Breaking News

Shaikh BigTv

ವಿಜೃಂಭಣೆಯಿಂದ ನೆರವೇರಿದ ತೆಪ್ಪದ ತೇರು ಮಹಾ ರಥೋತ್ಸವ

ಕುಂದಗೋಳ : ಪಟ್ಟಣದ ಕೆರೆಯಂಗಳ ಮತ್ತು ಅಗಸಿಹೊಂಡ ತುಂಬಿದ ಹಿನ್ನೆಲೆಯಲ್ಲಿ ಇಂದು ತೆಪ್ಪದ ತೇರು ಮಹಾ ರಥೋತ್ಸವ ವಿಜೃಂಭಣೆಯಿಂದ ಸಾಗಿದೆ. ಮೊದಲು ಕೆರೆಯಂಗಳದಲ್ಲಿ ನಡೆದ ತೆಪ್ಪದ ರಥೋತ್ಸವ ಬಳಿಕ ಅಗಸಿ ಹೊಂಡಕ್ಕೆ ಸಾಗಿ ಭಜನೆ ಮತ್ತು ತತ್ವಪದಗಳ ನಡುವೆ ಕೆರೆಯಂಗಳವನ್ನು ಯಶಸ್ವಿಯಾಗಿ ದಾಟಿ ಅಗಸಿಹೊಂಡದಲ್ಲಿ ಯಶಸ್ವಿಯಾಗಿ ಜರುಗಿತು. ತೆಪ್ಪದ ರಥೋತ್ಸವದ ವೇಳೆ ಕೇಸರಿ ಧ್ವಜಗಳು ಯುವಕರ ಕೇಕೆ, ಶಿಳ್ಳೆ, ಚಪ್ಪಾಳೆ ಕೇಳಿ ಬಂದರೇ ಹಿರಿಯ ನಾಗರೀಕರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ …

Read More »

ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ : ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ. ಆದಾಗ್ಯೂ NDA ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಕಾಂಗ್ರೆಸ್ ನವರು ಈ ಮೂರೂ ಕ್ಷೇತ್ರಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಚಿವರನ್ನು ಇರಿಸಿ, ಹಣದ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನವರು ಭ್ರಮನಿರಸನರಾಗಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸರ್ಕಾರಿ …

Read More »

ನಾವೇನು ಅಲ್ಲಾನ ವಿರುದ್ಧ ಇಲ್ಲಾ‌: ಜೋಶಿ

ಹುಬ್ಬಳ್ಳಿ : ಅಲ್ಲಾಗೆ ಆಸ್ತಿ ಮಾಡೋದೊಂದೇ ಕೆಲಸ ಇತ್ತಾ? ಅಲ್ಲಾ ಹೆಸರು ಹೇಳೋದೆಲ್ಲ ಬೋಗಸ್ ಇವರು ಬೇಕಂತಲೇ ಹೇಳ್ತಾರೆ, ನಾವೇನು ಅಲ್ಲಾನ ವಿರುದ್ಧ ಇಲ್ಲಾ, ಅಲ್ಲಾನ ವಿರುದ್ಧ ಭದ್ಮಶ್ ಗಿರಿ ಮಾಡೋರ ವಿರುದ್ಧ ನಾವಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಷ ಬೋರ್ಡ್ ಆಸ್ತಿ ವಿಚಾರವಾಗಿ ಮಾತನಾಡಿದ ಜೋಶಿ, ಕಾಂಗ್ರೆಸ್ ನವರು ಅಳ್ಳಾವರದಲ್ಲಿ ಪೊಲೀಸ್‌ ಠಾಣೆ ಕಾಪೌಂಡ್ ಹಾಕಿಕ್ಕೋಳೋಕೆ ಬಿಟ್ಟಿಲ್ಲ. ಪೊಲೀಸರು …

Read More »

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ವಕ್ಷ ಬೋರ್ಡ್‌ ನವರು ಮುಂಬರುವ ಅಧಿಕಾರ ಕಡಿಮೆ ಆಗುತ್ತೆ ಅನ್ನೋ ಭಯದಿಂದ, ಇರುವ ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಕ್ರಿಮಿನಲ್‌ ತರಾತುರಿಯಲ್ಲಿದ್ದಾರೆ. ಬಿಜೆಪಿಯ ಗಟ್ಟಿ ಹೇಳಿಕೆ ಬರದೇ ಹೋಗಿದ್ರೆ, ಉಪಚುನಾವಣೆ ಇರದೇ ಹೋಗಿದ್ರೆ, ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಹಿಂದೆ ತೆಗೆದುಕೊಳ್ಳುತ್ತೇವೆ ಅಂತ ಹೇಳ್ತಿದ್ದಾರೆ. ಕೊಡಲಿಕೆ ಇವರ್ಯಾರು? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಾರವಾಗಿ ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40-50 …

Read More »

ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್

ಹುಬ್ಬಳ್ಳಿ: ನಗರದಲ್ಲಿ ಶನಿವಾರ ರಾತ್ರಿ ಕಮಿಷನ‌ರ್ ಎನ್‌. ಶಶಿಕುಮಾ‌ರ್ ನೇತೃತ್ವದಲ್ಲಿ ದಕ್ಷಿಣ ಉಪ ವಿಭಾಗದಲ್ಲಿ 14 ಚೆಕ್ ಪೋಸ್ಟ್ ಹಾಕಿ ವಾಹನಗಳ ಪರಿಶೀಲನೆ ಮಾಡುವಾಗ ದಾಖಲೆಗಳು ಇಲ್ಲದೆ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 258 ಬೈಕ್ ಹಾಗೂ 3 ಆಟೋಗಳನ್ನು ಸೀಜ್ ಮಾಡಲಾಯಿತು. ಸದ್ಯ ಈ ಎಲ್ಲ ವಾಹನಗಳ ಪೈಕಿ ಇದೀಗ ವಾಹನಗಳ ಸರಿಯಾದ ದಾಖಲೆಗಳು ಇದ್ದ ವಾಹನಗಳನ್ನು ಬಿಟ್ಟು ಕಳುಹಿಸಿ, ದಾಖಲೆಗಳು ಇಲ್ಲದ ವಾಹನಗಳಿಗೆ 166500 ರೂಪಾಯಿ ದಂಡವನ್ನು ವಿಧಿಸಲಾಗಿದೆ. …

Read More »

ಮಳೆಯಿಂದ ಹಾನಿಯಾದ ಕಾಮಗಾರಿಯನ್ನು ಪರಿಶೀಲಿಸಿದ ಸತೀಶ್ ಜಾರಕಿಹೊಳಿ

ಕುಂದಗೋಳ : ಅತಿವೃಷ್ಟಿ ಪರಿಣಾಮ ಕುಂದಗೋಳ ತಾಲೂಕಿನಲ್ಲಿ ಹಾನಿಯಾದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪರಿಶೀಲಿಸಿ ಪರಿಹಾರ ಭರವಸೆ ನೀಡಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ಭೀಕರ ಮಳೆಯ ಅನಾಹುಕ್ಕೆ ರೈತಾಪಿ ಜನರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಅದರಂತೆ ಪ್ರವಾಹದ ಸೆಳೆತಕ್ಕೆ ರಸ್ತೆ ಬ್ರಿಡ್ಜ್ ಕೊಚ್ಚಿಕೊಂಡು ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಮಾಣ ಬೆಳೆಸುತ್ತಿದ್ದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ …

Read More »

ಅತಿವೃಷ್ಟಿ ಪರಿಣಾಮ ಹಾನಿಯಾದ ಬೆಳೆಗಳಿಗೆ ಪರಿಹಾರ ಕೊಡುವಂತೆ ಮನವಿ ಸಲ್ಲಿಕೆ

ಕುಂದಗೋಳ : ಅತಿವೃಷ್ಟಿ ಪರಿಣಾಮ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ ಮತ್ತು ಮಳೆಯಿಂದ ಬಿದ್ದಂತಹ ಮನೆಗಳಿಗೆ 5 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ರತ್ನ ಭಾರತ ರೈತ ಸಮಾಜದವರು ಹುಬ್ಬಳ್ಳಿ ಲಕ್ಷ್ಮೀಶ್ವರ ರಸ್ತೆ ತಡೆ ನಡೆಸಿ ತಹಶೀಲ್ದಾ‌ರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಗಾಳಿ ಮರೇಮ್ಮದೇವಿ ದೇವಸ್ಥಾನದ ಬಳಿ ಹುಬ್ಬಳ್ಳಿ ಲಕ್ಷ್ಮೀಶ್ವರ ರಾಜ್ಯ ಹೆದ್ದಾರಿಯನ್ನು ತಡೆದು ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿ ಆಗಮಿಸಿದ ರತ್ನ ಭಾರತ ರೈತ ಸಮಾಜದವರು ಕೇಂದ್ರ …

Read More »

ಚರ್ಮಕಾರರಿಗೆ ಪ್ರತ್ಯೇಕ ಒಳಮೀಸಲಾತಿ ಸೇರಿ ಎಲ್ಲಾ ಸವಲತ್ತುಗಳನ್ನು ನೀಡುವಂತೆ ಒತ್ತಾಯ

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯವಾಗಿ, ಚರ್ಮಕಾರರಿಗೆ ಅವರ ಜನಸಂಖ್ಯೆಯ ಅನುಸಾರವಾಗಿ ಪ್ರತ್ಯೇಕ ಒಳಮೀಸಲಾತಿ ಸೇರಿ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ ಒತ್ತಾಯಿಸುತ್ತದೆಂದು ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು. ಇನ್ನು ಮೂಲ ಚರ್ಮಕಾರರ ಸುಮಾರು 15 ಲಕ್ಷ ಜನಸಂಖ್ಯೆ ಇರುವ ಈ 18 ಕ್ಕೂ ಹೆಚ್ಚಿನ ಚಮ್ಮಾರ ಸಮಗಾರ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು. ಚರ್ಮಕಾರ ಸುಮಾರು …

Read More »

ಶಾರದಾ ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ನವಲಗುಂದ: ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ನಾಗನೂರ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಾದ ಶಿವಾನಂದ ಹುಬ್ಬಳ್ಳಿ ಎತ್ತರ ಜಿಗಿತ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ, ಗಂಗೋತ್ರಿ ಬನಹಟ್ಟಿ ಗುಂಡು ಎಸೆತದಲ್ಲಿ ಪ್ರಥಮ, ನಿವೇದಿತಾ ಕುಂಬಾರ 200 ಮೀಟ‌ರ್ ಓಟದಲ್ಲಿ ದ್ವಿತೀಯ ಮತ್ತು ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

Read More »

ಯುವಕನನ್ನು ಕಲ್ಲಿನಿಂದ ಚಚ್ಚಿ ಕೊಲೆ

ಕುಮಟಾ: ಹುಬ್ಬಳ್ಳಿಯಿಂದ ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರಕಾರಿ ಆಸ್ಪತ್ರೆ ಕ್ವಾರ್ಟಸ್‌್ರ ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಇಮ್ಮಿಯಾಝ್ (25) ಕೊಲೆಯಾದ ಯುವಕ. ಗಾರೆ ಕೆಲಸಕ್ಕಾಗಿ ಕಳೆದ ಒಂದು ತಿಂಗಳಿನಿಂದ ಕುಮಟಾ ಸರಕಾರಿ ಆಸ್ಪತ್ರೆ ಕ್ವಾರ್ಟಸ್‌್ರನಲ್ಲಿ ತಂಗಿದ್ದ. ಈತನ ಜೊತೆ ಹುಬ್ಬಳ್ಳಿ ಮೂಲದ ಮೊಯುದ್ದೀನ್, ಮೌನೇಶ್ ಹಾಗೂ ಸಾದಿಕ್ ಕೂಡ ಇದ್ದರು. ಇಮ್ಮಿಯಾಝ್ ಕೊಲೆಯ ಬಳಿಕ ಜೊತೆಗಿದ್ದ …

Read More »