Breaking News

ಬಿಜೆಪಿ ಬೆಂಬಲಿತ ಹು-ದಾ ಪಾಲಿಕೆ ಉಪಮೇಯರ ಅವರಿಂದ ಜಗದೀಶ ಶಟ್ಟರ್‌ ಅವರಿಗೆ ಸನ್ಮಾನ.

ಚರ್ಚೆಗೆ ಗ್ರಾಸವಾದ ಉಪಮೇಯರ್ ನಡೆ ಹೌದು ಬಿಜೆಪಿ ಪಕ್ಷದ ಬೆಂಬಲಿತ ಹಾಗೂ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಉಪಮೇಯರ ಸತೀಶ ಹಾನಗಲ್‌ ಅವರು ಜಗದೀಶ್ ಶೆಟ್ಟರ್ ಗೆ ಶುಭಕೋರಿದ್ದಾರೆ. ಈ ಸುದ್ದಿ ಈಗ ಬಿಜೆಪಿ ವಲಯದಲ್ಲಿ ಚೆರ್ಚೆಗೆ ಕಾರಣವಾಗಿದೆ. ಸತೀಶ್ ಹಾನಗಲ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಪಮೇಯರ್ ಸ್ಥಾನ ಪಡೆಯಲು ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಈ ಹಿಂದೆ ಬಿಜೆಪಿಯಲ್ಲಿ ಇದ್ದ ಜಗದೀಶ ಶಟ್ಟರ್‌ ಬಿಜೆಪಿ ತೋರೆದು ಕಾಂಗ್ರೇಸ್ ಪಕ್ಷ ಸೇರಿದ್ದು ಎಲ್ಲಿರಿಗೂ ಗೊತ್ತಿರುವ ವಿಷಯವೇ. ಈ ಹಿನ್ನಲೆಯಲ್ಲಿ ಇಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಸತೀಶ ಹಾನಗಲ್‌ ಅವರು ಇಂದು ಜಗದೀಶ್‌ ಶೆಟ್ಟರ್‌ ಅವರಿಗೆ ಸನ್ಮಾನ ಮಾಡಿರುವ ವಿಷಯ ಬಿ.ಜೆ.ಪಿ ನಾಯಕರ ಕಣ್ಣು ಕೆಂಪು ಮಾಡಿಸಿದೆ. MLC ಯಾಗಿ ಆವಿರೋಧ ಆಯ್ಕೆಯಾಗಿರೋ ಜಗದೀಶ್ ಶೆಟ್ಟರ್ ಅವರಿಗೆ ಸತೀಶ ಹಾನಗಲ್‌ ಅವರು ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ತೆರಳಿ ಶೆಟ್ಟರ್ ಗೆ ಶುಭಾಶಯ ತಿಳಿಸಿದ್ದಾರೆ. ಸತೀಶ್ ಹಾನಗಲ್ ಹುಬ್ಬಳ್ಳಿ ವಾರ್ಡ್ ನಂಬರ್ 32 ಪಾಲಿಕೆ ಸದಸ್ಯರು ಆಗಿದ್ದು ಕಳೆದ ವಾರ ನಡೆದ ಪಾಲಿಕೆ ಚುನಾವಣೆಯಲ್ಲಿ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ಸತೀಶ ಹಾನಗಲ್‌ ಅವರು ಈ ನಡೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

Share News

About BigTv News

Check Also

ಹೆಸ್ಕಾಂ ಎಇಇ ದಂಪತಿ ಮನೆ-ಕಚೇರಿಗೆ ಲೋಕಾಯುಕ್ತ ದಾಳಿ..! ಅಪಾರ ಚಿನ್ನ, ನಗದು ಪತ್ತೆ ಶಂಕೆ..

ಬೆಳ್ಳಂಬೆಳಗ್ಗೆ ಕರೆಂಟ್ ಅಧಿಕಾರಿಗಳಿಗೆ ಶಾಕ್..! ಅಕ್ಷಯ ಕಾಲೋನಿ ಮನೆಯಲ್ಲಿ ಚಿನ್ನದ ರಾಶಿ..? ಗೋಲ್ಡ್ ಸ್ಮಿತ್ ಕರೆಸಿ ತೂಕ ಹಾಕಿಸಿದ ಲೋಕಾಯುಕ್ತರು..! …

Leave a Reply

Your email address will not be published. Required fields are marked *