Breaking News

News

ಪಾಸ್‌ ಪಡೆಯುವ ಸಮಯದಲ್ಲಿ ನೂಕು ನುಗ್ಗಲು ಸ್ಥಳಕ್ಕೆ ಪೋಲಿಸ್‌ರ ಬೇಟಿ

ಗದಗ ನಗರದ ಹೊಸ ಬಸ್ಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ಸ ಪಾಸ್‌ ನೀಡುವ ಸಮಯದಲ್ಲಿ ನೂಕನುಗ್ಗಲು ಉಂಟಾಗಿರುವ ಕಾರಣ ಸ್ಥಳೀಯ ಅಧಿಕಾರಿಯಗಳು ಬಸ್ಸ ನಿಲ್ದಾಣದಿಂದ ಪೋಲಿಸ್‌ ತುರ್ತ ಸಹಾವಾಣಿ ಕೆರೆ ಮಾಡಿದ್ದಾರೆ ತದನಂತರದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿದ 112 ಸಿಬ್ಬಂದಿಗಳು ಸಮಸ್ಯೆ ಪರಿಶೀಲಿಸಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವ ಸಂದರ್ಭದಲ್ಲಿ ನೂಕು ನುಗ್ಗಲು ಮಾಡಿದ ಕೀಡಿಗೇಡಿಗಳಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಲಾಗಿರುತ್ತದೆ. ಎಂದು ತಿಳಿದು ಬಂದಿದೆ ಗದಗ ಜಿಲ್ಲೆ ಹೊಸ …

Read More »

ಜಗತ್ತಿಗೆ ಮೂರು ಗಂಡಾಂತರ, ಸಾವು ನೋವುಗಳ ಸಂಖ್ಯೆ ಹೆಚ್ಚಳ, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ,ಕೋಡಿಮಠದ ಶ್ರೀಗಳ ಭವಿಷ್ಯವಾಣಿ;

ಹುಬ್ಬಳ್ಳಿಯಲ್ಲಿ ಇಂದು ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು ಮತ್ತೆ ಜಗತ್ತೀನಲ್ಲಿ ನಡೆಯುವ ಗಂಡಾಂತರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಒಂದು ಸರ್ಕಾರ ಬರುತ್ತೆ. ಸ್ಥಿರ ಸರ್ಕಾರ ಇರುತ್ತೆ ಅಂತ ಹೇಳಿದ್ದೆ ಅದು ಈಗ ನಿಜವಾಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತೆ , ಜಲಪ್ರಳಯ ಆಗುವ ಲಕ್ಷಣ ಇದೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರು ಅಕಾಲಿಕ …

Read More »

ದಾಳಿ ಮಾಡಿದ ಮಂಗನನ್ನು ಬಲೆಗೆ ಕೆಡುವಿದ ಅರಣ್ಯ ಇಲಾಖೆ, ನಾಲ್ಕು ದಿನಗಳ ನಂತರ ಮಂಗನ ಬಂಧನ:

ಧಾರವಾಡದ ಗರಗ ದಲ್ಲಿ ಹಲವರ ಮೇಲೆ ದಾಳಿ ಮಾಡಿದ್ದ ಮಂಗ ಇಂದು ಬಲೆಗೆ ಬಿದ್ದಿದೆ. ಹಲವಡೆ ದಾಳಿ ಮಾಡಿದ ಮಂಗ ಧಾರವಾಡದಲ್ಲಿನ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಸೇರಿದಂತೆ ಹಲವರಿಗೆ ಕಚ್ಚಿ ಗಾಯಗೊಳಿಸಿದ್ದ ಮಂಗನನ್ನು ಬಲೆಗೆ ಕೆಡವಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನೇತ್ರತ್ವದಲ್ಲಿ ಮಂಗನನ್ನು ಯಶಸ್ವಿ ಕಾರ್ಯಾಚರಣೆಯಿಂದ ಹಿಡಿಯಲಾಗಿದೆ ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಮದ ಇಕ್ರಾ ಗಡದಾಳೆ ಎಂಬ ಬಾಲಕಿಗೆ ಮಂಗ ಕಚ್ಚಿತ್ತು.ಗಾಯಗೊಂಡ ಅನೇಕರು …

Read More »

ಧಾರವಾಡದಲ್ಲಿ ಗರ್ಭ ಸಂಸ್ಕಾರ ಕಾರ್ಯಕ್ರಮ

ದಿ 04 ರಂದು ಸಂಜೆ 4:00 ಗಂಟೆಗೆ. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸ್ಟೇಷನ್ ರೋಡ ಪ್ರಶಾಂತ ಆಸ್ಪತ್ರೆ ಮತ್ತು ಐ ವಿ ಎಫ್ ಕೇಂದ್ರ ಆವರಣದಲ್ಲಿ ಜರಗಲಿದೆ ಎಂದು.ಡಾ ಸೌಭಾಗ್ಯ ಕುಲಕರ್ಣಿ ತಿಳಿಸಿದರು ,ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭ ಸಂಸ್ಕಾರ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಜರುಗಲಿದ್ದು. ಗರ್ಭಿಣಿ ಹಾಗು ಗರ್ಭಿಣಿಯಾಗುವ ಸ್ತ್ರೀಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕೆಂದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಮಪೂಜ್ಯ ವಿಜಯಾನಂದ ಸ್ವಾಮೀಜಿ ವಹಿಸಲಿದ್ದು ಮುಖ್ಯ …

Read More »

ಬಸವರಾಜ ಯತ್ನಾಳ ಅವರಿಂದ ಟ್ವೇಟ್‌ ಬಾಂಬ್‌ , ಆಧಿಕಾರಿಗಳು ಕಾಂಗ್ರೇಸ್‌ ಪಕ್ಷದ ಗುಪ್ತ ಸಭೆಯಲ್ಲಿ ಭಾಗಿಯಾಗಿದ್ದು ಏಕೆ ?

ಕಾಂಗ್ರೇಸ್‌ ಪಕ್ಷದ ನಾಯಕರುಗಳು ನಿನ್ನೆ ನಡೆದ ಉಸ್ತುವಾರಿ ಸಭೆಯಲ್ಲಿ ರಾಜ್ಯ ಪ್ರಮುಖ ಐಎಎಸ್‌ ಅಧಿಕಾರಿಗಳು ಬಾಗಿಯಾಗಿದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಇರುವ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ, ಈ ಹಿನ್ನಲೆಯಲ್ಲಿ ಬಿಜೆಪಿ ಪೈರ್‌ ಬ್ಯಾಂಡ್‌ ನಾಯಕ ಬಸವರಾಜ್‌ ಯತ್ನಾಳ ಟ್ವೀಟ್‌ ಮಾಡುವ ಮೂಲಕ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಉಸ್ತುವಾರಿ ನಡೆಸುವ ಸಭೆಯಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿಗಳಿಗೆ ಏನು ಕೆಲಸ? ಬಿಬಿಎಂಪಿ ಚುನಾವಣೆಗೆ ಸಂಗ್ರಹ ಮಾಡಲು ಸೂಚಿಸಿದ್ದಾರೆಯೇ? ಬಿಬಿಎಂಪಿ ವಾರ್ಡ್ …

Read More »

ನಕಲಿ ನೋಟುಗಳ ಪತ್ತೆ, ಪ್ರತ್ಯೇಕ ನಾಲ್ಕು ಪ್ರಕರಣ ದಾಖಲು.

ಬೆಂಗಳೂರು ; ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ಮತ್ತೆ ಆರಂಭವಾಗಿದೆ. ಕಳೆದ ಎರಡು ದಿನಗಳ ಅಂತರದಲ್ಲಿ 100 ರೂಪಾಯಿ ಬೆಲೆಯ ಒಟ್ಟು 30 ನೋಟುಗಳು ಪತ್ತೆಯಾಗಿವೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್ ದಾಖಲಾಗಿದೆ. ಆರ್ ಬಿಐ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ, ಕೆನರಾ, ಯುಬಿಐ ಬ್ಯಾಂಕ್ ಮ್ಯಾನೇಜರ್ ಗಳು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಉಡುಪಿ, ಮಣಿಪಾಲ, ಹುಬ್ಬಳ್ಳಿ ಹಾಗೂ ಮಲ್ಲೇಶ್ವರ ಬ್ರಾಂಚ್ ನ …

Read More »

ಮಹಾರಾಷ್ಟ್ರ ಬಸ್‌ ದುರಂತ 25 ಜನರು ಸಜೀವ ದಹನ ಕಂಬನಿ ಮೀಡಿದ ಸಚಿವ ಸಂತೋಷ ಲಾಡ್

ಮಹಾರಾಷ್ಟ್ರದ ಬುಲ್ಧಾನಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 25 ಜನ ಪ್ರಯಾಣಿಕರು ಸಜೀವ ದಹನವಾಗಿರುವ ವಿಷಯ ಕೇಳಿ ಆಘಾತವಾಗಿದೆ. ಎಂದು ಸಚಿವ ಸಂತೋಷ ಲಾಡ್‌ ಸಂತಾಪ ಸೂಚಿಸಿದ್ದಾರೆ, ನಿನ್ನೆ ತಡರಾತ್ರ ನಡೆದ ಈ ದುರಂತದಲ್ಲಿ 25 ಜನರು ಮೃತ ಸಜೀವ ದಹನ ಹೊಂದಿದ್ದಾರೆ ಎಂದು ತಿಳಿದು ಬಂದಿದ್ದ ಈ ಹಿನ್ನಲೆ ಸಚಿವ ಸಂತೋಷ ಲಾಡ ಕಂಬನಿ ಮೀಡಿದಿದ್ದಾರೆ, ಇನ್ನು ಈ ದುರಂತದಲ್ಲಿ ಸಾವಿಗೀಡಾದವರ ಆತ್ಮಕ್ಕೆ ಶಾಂತಿಕೋರುತ್ತ, ಅವರ ಕುಟುಂಬಸ್ಥರಿಗೆ ಈ …

Read More »

ಮೃತ ಸನ್ಯಾಸಿ ಬಳಿ ಲಕ್ಷಾಂತರ ರೂಪಾಯಿ ಹಣ ಪತ್ತೆ !

ಚಿತ್ರದುರ್ಗ ; ಮೃತ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಮನೆಯಲ್ಲಿ ವಿವಿಧೆಡೆ ಇರಿಸಿದ್ದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. ಹೊಳಲ್ಕೆರೆಯಲ್ಲಿ ವಾರದ ಹಿಂದೆ ಗಂಗಾಧರ ಶಾಸ್ತ್ರಿ(70) ಎಂಬುವವರು ಮೃತಪಟ್ಟಿದ್ರು.‌ ಒಂಟಿಯಾಗಿ ಬದುಕು ಸವೆಸಿದ್ದ ಗಂಗಾಧರ ಶಾಸ್ತ್ರಿ ಅವರು, ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಶಾಸ್ತ್ರಿ ಹೆಸರಲ್ಲಿ 16 ಎಕರೆ‌ ಜಮೀನಿದ್ದು, 4ಎಕರೆ ತೆಂಗಿನ ತೋಟ, ಗದ್ದೆ …

Read More »

ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪೋಲಿಸರ್‌ ಗೆ ಒಂದು ಪಾಲು ಆರೋಪ ಮಾಡಿದ ಶಾಸಕ ;

ರಾಯಚೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳು ದಂಧೆಕೋರರು ಕೋಟಿ ಕೋಟಿ ರೂ ಸಂಪಾದಿಸುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ಸಹಜವಾಗಿ ಶಾಸಕರ ಹಿಂಬಾಲಕರು ಗುತ್ತಿಗೆದಾರರು ಅಥವಾ ಇನ್ನಿತರ ವ್ಯಕ್ತಿಗಳು ಮಾಫಿಯಾದಲ್ಲಿ ಪಾಲ್ಗೊಳ್ತಾರೆ. ಆದ್ರೆ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಸಹ ತಮ್ಮ ಕೆಲಸಕ್ಕೆ ವ್ಯಾಲೆಂಟರಿ ರಿಟೈರ್ಡ್ ಮೆಂಟ್ ಕೊಟ್ಟು ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರಂತೆ. ಈ ಮಾತನ್ನ ಕೇವಲ ಯಾರೋ ಹೇಳಿದ ಮಾತಲ್ಲ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಈ ಬಗ್ಗೆ …

Read More »

ನರಗುಂದ ಠಾಣೆ ಮೆಟ್ಟಿಲು ಏರಿದ ಅಣ್ಣ – ತಮ್ಮಂದಿರ ಜಗಳ …

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ 112 ತುರ್ತು ಸಹಾಯವಾಣಿಗೆ ಚಿಕ್ಕನರಗುಂದ ಗ್ರಾಮದಲ್ಲಿ ಜಗಳದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಅಣ್ಣ ತಮ್ಮಂದಿರ ನಡುವೆ ಜಗಳವಾಗಿದ್ದು, ಸ್ಥಳದಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಮುಂದಿನ ಕ್ರಮಕ್ಕಾಗಿ ನರಗುಂದ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಂತರಿಸಲಾಗಿದೆ. ಕ್ಷುಲಕ ಕಾರಣಕ್ಕಾಗಿ ಜಗಳವಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಧ್ಯ ಪ್ರಕರಣ ನರಗುಂದ ಪೋಲಿಸ್‌ ಠಾಣೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ,

Read More »