯಾರು: ಕಾರುಗಳ ಮುಖಾಮುಖಿ, ಮಗು ಸೇರಿ ನಾಲ್ವರ ದುರಂತ ಸಾವು

ಚಿಕ್ಕನಾಯಕನಹಳ್ಳಿ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ 3 ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ತೂಬರೇಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ನಜ್ಜುಗುಜ್ಜಾಗಿವೆ. ಮೃತರನ್ನು ವಿವೇಕ್ (31), ಅನಿಲ್ (32), ದಾವುದ್ ಪಾಷಾ (45) ಹಾಗೂ 3 ವರ್ಷದ ಅನಮ್ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಅನಿಲ್, ಯಾಸ್ಮಿನ್ ತಾಜ್, ಸೀಮಾ …

Read More »

ಮರಳು ಲಾರಿಗೆ ₹30 ಸಾವಿರ ಲಂಚ! ಲೋಕಾಯುಕ್ತರ ಬಲೆಗೆ ಬಿದ್ದ 3 ಹೆಡ್‌ಕಾನ್‌ಸ್ಟೇಬಲ್‌ಗಳು, ಹೋಮ್‌ಗಾರ್ಡ್…

ಹುಬ್ಬಳ್ಳಿಯ ಠಾಣೆಗಳಲ್ಲಿ ಮರಳು ಮಾಫಿಯಾ ನಂಟು..? ಒಬ್ಬೊಬ್ಬರಾಗಿ ಠಾಣೆಯ ಸಿಬ್ಬಂದಿ ಮರಳು ಮಾಫಿಯಾ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ..! ಈಗಾಗಲೇ ₹30 ಸಾವಿರ ಲಂಚ ಪ್ರಕರಣದಲ್ಲಿ ಲೋಕಾಯುಕ್ತರ ಟ್ರ್ಯಾಪ್ ಆಗಿದೆ.ಹಾಗಾದರೆ ಹುಬ್ಬಳ್ಳಿಯ ಇನ್ನಷ್ಟು ಠಾಣೆಗಳಿಗೂ ಲೋಕಾಯುಕ್ತರ ಬಿಸಿ ತಟ್ಟುತ್ತಾ…? ಫೋನ್‌ಪೇನಲ್ಲಿ ಲಂಚದ ಹಣ… ಖಾಕಿಗೆ ಲೋಕಾಯುಕ್ತರ ಶಾಕ್! ಧಾರವಾಡ–ಹುಬ್ಬಳ್ಳಿಯಲ್ಲಿ 4 ಮಂದಿ ಬಂಧನ… ಧಾರವಾಡ–ಹುಬ್ಬಳ್ಳಿಯಲ್ಲಿ ಮರಳು ಮಾಫಿಯಾ ಆರೋಪ: ₹30 ಸಾವಿರ ಲಂಚ ಪಡೆದ ಆರೋಪದಲ್ಲಿ 4 ಮಂದಿ …

Read More »

ಯುವಕನಿಂದ ಮಾನಸಿಕ ಕಿರುಕುಳ, ಜೀವಬೆದರಿಕೆ; ಕಾನೂನು ಕ್ರಮಕ್ಕೆ ಸಂತ್ರಸ್ತ ಯುವತಿ ಆಗ್ರಹ

ಬೆಂಗಳೂರು: ಯುವತಿಯರಿಗೆ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಜೀವ ಬೆದರಿಕೆ ನೀಡಿದ ಆರೋಪದಡಿ ಮೊಹಮ್ಮದ್ ನೌಷಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಠಿಣ ಕ್ರಮಕ್ಕೆ ಸಂತ್ರಸ್ತ ಯುವತಿ ಆಗ್ರಹಿಸಿದ್ದಾಳೆ. ದೂರು ನೀಡಿದ ಬಳಿಕ ನೌಷಾದ್ ಕಡೆಯವರು ಆಸ್ಪತ್ರೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದು, ಮ್ಯಾನೇಜರ್ ಕೆಲಸದಿಂದ ತೆಗೆದಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಕೆಲದಿನಗಳಿಂದ ತಲೆಮರೆಸಿಕೊಂಡಿದ್ದ ನೌಷಾದ್ ಗುರುವಾರ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಘಟನೆಯನ್ನು ನ್ಯಾಯಯುತವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ …

Read More »