Breaking News

BigTv News

ಕೋಪದ ಕೈಗೆ ಬುದ್ಧಿಕೊಟ್ಟ ಗಂಡ: 8 ತಿಂಗಳ ಗರ್ಭಿಣಿ ಹೆಂಡ್ತಿನ ಕೊಂದೇ ಬಿಟ್ಟ!!

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ದುರಂತ ನಡೆದಿದೆ. 8 ತಿಂಗಳ ಗರ್ಭಿಣಿ ಅನುಷಾ ಹಾಗೂ ಪತಿ ಜ್ಞಾನೇಶ್ವರ್‌ ಮಧ್ಯೆ ನಿನ್ನೆ ಮುಂಜಾನೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಗಂಡ ಹೆಂಡ್ತಿ ಗರ್ಭಿಣಿ ಎಂಬುದನ್ನೂ ಮರೆತು ಕತ್ತು ಹಿಸುಕಿದ್ದಾನೆ. ಇದರಿಂದ ಕೂಡಲೇ ಆಕೆ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾಳೆ. ಕೂಡಲೇ ಭಯಬೀತನಾದ ಆತ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. …

Read More »

ಕುಡಿದ ಮತ್ತಿನಲ್ಲಿಮಹಿಳೆ ಮೇಲೆ ಥಿನ್ನರ್‌ ಎರಚಿ ಬೆಂಕಿ ಹಚ್ಚಿದ ಕುಡುಕ!!

ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ಕಟ್ಟಡದಲ್ಲಿ ಅಕ್ಕಪಕ್ಕದ ಅಂಗಡಿಯವರಾಗಿದ್ದಾರೆ. ಮಹಿಳೆ ರಮಿತಾ ದಿನಸಿ ಅಂಗಡಿ ಇಟ್ಟುಕೊಂಡಿದ್ದರೆ, ಆರೋಪಿ ಸಮೀಪದಲ್ಲೇ ಫರ್ನಿಚರ್ ಅಂಗಡಿ ಹಾಕಿಕೊಂಡಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ರಾಮಾಮೃತಮ್‌ ಹಗಲಿನಲ್ಲಿಯೇ ಕುಡಿದು ಬಂದು ಪಕ್ಕದ ಅಂಗಡಿಯವರಾದ ರಮಿತಾ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ರಮಿತಾ ಈ ವಿಚಾರವನ್ನು ಕಟ್ಟಡದ ಮಾಲೀಕರಿಗೆ ತಿಳಿಸಿದ್ದರು. ಹೀಗಾಗಿ ಕಟ್ಟಡ ಮಾಲೀಕರು ರಾಮಾಮೃತಮ್‌ಗೆ ತಮ್ಮ ಅಂಗಡಿಯನ್ನು ಬೇರೆಡೆ ಸ್ಥಳಾಂತರಿಸಿ ತಮ್ಮ ಕಟ್ಟಡ ಖಾಲಿ …

Read More »

ಬಾಳೆ ತೋಪಿನಲ್ಲಿ ಗೊಬ್ಬರ ಬೆರೆಸಿದ ನೀರು ಕುಡಿದು 40 ಮೇಕೆಗಳು ಸಾವು!!

ತಮಿಳುನಾಡಿನ ತೊಂಡಮುತ್ತೂರು ಬಳಿಯ ಕಾಳಿಮಂಗಲಂ ಗ್ರಾಮದ ಬಾಳೆ ತೋಪಿನಲ್ಲಿ ಗೊಬ್ಬರ ಬೆರೆಸಿದ ನೀರು ಕುಡಿದು 40 ಮೇಕೆಗಳು ಸಾವನ್ನಪ್ಪಿವೆ. ಇನ್ನೂ ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮೇಕೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.ಬಲಿಯಾಗಿರುವ ಮೇಕೆಗಳು ಕಾಳಿಮಂಗಲಂ ವಸಾಹತು ಪ್ರದೇಶದ ಸಾವಿತ್ರಿ, ವಿಜಯ, ಕಣ್ಣಮ್ಮ ಮತ್ತು ಮಂಗಳಂ ಎಂಬ ನಾಲ್ವರು ಬುಡಕಟ್ಟು ಮಹಿಳೆಯರಿಗೆ ಸೇರಿದ್ದವಾಗಿದ್ದವು ಎಂದು ಹೇಳಲಾಗಿದೆ.ನಾವು ನಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದೇವೆ ಮತ್ತು ರಾಜ್ಯ ಸರ್ಕಾರ ನಮಗೆ ಪರಿಹಾರ ನೀಡಬೇಕು …

Read More »

ಪತಿ-ಪತ್ನಿ ಜಗಳ; ಗಂಡನ ಎದೆ ಮೇಲೆ ಕೂತು ಹಿಗ್ಗಾಮುಗ್ಗ ಥಳಿಸಿದ ಪತ್ನಿ!

ಪತಿ ಸ್ಕೂಟರನ್ನು ರಸ್ತೆ ಪಕ್ಕ ನಿಲ್ಲಿಸಿದ್ದು, ಆ ನಂತರ ಈ ದಂಪತಿಗಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಪ್ರಾರಂಭದಲ್ಲಿ ಇಬ್ಬರು ಕೂದಲು ಹಿಡಿದು ಎಳೆದಾಡಿಕೊಳ್ಳುವ ಮೂಲಕ ಜಗಳ ಆರಂಭಿಸಿದ್ದಾರೆ. ಕೊನೆಗೆ ಈ ಜಗಳವು ಅತೀರೇಕಕ್ಕೆ ತಿರುಗಿ ಗಂಡನ ಮೇಲೆ ಕುಳಿತ ಪತ್ನಿ ಹಿಗ್ಗಾಮುಗ್ಗ ಥಳಿಸಿದ್ದಾಳೆ.ಸಣ್ಣ ಪುಟ್ಟ ವಿಷಯವನ್ನೇ ದೊಡ್ಡದು ಮಾಡಿ ಜಗಳ ಮಾಡುವ ಅದೆಷ್ಟೋ ದಂಪತಿಗಳನ್ನು ನಾವು ನೋಡಿದ್ದೇವೆ. ನಂತರ ಸಣ್ಣ ಪುಟ್ಟ ಮನಸ್ತಾಪಗಳು ಆರಂಭವಾಗಿ ಮಾತಿಗೆ ಮಾತಿಗೆ ಬೆಳೆದು …

Read More »

ಬಸ್ ಅಪಘಾತ: ಕುರುಬರ ಸಂಘದ ಜಿಲ್ಲಾಧ್ಯಕ್ಷ ಸಾವು!!

ಹಾನಗಲ್ ಕಲ್ಲಹಕ್ಕಲ್ ಕಮಟಗೇರಿಯ ಶಿವಮಣಿ ಅಯ್ಯಪ್ಪಸ್ವಾಮಿ ಆಶ್ರಮದಿಂದ ಮಾಲಾಧಾರಿಗಳು ಯಾತ್ರೆ ಹೊರಟಿದ್ದರು.ಅಪಘಾತದಲ್ಲಿ‌ ತಲೆಗೆ ತೀವ್ರ ಪೆಟ್ಟು ಬಿದ್ದು‌ ಮಾರುತಿ ಅವರು ಮೃತಪಟ್ಟಿದ್ದಾರೆ. ಉಳಿದ 29 ಜನಕ್ಕೆ ಸಣ್ಣಪುಟ್ಟ ಗಾಯವಾಗಿದೆ.ಮಾರುತಿ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.‌ಮೃತದೇಹವನ್ನು ಹಾನಗಲ್‌ಗೆ ತರುವ ಪ್ರಕ್ರಿಯೆ ಆರಂಭವಾಗಿದೆ.ಬಸ್‌ ಮಾರ್ಗಮಧ್ಯೆ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಹಾವೇರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಾರುತಿ ಹರಿಹರ ಅವರು ಮೃತಪಟ್ಟಿದ್ದಾರೆ.

Read More »

ಅಣ್ಣತಮ್ಮಂದಿರು ಒಂದೇ ದಿನ, ಒಂದೇ ಗಂಟೆಯ ಅಂತರದಲ್ಲಿ ಸಾವು!!

ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರರಿಬ್ಬರ ಸಾವು, ಅಣ್ಣ ತಮ್ಮಂದಿರ ನಡುವೆ ಇರುವ ಬಂಧವೊಂದು ಸಾವಿನಲ್ಲೂ ಬಿಡಲಿಲ್ಲ ಎಂಬಂತೆ ಕಂಡುಬಂದಿದ್ದು, ಗ್ರಾಮದಲ್ಲಿ ಭಾವುಕ ವಾತಾವರಣವೊಂದು ಉಂಟಾಗಿದೆ. ಗ್ರಾಮದಲ್ಲಿ ಸಾವಿನಲ್ಲೂ ಒಂದಾದರು ಎಂದು ಅಣ್ಣ-ತಮ್ಮಂದಿರದು ಎಂಬ ಚರ್ಚೆ ಜೋರಾಗಿದೆ. ಕುಟುಂಬದವರ ತೀವ್ರ ದುಃಖಕ್ಕೆ ಸಮುದಾಯವೂ ಕಣ್ಣೀರಿನಿಂದರಾಗಿ ಸಹಾನುಭೂತಿ ವ್ಯಕ್ತಪಡಿಸುತ್ತಿದೆ.ಅಣ್ಣ ಬಸನಗೌಡ ಶಿವನಗೌಡ ಬೂವನಗೌಡ್ರು (75) ಅವರು ನಸುಕಿನ 3:15ಕ್ಕೆ ಮೃತಪಟ್ಟರೆ, ಅಣ್ಣನ ಸಾವಿನ ಸುದ್ದಿಯ ಶಾಕ್ ನಿಂದ ತಮ್ಮ ಯಲ್ಲಪ್ಪಗೌಡ ಶಿವನಗೌಡ ಬೂವನಗೌಡ್ರು …

Read More »

ನರ್ಸಿಂಗ್‌ ಹೋಮ್‌ಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ನಾಪತ್ತೆ!!

ಕುದ್ರೋಳಿ ಬಳಿಯ ನರ್ಸಿಂಗ್‌ ಹೋಮ್‌ಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ನಾಪತ್ತೆಯಾಗಿರುವ ಕುರಿತು ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಾ ನಾಪತ್ತೆಯಾದವರು. ಆಸ್ಪತ್ರೆಯಿಂದ ಹೊರಗಡೆ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಎಲ್ಲೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಪರಿಚಿತ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ.

Read More »

ಕೊಟ್ಟ ಸಾಲವನ್ನು ವಾಪಸ್‌ ಕೇಳಿದ್ದಕ್ಕೆ ಯುವತಿಯೋರ್ವಳ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ!!

ಆಶಾ ಅವರು ಖಾಸಗಿ ಶಾಲೆಯೊಂದರ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಈಕೆಯಿಂದ ಅನಿಲಾಸನ್‌ ಎಂಬಾತ 50 ಸಾವಿರ ರೂ. ಸಾಲ ಪಡೆದಿದ್ದ. ಆದರೆ ಸಾಲದ ಹಣ ಮರಳಿಸಿದೇ ಸತಾಯಿಸುತ್ತಿದ್ದ. ಹಲವರ ಸಮ್ಮುಖದಲ್ಲಿ ಈ ಜಗಳ ಇತ್ಯರ್ಥಗೊಂಡು ಅನಿಲಾಸನ್‌ ಹಣ ಮರಳಿಸಬೇಕೆಂದು ತಾಕೀತು ಮಾಡಲಾಗಿತ್ತು. ಎರಡು ದಿನದ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್‌ ಕೆಂಗುಂಟೆ ಅರಣ್ಯ ಪ್ರದೇಶದ ಬಳಿ ಬರಲು ಹೇಳಿದ್ದ. ಅಲ್ಲಿ ಆಕೆಯನ್ನು ಹತ್ಯೆಗೈಯಲಾಗಿದೆ. ಪೊಲೀಸರು ಆರೋಪಿಯನ್ನು …

Read More »

ಮದುವೆಗೆ ಎಂಟು ದಿನ ಇರುವಾಗಲೇ ಸಹೋದರಿಯರಿಬ್ಬರೂ ಪರಾರಿ!!

ಮನೆಯಲ್ಲಿ ಗುರು ಹಿರಿಯರು ತಮ್ಮ ಇಬ್ಬರೂ ಪುತ್ರಿಯರಿಗೆ ಮದುವೆ ನಿಶ್ಚಯಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಬ್ಬರೂ ಸಹೋದರಿಯರು ಗುರು ಹಿರಿಯರು ನೋಡಿದ್ದ ವರರೊಂದಿಗೆ ಮದುವೆ ಆಗಬೇಕಿತ್ತು. ವರರು ಇವರಿಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದು, ಇವರಿಬ್ಬರಿಗೂ ಬೇರೆ ಯುವಕರ ಜೊತೆಗೆ ಪ್ರೇಮವಿತ್ತು. ಹೀಗಾಗಿ ಈ ಮದುವೆ ಇಬ್ಬರಿಗೂ ಇಷ್ಟವಿರಲಿಲ್ಲ. ಈ ಕಾರಣದಿಂದಾಗಿ ವಿವಾಹಕ್ಕೆ ಎಂಟು ದಿನ ಇರುವಾಗಲೇ ಇಬ್ಬರೂ ಪರಾರಿಯಾಗಿದ್ದಾರೆ. ಕುಟುಂಬಸ್ಥರು ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ …

Read More »

ಸಮುದ್ರದಲ್ಲಿ ಮುಳುಗಿ ಓರ್ವ ಸಾವು, ಇನ್ನೋರ್ವ ಯುವಕ ನಾಪತ್ತೆ!!

ಸುರತ್ಕಲ್‌ ಬೀಚ್‌ನಲ್ಲಿ ಆಡುತ್ತಿದ್ದ ವೇಳೆ ಬೃಹತ್‌ ತೆರೆ ಅಪ್ಪಳಿಸಿ ನೀರು ಪಾಲಾಗಿದ್ದು ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.ಬೀಚ್‌ನಲ್ಲಿ ಈಜಾಡಿ ಸಂಜೆ 5.30ಕ್ಕೆ ಹಿಂದಿರುಗಲು ಸಿದ್ಧವಾಗಿದ್ದರು. ಜತೆಗಿದ್ದ ಪ್ರಖ್ಯಾತ್‌ ಅವರು ರಸ್ತೆ ಬದಿ ಬರಲು ತಿಳಿಸಿ ಕಾರು ತರಲು ತೆರಳಿದರು. ಈ ಸಂದರ್ಭದಲ್ಲಿ ಈ ಇಬ್ಬರೂ ಕೊನೆಯ ಬಾರಿ ಒಮ್ಮೆ ಈಜಿ ಬರೋಣ ಎಂದು ವಾಪಸು ಸಮುದ್ರಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಪ್ರಬಲವಾದ ತೆರೆ ಬಂದದ್ದನ್ನು …

Read More »